ಇಂದು ಮೈಸೂರಲ್ಲಿ ಒಕ್ಕಲಿಗರ ಸಭೆ
ಮೈಸೂರು

ಇಂದು ಮೈಸೂರಲ್ಲಿ ಒಕ್ಕಲಿಗರ ಸಭೆ

September 6, 2019

ಮೈಸೂರು, ಸೆ.5(ಆರ್‍ಕೆಬಿ)- ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಬಂಧನ ವನ್ನು ಖಂಡಿಸಿ, ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಸಂಬಂಧ ರೂಪುರೇಷೆ ಸಿದ್ಧಪಡಿ ಸಲು ಸೆ.6ರಂದು ಬೆಳಿಗ್ಗೆ 10.30 ಗಂಟೆಗೆ ಮೈಸೂರಿನ ವಿದ್ಯಾ ರಣ್ಯಪುರಂ ಒಕ್ಕಲಿಗರ ಸಮು ದಾಯ ಭವನದಲ್ಲಿ ಮೈಸೂರು ಜಿಲ್ಲಾ ಒಕ್ಕಲಿಗರ ಸಂಘ (ಚಾಮ ರಾಜನಗರ ಜಿಲ್ಲೆ ಒಳಗೊಂಡು)ದ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಸಂಘದ ಅಧ್ಯಕ್ಷ ಜಿ.ಮಂಜು ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ಸಂಘಟಿಸುವ ಸಂಬಂಧ ಚರ್ಚಿಸಿ, ಪ್ರತಿಭಟನೆಯ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದರು. ಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಗುರುರಾಜ್, ಪಿ.ಹೆಚ್.ರಾಜು, ಸುಶೀಲಾ ನಂಜಪ್ಪ, ಜಯರಾಂ, ಉಮೇಶ್ ಇದ್ದರು.

Translate »