ಮೈಸೂರು-ತಾಳಗುಪ್ಪ-ಮೈಸೂರು ಎಕ್ಸ್‍ಪ್ರೆಸ್ ರೈಲಿಗೆ ಎರಡು ಹೆಚ್ಚುವರಿ ಸ್ಲೀಪರ್ ಅಳವಡಿಕೆ
ಮೈಸೂರು

ಮೈಸೂರು-ತಾಳಗುಪ್ಪ-ಮೈಸೂರು ಎಕ್ಸ್‍ಪ್ರೆಸ್ ರೈಲಿಗೆ ಎರಡು ಹೆಚ್ಚುವರಿ ಸ್ಲೀಪರ್ ಅಳವಡಿಕೆ

August 26, 2019

ಮೈಸೂರು, ಆ.25(ಆರ್‍ಕೆಬಿ)- ಮೈಸೂರು-ತಾಳಗುಪ್ಪ-ಮೈಸೂರು ಡೈಲಿ ಎಕ್ಸ್‍ಪ್ರೆಸ್ ರೈಲಿಗೆ ಎರಡು ಹೆಚ್ಚುವರಿ ಸ್ಲೀಪರ್‍ಗಳನ್ನು ಅಳವಡಿಸಲಾಗಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಮೈಸೂರಿನಿಂದ ಪ್ರತಿದಿನ ಸಂಜೆ 7.30 ಗಂಟೆಗೆ ಹೊರಡುವ ಮೈಸೂರು-ತಾಳ ಗುಪ್ಪ- ಮೈಸೂರು ಎಕ್ಸ್‍ಪ್ರೆಸ್ ರೈಲು (ಸಂಖ್ಯೆ: 16227) ಮತ್ತು ಶಿವಮೊಗ್ಗದಿಂದ ರಾತ್ರಿ 10.20 ಗಂಟೆಗೆ ಹೊರಡುವ ರೈಲು (ಸಂಖ್ಯೆ: 16228)ಗಳಿಗೆ ಹೆಚ್ಚುವರಿಯಾಗಿ ಎರಡು ಸ್ಲೀಪರ್‍ಗಳನ್ನು ಅಳವಡಿಸಲಾಗಿದೆ. ಪ್ರಯಾಣಿಕರ ಬೇಡಿಕೆ ಪರಿಗಣಿಸಿ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರ ಸೂಚನೆ ಮೇರೆಗೆ ಈ ಹೆಚ್ಚುವರಿ ಸ್ಲೀಪರ್‍ಗಳನ್ನು ಅಳವಡಿಸಲಾಗಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Translate »