ಇಂದು ಸಿಂಪೋಸಿಸಮ್ ಆನ್ ಕೊಲಾಬ್ರೇಟಿವ್ ರಿಸರ್ಚ್ ವಿಚಾರ ಸಂಕಿರಣ
ಮೈಸೂರು

ಇಂದು ಸಿಂಪೋಸಿಸಮ್ ಆನ್ ಕೊಲಾಬ್ರೇಟಿವ್ ರಿಸರ್ಚ್ ವಿಚಾರ ಸಂಕಿರಣ

August 19, 2019

ಮೈಸೂರು,ಆ.18(ಎಂಟಿವೈ)- ಮೈಸೂರಿನ ಪ್ರೀತಿ ಇಂಟರ್‍ನ್ಯಾಷ ನಲ್ ಹೋಟೆಲ್‍ನಲ್ಲಿ ಆ.19ರಂದು ಬೆಳಿಗ್ಗೆ 10ಕ್ಕೆ `ಸಿಂಪೋಸಿಸಮ್ ಆನ್ ಕೊಲಾಬ್ರೇಟಿವ್ ರಿಸರ್ಚ್’ ಕುರಿತು ವಿಚಾರ ಸಂಕಿರಣ ಆಯೋಜಿಸ ಲಾಗಿದೆ ಐಐಐ ಸಂಸ್ಥೆಯ ಡೀನ್ ಡಾ.ಬಿ.ಎಸ್.ಶಿವಕುಮಾರ್ ತಿಳಿಸಿ ದ್ದಾರೆ. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯದ ಪಿ.ಇ.ಎಸ್. ಇಂಜಿನಿಯರಿಂಗ್ ಕಾಲೇಜು ರಾಜ್ಯ ಯೋಜನಾ ಅನುಷ್ಠಾನ ಕಾರ್ಯಕ್ರಮದ ಸಹಯೋಗದಲ್ಲಿ ಮೈಸೂರಿನ ಎಸ್.ಜೆ.ಸಿ.ಇ, ಎನ್.ಐ.ಇ ಹಾಗೂ ಹಾಸನದ ಎಂ.ಸಿ.ಇ ಕಾಲೇಜು, ಟಿಕ್ಯೂಪ್ ಹಂತ-3ರ ಸಂಯುಕ್ತಾಶ್ರಯದಲ್ಲಿ ಸಂಶೋಧÀನಾ ಸಹಯೋಗದ ಬಗ್ಗೆ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಆ.19ರಂದು ಬೆಳಿಗ್ಗೆ 10 ಗಂಟೆಗೆ ಕರ್ನಾಟಕ ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಪೆÇ್ರಫೆಸರ್ ಹೆಚ್.ಯು.ತಳವಾರ ಈ ವಿಚಾರ ಸಂಕಿರಣ ಉದ್ಘಾಟಿಸಲಿ ದ್ದಾರೆ. ಕರ್ನಾಟಕ ರಾಜ್ಯ ಯೋಜನಾ ಅನುಷ್ಠಾನ ಕಾರ್ಯಕ್ರಮದ ನೋಡಲ್ ಅಧಿಕಾರಿ ಪೆÇ್ರ.ಮನೋಹರ್ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿ ಸಲಿದ್ದಾರೆ. ಮಾಜಿ ಶಾಸಕ ಹಾಗೂ ಮಂಡ್ಯದ ಜನತಾ ಶಿಕ್ಷಣ ಟ್ರಸ್ಟ್‍ನ ಅಧ್ಯಕ್ಷ ಡಾ.ಹೆಚ್.ಡಿ.ಚೌಡಯ್ಯ ಅಧ್ಯಕತೆ ವಹಿಸಲಿದ್ದಾರೆ. ಐಐಟಿ ಮದ್ರಾಸ್‍ನ ವಿಶ್ರಾಂತ ಪ್ರಾಧ್ಯಾಪಕ ಪೆÇ್ರ. ವಾಸುದೇವನ್ ರಾಧಾಕೃಷ್ಣನ್ ಮತ್ತು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಶ್ರಾಂತÀ ಡೀನ್ ಮತ್ತು ಪ್ರಾಧ್ಯಾಪಕ ಡಾ.ಡಿ.ಕೆ.ಸುಬ್ರಮಣ್ಯಂ ವಿಚಾರ ಸಂಕಿರಣದಲ್ಲಿ ಆಹ್ವಾನಿತ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ ಎಂದರು. 20 ತಾಂತ್ರಿಕ ವಿದ್ಯಾಸಂಸ್ಥೆಗಳ ಪ್ರತಿನಿಧಿಗಳು ಪ್ರಚಲಿತ ಮತ್ತು ಮುಂಬ ರುವ ಸಂಶೋ ಧನಾ ಚಟುವಟಿಕೆಗಳನ್ನು ಆ.19 ಮತ್ತು 20ರಂದು ಮಂಡಿಸುವರು. ಆ.20ರಂದು ನಡೆಯುವ ವಿಚಾರ ಸಂಕಿರಣದ ಸಮರೋಪ ಕಾರ್ಯ ಕ್ರಮದಲ್ಲಿ ಎನ್.ಪಿ.ಐ.ಯುನ ಕೇಂದ್ರೀಯ ಯೋಜನಾ ಸಲಹೆಗಾರ ಡಾ.ಪಿ.ಎಂ.ಖೋಡ್ಕೆ ಸಮಾರೋಪ ಭಾಷಣ ಮಾಡುವರು ಎಂದರು.

Translate »