ಯಾವುದೂ ಅತಿಯಾಗಬಾರದೆಂಬ ಬುದ್ಧನ ಸಂದೇಶ ಮರೆಯುತ್ತಿದ್ದೇವೆ
ಮೈಸೂರು

ಯಾವುದೂ ಅತಿಯಾಗಬಾರದೆಂಬ ಬುದ್ಧನ ಸಂದೇಶ ಮರೆಯುತ್ತಿದ್ದೇವೆ

August 26, 2019

ಮೈಸೂರು, ಆ.25(ಪಿಎಂ)- ನಮ್ಮ ಸಮಾಜ ಇಂದು ಅತಿರೇಕದ ವಿಷಮ ಸನ್ನಿವೇಶಕ್ಕೆ ಸಿಲುಕಿದ್ದು, ಯಾವುದೂ ಬದುಕಲ್ಲಿ ಅತಿಯಾಗಬಾರದು ಎಂಬ ಬುದ್ಧನ ಸಂದೇಶ ಮರೆಯುತ್ತಿದ್ದೇವೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಜವಳಿ ಆಯುಕ್ತ ಡಾ.ಎಂ.ಆರ್.ರವಿ ವಿಷಾದಿಸಿದರು.

ಮೈಸೂರಿನ ಕೃಷ್ಣಮೂರ್ತಿಪುರಂನ ರಾಘವೇಂದ್ರ ಆರಾಧನಾ ಮಂದಿರದಲ್ಲಿ ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ಕನ್ನಡ ಸಾಹಿತ್ಯ ಕಲಾಕೂಟದ ಜಂಟಿ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಜ್ಞಾನ ಲೇಖಕ, ಸಾಹಿತಿ ಎಸ್.ರಾಮಪ್ರಸಾದ್ ಅವರ 78ನೇ ಹುಟ್ಟುಹಬ್ಬ ಹಾಗೂ ಅವರ `ಸ್ನೇಹ ಸಂಜೀವಿನಿ’ ಪುಸ್ತಕ ಬಿಡು ಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಭಾವನೆಗಳಿಗೆ ಬೆಲೆ ಇಲ್ಲದಂತಾಗಿ ಅಹಂಕಾರ, ಆಸೆ, ಸಂಪತ್ತು ಎಲ್ಲವೂ ಅತಿಯಾಗುತ್ತಿದೆ. ಅತಿರೇಕದ ವಿಷಮ ಸನ್ನಿವೇಶದಲ್ಲಿದ್ದರೂ ಏನೂ ಆಗಿಲ್ಲವೆಂಬ ಭ್ರಮೆಯಲ್ಲಿ ಬದುಕು ದೂಡುತ್ತಿದ್ದೇವೆ. ಯಾವುದೂ ಬದುಕಲ್ಲಿ ಅತಿ ಯಾಗಬಾರದು ಎಂಬ ಬುದ್ಧನ ಸಂದೇಶ ಮರೆಯುತ್ತಿ ದ್ದೇವೆ. ಇಂತಹ ಪರಿಸ್ಥಿತಿ ಬದಲಾಗಬೇಕಾದರೆ ಇಂದಿ ನಂತಹ ಸಾಹಿತ್ಯಕ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಆಗಬೇಕಿದೆ. ನಾನು ರಾಜ್ಯದ ಹಲವು ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಬೆಂಗಳೂರು ಬಿಟ್ಟರೆ, ಮೈಸೂರಿನಲ್ಲಿ ಮಾತ್ರವೇ ಇಂತಹ ಸಾಹಿತ್ಯ, ಸಾಂಸ್ಕøತಿಕ ಕಾರ್ಯಕ್ರಮ ಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಆದರೆ ಇನ್ನುಳಿದ ಎಲ್ಲಾ ಜಿಲ್ಲೆಗಳಲ್ಲೂ ಈ ರೀತಿಯ ಕಾರ್ಯಕ್ರಮಗಳು ತೀರಾ ಕಡಿಮೆ ಎಂದು ಬೇಸರ ವ್ಯಕ್ತಪಡಿಸಿದರು.

ವಿದ್ವತ್ತು ಮತ್ತು ಸಾಂಸ್ಕøತಿಕ ಸಂಪತ್ತಿಗೆ ಮೈಸೂರು ಖ್ಯಾತನಾಮ ಗಳಿಸಿದೆ. ಅಪರೂಪದ ಮನಸ್ಸು ಮತ್ತು ಹೃದಯವಂತಿಕೆಯ ಎಸ್.ರಾಮಪ್ರಸಾದ್ ಅವರನ್ನು 78 ವರ್ಷಗಳ ಕಾಲ ಮೈಸೂರು ಪೋಷಣೆ ಮಾಡಿದೆ. ರಾಮಪ್ರಸಾದ್ ಅವರು ಇಂದಿಗೆ ಕಥೆ, ಕಾದಂಬರಿ ಬರೆಯಬಹುದಿತ್ತು. ಆದರೆ ಅವರು `ಸ್ನೇಹ ಸಂಜೀ ವಿನಿ’ ಎಂಬ ತಮ್ಮ ಅನುಭವ ಆಧಾರಿತ ಕೃತಿ ರಚನೆ ಮಾಡಿದ್ದಾರೆ. ಆ ಮೂಲಕ ವಿಜ್ಞಾನ ಬರಹಗಾರ, ಸಾಹಿತಿ, ಮುಕ್ತಕ ಸಾಹಿತಿಯಾಗಿ ಮಾತ್ರವಲ್ಲದೆ, ಅವ ರೊಳಗೆ ಇತಿಹಾಸಕಾರ ಕೂಡ ಕೆಲಸ ಮಾಡಿದ್ದೇನೆ ಎಂಬುದನ್ನು ಅನಾವರಣಗೊಳಿಸಿದ್ದಾರೆ ಎಂದು ಅಭಿಮಾನ ವ್ಯಕ್ತಪಡಿಸಿದರು.

ಸರ್ಕಾರದ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಅವು ಗಳ ಸಂಬಂಧ ಆಗುಹೋಗುಗಳ ಬಗ್ಗೆ ನಿಗಾ ಇಡು ವುದಿಲ್ಲವೆಂದು ಅಧಿಕಾರಿಶಾಹಿ ವ್ಯವಸ್ಥೆ ವಿರುದ್ಧ ಮಾತು ಗಳು ಕೇಳಿ ಬರುತ್ತಿರುತ್ತವೆ. ಆದರೆ ರಾಮಪ್ರಸಾದ್ ಅವರು ಆಗಲ್ಲ. ತಾವು ಬರೆದ ಪುಸ್ತಕ ಕಳುಹಿಸುವುದು ಮಾತ್ರ ವಲ್ಲದೆ, ಅದು ತಲುಪಿತೇ ಎಂದು ಪರಿಶೀಲಿಸುತ್ತಾರೆ. ದೂರವಾಣಿಯಲ್ಲಿ ಆಹ್ವಾನಿಸಿದ್ದು ಸಾಕು ಎಂದರೂ ಖುದ್ದು ಮನೆಗೆ ಬಂದು ಆಹ್ವಾನ ಪತ್ರಿಕೆ ನೀಡಿದ್ದಾರೆ. ಇಂತಹ ಅಪರೂಪದ ವ್ಯಕ್ತಿತ್ವದ ಇವರ ಬದುಕು ಮೌಲ್ಯ ದಿಂದ ಕೂಡಿದೆ. ಕೆಲ ಕಾರ್ಯಕ್ರಮಗಳು ಕೆಲವರಿಗೆ ಸೀಮಿತ ಎನ್ನುವಂತಾಗಿದ್ದು, ಇಂತಹ ಕಾರ್ಯಕ್ರಮಗಳಿಗೆ ಯುವ ಜನರು ಹೆಚ್ಚು ಬರಬೇಕು. ಅಂತಹ ಸನ್ನಿವೇಶವನ್ನೂ ನಾವು ನಿರ್ಮಾಣ ಮಾಡಬೇಕಿದೆ ಎಂದರು.

`ಸ್ನೇಹ ಸಂಜೀವಿನಿ’ ಕೃತಿ ಬಿಡುಗಡೆ ಮಾಡಿದ ಚಿತ್ರ ನಟ ಸುಚೀಂದ್ರ ಪ್ರಸಾದ್ ಮಾತನಾಡಿ, ಅಕ್ಷರ ಎಂದರೆ ನಾಶವಾಗದ್ದು ಎಂಬರ್ಥವಿದ್ದು, ರಾಮಪ್ರಸಾದ್ ತಮ್ಮ ಅನುಭವಗಳನ್ನು ಅಕ್ಷರಕ್ಕೆ ಇಳಿಸಿದ್ದು, ಅನೇಕ ಸಾಹಿತ್ಯ ಪ್ರಕಾರಗಳಿದ್ದರೂ ವಿಶಿಷ್ಟ ಶೈಲಿಯಲ್ಲಿ ಬರವಣಿಗೆ ಮಾಡಿ ದ್ದಾರೆ. ಕೃತಿಯಲ್ಲಿನ ಘಟನಾವಳಿಗಳು ಇತರರಿಗೆ ಮಾದರಿ ಯಾಗಬಲ್ಲವು. ಈ ರೀತಿಯ ಅನುಭವ ದಾಖಲೀಕರಣ ದಿಂದ ಪರಂಪರೆ ಹಾಗೂ ಮೌಲ್ಯಗಳು ಉಳಿದು ಮುಂದಿನ ತಲೆಮಾರಿಗೆ ತಲುಪಲಿದೆ ಎಂದು ನುಡಿದರು.

ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ ಪ್ರಕಾ ಶಕ ಟಿ.ಎಸ್.ಛಾಯಾಪತಿ ಪ್ರಾಸ್ತಾವಿಕವಾಗಿ ಮಾತ ನಾಡಿ, ಎಸ್.ರಾಮಪ್ರಸಾದ್ ಅವರೊಂದಿಗೆ ನನ್ನ ಒಡನಾಟ 4 ದಶಕದಷ್ಟು ಹಳೆಯದು. ಅವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದ ಸುಸಂಸ್ಕøತ ವ್ಯಕ್ತಿತ್ವ ಹೊಂದಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಎಸ್.ರಾಮಪ್ರಸಾದ್ ಅವರನ್ನು ಸನ್ಮಾ ನಿಸಿ ಅಭಿನಂದಿಸಲಾಯಿತು. ಸಾಹಿತಿ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಕೃತಿ ಕುರಿತು ಮಾತನಾಡಿದರು. ಸಾಹಿತಿ ಬಿ.ಆರ್.ಲಕ್ಷ್ಮಣರಾವ್ ಅಧ್ಯಕ್ಷತೆ ವಹಿಸಿದ್ದರು.

ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ.ನೀಲಗಿರಿ ಎಂ.ತಳವಾರ, ಟಿ.ಎಸ್. ಛಾಯಾಪತಿ ಅವರ ಪುತ್ರಿ ಪ್ರತಿಭಾ ಮುರಳಿ, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ರಂಗಕರ್ಮಿ ರಾಜಶೇಖರ ಕದಂಬ ಮತ್ತಿತರರು ಹಾಜರಿದ್ದರು

Translate »