ಅಂಧ, ಶ್ರವಣದೋಷವುಳ್ಳ ಮಕ್ಕಳ ಶಾಲೆ ಶಿಕ್ಷಕರಿಗೆ ಸನ್ಮಾನ
ಮೈಸೂರು

ಅಂಧ, ಶ್ರವಣದೋಷವುಳ್ಳ ಮಕ್ಕಳ ಶಾಲೆ ಶಿಕ್ಷಕರಿಗೆ ಸನ್ಮಾನ

September 6, 2019

ಮೈಸೂರು,ಸೆ.5(ಎಂಟಿವೈ)- ಶಿಕ್ಷಕರ ದಿನಾಚರಣೆ ಹಿನ್ನೆಲೆ ಯಲ್ಲಿ ಮೈಸೂರಿನ ಬಂಬೂಬಜಾರ್‍ನಲ್ಲಿರುವ ಸರ್ಕಾರಿ ಅಂಧ ಮತ್ತು ಶ್ರವಣದೋಷವುಳ್ಳ ಮಕ್ಕಳ ಶಾಲೆಯ ಶಿಕ್ಷಕರನ್ನು ಇನ್ನರ್ ವ್ಹೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಬಂಬೂಬಜಾರ್ ಶಾಲಾ ಆವರಣದಲ್ಲಿ ಗುರುವಾರ ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ಶಾಲೆಯ 12 ಶಿಕ್ಷಕರನ್ನು ಶಿಕ್ಷಕರ ದಿನದ ಹಿನ್ನೆಲೆಯಲ್ಲಿ ಗೌರವಿಸಿ, ಪುರ ಸ್ಕರಿಸಲಾಯಿತು. ಮಕ್ಕಳಿಗೆ ಪಾಠ-ಪ್ರವಚನಕ್ಕೆ ತೊಡಕಾಗದಂತೆ ಕಾರ್ಯಕ್ರಮವನ್ನು ಭೋಜನ ವಿರಾಮದಲ್ಲಿ ನಡೆಸಲಾಯಿತು. ಶಾಲೆಯ ಮುಖ್ಯ ಶಿಕ್ಷಕ ಸತೀಶ್, ಶಿಕ್ಷಕರಾದ ಅರುಣ್‍ಕುಮಾರ್, ಶಿವಕುಮಾರ್, ಉದಯ್ ಕುಮಾರ್, ಶಿವಶಂಕರ್, ರೇಖ ಕುಮಾರಿ, ಅಕ್ಕ ನಾಗಮ್ಮ, ರತ್ನಮ್ಮ, ಮುನಿರತ್ನ, ಜಯಲಕ್ಷ್ಮಿ, ಸೀತಮ್ಮ, ಮೊಹಮ್ಮದ್ ಸಿದ್ದಿಕಿ ಅವರನ್ನು ಸನ್ಮಾನಿಸಲಾಯಿತು.

ಇದೇ ವೇಳೆ ಇನ್ನರ್‍ವ್ಹೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್ ಅಧ್ಯಕ್ಷೆ ಆಶಾ ದಿವ್ಯೇಶ್ ಮಾತನಾಡಿ, ಬಹುತೇಕ ಶಾಲಾ-ಕಾಲೇಜುಗಳಲ್ಲಿ ಇಂದು ಶಿಕ್ಷಕರ ದಿನವನ್ನು ಆಚರಿಸಿ, ಗುರುಗಳನ್ನು ಗೌರವಿಸುವುದು ಸಾಮಾನ್ಯವಾಗಿದೆ. ಆದರೆ ಅಂಧ ಮತ್ತು ಶ್ರವಣ ದೋಷವುಳ್ಳ ಮಕ್ಕಳ ಶಾಲೆಯ ಶಿಕ್ಷಕರನ್ನು ಗುರುತಿಸಲು ಯಾವುದೇ ಸಂಘ-ಸಂಸ್ಥೆಗಳು ಮುಂದೆ ಬರುವುದಿಲ್ಲ. ಈ ಹಿನ್ನೆಲೆ ಯಲ್ಲಿ ಸಮಾಜ ಸೇವೆ ಕಾರ್ಯದಲ್ಲಿ ತೊಡಗಿರುವ ನಮ್ಮ ಕ್ಲಬ್ ವತಿಯಿಂದ ವಿಶೇಷ ಶಿಕ್ಷಕ ವೃತ್ತಿಯಲ್ಲಿ ತೊಡಗಿ ವಿಶೇಷ ಮಕ್ಕಳ ಬಾಳನ್ನು ಬೆಳಗುತ್ತಿರುವ ಶಿಕ್ಷಕರನ್ನು ಅಭಿಮಾನದಿಂದ ಗೌರವಿಸಿ ದ್ದೇವೆ ಎಂದರು. ಈ ಸಂದರ್ಭದಲ್ಲಿ ಇನ್ನರ್‍ವ್ಹೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್ ಕಾರ್ಯದರ್ಶಿ ಸಂಗೀತ, ಮಾಜಿ ಅಧ್ಯಕ್ಷ ರಾದ ಚಂದ್ರಿಕಾ ಸುಧೀರ್, ಜೋಶೀಲಾ ಜಯಪ್ರಕಾಶ್, ಸದಸ್ಯೆ ಅನುಶ್ರೀ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

 

 

Translate »