ಶಿಕ್ಷಕ, ಶಿಕ್ಷಕೇತರ ಸಮಸ್ಯೆಗಳ ಬಗೆಹರಿಸುವ ಜವಾಬ್ದಾರಿ ಕುಲಪತಿಗಳದ್ದು
ಮೈಸೂರು

ಶಿಕ್ಷಕ, ಶಿಕ್ಷಕೇತರ ಸಮಸ್ಯೆಗಳ ಬಗೆಹರಿಸುವ ಜವಾಬ್ದಾರಿ ಕುಲಪತಿಗಳದ್ದು

September 6, 2019

ಮೈಸೂರು, ಸೆ.5(ಆರ್‍ಕೆಬಿ)- ಶಿಕ್ಷಕ ಮತ್ತು ಶಿಕ್ಷಕೇತರ ಸಮಸ್ಯೆಗಳನ್ನು ಬಗೆ ಹರಿಸಬೇಕಾದ ಜವಾಬ್ದಾರಿ ಕುಲಪತಿ ಗಳಿಗಿದ್ದು, ಅದನ್ನು ಮಾಡಬೇಕು. ಸುಮ್ಮನೆ ಸರ್ಕಾರ ಮತ್ತು ಸಿಂಡಿಕೇಟ್‍ಗೆ ಬರೆದಿ ದ್ದೇನೆ ಎಂದು ಹೇಳದೆ, ಅವುಗಳ ಬಗ್ಗೆ ಕಾಳಜಿ ಇಟ್ಟು ಕೆಲಸ ಮಾಡುವಂತೆ ವಿಶ್ರಾಂತ ಕುಲಪತಿ ಎಸ್.ಎನ್.ಹೆಗ್ಡೆ ತಿಳಿಸಿದರು.

ಮೈಸೂರು ವಿವಿ ಕ್ರಾಫರ್ಡ್ ಹಾಲ್ ನಲ್ಲಿ ಗುರುವಾರ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಬಹಳ ಜವಾಬ್ದಾರಿಯುತ ಶ್ರೇಷ್ಠ ಹುದ್ದೆಯಾಗಿರುವ ಶಿಕ್ಷಕರು, ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ, ಅಧಿಕಾರಿಗಳು, ರಾಜಕೀಯ ಎಲಾ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವವರನ್ನು ತಯಾರು ಮಾಡು ವವರೇ ಶಿಕ್ಷಕರು. ಹಾಗಾಗಿ ನಾವು ಈ ಸ್ಥಾನದ ಗೌರವ, ಹೊಣೆ ಅರಿತು ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದರು.

ಸಂಶೋಧನಾ ಮಾರ್ಗದರ್ಶನ ಮಾಡಲು ಆಸಕ್ತಿ ಇಲ್ಲದ ಪ್ರಾಧ್ಯಾಪಕರಿಗೆ ಆಡಳಿತ ವಿಭಾಗದ ಜವಾಬ್ದಾರಿ ನೀಡು ವುದು ಒಳಿತು. ಅವರಿಗೆ ಎನ್‍ಎಸ್‍ಎಸ್, ಎನ್‍ಸಿಸಿ, ಹಾಸ್ಟೆಲ್ ವಾರ್ಡನ್ ಇನ್ನಿತರೆ ಆಡಳಿತ ವಿಭಾಗದ ಹೊಣೆ ನೀಡುವುದು ಒಳಿತು ಎಂದು ಸಲಹೆ ನೀಡಿದರು.

ತಮಗಿರುವ ಜ್ಞಾನವನ್ನು ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಧಾರೆಯೆರೆಯುವ ಮನಸ್ಸಿರಬೇಕು. ಹೇಳಿಕೊಟ್ಟರೆ ನನಗಿಂತ ಹೆಚ್ಚು ಜ್ಞಾನಿಯಾಗಿ ಬಿಡುತ್ತಾನೋ ಎಂಬ ಅಳುಕು ಶಿಕ್ಷಕರಿಗೆ ಇರಬಾರದು. ಸ್ನಾತ ಕೋತ್ತರ ವಿದ್ಯಾಭ್ಯಾಸದ ಹಂತದಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಪಠ್ಯದಲ್ಲಿರುವು ದನ್ನು ಬೋಧಿಸುತ್ತಾ, ಅವರನ್ನು ಅಷ್ಟಕ್ಕೆ ಸೀಮಿತಗೊಳಿಸದೆ, ಯಾವ ವಿಷಯದಲ್ಲಿ ವಿದ್ಯಾರ್ಥಿಗೆ ಆಸಕ್ತಿಯಿದೆ ಎಂಬುದನ್ನು ಪತ್ತೆ ಹಚ್ಚಿ ಅದಕ್ಕೆ ಪೂರಕವಾದ ಅಧ್ಯ ಯನ ಕೈಗೊಳ್ಳಲು ಅವಕಾಶ ಕಲ್ಪಿಸಿಕೊಡ ಬೇಕು ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್, ಕುಲಸಚಿವ ಪ್ರೊ. ಲಿಂಗರಾಜ ಗಾಂಧಿ ಇತರರು ಉಪಸ್ಥಿತರಿದ್ದರು.

 

Translate »