ಅಂಬಳೆ ಅಣ್ಣಯ್ಯ ಪಂಡಿತರ ಧರ್ಮಶಾಲೆಗೆ ಮೇಯರ್ ಭೇಟಿ
ಮೈಸೂರು

ಅಂಬಳೆ ಅಣ್ಣಯ್ಯ ಪಂಡಿತರ ಧರ್ಮಶಾಲೆಗೆ ಮೇಯರ್ ಭೇಟಿ

August 19, 2019

ಮೈಸೂರು, ಆ.18(ಎಂಕೆ)- ಮೈಸೂರಿನ ಚಾಮರಾಜ ಜೋಡಿ ರಸ್ತೆಯಲ್ಲಿರುವ ವಿದ್ಯಾರ್ಥಿನಿಯರ ನಿಲ ಯಕ್ಕೆ (ಅಂಬಳೆ ಅಣ್ಣಯ್ಯ ಪಂಡಿತರ ಧರ್ಮಶಾಲೆ) ಮೇಯರ್ ಪುಷ್ಪಲತಾ ಜಗನ್ನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಉಪ ಮೇಯರ್ ಶಫೀ ಅಹಮದ್, ನಗರಪಾಲಿಕೆ ಸದಸ್ಯರಾದ ಮಾ.ವಿ.ರಾಮ್ ಪ್ರಸಾದ್, ಪ್ರಮೀಳಾ ಭರತ್, ಸೌಮ್ಯ ಹಾಗೂ ಅಧಿಕಾರಿಗಳೊಂ ದಿಗೆ ಭೇಟಿ ನೀಡಿದ ಅವರು, ನಿಲಯದಲ್ಲಿರುವ ಕುಂದು-ಕೊರತೆಗಳ ಬಗ್ಗೆ ವಿಚಾರಿಸಿ, ದಾಖಲಾತಿ ಪುಸ್ತಕ ಹಾಗೂ ದೈನಂದಿನ ಚಟುವಟಿಕೆಗಳ ದಾಖಲಾತಿ ಪುಸ್ತಕಗಳನ್ನು ಪರಿ ಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿನಿಯರ ನಿಲಯವು ನಗರಪಾಲಿಕೆ ವ್ಯಾಪ್ತಿಗೆ ಬರಲಿದ್ದು, ಪ್ರತಿ 6 ತಿಂಗಳಿಗೊಮ್ಮೆ ಪರಿಶೀಲನೆ ನಡೆಸಲಾಗುತ್ತದೆ. ಸದ್ಯಕ್ಕೆ ನಿಲಯದಲ್ಲಿ 24 ಮಂದಿ ವಿದ್ಯಾರ್ಥಿನಿಯರಿದ್ದಾರೆ. ಇಲ್ಲಿ 50 ಮಂದಿ ವಿದ್ಯಾರ್ಥಿ ನಿಯರು ಉಳಿಯಬಹುದು. ಆದ್ದರಿಂದ ಮತ್ತೆ ಹೊಸದಾಗಿ ದಾಖಲಾತಿಯನ್ನು ಪ್ರಾರಂ ಭಿಸಲಾಗುತ್ತಿದೆ ಎಂದರು. ನಿಲಯ ಮೇಲ್ವಿಚಾರಕಿ ಉಮಾದೇವಿ ಉಪಸ್ಥಿತರಿದ್ದರು.

Translate »