ಬಿ.ಆರ್.ಕೊರ್ತಿಗೆ ಚಿತ್ರಕಲಾ ಪ್ರಶಸ್ತಿ, ಮಂಜಮ್ಮ ಜೋಗತಿಗೆ ಜಾನಪದ ಕಲಾ ಪ್ರಶಸ್ತಿ
ಮೈಸೂರು

ಬಿ.ಆರ್.ಕೊರ್ತಿಗೆ ಚಿತ್ರಕಲಾ ಪ್ರಶಸ್ತಿ, ಮಂಜಮ್ಮ ಜೋಗತಿಗೆ ಜಾನಪದ ಕಲಾ ಪ್ರಶಸ್ತಿ

September 7, 2019

ಮೈಸೂರು, ಸೆ.6(ಎಂಕೆ)- ಮೈಸೂರಿನ ವಿಜಯನಗರ 2ನೇ ಹಂತದಲ್ಲಿರುವ ಶ್ರೀ ಕಲಾನಿಕೇತನ ಸ್ಕೂಲ್ ಆಫ್ ಆರ್ಟ್ ಆವ ರಣದಲ್ಲಿ ಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನ ಹಾಗೂ ಕನ್ನಡ ಸಂಸ್ಕøತಿ ಇಲಾಖೆ ವತಿ ಯಿಂದ ಆಯೋಜಿಸಿರುವ ‘ಪಿ.ಆರ್.ತಿಪ್ಪೇ ಸ್ವಾಮಿ ಕಲಾ ಸಂಭ್ರಮ ಕಾರ್ಯಕ್ರಮ’ದಲ್ಲಿ ಚಿತ್ರಕಲಾ ಪ್ರಶಸ್ತಿಯನ್ನು ದಾವಣಗೆರೆಯ ಹಿರಿಯ ಚಿತ್ರಕಲಾವಿದ ಬಿ.ಆರ್.ಕೊರ್ತಿ ಹಾಗೂ ಜಾನಪದ ಕಲಾ ಪ್ರಶಸ್ತಿಯನ್ನು ಹಿರಿಯ ಜಾನಪದ ಕಲಾವಿದೆ ಮಂಜಮ್ಮ ಜೋಗತಿ ಅವರಿಗೆ ಜಾನಪದ ವಿಶ್ವವಿದ್ಯಾ ಲಯದ ವಿಶ್ರಾಂತ ಕುಲಪತಿ ಪೆÇ್ರ.ಅಂಬಳಿಕ ಹಿರಿಯಣ್ಣ ಪ್ರದಾನ ಮಾಡಿದರು.

ಬಳಿಕ ಪೆÇ್ರ.ಅಂಬಳಿಕ ಹಿರಿಯಣ್ಣ ಮಾತನಾಡಿ, ಚಿತ್ರಕಲೆ ಬೆಳೆಸಲು ಲಲಿತ ಕಲೆ ಅಕಾಡೆಮಿಯಂತಹ ಸಂಸ್ಥೆಗಳು ಸಕ್ರಿಯವಾಗಿರುವುದರಿಂದ ಹೆಚ್ಚಿನ ಪೆÇ್ರೀತ್ಸಾಹ ಸಿಗುತ್ತದೆ. ಆದರೆ, ಜಾನಪದ ಅಕಾಡೆಮಿ ಇದ್ದರೂ ಜಾನಪದ ಕ್ಷೇತ್ರಕ್ಕೆ ಹೆಚ್ಚು ಪೆÇ್ರೀತ್ಸಾಹ ಸಿಗುತ್ತಿಲ್ಲ ಎಂದರು.

ವಿದೇಶಗಳಲ್ಲಿ ಜಾನಪದ ವಸ್ತು ಸಂಗ್ರ ಹಾಲಯಗಳ ನಿರ್ಮಾಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ನಮ್ಮ ಪರಂಪರೆ ಯನ್ನು ಉಳಿಸಿಕೊಳ್ಳಲು ಜಾನಪದ ಮ್ಯೂಸಿಯಂಗಳು ಸಹಕಾರಿಯಾಗುತ್ತವೆ. ಈ ನಿಟ್ಟಿನಲ್ಲಿ ತಿಪ್ಪೇಸ್ವಾಮಿ ಅವರಂಥವ ರಿಂದ ರಾಜ್ಯದಲ್ಲೂ ಜಾನಪದ ವಸ್ತು ಸಂಗ್ರಹಾಲಯಗಳ ಸ್ಥಾಪನೆಯಾಗಿವೆ. ಅವರಿಂದ ಇಷ್ಟನ್ನು ಮಾರ್ಗದರ್ಶನ ಬೇಕಿತ್ತು ಎಂದು ಸ್ಮರಿಸಿದರು.

ಲಲಿತ ಕಲೆ, ಶಿಲ್ಪ ಕಲೆ ಹಾಗೂ ಜಾನ ಪದ ಅಕಾಡೆಮಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದರೂ ನಿರೀಕ್ಷಿತ ಮಟ್ಟ ದಲ್ಲಿ ಕೆಲಸ ಆಗುತ್ತಿಲ್ಲ. ಅಕಾಡೆಮಿಗಳು ಕಾರ್ಯನಿರ್ವಹಿಸುತ್ತಿದ್ದರೂ ಕಲೆ ಮತ್ತು ಜಾನಪದಕ್ಕೆ ಯುವಕರು ಆಕರ್ಷಿತ ರಾಗುತ್ತಿಲ್ಲ. ಯುವ ಸಮುದಾಯ ಮುಂದೆ ಬರುತ್ತಿಲ್ಲ. ಯುವಕರ ಆಯ್ಕೆ ಆದ್ಯತೆ ಬೇರೆಯಾಗಿದೆ. ಮುಂದಿನ ದಿನಗಳಲ್ಲಿ ಯುವಕರು ನಮ್ಮ ಕಲೆ ಮತ್ತು ಜಾನಪದ ಸಾಹಿತ್ಯವನ್ನು ಕೈಗೆತ್ತಿಕೊಂಡು ಉಳಿಸಿ ಬೆಳೆಸಿ, ಅದರ ರಕ್ಷಣೆಗೆ ಮುಂದಾಗುತ್ತಾರೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ಪಿ.ಆರ್.ತಿಪ್ಪೇಸ್ವಾಮಿ ಪ್ರತಿ ಷ್ಠಾನದ ಅಧ್ಯಕ್ಷ ರಾಜಶೇಖರ್ ಕದಂಬ, ಕೋಶಾಧ್ಯಕ್ಷ ಪೆÇ್ರ.ಹೆಚ್.ಎಂ.ಪರಮೇ ಶ್ವರಯ್ಯ ಸಂಚಾಲಕ ರುದ್ರಣ್ಣ ಹರ್ತಿ ಕೋಟೆ, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.

Translate »