ಮೈಸೂರು,ಆ.24(ಎಂಟಿವೈ)-ಹಿಂದೂಗಳು ಸಹಿ ಷ್ಣುತಾವಾದಿಗಳು ಹಾಗೂ ಸವಲತ್ತನ್ನು ಹಂಚಿಕೊಂಡು ಬದುಕುವ ಗುಣವುಳ್ಳವರಾಗಿದ್ದಾರೆ. ನಾವೆಲ್ಲಾ ಒಂದು ಎಂಬ ಏಕತೆ ಸಾರುವ ಹಿಂದೂವಾದವನ್ನು ಸಂವಿಧಾನ ದಲ್ಲಿ ಸೇರಿಸುವುದು ಅಗತ್ಯವಾಗಿದೆ ಎಂದು ಅಂಕಣ ಕಾರ ಪೆÇ್ರ.ಪ್ರೇಮ್‍ಶೇಖರ್ ಅಭಿಪ್ರಾಯ ಪಟ್ಟಿದ್ದಾರೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿ ಹಾಗೂ ಶೇಷಾದ್ರಿಪುರಂ ಪದವಿ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ ಸಂವಿಧಾನ ಬಲಪಡಿಸುವಲ್ಲಿ `ನರೇಂದ್ರ ಮೋದಿ ನೇತೃತ್ವದ ಸರ್ಕಾರದ ದೃಢ ಹೆಜ್ಜೆಗಳ ಪರಾಮರ್ಶೆ’ ಕುರಿತ ಶೈಕ್ಷಣಿಕ ಸಂವಾದವನ್ನು ಉದ್ಘಾ ಟಿಸಿ ಮಾತನಾಡಿದ ಅವರು, ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸಮಾಜವಾದ, ಜಾತ್ಯತೀತ, ಧರ್ಮ ನಿರಪೇಕ್ಷ ಸಿದ್ಧಾಂತವನ್ನು ಸೇರಿ ಸುವುದಕ್ಕೆ ನಿರಾಕರಿಸಿದ್ದರು. ‘ಇವು ಒಂದು ಪಕ್ಷದ ರಾಜಕೀಯ ಪ್ರಣಾಳಿಕೆ ಆಗಬಹುದಾಗಿರುವುದರಿಂದ ಅವುಗಳಿಗೆ ಮಹತ್ವ ನೀಡುವುದು ಸರಿಯಲ್ಲ’ ಎಂದಿ ದ್ದರು. ಅದರೂ, ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಅವುಗಳನ್ನು ಬಲವಂತವಾಗಿ ಸೇರಿಸ ಲಾಗಿದೆ. ಇದರಿಂದ ಇಂದು ಹಲವು ಸಮಸ್ಯೆಗಳು ಸೃಷ್ಟಿಯಾಗಿವೆ ಎಂದು ವಿಷಾದಿಸಿದರು.
ಕೆಲವು ಬುದ್ಧಿಜೀವಿಗಳು ಪ್ರಧಾನಿ ನರೇಂದ್ರ ಮೋದಿ ಸರ್ಕಾರದಿಂದ ಸಂವಿಧಾನಕ್ಕೆ ಅಪಾಯವಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿಯನ್ನು ರದ್ದು ಮಾಡಿದ್ದಾಗಲೂ ಸಂವಿಧಾನ ವಿರೋಧಿ ಎಂಬ ಕೂಗು ಎಲ್ಲೆಡೆ ಕೇಳಿಬಂದವು. ಕೋಮುವಾದಿಗಳು ಸಂವಿಧಾನ ಬದಲಿಸುತ್ತಾರೆ ಎಂದು ಸುಳ್ಳು ಸುದ್ದಿ ಹಬ್ಬಿಸ ಲಾಯಿತು. ಆದರೆ, ತುರ್ತುಪರಿಸ್ಥಿತಿಯ ಸಂದರ್ಭ ದಲ್ಲಿ ಸಂಸತ್ ಅನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿ ದುರ್ಬಳಕೆ ಮಾಡಿಕೊಂಡರು. ಸಂವಿಧಾನಕ್ಕೆ 42ನೇ ತಿದ್ದುಪಡಿ ತರುವ ಮೂಲಕ ಸಮಾಜವಾದ, ಜಾತ್ಯತೀತ, ಧರ್ಮ ನಿರಪೇಕ್ಷ ಸಿದ್ಧಾಂತಗಳನ್ನು ಸೇರಿಸಿ ದರು. ಇದರಿಂದ ದೇಶದ ಐಕ್ಯತೆಗೆ ಧಕ್ಕೆಯಾಯಿತು ಎಂದು ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಮುಕ್ತ ವಿವಿ ಪ್ರಾದೇಶಿಕ ನಿರ್ದೇಶಕ ಸುಧಾಕರ್ ಹೊಸಹಳ್ಳಿ, ಪ್ರಾಧ್ಯಾಪಕರಾದ ನಂದೀಶ್ ಹಂಚ್ಯಾ, ರಾಜಶೇಖರ್, ಬಿಜೆಪಿ ಮುಖಂಡ ಆರ್.ರಘು ಕೌಟಿಲ್ಯ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕøತೆ ಬಿ.ಎಸ್.ಅನುಪಮಾ, ಶೇಷಾದ್ರಿಪುರಂ ಪದವಿ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.