ದಸರೆ ಮುಗಿಯುವವರೆಗೆ ಬೇರೆ ಯಾವುದೇ ಸಭೆಗಳ ನಡೆಸಬೇಡಿ, ಅಧಿಕಾರಿಗಳು, ಸಿಬ್ಬಂದಿಗಳಿಗೂ ರಜೆ ಇಲ್ಲ
ಮೈಸೂರು

ದಸರೆ ಮುಗಿಯುವವರೆಗೆ ಬೇರೆ ಯಾವುದೇ ಸಭೆಗಳ ನಡೆಸಬೇಡಿ, ಅಧಿಕಾರಿಗಳು, ಸಿಬ್ಬಂದಿಗಳಿಗೂ ರಜೆ ಇಲ್ಲ

September 6, 2019

ಮೈಸೂರು, ಸೆ.5(ಆರ್‍ಕೆ)- ದಸರಾ ಮಹೋತ್ಸವ ಮುಗಿಯುವವರೆಗೂ ಬೇರೆ ಯಾವುದೇ ಸಭೆಗಳನ್ನು ನಡೆಸಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಇಂದಿಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮೈಸೂರಿನ ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಗೆ ಕೆಲ ಅಧಿ ಕಾರಿಗಳು ಗೈರು ಹಾಜರಾಗಿರುವುದಕ್ಕೆ ನಗರಪಾಲಿಕೆ ಕೌನ್ಸಿಲ್ ಸಭೆ, ವೀಡಿಯೋ ಕಾನ್‍ಫರೆನ್ಸ್ ಸಭೆಗಳಿರುವುದು ಕಾರಣ ಎಂಬುದನ್ನು ತಿಳಿದ ಸಚಿವರು, ದಸರಾ ಮುಗಿಯುವವರೆಗೆ ಮೈಸೂರಲ್ಲಿ ಬೇರೆ ಯಾವ ಸಭೆಗಳನ್ನೂ ಆಯೋಜಿಸಬೇಡಿ ಎಂದು ತಾಕೀತು ಮಾಡಿದರು.

ರಜೆಗೂ ಕತ್ತರಿ: ಕೆಲ ಅಧಿಕಾರಿಗಳು ರಜೆಯಲ್ಲಿದ್ದಾರೆಂಬ ಮಾಹಿತಿ ಪಡೆದ ವಿ.ಸೋಮಣ್ಣ, ದಸರಾ ಮುಗಿಯುವವ ರೆಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ರಜೆ ನೀಡಬೇಡಿ. ಎಲ್ಲರೂ ದಸರಾ ಕೆಲಸ ದಲ್ಲಿ ನಿರತರಾಗುವಂತೆ ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ದೀಪಾಲಂಕಾರ ಚೆನ್ನಾಗಿರಲಿ: ಈ ಬಾರಿ ದಸರಾ ವಿದ್ಯುದ್ದೀಪಾಲಂಕಾರ ತುಂಬಾ ಚೆನ್ನಾಗಿರಬೇಕು, ಜಾತ್ರೆ, ಹಬ್ಬಗಳಲ್ಲಿ ಹಾಕು ವಂತೆ ಬಜಾರ್ ಮಾಡದಿರಿ. ಮೈಸೂರು ಸಂಪರ್ಕಿಸುವ ಐದು ಪ್ರಮುಖ ರಸ್ತೆಗಳಲ್ಲಿ ಸ್ವಾಗತ ಕಮಾನು ಮಾಡಿ ವಿಶೇಷ ವಿದ್ಯುದ್ದೀ ಪಾಲಂಕಾರ ಮಾಡಿ ಎಂದು ಚೆಸ್ಕಾಂ ಅಧಿಕಾರಿಗಳಿಗೆ ಸಲಹೆ ನೀಡಿದರು.

ಸಾಹಸ ಕ್ರೀಡೆ: ದಸರಾಗೆ ಅಕ್ವಾ, ವಾಟರ್ ರ್ಯಾಫ್ಟಿಂಗ್, ಮಡ್‍ಕಾರ್ಟಿಂಗ್, ಕಾಯಾ ಕಿಂಗ್, ಬಾಡಿಗಾರ್ಡಿಂಗ್, ಪ್ಯಾರಾ ಸೀಲಿಂಗ್ ನಂತಹ ಸಾಹಸ ಕ್ರೀಡೆಗಳನ್ನು 28 ಬಗೆಯ ಕ್ರೀಡೆ ಜೊತೆಗೆ ಆಯೋಜಿಸುವುದಾಗಿ ತಿಳಿ ಸಿದ ಕ್ರೀಡಾ ಇಲಾಖೆ ಅಧಿಕಾರಿಗಳು, ಈ ಬಗ್ಗೆ ಸಭೆಯಲ್ಲಿ ಪವರ್ ಪಾಯಿಂಟ್ ಪ್ರೆಸೆಂ ಟೇಷನ್ ನೀಡಿದರು. ಜನರಲ್ ತಿಮ್ಮಯ್ಯ ನ್ಯಾಷನಲ್ ಅಕಾಡೆಮಿ ಆಫ್ ಅಡ್ವೆಂಚರ್ ಸಂಸ್ಥೆ ವತಿಯಿಂದ ಸಾಹಸ ಕ್ರೀಡೆಯನ್ನು ಆಯೋ ಜಿಸಿ ಮುಂದೆ ಸ್ಥಳ ಮತ್ತು ವೇಳಾಪಟ್ಟಿ ನಿಗದಿಪಡಿಸುವುದಾಗಿ ತಿಳಿಸಿದರು.

ಸಹಕರಿಸಿ: ದಸರಾವನ್ನು ಯಾವುದೇ ಲೋಪಗಳಿಲ್ಲದೆ ಚೆನ್ನಾಗಿ ಆಚರಿಸಬೇಕೆಂ ಬುದು ಮುಖ್ಯಮಂತ್ರಿಗಳ ಆಶಯವಾಗಿರು ವುದರಿಂದ ಎಲ್ಲಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಂಪೂರ್ಣ ಸಹಕಾರ ನೀಡಿ ನಾಡಹಬ್ಬವನ್ನು ಯಶಸ್ವಿಯಾಗಿ ಆಚರಿಸಲು ನನ್ನೊಂದಿಗೆ ಕೈಜೋಡಿಸಿ ಎಂದು ಸಚಿವರು ಮನವಿ ಮಾಡಿದರು.

 

Translate »