ಸರ್ಕಾರಿ ಶುಶ್ರೂಷ ಮಹಾವಿದ್ಯಾಲಯದ 7ನೇ ವಾರ್ಷಿಕೋತ್ಸವ
ಮೈಸೂರು

ಸರ್ಕಾರಿ ಶುಶ್ರೂಷ ಮಹಾವಿದ್ಯಾಲಯದ 7ನೇ ವಾರ್ಷಿಕೋತ್ಸವ

August 26, 2019

ಮೈಸೂರು, ಆ.25(ಎಂಕೆ)- ಮೈಸೂರಿನ ಜೆ.ಕೆ.ಮೈದಾನದಲ್ಲಿರುವ ಅಮೃತ ಮಹೋತ್ಸವ ಭವನದಲ್ಲಿ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ‘ಸರ್ಕಾರಿ ಶುಶ್ರೂಷ ಮಹಾವಿದ್ಯಾಲಯದ’ 7ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಸಮಾರಂಭವನ್ನು ಉದ್ಘಾಟಿಸಿದ ಶಾಂತವೇರಿ ಗೋಪಾಲಗೌಡ ಶುಶ್ರೂಷ ಮಹಾವಿದ್ಯಾಲಯದ ನಿರ್ದೇಶಕಿ ಕೆ.ಯಶೋಧ ಮಾತನಾಡಿ, 2012ರಲ್ಲಿ ಪ್ರಾರಂಭವಾದ ಸರ್ಕಾರಿ ಶುಶ್ರೂಷ ಮಹಾವಿದ್ಯಾಲಯ ಉತ್ತಮ ಸೌಲಭ್ಯಗಳ ಕೊರತೆ ನಡುವೆಯೂ ಶೈಕ್ಷಣಿಕವಾಗಿ ಪ್ರಗತಿಯನ್ನು ಸಾಧಿಸುತ್ತಿದೆ. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯ ಮೂಲಕ ಕಲಿಕೆಯನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರಾಧ್ಯಾಪಕರ ಕೊಡುಗೆ ಮುಖ್ಯವಾಗಿದೆ ಎಂದು ಶ್ಲಾಘಿಸಿದರು.

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ಸಿ.ಪಿ.ನಂಜರಾಜ್ ಮಾತನಾಡಿ, ಶುಶ್ರೂಷ ಮಹಾವಿದ್ಯಾಲಯದ ಸಾಧನೆಯನ್ನು ನೋಡಿ ತುಂಬಾ ಸಂತೋಷವಾಗುತ್ತದೆ. ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡುವುದರ ಜತೆಗೆ ನಿಮ್ಮ ಏಳ್ಗೆಯನ್ನು ಬಯಸುವ ತಂದೆ-ತಾಯಿಗೆ ಗೌರವ ಸಲ್ಲು ವಂತೆ ಸೇವೆ ನೀಡಿ ಎಂದರು. ವೈದ್ಯಕೀಯ ವೃತ್ತಿಯಲ್ಲಿರುವವರ ಮೇಲೆ ದೊಡ್ಡ ಜವಾಬ್ದಾರಿ ಇರುತ್ತದೆ. ನೊಂದಿರುವ ರೋಗಿಗಳಿಗೆ ಸಾಂತ್ವ್ವನ ಹೇಳಿದರೆ ಸಾಕು ಅವರ ನೋವನ್ನು ಅರ್ಧದಷ್ಟು ಕಡಿಮೆ ಮಾಡಿದಂತೆ. ಈ ನಿಟ್ಟಿನಲ್ಲಿ ಶುಶ್ರೂಷಕಿಯಾದವರು ಪ್ರೀತಿ, ವಿಶ್ವಾಸದಿಂದ ಸೇವೆ ಸಲ್ಲಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಪ್ರಾಂಶುಪಾಲೆ ಡಾ.ಕೆ.ಆರ್. ದಾಕ್ಷಾಯಿಣಿ, ಕೆ.ಆರ್.ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಬಿ.ಎಲ್.ನಂಜುಂಡಸ್ವಾಮಿ, ಚೆಲುವಾಂಬ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಡಾ.ಪ್ರಮೀಳ, ಪಿ.ಕೆ.ಟಿ.ಪಿ. ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಹೆಚ್.ಎಂ.ವಿರೂಪಾಕ್ಷ, ಸರ್ಕಾರಿ ಶುಶ್ರೂಷ ಮಹಾವಿದ್ಯಾ ಲಯದ ಪ್ರಾಂಶುಪಾಲೆ ಡಾ.ಕೆ.ಪಿ.ದಾಕ್ಷಾಯಿಣಿ, ಶಿವಮ್ಮ, ಸುನಂದಮ್ಮ, ಗೀತಾಬಾಲಿ, ಹೆಲೆನ್ ಡಿ.ಸಿಲ್ವ, ವಿ.ಸೌಭಾಗ್ಯ, ಪರಮೇಶ್ ಮತ್ತಿತರರು ಉಪಸ್ಥಿತರಿದ್ದರು.

Translate »