ಮುಖಂಡರು ತಮ್ಮ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು: ಧರ್ಮಸೇನಾ
ಮೈಸೂರು

ಮುಖಂಡರು ತಮ್ಮ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು: ಧರ್ಮಸೇನಾ

August 26, 2019

ಮೈಸೂರು, ಆ.25(ಪಿಎಂ)- ಯಾವುದೇ ಸಮುದಾಯವಾದರೂ ನಮ್ಮ ಅಭಿ ವೃದ್ಧಿಗೆ ಸರ್ಕಾರ ಒತ್ತು ನೀಡಲಿಲ್ಲವೆಂದು ಕೈಕಟ್ಟಿ ಕುಳಿತರೆ ಪ್ರಯೋಜನವಿಲ್ಲ. ಆಯಾಯ ಸಮುದಾಯದ ಮುಖಂ ಡರು ತಮ್ಮ ಜನಾಂಗದ ಪ್ರಗತಿಗೆ ಶ್ರಮಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ ತಿಳಿಸಿದರು.

ಮೈಸೂರಿನ ನಾದಬ್ರಹ್ಮ ಸಂಗೀತ ಸಭಾ ದಲ್ಲಿ ಶ್ರೀ ಗಾಣಿಗ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್, ಜಿಲ್ಲಾ ಗಾಣಿಗರ ಗೆಳೆಯರ ಬಳಗದ ಜಂಟಿ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಎಸ್‍ಎಸ್ ಎಲ್‍ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ, ಹಿರಿಯರಿಗೆ ಸನ್ಮಾನ ಹಾಗೂ ಮಾರ್ಗದರ್ಶನ ಶಿಬಿರ ಉದ್ಘಾ ಟಿಸಿ ಮಾತನಾಡಿದ ಅವರು, ಗಾಣಿಗ ಸಮು ದಾಯದಲ್ಲಿ ಉನ್ನತ ಸ್ಥಾನದಲ್ಲಿರುವವರು ಜನಾಂಗದ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡ ಬೇಕು. ಜೊತೆಗೆ ಸಮುದಾಯದ ಒಟ್ಟಾರೆ ಅಭಿವೃದ್ಧಿ ಸಹಕಾರವಾಗಿ ನಿಲ್ಲಬೇಕು ಎಂದು ಸಲಹೆ ನೀಡಿದರು.

ಶಿಕ್ಷಣ ಎಂಬುದು ಕೇವಲ ಉದ್ಯೋ ಗಕ್ಕೆ ಮಾತ್ರವಲ್ಲ, ಅದು ತುಳಿತಕ್ಕೊಳಗಾಗ ದಿರಲು ನಮಗೆ ರಕ್ಷಣೆಯಾಗುತ್ತದೆ ಎಂಬುದೇ ಮುಖ್ಯ. ಹೀಗಾಗಿ ಎಲ್ಲರೂ ಶಿಕ್ಷಿತ ರಾಗಬೇಕು. ನಮ್ಮ ರಾಜ್ಯದ ಜನಸಂಖ್ಯೆ 6 ಕೋಟಿ ಇದ್ದು, ರಾಜ್ಯದಲ್ಲಿ 6 ಲಕ್ಷ ಸರ್ಕಾರಿ ಉದ್ಯೋಗವಿದೆ. ಶಿಕ್ಷಣ ಪಡೆದವ ರಿಗೆಲ್ಲ ಸರ್ಕಾರಿ ಉದ್ಯೋಗ ನೀಡಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರಿ ಉದ್ಯೋಗಕ್ಕಾಗಿಯೇ ಓದುತ್ತೇ ನೆಂದರೆ ಪ್ರಯೋಜನವಿಲ್ಲ ಎಂದರು.

ಅಧಿಕಾರಿಗಳು ತಮ್ಮ ನಿವೃತ್ತಿಯ ನಂತರ ನೆಮ್ಮದಿ ಬಾಳಿಗಾಗಿ ಸಮಾಜದಿಂದ ದೂರು ಉಳಿಯುತ್ತಾರೆ. ಆದರೆ ನಿಮ್ಮ ಸಮುದಾಯದ ನಿವೃತ್ತ ಕೆಎಎಸ್ ಅಧಿಕಾರಿ ನಾಗರಾಜ ಶೆಟ್ಟಿ ಅವರು ಶ್ರೀ ಗಾಣಿಗ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ ಎಂದು ಶ್ಲಾಘಿಸಿದರು. ಇದೇ ವೇಳೆ ಎಸ್‍ಎಸ್ ಎಲ್‍ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ 50ಕ್ಕೂ ಹೆಚ್ಚು ವಿದ್ಯಾರ್ಥಿ ಗಳಿಗೆ ನಗದಿನೊಂದಿಗೆ ಪ್ರತಿಭಾ ಪುರ ಸ್ಕಾರ ನೀಡಲಾಯಿತು. ಜೊತೆಗೆ ಅನೇಕ ಸಾಧಕರನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ದ ಶೆಟ್ಟಿ, ಮಾಜಿ ಮೇಯರ್ ಅನಂತು, ಕಾಂಗ್ರೆಸ್ ಜಿಲ್ಲಾ ಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಟ್ರಸ್ಟ್‍ನ ಸಂಸ್ಥಾಪಕ ನಾಗರಾಜ ಶೆಟ್ಟಿ, ವಲಯ ಸಂಘಟನಾ ಕಾರ್ಯದರ್ಶಿ ಡಾ.ಕೆ. ವಿಜಯಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಹದೇವ ಗಾಣಿಗ, ಬಿಎಂಎಸ್ ಅಕಾಡೆಮಿ ನಿರ್ದೇಶಕ ಡಾ. ಮಧುಸೂದನ್ ಮತ್ತಿತರರು ಹಾಜರಿದ್ದರು.

 

Translate »