ಮೇಲಧಿಕಾರಿಗಳ ಆದೇಶದಂತೆ ತನಿಖೆ ಮುಗಿದರೂ ಡಿಕೆಶಿ ಬಂಧನ ಸಹೋದರ ಡಿ.ಕೆ.ಸುರೇಶ್ ಆರೋಪ
ಮೈಸೂರು

ಮೇಲಧಿಕಾರಿಗಳ ಆದೇಶದಂತೆ ತನಿಖೆ ಮುಗಿದರೂ ಡಿಕೆಶಿ ಬಂಧನ ಸಹೋದರ ಡಿ.ಕೆ.ಸುರೇಶ್ ಆರೋಪ

September 5, 2019

ಬೆಂಗಳೂರು,ಸೆ.4(ಕೆಎಂಶಿ)-ಹವಾಲಾ ಹಣ ವರ್ಗಾವಣೆ ಪ್ರಕ ರಣಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ವಿಚಾರಣೆ ಮುಗಿದಿದೆ ಎಂದಿದ್ದ ಜಾರಿ ನಿರ್ದೇಶನಾಲಯ ನಂತರ ಮೇಲಧಿಕಾರಿಗಳ ನಿರ್ದೇ ಶನದ ಹಿನ್ನೆಲೆಯಲ್ಲಿ ಹಠಾತ್ತನೆ ಬಂಧನಕ್ಕೊಳಪಡಿಸಿತು ಎಂದು ಸಹೋದರ ಹಾಗೂ ಸಂಸದ ಡಿ.ಕೆ.ಸುರೇಶ್ ಆರೋಪಿಸಿದ್ದಾರೆ. ದೆಹಲಿಯ ರಾಮಮನೋಹರ ಲೋಹಿಯಾ ಆಸ್ಪತ್ರೆ ಎದುರು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಡಿ ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೂ ತಮ್ಮ ಸಹೋದರ ಸಮರ್ಪಕ ಉತ್ತರ ಕೊಟ್ಟಿದ್ದಾರೆ. ಆದರೂ 2 ವರ್ಷಗಳ ಹಿಂದೆ ನಡೆದ ಆದಾಯ ತೆರಿಗೆ ದಾಳಿ ಸಂದರ್ಭದಲ್ಲಿ ಬೇರೆ ಮನೆಗಳಲ್ಲಿ ಸಿಕ್ಕ ಚೀಟಿಗಳಲ್ಲಿನ ಹಣದ ಮಾಹಿತಿ ಬಗ್ಗೆ ವಿವರಣೆ ಕೇಳುತ್ತಿದ್ದಾರೆ ಎಂದರು. ಬೇರೆ ಮನೆಗಳಲ್ಲಿ ದೊರೆತ ಸಣ್ಣ-ಪುಟ್ಟ ಚೀಟಿಗಳಿಗೆ ಶಿವಕುಮಾರ್ ಉತ್ತರ ಕೊಡಲು ಹೇಗೆ ಸಾಧ್ಯ? ಸಹೋದರನ ಮನೆಯಲ್ಲಿ ಸಿಕ್ಕ ದಾಖಲಾತಿಗಳ ಬಗ್ಗೆ ಏನನ್ನೂ ಪ್ರಶ್ನಿಸಿಲ್ಲ. ಅಧಿಕಾರಿಗಳು ಮಾನಸಿಕ ಕಿರುಕುಳ ನೀಡುವ ಮೂಲಕ ಬೆದರಿಕೆ ಹಾಕುತ್ತಿದ್ದಾರೆ, ಆದರೆ ತಮ್ಮ ಸಹೋದರ ಇದ್ಯಾವುದಕ್ಕೂ ಹೆದರುವುದಿಲ್ಲ, ಬಗ್ಗುವುದಿಲ್ಲ, ಎಲ್ಲವನ್ನೂ ಎದುರಿಸಲು ಸಿದ್ಧವಾಗೇ ಬಂದಿದ್ದೇವೆ ಎಂದರು.

Translate »