ಬಳ್ಳಾರಿ, ಆ.18- ಕಾರು ಹಾಗೂ ಟಂಟಂ ವಾಹನದ ನಡುವೆ ಸಂಭ ವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ಶಾಸಕ ಭೀಮಾನಾಯ್ಕ್ ಅವರ ಪುತ್ರ ಸೇರಿದಂತೆ ಇಬ್ಬರಿಗೆ ಗಂಭೀರ ಗಾಯ ವಾಗಿರುವ ಘಟನೆ ಹೊಸಪೇಟೆಯ ಮರಿಯಮ್ಮನಹಳ್ಳಿ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 50ರ ಎಂಎಸ್‍ಪಿಎಲ್ ಕ್ರಾಸ್‍ನಲ್ಲಿ ನಡೆದಿದೆ. ಹಗರಿಬೊಮ್ಮನಹಳ್ಳಿ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಪುತ್ರ ಅಶೋಕ್ ಅಪಘಾತದಿಂದ ಗಂಭೀರ ಗಾಯಗೊಂಡಿದ್ದಾರೆ. ಅಲ್ಲದೆ ಟಂಟಂ ಚಾಲಕನಿಗೂ ಸಹ ಗಾಯಗಳಾಗಿದೆ. ಶಾಸಕರ ಪುತ್ರ ಅಶೋಕ್ ಜಿಂದಾಲ್ ವಿಮಾನ ನಿಲ್ದಾಣಕ್ಕಾಗಿ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ….
ರೈತರಿಗೆ 4 ಸಾವಿರ ರೂ. ನೆರವು ನೀಡಲು ಸರ್ಕಾರ ಆದೇಶ
August 19, 2019ಬೆಂಗಳೂರು, ಆ.18- ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ಹೆಚ್ಚುವರಿಯಾಗಿ 4 ಸಾವಿರ ರೂಪಾಯಿ ನೆರವು ನೀಡಲು ಸರ್ಕಾರ ಆದೇಶ ಹೊರಡಿಸಿದೆ. ಅರ್ಹ ಫಲಾನು ಭವಿಗಳ ಬ್ಯಾಂಕ್ ಖಾತೆಗಳಿಗೆ ಎರಡು ಕಂತುಗಳಲ್ಲಿ ಹಣ ವರ್ಗಾವಣೆ ಮಾಡು ವಂತೆ ಸರ್ಕಾರ ಶನಿವಾರ ಆದೇಶಿಸಿದೆ. ಯೋಜನೆಯನ್ನು ಅನುಷ್ಠಾನಗೊಳಿ ಸಲು ಅಗತ್ಯವಾದ ಹಣವನ್ನು ಆಕಸ್ಮಿಕ ನಿಧಿಯಿಂದ ಪಡೆಯಲಾಗುತ್ತದೆ ಮತ್ತು 2019-20ರ ಪೂರಕ ಬಜೆಟ್ ಹಂಚಿಕೆ ಗಳಲ್ಲಿ ಮರು ಹೊಂದಿಸಲಾಗುತ್ತದೆ ಎಂದು ಸರ್ಕಾರದ ಮೂಲಗಳಿಂದ ತಿಳಿದುಬಂದಿದೆ. ಕೃಷಿ ಇಲಾಖೆಯ ನಿರ್ದೇಶಕರು ಈ ಯೋಜನೆಯಡಿ…
200 ಪ್ರಶ್ನೆಗಳಿಗೆ ಉತ್ತರಿಸಿದ ಮುನಿಶ್ರೀ ಚಂದ್ರಪ್ರಭ್ ಚಂದ್ರ ಸಾಗರ್‍ಜಿ
August 19, 2019ಮೈಸೂರು, ಆ.18(ಎಂಟಿವೈ)- ಮೈಸೂರಿನ ಗಣ ಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪದಲ್ಲಿ ಭಾನುವಾರ ನಡೆದ `ಮಹಾ ಶತಾವಧಾನ್’ ಕಾರ್ಯ ಕ್ರಮದಲ್ಲಿ ಮುನಿಶ್ರೀ ಚಂದ್ರಪ್ರಭ್ ಚಂದ್ರ ಸಾಗರ್‍ಜಿ ಭಕ್ತರ 200 ಪ್ರಶ್ನೆಗಳಿಗೆ ತದೇಕಚಿತ್ತದಿಂದ ಉತ್ತರಿಸುವ ಮೂಲಕ ನೆರೆದಿದ್ದವರನ್ನು ಮಂತ್ರಮುಗ್ಧರನ್ನಾಗಿಸಿದರು. ಶ್ರೀ ಸುಮತಿನಾಥ್ ಜೈನ್ ಶ್ವೇತಾಂಬರ ಮೂರ್ತಿ ಪೂಜಕ ಸಂಘ ಮತ್ತು ಮಹಾ ಶತಾವಧಾನ ಸಮಿತಿ ಸಂಯುಕ್ತಾಶ್ರಯದಲ್ಲಿ ಮಹಾ ಶತಾವಧಾನ ಕಾರ್ಯಕ್ರಮ ದಲ್ಲಿ ಭಕ್ತರು ಕ್ರಮಾನುಸಾರ 1ರಿಂದ 200ರವರೆಗೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆ ಗಳನ್ನು ಆಲಿಸಿದ ಮುನಿಶ್ರೀ ಚಂದ್ರಪ್ರಭ್…
ಡಿ.ದೇವರಾಜ ಅರಸು 104ನೇ ಜನ್ಮ ದಿನಾಚರಣೆ
August 19, 2019ಮೈಸೂರು ಆ.18- ಜಿಲ್ಲಾ ಅಧಿಕಾರಿಗಳ ಕಾರ್ಯಾಲಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಡಿ.ದೇವರಾಜ ಅರಸು ಅವರ 104ನೇ ಜನ್ಮ ದಿನಾಚರಣೆಯನ್ನು ಆ.20ರಂದು ಬೆಳಿಗ್ಗೆ 11 ಗಂಟೆಗೆ ಕರ್ನಾಟಕ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಮೇಯರ್ ಪುಷ್ಪಲತಾ ಜಗನ್ನಾಥ್ ಕಾರ್ಯಕ್ರಮವನ್ನು ಉದ್ಘಾ ಟಿಸಲಿದ್ದು, ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಭಾಷಣವನ್ನು ಖ್ಯಾತ ಸಾಹಿತಿ, ವಿಮರ್ಶಕ, ನಿವೃತ್ತ ಕನ್ನಡ ಪ್ರಾಧ್ಯಾಪಕ ಮಳಲಿ ವಸಂತಕುಮಾರ್ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಪಂ ಅಧ್ಯಕ್ಷೆ ಪರಿಮಳ ಶ್ಯಾಂ, ಸಂಸದರಾದ ಪ್ರತಾಪಸಿಂಹ, ವಿ.ಶ್ರೀನಿವಾಸ್ ಪ್ರಸಾದ್, ಸುಮಲತಾ…
ಅಂಬಳೆ ಅಣ್ಣಯ್ಯ ಪಂಡಿತರ ಧರ್ಮಶಾಲೆಗೆ ಮೇಯರ್ ಭೇಟಿ
August 19, 2019ಮೈಸೂರು, ಆ.18(ಎಂಕೆ)- ಮೈಸೂರಿನ ಚಾಮರಾಜ ಜೋಡಿ ರಸ್ತೆಯಲ್ಲಿರುವ ವಿದ್ಯಾರ್ಥಿನಿಯರ ನಿಲ ಯಕ್ಕೆ (ಅಂಬಳೆ ಅಣ್ಣಯ್ಯ ಪಂಡಿತರ ಧರ್ಮಶಾಲೆ) ಮೇಯರ್ ಪುಷ್ಪಲತಾ ಜಗನ್ನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಉಪ ಮೇಯರ್ ಶಫೀ ಅಹಮದ್, ನಗರಪಾಲಿಕೆ ಸದಸ್ಯರಾದ ಮಾ.ವಿ.ರಾಮ್ ಪ್ರಸಾದ್, ಪ್ರಮೀಳಾ ಭರತ್, ಸೌಮ್ಯ ಹಾಗೂ ಅಧಿಕಾರಿಗಳೊಂ ದಿಗೆ ಭೇಟಿ ನೀಡಿದ ಅವರು, ನಿಲಯದಲ್ಲಿರುವ ಕುಂದು-ಕೊರತೆಗಳ ಬಗ್ಗೆ ವಿಚಾರಿಸಿ, ದಾಖಲಾತಿ ಪುಸ್ತಕ ಹಾಗೂ ದೈನಂದಿನ ಚಟುವಟಿಕೆಗಳ ದಾಖಲಾತಿ ಪುಸ್ತಕಗಳನ್ನು ಪರಿ ಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿನಿಯರ…
ವೇಶ್ಯಾವಾಟಿಕೆ: ಮೂವರ ಬಂಧನ
August 19, 2019ಮೈಸೂರು, ಆ.18(ಆರ್‍ಕೆ)- ಮೈಸೂರಿನ ಗೋಕುಲಂ ಮನೆವೊಂದರ ಮೇಲೆ ದಾಳಿ ನಡೆಸಿರುವ ಪೊಲೀಸರು ಮೂವರನ್ನು ಬಂಧಿಸಿ 14,070 ರೂ. ನಗದು ಹಾಗೂ ನಾಲ್ಕು ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಎಡತಾಳು ಗ್ರಾಮದ ರಘುನಂದ(35) ಹಾಸನ ಜಿಲ್ಲೆ, ಚೆನ್ನರಾಯ ಪಟ್ಟಣ ತಾಲೂಕಿನ ಹಿರಿಸಾವೆ ಗ್ರಾಮದ ಪ್ರದೀಪ (29) ಹಾಗೂ ಉಡುಪಿ ಜಿಲ್ಲೆ, ಹೇಣಗುಡ್ಡ ಗ್ರಾಮದ ಶ್ವೇತಾ (30) ಬಂಧಿತರು. ಅವರಿಂದ 14,070 ರೂ. ನಗದು ಹಾಗೂ 4 ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳು ಈ ಮೊದಲು…
ತವರು ಮನೆಗೆ ಬಂದಿದ್ದ ಗೃಹಿಣಿ ನಾಪತ್ತೆ
August 19, 2019ಮೈಸೂರು,ಆ.18-ತವರು ಮನೆಯಲ್ಲಿದ್ದ ಗೃಹಿಣಿಯೋರ್ವರು ನಾಪತ್ತೆಯಾಗಿ ರುವ ಬಗ್ಗೆ ಮೈಸೂರಿನ ಹೆಬ್ಬಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಚೇಗೌಡನಕೊಪ್ಪಲು ನಿವಾಸಿ ಯಲ್ಲಪ್ಪ ಎಂಬ ವರ ಪುತ್ರಿ ಪ್ರತಿಭಾ ಹರಿಹರ (19) ನಾಪತ್ತೆಯಾದವರಾಗಿದ್ದು, ಇವರು ಗದಗದ ರವಿ ಎಂಬುವರನ್ನು 2 ವರ್ಷಗಳ ಹಿಂದೆ ವಿವಾಹವಾಗಿ ದ್ದರು. ಕಳೆದ ಆರು ತಿಂಗಳ ಹಿಂದೆ ಪತಿ ಜೊತೆ ಜಗಳ ಮಾಡಿಕೊಂಡು ತವರು ಮನೆಗೆ ಬಂದಿದ್ದ ಪ್ರತಿಭಾ, ಆ.13ರಂದು ಸಂಜೆ 6.30ರ ಸುಮಾರಿನಲ್ಲಿ ಮನೆಯಿಂದ ಹೊರ ಹೋದವರು ಈವರೆಗೆ ವಾಪಸ್ಸಾಗಿಲ್ಲ ಎಂದು ಅವರ ತಂದೆ…
ಇಂದು ಸಿಂಪೋಸಿಸಮ್ ಆನ್ ಕೊಲಾಬ್ರೇಟಿವ್ ರಿಸರ್ಚ್ ವಿಚಾರ ಸಂಕಿರಣ
August 19, 2019ಮೈಸೂರು,ಆ.18(ಎಂಟಿವೈ)- ಮೈಸೂರಿನ ಪ್ರೀತಿ ಇಂಟರ್‍ನ್ಯಾಷ ನಲ್ ಹೋಟೆಲ್‍ನಲ್ಲಿ ಆ.19ರಂದು ಬೆಳಿಗ್ಗೆ 10ಕ್ಕೆ `ಸಿಂಪೋಸಿಸಮ್ ಆನ್ ಕೊಲಾಬ್ರೇಟಿವ್ ರಿಸರ್ಚ್’ ಕುರಿತು ವಿಚಾರ ಸಂಕಿರಣ ಆಯೋಜಿಸ ಲಾಗಿದೆ ಐಐಐ ಸಂಸ್ಥೆಯ ಡೀನ್ ಡಾ.ಬಿ.ಎಸ್.ಶಿವಕುಮಾರ್ ತಿಳಿಸಿ ದ್ದಾರೆ. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯದ ಪಿ.ಇ.ಎಸ್. ಇಂಜಿನಿಯರಿಂಗ್ ಕಾಲೇಜು ರಾಜ್ಯ ಯೋಜನಾ ಅನುಷ್ಠಾನ ಕಾರ್ಯಕ್ರಮದ ಸಹಯೋಗದಲ್ಲಿ ಮೈಸೂರಿನ ಎಸ್.ಜೆ.ಸಿ.ಇ, ಎನ್.ಐ.ಇ ಹಾಗೂ ಹಾಸನದ ಎಂ.ಸಿ.ಇ ಕಾಲೇಜು, ಟಿಕ್ಯೂಪ್ ಹಂತ-3ರ ಸಂಯುಕ್ತಾಶ್ರಯದಲ್ಲಿ ಸಂಶೋಧÀನಾ ಸಹಯೋಗದ ಬಗ್ಗೆ ವಿಚಾರ ಸಂಕಿರಣ ಆಯೋಜಿಸಲಾಗಿದೆ….
ಅನ್ನಭಾಗ್ಯ ಯೋಜನೆ ಮುಂದುವರೆದಿದೆಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟನೆ
August 18, 2019ಬೆಂಗಳೂರು, ಆ.17(ಕೆಎಂಶಿ)-ಅನ್ನಭಾಗ್ಯ ಸೇರಿದಂತೆ ಯಾವುದೇ ಜನಪರ ಯೋಜನೆಗಳನ್ನು ರದ್ದುಪಡಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಈ ಸಂಬಂಧ ಮಾಡಿದ ಆರೋಪದ ಬೆನ್ನಲ್ಲೇ ಪತ್ರಿಕಾ ಹೇಳಿಕೆ ನೀಡಿರುವ ಮುಖ್ಯಮಂತ್ರಿಯವರು ನಮ್ಮ ಸರ್ಕಾರ ಜನಪರ ಸರ್ಕಾರ. ಅನ್ನಭಾಗ್ಯ ಯೋಜನೆ ಮುಂದುವರಿಸಲು ಅನುದಾನ ಬಿಡುಗಡೆ ಕಡತಕ್ಕೆ ಸಹಿ ಹಾಕಿ ದ್ದೇನೆ ಎಂದಿದ್ದಾರೆ. ದೆಹಲಿಯಲ್ಲಿ ಪ್ರತ್ಯೇಕವಾಗಿ ಸುದ್ದಿಗಾರರೊಂ ದಿಗೆ ಮಾತನಾಡಿದ ಅವರು, ಕರ್ನಾಟಕ ಕಾಂಗ್ರೆಸ್ ಮುಖಂಡರಿಗೆ ತಲೆ ಕೆಟ್ಟಿದೆ. ಮಾಹಿತಿ ಇಲ್ಲದೆ, ಸರ್ಕಾರದ ವಿರುದ್ಧ ಅನಗತ್ಯ ಆರೋಪ…
ರಾಜ್ಯದಲ್ಲಿ ನೆರೆ ಹಾವಳಿ: ವಿಧಾನ ಮಂಡಲ ತುರ್ತು ಅಧಿವೇಶನಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹ
August 18, 2019ಬೆಂಗಳೂರು, ಆ.17(ಕೆಎಂಶಿ)- ಮಳೆ ಮತ್ತು ನೆರೆಯಿಂದ ಉಂಟಾಗಿರುವ ಹಾನಿ ಬಗ್ಗೆ ಚರ್ಚೆ ನಡೆಸಲು ವಿಧಾನಮಂಡ ಲದ ತುರ್ತು ಅಧಿವೇಶನ ಕರೆಯಬೇಕೆಂದು ಆಗ್ರಹಿಸಿ ರುವ ಸಿಎಲ್‍ಪಿ ನಾಯಕ ಹಾಗೂ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಪರಿಹಾರಕ್ಕಾಗಿ ಕೇಂದ್ರದ ಮೇಲೆ ಒತ್ತಡ ತರಲು ಪ್ರಧಾನಿ ಬಳಿಗೆ ಸರ್ವಪಕ್ಷಗಳ ನಿಯೋಗ ಕೊಂಡೊಯ್ಯಿರಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೆಡೆ ಬರ, ಮತ್ತೊಂದೆಡೆ ಮಳೆ ಮತ್ತು ನೆರೆಯಿಂದ ಭಾರೀ ಹಾನಿಯಾಗಿದೆ. ಲಕ್ಷಾಂತರ ಹೆಕ್ಟೇರ್ ಕೃಷಿ ಬೆಳೆ…










