Tag: Mysore

ಮೈಸೂರು ರೇಸ್ ಕ್ಲಬ್ ಗುತ್ತಿಗೆ ನವೀಕರಣವಾಗಿಲ್ಲ
ಮೈಸೂರು

ಮೈಸೂರು ರೇಸ್ ಕ್ಲಬ್ ಗುತ್ತಿಗೆ ನವೀಕರಣವಾಗಿಲ್ಲ

August 26, 2019

ಮೈಸೂರು, ಆ.25- ಮೈಸೂರು ರೇಸ್ ಕ್ಲಬ್ (ಎಂಆರ್‍ಸಿ) ಗುತ್ತಿಗೆಯನ್ನು ಇನ್ನೂ ನವೀಕರಿಸಿಲ್ಲ ಎಂದು ಕ್ಲಬ್‍ನ ಮಾಜಿ ಅಧ್ಯಕ್ಷ ಕೆ.ಎ.ಮುದ್ದಪ್ಪ ತಿಳಿಸಿದ್ದಾರೆ. ಕರ್ನಾಟಕ ಸರ್ಕಾರ ಹಾಗೂ ಮೈಸೂರು ರೇಸ್ ಕ್ಲಬ್ ನಡುವೆ ನಡೆದ ಹಲವು ಸುತ್ತಿನ ಮಾತುಕತೆಗಳ ನಂತರ ರೇಸ್ ಕ್ಲಬ್ ಗುತ್ತಿಗೆ ಯನ್ನು 30 ವರ್ಷಗಳಿಗೆ ನವೀಕರಿಸಲಾಗಿದೆ ಎಂಬ ವರದಿಯು ಎಂಆರ್‍ಸಿಯ ಗುತ್ತಿಗೆ ಸಮಿತಿ ಅಧ್ಯಕ್ಷ (Leasing committee chairman) ಎಲ್.ವಿವೇಕಾನಂದ ಅವರು ನೀಡಿದ ಮಾಹಿತಿ ಮೇರೆಗೆ `ಮೈಸೂರು ಮಿತ್ರ’ನಲ್ಲಿ ಕಳೆದ ಜುಲೈ 7ರಂದು ಪ್ರಕಟವಾಗಿತ್ತು. ಎಂಆರ್‍ಸಿ…

ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ್ ತಂದೆ ನಿಧನ
ಮೈಸೂರು

ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ್ ತಂದೆ ನಿಧನ

August 26, 2019

ಮೈಸೂರು, ಆ.25(ಎಂಕೆ)- ಇತ್ತೀ ಚೆಗೆ ಆತ್ಮಹತ್ಯೆಗೆ ಶರ ಣಾದ ಖ್ಯಾತ ಉದ್ಯಮಿ, ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ್ ಅವರ ತಂದೆ ಗಂಗಯ್ಯ ಹೆಗಡೆ(96) ಇಂದು ಮಧ್ಯಾಹ್ನ ನಿಧನರಾದರು. ತೀವ್ರ ಅನಾ ರೋಗ್ಯದ ಹಿನ್ನೆಲೆ ಕಳೆದ ಒಂದೂವರೆ ತಿಂಗಳಿನಿಂದ ಕೋಮಾ ಸ್ಥಿತಿಯಲ್ಲಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಮಧ್ಯಾಹ್ನ 3 ಗಂಟೆಗೆ ಕೊನೆಯುಸಿರೆಳೆ ದಿದ್ದಾರೆ. ಉದ್ಯಮಿ ಸಿದ್ದಾರ್ಥ್ ಪತ್ನಿಯೂ ಆದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಪುತ್ರಿ ಮಾಳವಿಕ ಹಾಗೂ ಸಂಬಂಧಿಕರಿಗೆ ಮೃತ ದೇಹವನ್ನು…

ಯಾವುದೂ ಅತಿಯಾಗಬಾರದೆಂಬ ಬುದ್ಧನ ಸಂದೇಶ ಮರೆಯುತ್ತಿದ್ದೇವೆ
ಮೈಸೂರು

ಯಾವುದೂ ಅತಿಯಾಗಬಾರದೆಂಬ ಬುದ್ಧನ ಸಂದೇಶ ಮರೆಯುತ್ತಿದ್ದೇವೆ

August 26, 2019

ಮೈಸೂರು, ಆ.25(ಪಿಎಂ)- ನಮ್ಮ ಸಮಾಜ ಇಂದು ಅತಿರೇಕದ ವಿಷಮ ಸನ್ನಿವೇಶಕ್ಕೆ ಸಿಲುಕಿದ್ದು, ಯಾವುದೂ ಬದುಕಲ್ಲಿ ಅತಿಯಾಗಬಾರದು ಎಂಬ ಬುದ್ಧನ ಸಂದೇಶ ಮರೆಯುತ್ತಿದ್ದೇವೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಜವಳಿ ಆಯುಕ್ತ ಡಾ.ಎಂ.ಆರ್.ರವಿ ವಿಷಾದಿಸಿದರು. ಮೈಸೂರಿನ ಕೃಷ್ಣಮೂರ್ತಿಪುರಂನ ರಾಘವೇಂದ್ರ ಆರಾಧನಾ ಮಂದಿರದಲ್ಲಿ ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ಕನ್ನಡ ಸಾಹಿತ್ಯ ಕಲಾಕೂಟದ ಜಂಟಿ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಜ್ಞಾನ ಲೇಖಕ, ಸಾಹಿತಿ ಎಸ್.ರಾಮಪ್ರಸಾದ್ ಅವರ 78ನೇ ಹುಟ್ಟುಹಬ್ಬ ಹಾಗೂ ಅವರ `ಸ್ನೇಹ ಸಂಜೀವಿನಿ’ ಪುಸ್ತಕ ಬಿಡು ಗಡೆ…

ಮೈಸೂರು-ತಾಳಗುಪ್ಪ-ಮೈಸೂರು ಎಕ್ಸ್‍ಪ್ರೆಸ್ ರೈಲಿಗೆ ಎರಡು ಹೆಚ್ಚುವರಿ ಸ್ಲೀಪರ್ ಅಳವಡಿಕೆ
ಮೈಸೂರು

ಮೈಸೂರು-ತಾಳಗುಪ್ಪ-ಮೈಸೂರು ಎಕ್ಸ್‍ಪ್ರೆಸ್ ರೈಲಿಗೆ ಎರಡು ಹೆಚ್ಚುವರಿ ಸ್ಲೀಪರ್ ಅಳವಡಿಕೆ

August 26, 2019

ಮೈಸೂರು, ಆ.25(ಆರ್‍ಕೆಬಿ)- ಮೈಸೂರು-ತಾಳಗುಪ್ಪ-ಮೈಸೂರು ಡೈಲಿ ಎಕ್ಸ್‍ಪ್ರೆಸ್ ರೈಲಿಗೆ ಎರಡು ಹೆಚ್ಚುವರಿ ಸ್ಲೀಪರ್‍ಗಳನ್ನು ಅಳವಡಿಸಲಾಗಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ. ಮೈಸೂರಿನಿಂದ ಪ್ರತಿದಿನ ಸಂಜೆ 7.30 ಗಂಟೆಗೆ ಹೊರಡುವ ಮೈಸೂರು-ತಾಳ ಗುಪ್ಪ- ಮೈಸೂರು ಎಕ್ಸ್‍ಪ್ರೆಸ್ ರೈಲು (ಸಂಖ್ಯೆ: 16227) ಮತ್ತು ಶಿವಮೊಗ್ಗದಿಂದ ರಾತ್ರಿ 10.20 ಗಂಟೆಗೆ ಹೊರಡುವ ರೈಲು (ಸಂಖ್ಯೆ: 16228)ಗಳಿಗೆ ಹೆಚ್ಚುವರಿಯಾಗಿ ಎರಡು ಸ್ಲೀಪರ್‍ಗಳನ್ನು ಅಳವಡಿಸಲಾಗಿದೆ. ಪ್ರಯಾಣಿಕರ ಬೇಡಿಕೆ ಪರಿಗಣಿಸಿ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರ ಸೂಚನೆ ಮೇರೆಗೆ ಈ ಹೆಚ್ಚುವರಿ ಸ್ಲೀಪರ್‍ಗಳನ್ನು ಅಳವಡಿಸಲಾಗಿದೆ ಎಂದು…

ಮುಖಂಡರು ತಮ್ಮ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು: ಧರ್ಮಸೇನಾ
ಮೈಸೂರು

ಮುಖಂಡರು ತಮ್ಮ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು: ಧರ್ಮಸೇನಾ

August 26, 2019

ಮೈಸೂರು, ಆ.25(ಪಿಎಂ)- ಯಾವುದೇ ಸಮುದಾಯವಾದರೂ ನಮ್ಮ ಅಭಿ ವೃದ್ಧಿಗೆ ಸರ್ಕಾರ ಒತ್ತು ನೀಡಲಿಲ್ಲವೆಂದು ಕೈಕಟ್ಟಿ ಕುಳಿತರೆ ಪ್ರಯೋಜನವಿಲ್ಲ. ಆಯಾಯ ಸಮುದಾಯದ ಮುಖಂ ಡರು ತಮ್ಮ ಜನಾಂಗದ ಪ್ರಗತಿಗೆ ಶ್ರಮಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ ತಿಳಿಸಿದರು. ಮೈಸೂರಿನ ನಾದಬ್ರಹ್ಮ ಸಂಗೀತ ಸಭಾ ದಲ್ಲಿ ಶ್ರೀ ಗಾಣಿಗ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್, ಜಿಲ್ಲಾ ಗಾಣಿಗರ ಗೆಳೆಯರ ಬಳಗದ ಜಂಟಿ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಎಸ್‍ಎಸ್ ಎಲ್‍ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ…

ಕಾಶ್ಮೀರದಲ್ಲಿ ಹಿಂದೂಗಳಿಗೆ ಪುನರ್ ವಸತಿ ಕಲ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ
ಮೈಸೂರು

ಕಾಶ್ಮೀರದಲ್ಲಿ ಹಿಂದೂಗಳಿಗೆ ಪುನರ್ ವಸತಿ ಕಲ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ

August 26, 2019

ಮೈಸೂರು, ಆ.25(ಎಂಟಿವೈ)-ಕಾಶ್ಮೀರದಲ್ಲಿ ಹಿಂದೂಗಳಿಗೆ ಪುನರ್‍ವಸತಿ ಕಲ್ಪಿಸಿ ದೇಶಕ್ಕೆ ನುಸುಳಿರುವ ರೊಹಿಂಗ್ಯಾ ಮತ್ತು ಬಾಂಗ್ಲಾದೇಶಿಗರನ್ನು ಹೊರದಬ್ಬುವಂತೆ ಆಗ್ರಹಿಸಿ ಹಿಂದೂ ಜನ ಜಾಗೃತಿ ಸಮಿತಿಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮೈಸೂರಿನ ಅಗ್ರಹಾರ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದ ಹಿಂದೂ ಜನ ಜಾಗೃತಿ ಸಮಿತಿಯ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸವಲತ್ತು ಹಾಗೂ ಆರ್ಟಿಕಲ್-370 ಮತ್ತು 35-ಎ ಅನ್ನು ರದ್ದುಪಡಿಸುವ ಐತಿಹಾಸಿಕ ನಿರ್ಣಯ ಕೈಗೊಂಡಿ ರುವುದನ್ನು ದೇಶವೇ ಸ್ವಾಗತಿಸಿದೆ. ಈ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ…

ಸರ್ಕಾರಿ ಶುಶ್ರೂಷ ಮಹಾವಿದ್ಯಾಲಯದ 7ನೇ ವಾರ್ಷಿಕೋತ್ಸವ
ಮೈಸೂರು

ಸರ್ಕಾರಿ ಶುಶ್ರೂಷ ಮಹಾವಿದ್ಯಾಲಯದ 7ನೇ ವಾರ್ಷಿಕೋತ್ಸವ

August 26, 2019

ಮೈಸೂರು, ಆ.25(ಎಂಕೆ)- ಮೈಸೂರಿನ ಜೆ.ಕೆ.ಮೈದಾನದಲ್ಲಿರುವ ಅಮೃತ ಮಹೋತ್ಸವ ಭವನದಲ್ಲಿ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ‘ಸರ್ಕಾರಿ ಶುಶ್ರೂಷ ಮಹಾವಿದ್ಯಾಲಯದ’ 7ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಸಮಾರಂಭವನ್ನು ಉದ್ಘಾಟಿಸಿದ ಶಾಂತವೇರಿ ಗೋಪಾಲಗೌಡ ಶುಶ್ರೂಷ ಮಹಾವಿದ್ಯಾಲಯದ ನಿರ್ದೇಶಕಿ ಕೆ.ಯಶೋಧ ಮಾತನಾಡಿ, 2012ರಲ್ಲಿ ಪ್ರಾರಂಭವಾದ ಸರ್ಕಾರಿ ಶುಶ್ರೂಷ ಮಹಾವಿದ್ಯಾಲಯ ಉತ್ತಮ ಸೌಲಭ್ಯಗಳ ಕೊರತೆ ನಡುವೆಯೂ ಶೈಕ್ಷಣಿಕವಾಗಿ ಪ್ರಗತಿಯನ್ನು ಸಾಧಿಸುತ್ತಿದೆ. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯ ಮೂಲಕ ಕಲಿಕೆಯನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರಾಧ್ಯಾಪಕರ ಕೊಡುಗೆ ಮುಖ್ಯವಾಗಿದೆ ಎಂದು ಶ್ಲಾಘಿಸಿದರು. ಮೈಸೂರು…

70 ವರ್ಷದ ಬಳಿಕ ಸ್ವಚ್ಛತೆಯ ಪಾಠ
ಮೈಸೂರು

70 ವರ್ಷದ ಬಳಿಕ ಸ್ವಚ್ಛತೆಯ ಪಾಠ

August 25, 2019

ಮೈಸೂರು, ಆ.24(ಎಸ್‍ಪಿಎನ್)- ಭಾರತ ಶ್ರೀಮಂತ ದೇಶ. ಆದರೆ, ಇಲ್ಲಿನ ಪ್ರಜೆಗಳು ಮಾತ್ರ ಏನೂ ಇಲ್ಲದಂತೆ ಬದುಕು ತ್ತಿರುವುದು ಸೋಜಿಗವೇ ಸರಿ ಎಂದು ರಾಜ್ಯ ಸರ್ಕಾರದ ಜವಳಿ ಅಭಿವೃದ್ಧಿ ಆಯುಕ್ತ ಡಾ.ಎಂ.ಆರ್.ರವಿ ಅಭಿಪ್ರಾಯಪಟ್ಟರು. ಜೆಎಸ್‍ಎಸ್ ಆಸ್ಪತ್ರೆ ಆವರಣದಲ್ಲಿರುವ ಶ್ರೀರಾಜೇಂದ್ರ ಭವನದಲ್ಲಿ `ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಬಳಗ’ದ ಪ್ರಥಮ ವಾರ್ಷಿಕೋತ್ಸವದಲ್ಲಿ ಮೂವರು ಸಾಧಕ ಮಹಿಳೆಯರಿಗೆ `ಆದರ್ಶ ಗೃಹಿಣಿ ಪ್ರಶಸ್ತಿ’ ವಿತರಿಸಿ ಮಾತನಾಡಿದ ಅವರು, ನಮ್ಮ ದೇಶ ದಲ್ಲಿ ಇರುವಷ್ಟು ಮಹಾಪುರುಷರ ಇತಿ ಹಾಸ ಹಾಗೂ ಅಧ್ಯಾತ್ಮದ ಬೇರುಗಳು ಬೇರೆ ಯಾವ…

ಸುಲಿಗೆಕೋರನ ದಾಳಿಗೀಡಾಗಿದ್ದ ಹಿರಿಯ ಮಹಿಳೆ ಸಾವು
ಮೈಸೂರು

ಸುಲಿಗೆಕೋರನ ದಾಳಿಗೀಡಾಗಿದ್ದ ಹಿರಿಯ ಮಹಿಳೆ ಸಾವು

August 25, 2019

ಮೈಸೂರು,ಆ.24(ಆರ್‍ಕೆ)- ಖದೀಮ, ಮನೆಗೆ ನುಗ್ಗಿ ಬಾಯಿಗೆ ಬಟ್ಟೆ ತುರುಕಿ 7 ಚಿನ್ನದ ಬಳೆ ಗಳನ್ನು ದೋಚಿದ್ದ ಘಟನೆಯಿಂದ ತೀವ್ರ ಆಘಾತಕ್ಕೀ ಡಾಗಿದ್ದ ವೃದ್ಧೆ ಆರ್.ನಾಗರತ್ನ ಅವರು ಶುಕ್ರವಾರ ರಾತ್ರಿ ಸಾವನ್ನಪ್ಪಿದರು. ಆಗಸ್ಟ್ 21ರಂದು ಬೆಳಿಗ್ಗೆ 7.30 ಗಂಟೆ ವೇಳೆಗೆ ಮೈಸೂರಿನ ಚಾಮ ರಾಜಪುರಂನ ಮೈಸೂರು ಜಿಲ್ಲಾ ಕೋರ್ಟ್ ಬಳಿ ಮನುವನ ಉದ್ಯಾನವನದ ಎದು ರಿನ 1079ನೇ ಸಂಖ್ಯೆಯ ಮನೆಗೆ ನುಗ್ಗಿದ್ದ ರೆಹಮಾನ್ ಷರೀಫ್ ಎಂಬ ಖದೀಮ, ಸ್ನಾನದ ಕೋಣೆಯಲ್ಲಿ ಹಲ್ಲು ಬ್ರಷ್ ಮಾಡು ತ್ತಿದ್ದಾಗ ನಾಗರತ್ನ ಅವರ…

ಏಕತೆ ಸಾರುವ ಹಿಂದೂವಾದ ಸಂವಿಧಾನದಲ್ಲಿ ಸೇರ್ಪಡೆಯಾಗಲಿ
ಮೈಸೂರು

ಏಕತೆ ಸಾರುವ ಹಿಂದೂವಾದ ಸಂವಿಧಾನದಲ್ಲಿ ಸೇರ್ಪಡೆಯಾಗಲಿ

August 25, 2019

ಮೈಸೂರು,ಆ.24(ಎಂಟಿವೈ)-ಹಿಂದೂಗಳು ಸಹಿ ಷ್ಣುತಾವಾದಿಗಳು ಹಾಗೂ ಸವಲತ್ತನ್ನು ಹಂಚಿಕೊಂಡು ಬದುಕುವ ಗುಣವುಳ್ಳವರಾಗಿದ್ದಾರೆ. ನಾವೆಲ್ಲಾ ಒಂದು ಎಂಬ ಏಕತೆ ಸಾರುವ ಹಿಂದೂವಾದವನ್ನು ಸಂವಿಧಾನ ದಲ್ಲಿ ಸೇರಿಸುವುದು ಅಗತ್ಯವಾಗಿದೆ ಎಂದು ಅಂಕಣ ಕಾರ ಪೆÇ್ರ.ಪ್ರೇಮ್‍ಶೇಖರ್ ಅಭಿಪ್ರಾಯ ಪಟ್ಟಿದ್ದಾರೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿ ಹಾಗೂ ಶೇಷಾದ್ರಿಪುರಂ ಪದವಿ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ ಸಂವಿಧಾನ ಬಲಪಡಿಸುವಲ್ಲಿ `ನರೇಂದ್ರ ಮೋದಿ ನೇತೃತ್ವದ ಸರ್ಕಾರದ ದೃಢ ಹೆಜ್ಜೆಗಳ ಪರಾಮರ್ಶೆ’ ಕುರಿತ ಶೈಕ್ಷಣಿಕ ಸಂವಾದವನ್ನು…

1 190 191 192 193 194 330
Translate »