ಮೈಸೂರು, ಸೆ.5- ನಗರ ಸಾಮೂಹಿಕ ವಿನಾಯಕ ವಿಸರ್ಜನಾ ಮಂಡಳಿ ವತಿಯಿಂದ 16ನೇ ವರ್ಷದ ಭವ್ಯ ಮೆರ ವಣಿಗೆ ಮಾಹಿತಿ ಕರ ಪತ್ರ ಹಾಗೂ ಪ್ರಚಾರ ಸಾಮಗ್ರಿಗಳನ್ನು ಶ್ರೀ ಪೇಜಾವರ ಶ್ರೀಗಳು ಕೃಷ್ಣಧಾಮದಲ್ಲಿ ಬಿಡು ಗಡೆಗೊಳಿಸಿದರು.
ನಗರದಲ್ಲಿ ಬೇರೆ ಬೇರೆ ಕಡೆಗಳಲ್ಲಿ ಪ್ರತಿಷ್ಠಾಪಿಸಿರುವ ಗಣಪತಿ ವಿಗ್ರಹಗಳನ್ನು ಒಂದೆಡೆ ಸೇರಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಸಾಮೂಹಿಕವಾಗಿ ವಿಸರ್ಜನೆ ಮಾಡುವ ಕಾರ್ಯ ಕ್ರಮವನ್ನು ಕಳೆದ 16 ವರ್ಷದಿಂದ ಮಂಡಳಿ ಹಮ್ಮಿಕೊಂಡು ಬಂದಿದೆ. ಅದೇ ರೀತಿ ಈ ವರ್ಷವೂ ಸೆ.8ರ ಭಾನುವಾರ ಮಧ್ಯಾಹ್ನ 1 ಗಂಟೆಗೆ ಮೈಸೂರಿನ ವಿವಿಧ ಬಡಾ ವಣೆಗಳಲ್ಲಿ ಪ್ರತಿಷ್ಠಾಪಿಸಿದ ವಿನಾಯಕನ ಮೂರ್ತಿಗಳನ್ನು ಸಂಗ್ರಹಿಸುವ ಕಾರ್ಯ ವೀರನಗೆರೆ ವಿದ್ಯಾಗಣಪತಿ ದೇವಸ್ಥಾನದ ಮುಂಭಾಗದಿಂದ ಪ್ರಾರಂಭಗೊಳ್ಳಲಿದ್ದು ಹಲವು ಮಠಾಧೀಶರು, ಸಚಿವರು, ಸಂಸದರು, ಶಾಸಕರು ಮತ್ತು ಪಾಲಿಕೆ ಸದಸ್ಯರು ಭಾಗಿಯಾಗಲಿದ್ದಾರೆ. ಪ್ರಮುಖ ರಸ್ತೆಗಳಲ್ಲಿ ಸಾಗಿ 100ಕ್ಕೂ ಹೆಚ್ಚು ಗಣಪತಿಯನ್ನು ಸಂಗ್ರಹಿಸಿ, ಮೆರವಣಿಗೆಯಲ್ಲಿ ಕೊಂಡೊಯ್ದು ಶ್ರೀರಂಗಪಟ್ಟಣದ ಶ್ರೀ ಸಾಯಿ ಬಾಬಾ ದೇವಸ್ಥಾನದ ಬಳಿ ವಿಸರ್ಜಿಸಲಾಗುವುದು. ಮೆರವಣಿಗೆಯಲ್ಲಿ ಜಾನಪದ ಕಲಾ ತಂಡಗಳು, ವಾದ್ಯ ವೃಂದಗಳು, ಡೊಳ್ಳು ಕುಣಿತ, ಕಂಸಾಳೆ, ವಿವಿಧ ವೇಷಧಾರಿಗಳು ಹಾಗೂ ಇನ್ನಿತರ ಕಲಾತಂಡಗಳು ಭಾಗಿಯಾಗಲಿವೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಛಿಸುವ ಗಣಪತಿ ಮಂಡಳಿ ಯುವಕರು ಹಾಗೂ ಸಂಘಟನೆಗಳು ಸಾಮೂಹಿಕ ವಿನಾಯಕ ವಿಸರ್ಜನೆ ಮಂಡಳಿ ಸಂಚಾಲಕ ಸು.ಮುರಳಿ (9449741204), ಗಿರಿಧರ್ (97415 04297) ಮೈಕಾ ಪ್ರೇಮ್‍ಕುಮಾರ್ (9342188601), ಶ್ರೀನಿವಾಸ್ (9845050600) ಸಂಪರ್ಕಿಸಬಹುದು. ಪ್ರಚಾರ ಸಾಮಗ್ರಿಗಳ ಬಿಡುಗಡೆಯ ಸಂದರ್ಭದಲ್ಲಿ ಸಾಮೂಹಿಕ ಗಣಪತಿ ವಿಸರ್ಜನಾ ಸಮಿತಿ ಅಧ್ಯಕ್ಷ ನಾರಾಯಣಪ್ಪ, ಸಂಚಾಲಕರಾದ ಸುಮುರಳಿ, ಗಿರಿಧರ್, ಪ್ರದೀಶ್, ಶ್ರೀನಿವಾಸ್, ವಿಕ್ರಂ ಅಯ್ಯಂಗಾರ್, ಮಂಜು ಹಾಜರಿದ್ದರು