ರಾಜ್ಯದಲ್ಲಿ ನೆರೆ ಹಾವಳಿ: ವಿಧಾನ ಮಂಡಲ ತುರ್ತು ಅಧಿವೇಶನಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹ
ಮೈಸೂರು

ರಾಜ್ಯದಲ್ಲಿ ನೆರೆ ಹಾವಳಿ: ವಿಧಾನ ಮಂಡಲ ತುರ್ತು ಅಧಿವೇಶನಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹ

August 18, 2019

ಬೆಂಗಳೂರು, ಆ.17(ಕೆಎಂಶಿ)- ಮಳೆ ಮತ್ತು ನೆರೆಯಿಂದ ಉಂಟಾಗಿರುವ ಹಾನಿ ಬಗ್ಗೆ ಚರ್ಚೆ ನಡೆಸಲು ವಿಧಾನಮಂಡ ಲದ ತುರ್ತು ಅಧಿವೇಶನ ಕರೆಯಬೇಕೆಂದು ಆಗ್ರಹಿಸಿ ರುವ ಸಿಎಲ್‍ಪಿ ನಾಯಕ ಹಾಗೂ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಪರಿಹಾರಕ್ಕಾಗಿ ಕೇಂದ್ರದ ಮೇಲೆ ಒತ್ತಡ ತರಲು ಪ್ರಧಾನಿ ಬಳಿಗೆ ಸರ್ವಪಕ್ಷಗಳ ನಿಯೋಗ ಕೊಂಡೊಯ್ಯಿರಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೆಡೆ ಬರ, ಮತ್ತೊಂದೆಡೆ ಮಳೆ ಮತ್ತು ನೆರೆಯಿಂದ ಭಾರೀ ಹಾನಿಯಾಗಿದೆ. ಲಕ್ಷಾಂತರ ಹೆಕ್ಟೇರ್ ಕೃಷಿ ಬೆಳೆ ನಾಶವಾಗಿದೆ. ಲಕ್ಷಾಂತರ ಮಂದಿ ಮನೆ-ಮಠ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಇಷ್ಟಾದರೂ, ಸರ್ಕಾರ ನಿರ್ಲಕ್ಷ್ಯ ತೋರು ತ್ತಿದೆ. ಈ ಸಂಬಂಧ ಚರ್ಚೆ ನಡೆಸಲು ಅಧಿವೇಶನ ಕರೆ ಯಿರಿ. ಪ್ರವಾಹ ಹಾನಿಯ ಬಗ್ಗೆ ಕೇಂದ್ರ ಗೃಹ ಮತ್ತು ಹಣಕಾಸು ಸಚಿವರು ಖುದ್ದಾಗಿ ಪರಿಶೀಲಿಸಿ, ವಾರವೇ ಕಳೆದರೂ, ಕೇಂದ್ರದಿಂದ ಒಂದು ನಯಾಪೈಸೆ ಬಂದಿಲ್ಲ. ನೀವು ಪ್ರಧಾನಿ ಯವರಿಗೆ ಬರೆದ ಪತ್ರಕ್ಕೆ ಬೆಲೆ ದೊರೆತಿಲ್ಲ. ನಿಮಗೆ ಮೋದಿ ಅವರ ಬಳಿ ರಾಜ್ಯದ ಕಷ್ಟದ ಬಗ್ಗೆ ಮಾತನಾಡಲು ಭಯವಿದ್ದರೆ, ನಮ್ಮನ್ನು ಕರೆದುಕೊಂಡು ಹೋಗಿ, ನಾವು ಅವರಿಗೆ ವಿವರಿಸಿ ಪರಿಹಾರ ಕೇಳುತ್ತೇವೆ.

ಮುಖ್ಯಮಂತ್ರಿ ಯಾಗಿ ಭಯಪಟ್ಟುಕೊಂಡು ಕುಳಿ ತರೆ ರಾಜ್ಯದ ಗತಿಯೇನಾಗುತ್ತದೆ ಎಂದು ಯಡಿಯೂರಪ್ಪನವರನ್ನು ತರಾಟೆಗೆ ತೆಗೆದುಕೊಂಡರು. ಇದೊಂದು ಅಕ್ರಮ ಸರ್ಕಾರ ಎಂದು ಟೀಕಿಸಿದ ಅವರು, ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾ ಗಿದ್ದ ಸಂದರ್ಭದಲ್ಲಿ ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರದಿಂದ 1600 ಕೋಟಿ ಬಿಡುಗಡೆ ಮಾಡಿದ್ದರು. ಈಗ ಮೋದಿ ಅವರಿಗೆ ಏನು ತೊಂದರೆ. ನೆರೆ ಹಾವಳಿ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದರು. ರಾಜ್ಯ ಸರ್ಕಾರ ನೆರೆ ಹಾವಳಿ ಅಂದಾಜನ್ನೇ ಸಿದ್ಧಪಡಿಸಿಲ್ಲ. 15 ದಿನ ಕಳೆದರೂ ವರದಿ ಸಿದ್ಧವಾಗಿಲ್ಲ, ಯಾವಾಗ ಕೇಂದ್ರಕ್ಕೆ ವರದಿ ಸಲ್ಲಿಸು ವುದು ಎಂದು ಪ್ರಶ್ನಿಸಿದರು. ಆ ನಂತರವಷ್ಟೆ ಅಧ್ಯಯನ ತಂಡ ಬಂದು ಪರಿಶೀಲನೆ ನಡೆಸಿ ವರದಿ ನೀಡಲಿದೆ. ಬಳಿಕ ಪರಿಹಾರ ಬಿಡುಗಡೆ ಮಾಡಲಾಗುತ್ತದೆ. ರಾಜ್ಯ ಇನ್ನೂ ವರದಿ ಸಿದ್ಧಪಡಿಸದಿದ್ದರೆ ಹೇಗೆ ಎಂದು ಆಕ್ರೋಶ ವ್ಯಕ್ತಪಡಿ ಸಿದರು. 1983ರ ನಂತರ ಇಂತಹ ಸರ್ಕಾರವನ್ನು ನೋಡಿಯೇ ಇರಲಿಲ್ಲ. ಮಂತ್ರಿ ಮಂಡಲವೇ ಇಲ್ಲ. ಮೊದಲ ಬಾರಿ ಸ್ವಾತಂತ್ರ್ಯ ದಿನಾಚರಣೆ ವೇಳೆ ರಾಜ್ಯದಲ್ಲಿ ಡಿಸಿಗಳೇ ಧ್ವಜಾರೋಹಣ ಮಾಡಿದ್ದಾರೆ. ಇದೊಂದು ನಾಚಿಕೆಗೇಡಿನ ಸಂಗತಿ. 25 ಮಂದಿ ಬಿಜೆಪಿ ಸಂಸದರಿದ್ದರೂ ಕೇಂದ್ರದಿಂದ ಮಲತಾಯಿ ಧೋರಣೆ ಮುಂದುವರೆದಿದೆ. 1 ರೂ. ಸಹ ಬರ ಪರಿಹಾರ ನೀಡಿಲ್ಲ, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಅಮಿತ್ ಶಾ ನೆರೆ ಪ್ರದೇಶಗಳಿಗೆ ಕಾಟಾಚಾರಕ್ಕೆ ಬಂದು ಹೋದರೆ?. ಇಂತಹ ಸಂಕಷ್ಟ ಸನ್ನಿ ವೇಶದಲ್ಲಿ ಕಡು ಬಡವರಿಗೆ 2 ಹೊತ್ತು ಅನ್ನ ನೀಡುವ ಅನ್ನಭಾಗ್ಯ ಯೋಜನೆಗೆ ಕನ್ನ ಹಾಕಲು ಹೊರಟಿದ್ದೀರಾ? ಎಂದು ಪ್ರಶ್ನಿಸಿದರು.

ಅನ್ನಭಾಗ್ಯ ಸೇರಿದಂತೆ ಕೆಲ ಜನಪರ ಕಾರ್ಯಕ್ರಮಗಳನ್ನು ರದ್ದುಮಾಡಿ ಈ ಹಣವನ್ನು ಪ್ರಧಾನಿ ಯವರ ಕಿಸಾನ್ ಸಮ್ಮಾನ್ ಯೋಜನೆಗೆ ಬಳಸಲು ಹೊರಟಿ ದ್ದೀರಾ ಎಂದು ಖಾರವಾಗಿ ನುಡಿದರು. ಅನ್ನಭಾಗ್ಯ ಹಾಗೂ ಇಂದಿರಾಕ್ಯಾಂಟಿನ್ ಮುಂದುವರೆಸಬೇಕು. ಅನುದಾನ ಕಡಿಮೆ ಮಾಡುವುದು ಅಥವಾ ಕೊರತೆ ಮಾಡಿದರೆ ಸದನದ ಒಳ, ಹೊರಗೆ ಹೋರಾಟ ಮಾಡಲಾಗುವುದು ಎಂದರು.

Translate »