ಮೈಸೂರು,ಸೆ.5(ಎಂಟಿವೈ)-ಸಾಂಪ್ರದಾಯಿಕ ವಿವಿ ಗಳೂ ದೂರ ಮತ್ತು ಅಂಚೆ ತೆರಪಿನ ಶಿಕ್ಷಣ ನೀಡುತ್ತಿರು ವುದರಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯಕ್ಕೆ ಹಿನ್ನಡೆಯಾಗುತ್ತಿದೆ. ಸಂಪೂರ್ಣ ಮುಕ್ತ ಅವಕಾಶ ನೀಡಿದರೆ ಮುಕ್ತ ವಿವಿಯನ್ನು ಚಿನ್ನದ ಗಟ್ಟಿಯಂತೆ ರೂಪಿಸಬಹುದು ಎಂದು ಕುಲಪತಿ ಪೆÇ್ರ.ಎಸ್.ವಿದ್ಯಾಶಂಕರ್ ಅಭಿಪ್ರಾಯಪಟ್ಟಿದ್ದಾರೆ.
ಮುಕ್ತ ವಿವಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಪ್ರಾದೇಶಿಕ ಕಚೇರಿಗಳನ್ನು ತೆರೆದು ಉನ್ನತ ಶಿಕ್ಷಣ ದೊರೆಯದವ ರಿಗೂ ಶಿಕ್ಷಣ ನೀಡಲು ಮುಂದಾಗಿz್ದÉೀವೆ. ಆದರೆ ನಮ್ಮಂತೆಯೇ ದೂರ ಶಿಕ್ಷಣ ನೀಡಲು ಸಾಂಪ್ರದಾಯಿಕ ವಿವಿಗಳು ಮುಂದಾಗಿರುವುದು ನಮಗೆ ಕಂಟಕವಾಗಿದೆ.
ಈ ಹಿಂದೆ ಉನ್ನತ ಶಿಕ್ಷಣ ಸಚಿವರಾಗಿದ್ದ ಜಿ.ಟಿ. ದೇವೇಗೌಡ ಅವರಿಗೆ ಈ ಬಗ್ಗೆ ಮನವರಿಕೆ ಮಾಡಿ ‘ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಕಾಯಿದೆ’ಗೆ ತಿದ್ದುಪಡಿ ತಂದು ‘ದೂರ ಮತ್ತು ಅಂಚೆ ತೆರಪಿನ ಶಿಕ್ಷಣ’ ವನ್ನು ಮುಕ್ತ ವಿವಿಗೆ ಸೀಮಿತಗೊಳಿಸುವಂತೆಯೂ ಒತ್ತಡ ಹೇರಲಾಗಿತ್ತು. ಆದರೆ ಇದೀಗ ಸರ್ಕಾರ ಬದ ಲಾಗಿದೆ. ಈಗ ನಮ್ಮ ಸಮಸ್ಯೆ ಹೇಳಿಕೊಳ್ಳಲು ಸಮ್ಮೇ ಳನ ಆಯೋಜಿಸುತ್ತಿz್ದÉೀವೆ ಎಂದು ಹೇಳಿದರು.
ಮುಕ್ತ ವಿವಿಯಲ್ಲಿ 700 ಮಂದಿ ಬೋಧಕ- ಬೋಧ ಕೇತರ ಉದ್ಯೋಗಿಗಳಿದ್ದು ಅವರೆಲ್ಲರಿಗೂ ತಿಂಗಳಿಗೆ ಮೂರು ಕೋಟಿ ಸಂಬಳ ನೀಡುತ್ತಿz್ದÉೀವೆ. ಒಂದೆಡೆ ಯುಜಿಸಿ ಅನುದಾನವೂ ಇಲ್ಲದೆ ಮತ್ತೊಂದೆಡೆ ರಾಜ್ಯ ಸರ್ಕಾರÀದ ಅಲ್ಪ ಅನುದಾನ ಪಡೆದುಕೊಂಡು, ವಿದ್ಯಾರ್ಥಿ ಗಳು ನೀಡುವ ಪ್ರವೇಶ ಶುಲ್ಕದಲ್ಲಿಯೇ ವಿವಿ ನಡೆಸುವಂತಾಗಿದೆ ಎಂದು ವಿಷಾದಿಸಿದರು.
ಕೇವಲ 8870 ದಾಖಲು: ಮುಕ್ತ ವಿವಿಯಲ್ಲಿ ಕಳೆದ ವರ್ಷ 11 ಸಾವಿರ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿ ದ್ದರು. ಈ ಸಲ 25 ಸಾವಿರ ಮೀರುತ್ತದೆ ಎಂಬ ನಂಬಿಕೆ ಯಿತ್ತು. ಆದರೆ ಕಾರಣಾಂತರಗಳಿಂದ 8870 ಮಂದಿ ದಾಖಲಾಗಿದ್ದಾರೆ ಎಂದರು. ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ಪ್ರವಾಹದ ಹಿನ್ನೆಲೆಯಲ್ಲಿ ಹಲವು ವಿದ್ಯಾರ್ಥಿ ಗಳು ದಾಖಲಾಗಿಲ್ಲ. ಹೊಸದಾಗಿ 10 ಕೋರ್ಸ್ ಆರಂಭಿಸಲೂ ಯುಜಿಸಿ ಅನುಮತಿ ಸಿಕ್ಕಿಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಡಾ.ಬಿ.ರಮೇಶ್, ಹಣಕಾಸು ಅಧಿಕಾರಿ ಖಾದರ್ ಪಾಷಾ ಇದ್ದರು.
ಇಂದು ಕುಲಪತಿಗಳ ಸಮ್ಮೇಳನ
ಕರ್ನಾಟಕ ರಾಜ್ಯ ಮುಕ್ತ ವಿವಿಯ ಘಟಿಕೋ ತ್ಸವ ಭವನದಲ್ಲಿ ನಾಳೆ (ಶುಕ್ರವಾರ) ಬೆಳಿಗ್ಗೆ 11 ಗಂಟೆಗೆ ಅಖಿಲ ಭಾರತ ಮುಕ್ತ ವಿಶ್ವವಿದ್ಯಾ ನಿಲಯ ಗಳ ಕುಲಪತಿಗಳ ಸಮ್ಮೇಳನ ಆಯೋಜಿಸಲಾ ಗಿದ್ದು, 21ನೇ ಶತಮಾನದಲ್ಲಿ ಮುಕ್ತ ವಿಶ್ವವಿದ್ಯಾ ನಿಲಯಗಳ ಪಾತ್ರ ಕುರಿತು ಚರ್ಚೆ ನಡೆಯಲಿದೆ ಎಂದು ಕುಲಪತಿ ಪೆÇ್ರ.ಎಸ್.ವಿದ್ಯಾಶಂಕರ್ ತಿಳಿಸಿದರು.
ಸಮ್ಮೇಳನವನ್ನು ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿP್ಷÀಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾ ಯಣ ಉದ್ಘಾಟಿಸಲಿದ್ದಾರೆ. ಸಂಸದ ಪ್ರತಾಪ ಸಿಂಹ, ವಿಶ್ವವಿದ್ಯಾನಿಲಯಗಳ ಧನಸಹಾಯ ಆಯೋಗದ ಜಂಟಿ ಕಾರ್ಯದರ್ಶಿ ಡಾ. ಅವಿಚಲ್ ಕಪೂರ್ ಗೌರವ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಮುಕ್ತ ವಿವಿ ಕುಲಪತಿ ಡಾ.ಎಸ್.ವಿದ್ಯಾಶಂಕರ್ ಅಧ್ಯP್ಷÀತೆ ವಹಿಸುವರು. ಮುಕ್ತ ವಿವಿ ವಿಶ್ರಾಂತ ಕುಲಪತಿ ಡಾ.ಎನ್.ಎಸ್.ರಾಮೇಗೌಡ ಸಮ್ಮೇಳನಾಧ್ಯP್ಷÀರಾಗಿ ಪ್ರಧಾನ ಭಾಷಣ ಮಾಡುವರು. ಪ್ರಾಥಮಿಕ ಮತ್ತು ಪ್ರೌಢಶಿP್ಷÀಣ ಸಚಿವ ಎಸ್.ಸುರೇಶ್‍ಕುಮಾರ್, ಶಾಸಕ ಎಲ್.ನಾಗೇಂದ್ರ, ವಿಧಾನ ಪರಿಷತ್ ಸದಸ್ಯರಾದ ಸಂದೇಶ್ ನಾಗರಾಜ್, ಪುಟ್ಟಣ್ಣ, ಕುಲಸಚಿವ ಪೆÇ್ರ.ಬಿ. ರಮೇಶ್ ಪಾಲ್ಗೊಳ್ಳುವರು ಎಂದು ವಿವರಿಸಿದರು.