ರಾಜಕಾರಣದಲ್ಲಿ ನಂಬಿಕೆ ಅನ್ನೊ ಪದಕ್ಕೆ ಅರ್ಥ ಇಲ್ಲದಂತಾಗಿದೆ
ಮೈಸೂರು

ರಾಜಕಾರಣದಲ್ಲಿ ನಂಬಿಕೆ ಅನ್ನೊ ಪದಕ್ಕೆ ಅರ್ಥ ಇಲ್ಲದಂತಾಗಿದೆ

September 2, 2019

ಮೈಸೂರು, ಸೆ.1(ಎಂಕೆ)- ರಾಜಕಾರಣದಲ್ಲಿ ಯಾರನ್ನ ನಂಬೋದು ಅನ್ನೊದೇ ಗೊತ್ತಾಗ್ತಿಲ್ಲ. ನಾನೇ ಟಿಕೆಟ್ ಕೊಟ್ಟವರು ಶಾಸಕರಾಗಿ ನಂತರ ನನ್ನ ವಿರುದ್ಧವೇ ನಿಂತಿದ್ದಾರೆ. ಇಂದಿನ ರಾಜ ಕೀಯದಲ್ಲಿ ನಂಬಿಕೆ ಅನ್ನೊ ಪದಕ್ಕೆ ಅರ್ಥ ಇಲ್ಲದಂತಾಗಿದೆ ಎಂದು ಮಾಜಿ ಸಿಎಂ ಸಿದ್ದ ರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರಿನ ರಾಮಕೃಷ್ಣನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾ ಡಿದ ಅವರು, ಬೈ ಎಲೆಕ್ಷನ್‍ಗೆ ನಾವು ರೆಡಿಯಾ ಗಿದ್ದು, ಮಧ್ಯಂತರ ಚುನಾವಣೆಗೂ ರೆಡಿಯಾಗಿ ಎಂದು ಕಾರ್ಯಕರ್ತರಿಗೆ ಹೇಳಿದ್ದೇನೆ. ನಿನ್ನೆ ದಕ್ಷಿಣ ಕನ್ನಡಕ್ಕೆ ಹೋಗಿದ್ದೆ. ಆಗ ನಮ್ಮ ಕಾರ್ಯಕರ್ತ ರಿಗೆ ಡಿಸೆಂಬರ್‍ಗೆ ಜನರಲ್ ಎಲೆಕ್ಷನ್ ಬರಬಹುದು, ರೆಡಿಯಾಗಿರಿ ಎಂದು ಹೇಳಿದ್ದೇನೆ. ಯಾಕೆಂದ್ರೆ ಈ ಸರ್ಕಾರ ನೋಡಿದ್ರೆ ಅಧಿಕಾರ ನಡೆಸ್ತಾರೆ ಅಂತ ಅನ್ನಿಸ್ತಿಲ್ಲ ಎಂದರು.

ಎಂಟಿಬಿ ನಾಗರಾಜ್ ಟೀಕೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ: ‘ನಾನು ಕಟ್ಟಿದ ಕಾಂಗ್ರೆಸ್ ಮನೆಯಲ್ಲಿ ಸಿದ್ದರಾಮಯ್ಯ ವಾಸ ಮಾಡ್ತಿದ್ದಾರೆ’ ಎಂದು ಹೇಳಿದ್ದ ಅನರ್ಹ ಶಾಸಕ ಎಂಟಿಬಿ ನಾಗರಾಜ್‍ಗೆ ತಿರುಗೇಟು ನೀಡಿದ ಅವರು, ಎಂಟಿಬಿ ನಾಗರಾಜ್ ಟೀಕೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಒಂದು ಸಾರಿ ನಾನು ಹೃದಯದಲ್ಲಿ ಇದ್ದಿನಿ ಅಂತಾನೆ. ಆ ಮೇಲೆ ನನನ್ನೇ ಟೀಕೆ ಮಾಡ್ತಾನೆ. ನನ್ನ ಜೊತೆಯಲ್ಲೇ ಇದ್ದು ನನಗೆ ದ್ರೋಹ ಮಾಡಿದ್ರು. ಅವರ ನಾಟಕಗಳಿಗೆ ಜನರೇ ಉತ್ತರ ಕೊಡ್ತಾರೆ ಎಂದು ಹರಿಹಾಯ್ದರು. ಹಾಲು ಕುಡಿದ ಮಕ್ಕಳೇ ಬದುಕೋದಿಲ್ಲ ಇನ್ನ ವಿಷ ಕುಡಿದೋರು ಬದುಕುತ್ತಾರಾ. ಅಧಿಕಾರದ ಆಸೆಗಾಗಿ ರಾಜೀನಾಮೆ ಕೊಟ್ಟು ಹೋಗಿರುವ ಅನರ್ಹ ಶಾಸಕರನ್ನು ನಂಬಿರುವ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಮೂರೂವರೆ ವರ್ಷ ಪೂರೈಸುವುದು ಕಷ್ಟವೆಂದು ಭವಿಷ್ಯ ನುಡಿದರು.

ಒಂದು ಲಕ್ಷ ಪರಿಹಾರ ಕೊಡಬೇಕು: ರಾಜ್ಯ ಸರ್ಕಾರ ಪ್ರವಾಹ ನಿರ್ವಹಣೆಯಲ್ಲಿ ವಿಫಲವಾಗಿದೆ. ಹತ್ತು ಸಾವಿರ ರೂ. ಪರಿಹಾರ ಸಾಕಾಗುವುದಿಲ್ಲ. ಒಂದು ಲಕ್ಷ ರೂ. ಪರಿಹಾರ ಕೋಡಬೇಕು ಎಂದು ಆಗ್ರಹಿಸಿದರು. ಬಿಎಸ್‍ವೈ ಸೇರಿದಂತೆ ಬಿಜೆಪಿ ನಾಯ ಕರು ಬರೀ ಭಾಷಣ ಮಾಡ್ತಾರೆ ಅಷ್ಟೇ. ಪ್ರವಾಹಕ್ಕೆ ಸಿಲುಕಿದ ಜನರು ಮನೆ, ಬಟ್ಟೆ, ಆಸ್ತಿ ಎಲ್ಲವನ್ನು ಕಳೆದುಕೊಂಡಿದ್ದಾರೆ ಅವರಿಗೆ ಹತ್ತು ಸಾವಿರ ರೂ. ಎಲ್ಲಿ ಸಾಕಾಗತ್ತೆ . ರಾಜ್ಯ ಸರ್ಕಾರ ಪರಿಹಾರ ನೀಡುವಲ್ಲಿ ವಿಫಲವಾಗಿದೆ ಎಂದು ಕಿಡಿಕಾರಿದರು.

ದ್ವೇಷದ ರಾಜಕಾರಣ: ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡ್ತಿದೆ. ಕಾಂಗ್ರೆಸ್ ನಾಯಕರನ್ನೇ ಟಾರ್ಗೆಟ್ ಮಾಡ್ತಿದೆ. ಸದನದಲ್ಲಿ ಅಪರೇಷನ್ ಕಮಲದ ಬಗ್ಗೆ ಶಾಸಕರೇ ಪ್ರಸ್ತಾಪ ಮಾಡಿದ್ದರೂ ಅವರ ವಿರುದ್ದ ಯಾಕೆ ತನಿಖೆ ಮಾಡ್ತಿಲ್ಲ. ಕಾನೂನು ಅಂದ್ರೆ ಎಲ್ಲರಿಗೂ ಒಂದೆ ಅಲ್ವಾ ಎಂದು ಪ್ರಶ್ನಿಸಿದರು. ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ, ಮಾಜಿ ಶಾಸಕ ಎಂಕೆ.ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Translate »