ಮೈಸೂರು,ಸೆ.5(ಪಿಎಂ)-ಶಿಕ್ಷಕ ಸಮು ದಾಯ ನಮ್ಮ ದೇಶದ ದೊಡ್ಡ ಸಂಪತ್ತು ಎಂದು ವಸತಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಭಿಮಾನ ವ್ಯಕ್ತಪಡಿಸಿದರು.
ಮೈಸೂರಿನ ಕಲಾಮಂದಿರದಲ್ಲಿ ಜಿಲ್ಲಾಡ ಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾ ಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ದೇಶದ ಎರಡು ದೊಡ್ಡ ಆಸ್ತಿಗಳೆಂ ದರೆ ಯೋಧರು ಹಾಗೂ ಶಿಕ್ಷಕರು. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಚಿಂತನೆ ಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ವದ ಕಾರ್ಯವನ್ನು ಶಿಕ್ಷಕ ಸಮುದಾಯ ಮಾಡುತ್ತಿದೆ. ಅಟಲ್ ಬಿಹಾರಿ ವಾಜ ಪೇಯಿ ಅವರು ಪ್ರಧಾನಿಯಾಗಿದ್ದಾಗ ಸರ್ವ ಶಿಕ್ಷಣ ಅಭಿಯಾನ ಆರಂಭಿಸಿ ಶಿಕ್ಷಣದ ಗುಣ ಮಟ್ಟಕ್ಕೆ ಒತ್ತು ನೀಡಲಾಯಿತು. ಆದಾಗ್ಯೂ ಅಭಿಯಾನದ ಉದ್ದೇಶ ಪೂರ್ಣ ಪ್ರಮಾಣ ದಲ್ಲಿ ಈಡೇರಲು ಸಾಧ್ಯವಾಗಿಲ್ಲ ಎಂದರು.
ಗ್ರಾಮೀಣ ಪ್ರದೇಶದ ಶಿಕ್ಷಕರು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವ ಮೂಲಕ ತಮ್ಮ ಶಾಲೆ ಅಗತ್ಯತೆಗಳನ್ನು ಪೂರೈಸಿಕೊಳ್ಳುವತ್ತ ಗಮನ ಹರಿಸಬೇಕು. ಈ ಹಿಂದೆ ಶಿಕ್ಷಣ ಸಚಿವರಾ ಗಿದ್ದ ಹೆಚ್.ಜಿ.ಗೋವಿಂದೇಗೌಡ ಅವರು ಶಿಕ್ಷಕರ ನೇಮಕಾತಿಯಲ್ಲಿ ಪಾರದರ್ಶಕ ಮೆರೆಯುವ ಇಚ್ಛಾಶಕ್ತಿ ಪ್ರದರ್ಶಿಸಿದರು. ಆ ಮೂಲಕ ಒಂದು ಲಕ್ಷ ಶಿಕ್ಷಕರ ನೇಮ ಕಾತಿ ನಡೆಸಿ ಮಹತ್ವದ ಸುಧಾರಣೆ ತಂದರು. ಈ ರೀತಿಯ ಸುಧಾರಣಾ ಮಾರ್ಗದಲ್ಲಿ ನಮ್ಮ ಇಂದಿನ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಹೆಜ್ಜೆ ಇಡಲಿದ್ದಾರೆ ಎಂದು ನುಡಿದರು.
ಸಣ್ಣಪುಟ್ಟ ಗೊಂದಲ ಬದಿಗೊತ್ತಿ: ಪ್ರಾಥ ಮಿಕ ಮತ್ತು ಪ್ರೌಢಶಾಲಾ ಹಂತದ ಶಿಕ್ಷ ಕರು ತಂದೆ-ತಾಯಿಯರಿಗೆ ಸಮಾನ. ಪೋಷ ಕರಷ್ಟೇ ಮುಖ್ಯ ಪಾತ್ರವನ್ನು ಶಿಕ್ಷಕರು ನಿರ್ವಹಿಸುತ್ತಾರೆ. ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಚಿಂತನೆಗಳನ್ನು ಪ್ರಧಾನಿ ಮೋದಿಯವರು ಹೊಂದಿದ್ದು, ಇದಕ್ಕೆ ಶಿಕ್ಷಕ ವರ್ಗದ ಶಕ್ತಿಯೂ ಅಗತ್ಯ ವಾಗಿದೆ. ಶಿಕ್ಷಕರ ವರ್ಗಾವಣೆ ವಿಷಯ ದಲ್ಲಿ ಕೆಲ ಗೊಂದಲ ಆಗಿರಬಹುದು. ಈ ಪೈಕಿ ಸಣ್ಣ-ಪುಟ್ಟ ಸಮಸ್ಯೆಗಳನ್ನು ಮರೆತು ಶಿಕ್ಷಕರು ತಮ್ಮ ಕರ್ತವ್ಯ ನಿಷ್ಠೆ ಮೆರೆಯ ಬೇಕು ಎಂದು ಸಲಹೆ ನೀಡಿದರು.
ಐಎಎಸ್ ಕೋಚಿಂಗ್ ಸೆಂಟರ್: ಬೆಂಗ ಳೂರಿನಲ್ಲಿ ಸರ್ಕಾರದ ಸಹಯೋಗದೊಂ ದಿಗೆ 2 ಐಎಎಸ್ ಕೋಚಿಂಗ್ ಸೆಂಟರ್ ನಡೆಸುತ್ತಿದ್ದೇನೆ. ಇದೇ ಮಾದರಿಯಲ್ಲಿ ಮೈಸೂರು ಜಿಲ್ಲೆಗೆ ಒಂದು ಕೋಚಿಂಗ್ ಸೆಂಟರ್ ಅಗತ್ಯವಿದ್ದು, ಈ ಬಗ್ಗೆ ಪರಿ ಶೀಲಿಸಿ ಮುಂದುವರೆಯಲಾಗುವುದು ಎಂದು ಸೋಮಣ್ಣ ತಿಳಿಸಿದರು.
ಸಂಸದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ವಿಧಾನ ಪರಿಷತ್ ಸದಸ್ಯ ಪರಿತಿಬ್ಬೇಗೌಡ, ಜಿಪಂ ಅಧ್ಯಕ್ಷೆ ಪರಿಮಳ ಶ್ಯಾಂ, ಸದಸ್ಯ ಜೆ.ಅಚ್ಚುತಾನಂದ, ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಡಿಸಿ ಅಭಿರಾಮ್ ಜಿ.ಶಂಕರ್, ಜಿಪಂ ಸಿಇಓ ಕೆ.ಜ್ಯೋತಿ, ಕಾಲೇಜು ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ, ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಾ.ಪಾಂಡುರಂಗ ಮತ್ತಿತ ರರು ಸೇರಿದಂತೆ ಸಭಾಂಗಣದಲ್ಲಿ ಶಿಕ್ಷಕ ಸಮುದಾಯ ಕಿಕ್ಕಿರಿದು ನೆರೆದಿತ್ತು.
ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ: ಸಾರ್ವ ಜನಿಕ ಶಿಕ್ಷಣ ಇಲಾಖೆಯ 2019-20ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಗಳನ್ನು ಜಿಲ್ಲೆಯ ವಿವಿಧ ಸರ್ಕಾರಿ ಶಾಲೆ ಗಳ 22 ಶಿಕ್ಷಕರಿಗೆ ಪ್ರದಾನ ಮಾಡಲಾ ಯಿತು. ಕಿರಿಯ ಪ್ರಾಥಮಿಕ ಶಾಲಾ ವಿಭಾಗ ದಲ್ಲಿ ವೈ.ಎಂ.ಸುಹಾಸಿನಿ, ಭಾಸ್ಕರ, ಜೆನಟ್ ಎವೆಂಜಲೀನ್, ಕೆ.ಎಸ್.ಹರೀಶ್‍ಕುಮಾರ್, ಸಾಕಮ್ಮ, ಸುಬ್ಬಶೆಟ್ಟಿ, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬಿ.ಎಂ.ಮಲ್ಲೇಶ, ರಿಚರ್ಡ್ ಜಾನ್ಸ್‍ನ್, ಸತೀಶ್, ಸರೋಜ, ಜಮುನ, ಗಣೇಶ್, ಎಸ್.ಎಂ.ಗಾಯಿತ್ರಿ, ಎಂ.ಆರ್. ಬಿಂದು, ಎಂ.ಆರ್.ಸತ್ಯವತಿ, ಪ್ರೌಢಶಾಲಾ ವಿಭಾಗದಲ್ಲಿ ಎನ್.ಆರ್. ನಿರ್ಮಲ, ಎನ್. ಅರುಣ, ಬಸವರಾಜು, ಎನ್.ನಾಗರಾಜು, ಷಹೆದಾಬಾನು, ಎಸ್.ಡಿ. ಶಿವಣ್ಣ, ಹೆಚ್.ಎಸ್.ಸಿರಿದೇವಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.