ಸಕಲ ಭಾಷೆಯ ಐಕ್ಯತೆ ಸಂಸ್ಕøತ ಭಾಷೆಯಲ್ಲಿದೆ ಪೇಜಾವರ ಶ್ರೀಗಳು ಅಭಿಮತ
ಮೈಸೂರು

ಸಕಲ ಭಾಷೆಯ ಐಕ್ಯತೆ ಸಂಸ್ಕøತ ಭಾಷೆಯಲ್ಲಿದೆ ಪೇಜಾವರ ಶ್ರೀಗಳು ಅಭಿಮತ

September 6, 2019

ಮೈಸೂರು, ಸೆ.5(ಎಂಕೆ)- ಸಕಲ ಭಾಷೆಯ ಐಕ್ಯತೆ ಸಂಸ್ಕøತ ಭಾಷೆ ಯಲ್ಲಿದ್ದು, ಭಾರತೀಯ ಹೃದಯ ಕಮಲ ಅರಳಬೇಕಾದರೆ ಸಂಸ್ಕøತ ಭಾಷೆ ಅಗತ್ಯವಾಗಿದೆ ಎಂದು ಉಡು ಪಿಯ ಪೇಜಾವರ ಮಠದ ಶ್ರೀ ವಿಶ್ವೇಶÀತೀರ್ಥ ಸ್ವಾಮೀಜಿ ಹೇಳಿದರು.

ನಗರದ ಸರಸ್ವತಿಪುರಂನಲ್ಲಿರುವ ವಿಜಯ ವಿಠಲ ವಿದ್ಯಾಶಾಲಾ ಸಭಾಂಗಣದಲ್ಲಿ ವಿಜಯ ವಿಠಲ ಸಂಯುಕ್ತ ಪದವಿ ಪೂರ್ವ ಕಾಲೇಜು ವತಿಯಿಂದ ಆಯೋಜಿಸಿದ್ದ ‘ಸಂಸ್ಕøತೋತ್ಸವ-2019’ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೈನಂದಿನ ವ್ಯವಹಾರದಲ್ಲಿ ಸಂಸ್ಕøತ ಭಾಷೆಯನ್ನು ಬಳಸುವಂತಾಗಬೇಕು ಎಂದರು. ಎಲ್ಲಾ ಭಾಷೆಗಳ ಮೂಲ ಸಂಸ್ಕøತವಾಗಿದೆ. ಸಂಸ್ಕøತ ಭಾಷೆಯ ಪದಗಳು ಎಲ್ಲಾ ಭಾಷೆಯಲ್ಲಿವೆ. ಭಾರತೀಯ ಸಂಸ್ಕøತಿಯೂ ಸಂಸ್ಕøತ ಭಾಷೆಯಲ್ಲಿ ಸೇರಿದೆ. ಕನ್ನಡ ಭಾಷೆ ಸುಮಧುರವಾಗಿ ಬೆಳೆಯಲು ಸಂಸ್ಕøತ ಸಹಕಾರಿಯಾಗಿದೆ. ಕಲಿಯಲು ಅತ್ಯಂತ  ಸುಲಭವಾಗಿರುವ ಸಂಸ್ಕøತ ಎಲ್ಲಾ ಭಾಷೆಗಳ ತಾಯಿಯಾಗಿದೆ ಎಂದು ತಿಳಿಸಿದರು.

ರಾಮಾಯಣ, ಮಹಾಭಾರತದಂತಹ ಮಹಾನ್ ಗ್ರಂಥಗಳನ್ನು ಅಧ್ಯಯನ ಮಾಡಲು ಸಂಸ್ಕøತದ ಜ್ಞಾನವಿರಬೇಕು. ಅಲ್ಲದೆ ಇತರೆ ಎಲ್ಲಾ ಭಾಷೆಗಳನ್ನು ಕಲಿಯಲು ಸಂಸ್ಕøತ ಬಾಷೆಯ ಅರಿವು ಮುಖ್ಯವಾಗಿ ಬೇಕಾಗುತ್ತದೆ. ಸಂಸ್ಕøತ ಭಾಷೆಯಲ್ಲಿಯೇ ಸಂಸ್ಕøತಿ ಅಡಗಿದ್ದು, ಸಂಸ್ಕøತ ಭಾಷೆಯನ್ನು ಅಧ್ಯಯನ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಒಳಿತಾಗಲಿ ಎಂದು ಹಾರೈಸಿದರು.

ಕಿರಿಯ ಶ್ರೀಗಳಾದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮಾತನಾಡಿ, ಸಂಸ್ಕøತ ಬಲ್ಲವರು ಸುಸಂಸ್ಕøತರು, ಜ್ಞಾನಿಯೂ ಆಗಿರುತ್ತಾರೆ. ಸಂಸ್ಕøತ ಭಾಷೆ ಸರ್ವ ಭಾಷೆಗಳ ಜನಕ. ಆಂಗ್ಲ ಭಾಷೆಯ ಮೂಲವೂ ಇದ್ದು, ಸಕಲ ಪ್ರಾಣಿ-ಪಕ್ಷಿಗಳ ಸಂಭಾಷಣೆಯಲ್ಲಿಯೂ ಸಂಸ್ಕøತ ಅಡಗಿದೆ ಎಂದು ಹೇಳಿದರು. ಆಂಗ್ಲ ಭಾಷೆಯ ಸಂಪೂರ್ಣ ಜ್ಞಾನವನ್ನು ಹೊಂದಲು ಮೊದಲು ಸಂಸ್ಕøತ ಭಾಷೆಯನ್ನು ಅದ್ಯಯನ ಮಾಡಬೇಕು. ದೈನಂದಿನ ಚಟುವಟಿಕೆಯಲ್ಲಿ ಮಾತನಾಡುವ ಭಾಷೆಯಗಳಲ್ಲಿ ಹಲವಾರು ಸಂಸ್ಕøತ ಪದಗಳನ್ನು ಬಳಸುತ್ತೇವೆ. ಸಂಸ್ಕøತ ಭಾಷೆಯ ಮಹತ್ವ ಬಲ್ಲವರು ಇತರೆ ಭಾಷೆಗಳ ಮೇಲೂ ಹಿಡಿತ ಸಾಧಿಸುತ್ತಾರೆ ಎಂದು ತಿಳಿಸಿದರು. ಇದೇ ವೇಳೆ ಸಂಸ್ಕøತ ಭಾಷೆಯಲ್ಲಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ವಿಜಯ ವಿಠಲ ಪದವಿಪೂರ್ವ ಕಾಲೇಜು ಪ್ರಾಂಶು ಪಾಲ ಹೆಚ್.ಸತ್ಯಪ್ರಸಾದ್, ಎಸ್.ಪಿ.ಆಶಾ ಉಪಸ್ಥಿತರಿದ್ದರು.

 

 

Translate »