ಮೈಸೂರು,ಆ.18-ತವರು ಮನೆಯಲ್ಲಿದ್ದ ಗೃಹಿಣಿಯೋರ್ವರು ನಾಪತ್ತೆಯಾಗಿ ರುವ ಬಗ್ಗೆ ಮೈಸೂರಿನ ಹೆಬ್ಬಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಚೇಗೌಡನಕೊಪ್ಪಲು ನಿವಾಸಿ ಯಲ್ಲಪ್ಪ ಎಂಬ ವರ ಪುತ್ರಿ ಪ್ರತಿಭಾ ಹರಿಹರ (19) ನಾಪತ್ತೆಯಾದವರಾಗಿದ್ದು, ಇವರು ಗದಗದ ರವಿ ಎಂಬುವರನ್ನು 2 ವರ್ಷಗಳ ಹಿಂದೆ ವಿವಾಹವಾಗಿ ದ್ದರು. ಕಳೆದ ಆರು ತಿಂಗಳ ಹಿಂದೆ ಪತಿ ಜೊತೆ ಜಗಳ ಮಾಡಿಕೊಂಡು ತವರು ಮನೆಗೆ ಬಂದಿದ್ದ ಪ್ರತಿಭಾ, ಆ.13ರಂದು ಸಂಜೆ 6.30ರ ಸುಮಾರಿನಲ್ಲಿ ಮನೆಯಿಂದ ಹೊರ ಹೋದವರು ಈವರೆಗೆ ವಾಪಸ್ಸಾಗಿಲ್ಲ ಎಂದು ಅವರ ತಂದೆ ಯಲ್ಲಪ್ಪ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈಕೆ ಬಗ್ಗೆ ಮಾಹಿತಿ ಇರುವವರು ಹೆಬ್ಬಾಳು ಪೊಲೀಸ್ ಠಾಣೆ ದೂ.ಸಂಖ್ಯೆ 0821-2418318 ಅಥವಾ ನಗರ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 2418339ನ್ನು ಸಂಪರ್ಕಿಸಿ.