ಸುಲಿಗೆಕೋರನ ದಾಳಿಗೀಡಾಗಿದ್ದ ಹಿರಿಯ ಮಹಿಳೆ ಸಾವು
ಮೈಸೂರು

ಸುಲಿಗೆಕೋರನ ದಾಳಿಗೀಡಾಗಿದ್ದ ಹಿರಿಯ ಮಹಿಳೆ ಸಾವು

August 25, 2019

ಮೈಸೂರು,ಆ.24(ಆರ್‍ಕೆ)- ಖದೀಮ, ಮನೆಗೆ ನುಗ್ಗಿ ಬಾಯಿಗೆ ಬಟ್ಟೆ ತುರುಕಿ 7 ಚಿನ್ನದ ಬಳೆ ಗಳನ್ನು ದೋಚಿದ್ದ ಘಟನೆಯಿಂದ ತೀವ್ರ ಆಘಾತಕ್ಕೀ ಡಾಗಿದ್ದ ವೃದ್ಧೆ ಆರ್.ನಾಗರತ್ನ ಅವರು ಶುಕ್ರವಾರ ರಾತ್ರಿ ಸಾವನ್ನಪ್ಪಿದರು. ಆಗಸ್ಟ್ 21ರಂದು ಬೆಳಿಗ್ಗೆ 7.30 ಗಂಟೆ ವೇಳೆಗೆ ಮೈಸೂರಿನ ಚಾಮ ರಾಜಪುರಂನ ಮೈಸೂರು ಜಿಲ್ಲಾ ಕೋರ್ಟ್ ಬಳಿ ಮನುವನ ಉದ್ಯಾನವನದ ಎದು ರಿನ 1079ನೇ ಸಂಖ್ಯೆಯ ಮನೆಗೆ ನುಗ್ಗಿದ್ದ ರೆಹಮಾನ್ ಷರೀಫ್ ಎಂಬ ಖದೀಮ, ಸ್ನಾನದ ಕೋಣೆಯಲ್ಲಿ ಹಲ್ಲು ಬ್ರಷ್ ಮಾಡು ತ್ತಿದ್ದಾಗ ನಾಗರತ್ನ ಅವರ ಬಾಯಿಗೆ ಬಟ್ಟೆ ತುರುಕಿ ಕೈಗಳಲ್ಲಿದ್ದ 7 ಚಿನ್ನದ ಬಳೆಗಳನ್ನು ದೋಚಿದ್ದ. ಘಟನೆ ನಡೆದ ಕೇವಲ ಅರ್ಧ ತಾಸಿನಲ್ಲೇ ಖದೀಮನನ್ನು ಲಕ್ಷ್ಮೀಪುರಂ ಠಾಣೆ ಪೊಲೀಸರು ಬಂಧಿಸಿ, ಆತನಿಂದ 7 ಬಳೆಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿ ಯಾಗಿದ್ದರು. ಕಳೆದುಕೊಂಡ ಆಭರಣಗಳು ಸಿಕ್ಕಿದ ವಿಷಯ ತಿಳಿದು ನಾಗರತ್ನ ಅವರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದರಾದರೂ, ಬಾಯಿ ಅದುಮಿದ್ದರಿಂದ ಉಸಿರಾಟದ ತೊಂದರೆ ಕಾಣಿಸಿಕೊಂಡು, ಅಸ್ವಸ್ಥರಾಗಿದ್ದರು.

ನಿತ್ರಾಣಗೊಂಡ ಅವರನ್ನು ಅಂದೇ ಸಂಜೆ ಸಂಬಂಧಿಕರು ಜೆಎಸ್‍ಎಸ್ ಆಸ್ಪತ್ರೆಗೆ ದಾಖ ಲಿಸಿದ್ದರು. ಉಸಿರಾಟದ ಸಮಸ್ಯೆ ತೀವ್ರ ಗೊಂಡು, ಚಿಕಿತ್ಸೆ ಫಲಕಾರಿಯಾಗದೆ 84 ವರ್ಷದ ನಾಗರತ್ನ ಅವರು ಶುಕ್ರವಾರ ರಾತ್ರಿ ಕೊನೆಯುಸಿರೆಳೆದರು. ದರೋಡೆ ಪ್ರಕ ರಣ ದಾಖಲಿಸಿ ಜೈಲಿಗೆ ಅಟ್ಟಿದ್ದ ಆರೋಪಿ ರೆಹಮಾನ್ ಷರೀಫ್ ವಿರುದ್ಧ ಈಗ ಕೊಲೆ ಪ್ರಕರಣ ದಾಖಲಿಸಿರುವ ಲಕ್ಷ್ಮೀಪುರಂ ಠಾಣೆ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ. ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರದಲ್ಲಿ ಆರ್. ನಾಗರತ್ನ ಅವರ ಮೃತದೇಹವನ್ನು ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಒಪ್ಪಿಸಿ ದರು. ಆರೋಪಿ ಹಿಂದಿನಿಂದ ಬಂದು ಹಠಾತ್ತನೆ ಬಾಯಿಗೆ ಬಟ್ಟೆ ತುರುಕಿ ಕೆಲ ಕಾಲ ಅದುಮಿಟ್ಟುಕೊಂಡಿದ್ದರಿಂದ ಗಾಬರಿ ಗೊಂಡಿದ್ದ ನಾಗರತ್ನ ಅವರು ಮಾನಸಿಕ ವಾಗಿ ತೀವ್ರ ಆಘಾತಕ್ಕೀಡಾಗಿದ್ದರಲ್ಲದೆ, ಅಸ್ವಸ್ಥರಾಗಿದ್ದರು.

Translate »