ಡಿ.ಮಾದೇಗೌಡರ `ಸೂರಿಲ್ಲದವರಿಗೆ ಸೂರು ಆಶಾಮಂದಿರ’ ಕೃತಿ
ಮೈಸೂರು

ಡಿ.ಮಾದೇಗೌಡರ `ಸೂರಿಲ್ಲದವರಿಗೆ ಸೂರು ಆಶಾಮಂದಿರ’ ಕೃತಿ

September 6, 2019

ಮೈಸೂರು, ಸೆ.5(ಆರ್‍ಕೆಬಿ)- ಮೂರು ದಶಕ ಗಳ ಹಿಂದೆ ಮೈಸೂರು ಸಿಐಟಿಬಿ ಅಧ್ಯಕ್ಷರಾಗಿದ್ದ ಮಾಜಿ ಎಂಎಲ್‍ಸಿ ಡಿ.ಮಾದೇಗೌಡ ಅವರು ಮೈಸೂರು ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ನಿವಾಸಿಗಳ ಅನುಕೂಲ ಕ್ಕಾಗಿ ಆಶಾಮಂದಿರ ಯೋಜನೆ ಜಾರಿ ಮೂಲಕ ಆರ್ಥಿಕವಾಗಿ ದುರ್ಬಲ ವರ್ಗ, ಕಡಿಮೆ ಆದಾಯ ವರ್ಗ, ಆರ್ಥಿಕ ವಾಗಿ ಮುಂದುವರೆದ ವರ್ಗಗಳ ಜನರಿಗೆ ನಿವೇ ಶನ ಮತ್ತು ಮನೆ ಸೇರಿ ದಂತೆ ಸುಮಾರು 50 ಸಾವಿರ ಮಂದಿಗೆ ಸೂರು ಕಲ್ಪಿಸಿ ವಸತಿ ಕ್ರಾಂತಿ ಉಂಟು ಮಾಡಿದ್ದರು. ಆಶಾ ಮಂದಿರ ಯೋಜನೆ ಯನ್ನು ಅನುಷ್ಠಾನಕ್ಕೆ ತಂದು, ಸಾಮಾನ್ಯ ಜನರಿಗೆ ಕೈಗೆಟಕುವ ದರದಲ್ಲಿ ನಿವೇ ಶನ, ಮನೆಗಳನ್ನು ವಿತರಿಸಿದ್ದರು. ಮೈಸೂರಿನ ರಾಮಕೃಷ್ಣನಗರ, ವಿವೇಕಾನಂದನಗರ, ಶಾರದಾ ದೇವಿನಗರ, ಅರ ವಿಂದನಗರ, ಕ್ಯಾತಮಾರನಹಳ್ಳಿ, ಸಾತಗಳ್ಳಿ, ರಾಜೀವ್‍ನಗರ ಹಾಗೂ ಹೆಬ್ಬಾಳು ಈ ಎಂಟು ಬಡಾವಣೆಗಳನ್ನು ನಿರ್ಮಿಸಿದ ಡಿ.ಮಾದೇ ಗೌಡರು ಇದೀಗ ಯಶಸ್ವಿ ಮಾದರಿ ಯೋಜನೆ `ಆಶಾಮಂದಿರ’ ತಮ್ಮ ಯಶೋಗಾಥೆ ರಚಿಸಿದ್ದಾರೆ.

ಅವರು ಬರೆದಿರುವ `ಸೂರಿಲ್ಲದವರಿಗೆ ಸೂರು ಆಶಾಮಂದಿರ’ ಕೃತಿ ಬಿಡುಗಡೆ ಸೆ.8ರಂದು ಸಂಜೆ 4 ಗಂಟೆಗೆ ಮೈಸೂರು ಪುರಭವನದಲ್ಲಿ ನಡೆಯಲಿದೆ.

ನಿವೃತ್ತ ಪ್ರಾಧ್ಯಾಪಕ ಕೆ.ಪಿ.ಬಸವೇಗೌಡ ಅವರು ಗುರುವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿ ದರು. ಅಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಕೃತಿಯನ್ನು ಬಿಡುಗಡೆ ಮಾಡಲಿ ದ್ದಾರೆ. ಮೈಸೂರು ರಾಮಕೃಷ್ಣಾಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ ಅಧ್ಯಕ್ಷತೆ ವಹಿಸುವರು. ಶಿಕ್ಷಣ ತಜ್ಞ ಹೆಚ್.ಎಲ್.ಸತೀಶ್ ಕೃತಿ ಕುರಿತು ಮಾತ ನಾಡುವರು. ಸಂಸದ ಪ್ರತಾಪಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ತನ್ವೀರ್‍ಸೇಠ್, ಎಲ್. ನಾಗೇಂದ್ರ ಅತಿಥಿಯಾಗಿ ಭಾಗವಹಿಸುವರು. ದತ್ತಪೀಠ ಆಸ್ಥಾನ ವಿದ್ವಾನ್ ಡಾ.ಸಿಪಿಕೆ, ವಿದ್ವಾಂಸ ಪ್ರೊ.ಕೆ.ಬಿ.ಪ್ರಭುಪ್ರಸಾದ್, ಸಂವಹನ ಪ್ರಕಾಶನದ ಡಿ.ಎನ್.ಲೋಕಪ್ಪ, ಕೃತಿಕರ್ತೃ ಡಿ.ಮಾದೇಗೌಡ ಈ ವೇಳೆ ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.

ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಡಿ.ಮಾದೇ ಗೌಡರ ಆಶಾಮಂದಿರ ವಿನೂತನ ಯೋಜನೆ ಗಮನ ಸೆಳೆದಿತ್ತು. ಮನೆ ಮಾದೇಗೌಡರೆಂದೇ ಜನ ಪ್ರಿಯರಾದರು. ಅಂದಿನ ನಗರಾಭಿವೃದ್ಧಿ ಸಚಿವರು ಈ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ಮುಂದಾಗಿದ್ದರು. ಕಾರಣಾಂತರದಿಂದ ಯೋಜನೆ ಅನುಷ್ಠಾನಕ್ಕೆ ಬರಲಿಲ್ಲ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಇಂತಹ ಯಾವುದೇ ಬೃಹತ್ ಯೋಜನೆ ಯನ್ನು ಕಳೆದ 20-30 ವರ್ಷಗಳಲ್ಲಿ ಸಮರ್ಪಕ ವಾಗಿ ಅನುಷ್ಠಾನಗೊಳಿಸುವಲ್ಲಿ ಅಷ್ಟಾಗಿ ಕಾಳಜಿ ವಹಿಸಲಿಲ್ಲ. ಇದಕ್ಕೆ ನಿದರ್ಶನವೆಂಬಂತೆ ಇಂದಿಗೂ ಲಕ್ಷಾಂತರ ಮಂದಿ ಅರ್ಜಿ ಹಾಕಿ ನಿವೇಶನಕ್ಕಾಗಿ ಜಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ ಎಂದರು.

ಕೃತಿಕರ್ತೃ ಡಿ.ಮಾದೇಗೌಡರು ಮಾತನಾಡಿ, ಮಹಾತ್ಮ ಗಾಂಧಿ, ವಿವೇಕಾನಂದರ ಪ್ರಕಾರ ಉಡಲು ಬಟ್ಟೆ, ಇರಲು ಸೂರು, ಜೊತೆಗೆ ಶಿಕ್ಷಣ ಬಹಳ ಮಹತ್ವದ್ದು. ಮನೆ ಎಂಬುದು ಪ್ರತಿ ಕುಟುಂಬಕ್ಕೆ ಸ್ವಾಭಿಮಾನದ ಸಂಕೇತ. ಹೀಗಾಗಿ 1977ರಲ್ಲಿ ತಾವು ಸಿಐಟಿಬಿ ಅಧ್ಯಕ್ಷರಾಗಿದ್ದಾಗ ಆಶಾಮಂದಿರ ಯೋಜನೆ ಆರಂಭಿಸಿದ್ದಾಗಿ ತಿಳಿಸಿದರು.

ಇಂದಿನ ಯುವ ಪೀಳಿಗೆಯ ಜನರು ಸ್ವಂತ ಊರು ಹೊಂದಲು ಪ್ರೇರಣೆ ನೀಡುವುದು ಈ ಪುಸ್ತಕದ ಉದ್ದೇಶವಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ತಮಗೆ ದೊರೆತ ಅಧಿಕಾರಾವಧಿಯಲ್ಲಿ ಯಾವ ರೀತಿ ಜನಪರ ಕಲ್ಯಾಣ ಕಾರ್ಯಕ್ರಮಗಳನ್ನು ಮಾಡ ಬಹುದು ಎಂಬುದನ್ನು ತಿಳಿಸಲು ಹಾಗೂ ಪ್ರತಿ ಯೊಬ್ಬ ನಾಗರಿಕನಿಗೂ ವಸತಿ ಮೂಲಭೂತ ಹಕ್ಕಾಗ ಬೇಕು ಎಂಬುದನ್ನು ಪ್ರತಿಪಾದಿಸಲು ಈ ಕೃತಿ ಮಾರ್ಗಸೂಚಿಯಾಗಬಲ್ಲದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ `ಸಂವಹನ’ ಪ್ರಕಾಶಕ ಡಿ.ಎನ್.ಲೋಕಪ್ಪ, ರೈತ ಮುಖಂಡ ಬೆಳಗೊಳ ಸುಬ್ರಹ್ಮಣ್ಯ, ಯೂತ್ ಹಾಸ್ಟೆಲ್ಸ್ ಅಸೋಸಿ ಯೇಷನ್ ಮೈಸೂರು ಜಿಲ್ಲಾಧ್ಯಕ್ಷ ರವಿಕುಮಾರ್, ಆಶಾಮಂದಿರ ಒಕ್ಕೂಟದ ಸಂಚಾಲಕ ಮಾ. ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

 

 

 

Translate »