Tag: Mysore

`ಉನ್ನತ ಹುದ್ದೆಗೇರಿದಾಗ ಜನಪರ ನಿರ್ಧಾರಗಳು ಬಹಳ ಮುಖ್ಯ’
ಮೈಸೂರು

`ಉನ್ನತ ಹುದ್ದೆಗೇರಿದಾಗ ಜನಪರ ನಿರ್ಧಾರಗಳು ಬಹಳ ಮುಖ್ಯ’

February 9, 2020

ಮೈಸೂರು ಫೆ.8(ಎಸ್‍ಪಿಎನ್)- ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿ ಕೆಲಸ ಪಡೆದು ಹುದ್ದೆಗಳನ್ನು ಅಲಂಕರಿಸಿದ ಬಳಿಕ ಜನಪರ ನಿರ್ಧಾರಗಳನ್ನು ತೆಗೆದುಕೊಳ್ಳುವುದೂ ಅಷ್ಟೇ ಮುಖ್ಯ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಹೇಳಿದರು. ಮೈಸೂರು ಲಕ್ಷ್ಮೀಪುರಂ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ಜ್ಞಾನಬುತ್ತಿ ವತಿಯಿಂದ ಕರ್ನಾಟಕ ಆಡಳಿತ ಸೇವೆಗೆ ನೂತನವಾಗಿ ಆಯ್ಕೆಯಾದವರನ್ನು ಅಭಿನಂದಿಸಿ ಅವರು ಮಾತನಾಡಿದರು. ಸಮಾಜದೊಂದಿಗೆ ಬೆರೆಯದೇ ಒಂಟಿಯಾಗಿದ್ದರೆ, ಸಮಾಜದಿಂದ ದೂರವಾಗುತ್ತೇವೆ. ಆಗ ಜನರ ಭಾವನೆಗಳನ್ನು ಅರಿತು ಜನಪರ ಸೇವೆ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ಉನ್ನತ ಹುದ್ದೆಗಳಿಗೆ…

ಮೂಳೆ ಕ್ಯಾನ್ಸರ್‍ಗೆ ತುತ್ತಾಗಿದ್ದ ಬಾಲಕಿಗೆ ಯಶಸ್ವಿ ಶಸ್ತ್ರಚಿಕಿತ್ಸೆ
ಮೈಸೂರು

ಮೂಳೆ ಕ್ಯಾನ್ಸರ್‍ಗೆ ತುತ್ತಾಗಿದ್ದ ಬಾಲಕಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

February 9, 2020

ಮೈಸೂರು,ಫೆ.8(ಪಿಎಂ)-ಮೂಳೆ ಕ್ಯಾನ್ಸರ್‍ನಿಂದ ಬಳಲುತ್ತಿದ್ದ 9 ವರ್ಷದ ಬಾಲ ಕಿಗೆ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಎಕ್ಸ್ಟ್ರಾಕಾಪೆರ್Çರಿಯಲ್ ರೇಡಿಯೊಥೆರಪಿ ಎಂಬ ಅತ್ಯಾಧುನಿಕ ವೈದ್ಯಕೀಯ ತಂತ್ರ ಜ್ಞಾನ ವಿಧಾನ ಬಳಸಿ, ಕಾಯಿಲೆ ಗುಣ ಪಡಿಸಲಾಗಿದೆ ಎಂದು ಆಸ್ಪತ್ರೆಯ ತಜ್ಞ ವೈದ್ಯ ಡಾ.ಎಂ.ಬಿ.ಸುಮನ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅತ್ಯಾಧುನಿಕ ವಿಧಾನವನ್ನು ಯಶಸ್ವಿಯಾಗಿ ಬಳಸಿದ ಮೈಸೂರಿನ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆಗೂ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಪಾತ್ರವಾಗಿದೆ ಎಂದರು. 3ನೇ ತರಗತಿ ಬಾಲಕಿಯನ್ನು ಬಲಗಾಲಿನಲ್ಲಿ ನೋವು…

ಕೇವಲ 4 ಗಂಟೆ 32 ನಿಮಿಷದಲ್ಲಿ 370 ಕಿಮೀ ಕ್ರಮಿಸಿ, ಹಸುಗೂಸು ಜೀವ ಉಳಿಸಿದ ಆಂಬುಲೆನ್ಸ್ ಚಾಲಕ
ಮೈಸೂರು

ಕೇವಲ 4 ಗಂಟೆ 32 ನಿಮಿಷದಲ್ಲಿ 370 ಕಿಮೀ ಕ್ರಮಿಸಿ, ಹಸುಗೂಸು ಜೀವ ಉಳಿಸಿದ ಆಂಬುಲೆನ್ಸ್ ಚಾಲಕ

February 7, 2020

ಮಂಗಳೂರು/ ಬೆಂಗಳೂರು, ಫೆ.6- ಆಂಬುಲೆನ್ಸ್ ಚಾಲಕ ರೊಬ್ಬರು ಕೇವಲ 4 ಗಂಟೆ 32 ನಿಮಿಷದಲ್ಲಿ 370 ಕಿ.ಮೀ ಕ್ರಮಿಸಿ ಹಸುಗೂಸು ಜೀವ ಉಳಿಸಿ ಮಾನವೀಯತೆ ಮೆರೆದಿದ್ದಾರೆ. ನಲ್ವತ್ತು ದಿನಗಳ ಹಸುಗೂಸನ್ನು ಹೃದಯ ಶಸ್ತ್ರಚಿಕಿತ್ಸೆಗಾಗಿ ಮಂಗಳೂರಿನಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್ ನಲ್ಲಿ ಆಂಬುಲೆನ್ಸ್‍ನಲ್ಲಿ ರವಾನಿಸಲಾಗಿದೆ. ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿದ್ದ ಮಗುವಿಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಆಗಬೇಕಿತ್ತು. ಅದಕ್ಕಾಗಿ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಮಗುವನ್ನು ರವಾನಿಸಲಾಗಿದೆ. ಚಾಲಕ ಹನೀಫ್ ಮಂಗಳೂರಿನಿಂದ ಆಂಬುಲೆನ್ಸ್ ಮೂಲಕ ಝೀರೋ…

ನಾವೀಗ `ಅರ್ಹರು’ ಎಂಬುದನ್ನು ಅರ್ಥ ಮಾಡಿಕೊಳ್ಳದ ಸಿದ್ದರಾಮಯ್ಯ
ಮೈಸೂರು

ನಾವೀಗ `ಅರ್ಹರು’ ಎಂಬುದನ್ನು ಅರ್ಥ ಮಾಡಿಕೊಳ್ಳದ ಸಿದ್ದರಾಮಯ್ಯ

February 7, 2020

ಮೈಸೂರು, ಫೆ.6(ಎಸ್‍ಬಿಡಿ)- ಚುನಾ ವಣೆಯಲ್ಲಿ ಜನ ಆಯ್ಕೆ ಮಾಡಿರುವವ ರನ್ನು ಅನರ್ಹರು ಎನ್ನುವುದು ತಪ್ಪೆಂದು ಸಿದ್ದರಾಮಯ್ಯ ಅವರಿಗೆ ಏಕೆ ಅರ್ಥ ವಾಗುತ್ತಿಲ್ಲ ಎಂದು ನೂತನ ಸಚಿವ ಎಸ್.ಟಿ. ಸೋಮಶೇಖರ್ ತಿರುಗೇಟು ನೀಡಿದ್ದಾರೆ. ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆ ಗುರುವಾರ ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿ ಸಿದ ಅವರು, ಅನರ್ಹರು ಎಂಬ ಸ್ಪೀಕರ್ ತೀರ್ಮಾನವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯಿತಾದರೂ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡಿತು. ಅದರಂತೆ ನಾವು ಜನತಾ…

ನಿರ್ಭಯಾ ಅಪರಾಧಿಗಳಿಗೆ ಗಲ್ಲು: ಸುಪ್ರೀಂನಿಂದ ಇಂದು ಕೇಂದ್ರದ ಅರ್ಜಿ ವಿಚಾರಣೆ
ಮೈಸೂರು

ನಿರ್ಭಯಾ ಅಪರಾಧಿಗಳಿಗೆ ಗಲ್ಲು: ಸುಪ್ರೀಂನಿಂದ ಇಂದು ಕೇಂದ್ರದ ಅರ್ಜಿ ವಿಚಾರಣೆ

February 7, 2020

ನವದೆಹಲಿ, ಫೆ.6- ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಎಲ್ಲ ಅಪರಾಧಿಗಳನ್ನು ಒಟ್ಟಿಗೆ ಗಲ್ಲಿಗೇರಿಸಬೇಕು ಎಂಬ ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿ ಸಿದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ನಡೆಸಲಿದೆ. ಕೇಂದ್ರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್, ಅರ್ಜಿಯ ತುರ್ತು ವಿಚಾರಣೆ ನಡೆಸಬೇಕು ಎಂದು ನ್ಯಾಯ ಮೂರ್ತಿ ಗಳಾದ ಎನ್.ವಿ.ರಮಣ, ಸಂಜೀವ್ ಖನ್ನಾ ಮತ್ತು ಕೃಷ್ಣ ಮುರಾರಿ ಅವರ ಪೀಠಕ್ಕೆ ಮನವಿ ಮಾಡಿದರು. ಸುಪ್ರೀಂ ಪೀಠ ನಾಳೆ…

ಉಗ್ರಪ್ಪ ಎಂಪಿಯಾಗಿದ್ದು ಸುದಿನವೇ?; ಹಾಸನದಲ್ಲಿ ಸಿ.ಸಿ.ಪಾಟೀಲ್ ತರಾಟೆ
ಮೈಸೂರು

ಉಗ್ರಪ್ಪ ಎಂಪಿಯಾಗಿದ್ದು ಸುದಿನವೇ?; ಹಾಸನದಲ್ಲಿ ಸಿ.ಸಿ.ಪಾಟೀಲ್ ತರಾಟೆ

February 7, 2020

ಹಾಸನ, ಫೆ.6- ತೆಲಂಗಾಣ ಮಾದರಿ ಮರಳು ನೀತಿ ಜಾರಿಗೆ ಚಿಂತನೆ ನಡೆಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಸಿ.ಸಿ.ಪಾಟೀಲ್ ಮಾಧ್ಯಮಗಳಿಗೆ ತಿಳಿಸಿದರು. ಹಿಂದಿನ ಸರ್ಕಾರದ ತಪ್ಪು ನೀತಿಯಿಂದ ಮರಳು ಸರಿ ಯಾಗಿ ಸಿಗುತ್ತಿಲ್ಲ. ಹೀಗಾಗಿ ತೆಲಂಗಾಣ ಮಾದರಿ ಮರಳು ನೀತಿ ಜಾರಿಗೆ ಚಿಂತನೆ ನಡೆದಿದೆ. ಸರ್ಕಾರಕ್ಕೆ ಹೆಚ್ಚಿನ ಆದಾಯ ಬರಬೇಕು. ಹಾಗಾಗಿ, ಅಕ್ರಮ ಗಣಿಗಾರಿಕೆ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನೈಸರ್ಗಿಕ ಖನಿಜ ಸಂಪತ್ತು ಲೂಟಿಕೋರರ ವಶವಾಗದ…

ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆಗೆ `ನಟರಾಜ’ದಲ್ಲಿ ಕಾರ್ಯಾಗಾರ
ಮೈಸೂರು

ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆಗೆ `ನಟರಾಜ’ದಲ್ಲಿ ಕಾರ್ಯಾಗಾರ

February 7, 2020

ಮೈಸೂರು,ಫೆ.6- ಮೈಸೂರಿನ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಉದ್ಯೋಗ ಮಾಹಿತಿ-ಮಾರ್ಗ ದರ್ಶನ ಸಮಿತಿಯಿಂದ ಅಂತಿಮ ಬಿ.ಕಾಂ, ಮತ್ತು ಬಿ.ಎ ವಿದ್ಯಾರ್ಥಿನಿಯರಿಗೆ ಸ್ಪರ್ಧಾ ತ್ಮಕ ಪರೀಕ್ಷೆಗಳ ಕುರಿತು ಗುರುವಾರ ಕಾರ್ಯಾಗಾರ ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕಿಗಳಾಗಿದ್ದ ಮೈಸೂರು ವಿವಿ ಉದ್ಯೊಗ ಮಾಹಿತಿ-ಮಾರ್ಗ ದರ್ಶನ ಕೇಂದ್ರದ ಉಪ ಮುಖ್ಯಸ್ಥ ಎಸ್.ಜೆ. ಹೇಮಚಂದ್ರ ಮಾತನಾಡಿ, ಇದು ಸ್ಪರ್ಧಾ ತ್ಮಕ ಯುಗ. ಶಿಕ್ಷಣ, ಉದ್ಯೋಗ ಕ್ಷೇತ್ರದ ಸ್ಪರ್ಧೆ ಎದುರಿಸಬೇಕಾದರೆ ವಿದ್ಯಾರ್ಥಿಯು ಆರಂಭದಿಂದಲೇ ಕ್ರಮಬದ್ಧವಾಗಿ ಸಿದ್ಧತೆ ಮಾಡಿಕೊಳ್ಳಬೇಕು, ಆದರೆ, ಪ್ರಸ್ತುತ ಸರಿ…

ಸಂವಿಧಾನ ರಕ್ಷಣೆ ನಮ್ಮೆಲ್ಲರ ಕರ್ತವ್ಯ: ಬಿ.ಪಿ.ದೇವಮಾನೆ
ಮೈಸೂರು

ಸಂವಿಧಾನ ರಕ್ಷಣೆ ನಮ್ಮೆಲ್ಲರ ಕರ್ತವ್ಯ: ಬಿ.ಪಿ.ದೇವಮಾನೆ

February 7, 2020

ಮೈಸೂರು, ಫೆ.6- ಪ್ರತಿಯೊಬ್ಬ ಭಾರತೀಯ ಪ್ರಜೆಯು ಸಂವಿಧಾನದ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಗೌರವಿಸುವ ಮೂಲಕ ಸಂವಿ ಧಾನದ ರಕ್ಷಣೆ ಮಾಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯ ದರ್ಶಿ ಬಿ.ಪಿ.ದೇವಮಾನೆ ಹೇಳಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಗುರು ವಾರ ನಿರ್ಮಲ ಕಾನ್ವೆಂಟ್‍ನಲ್ಲಿ ನಡೆದ ಸಂವಿಧಾನ ದಿನಾಚರಣೆ ಅಭಿಯಾನ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಪ್ರಜೆಗಳು ಮೂಢನಂಬಿಕೆಗಳನ್ನು ಬಿಟ್ಟು…

ಜೆಎಸ್‍ಎಸ್ ಆಯುರ್ವೇದ ಕಾಲೇಜು; 102 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಮೈಸೂರು

ಜೆಎಸ್‍ಎಸ್ ಆಯುರ್ವೇದ ಕಾಲೇಜು; 102 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

February 7, 2020

ಮೈಸೂರು, ಫೆ.6(ಎಂಕೆ)- ಜೆಎಸ್‍ಎಸ್ ಆಯು ರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಡೆದ ಪದ ವೀಧರರ ದಿನಾಚರಣೆಯಲ್ಲಿ ಪದವಿ ಮತ್ತು ಸ್ನಾತಕೋ ತ್ತರ 102 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಮೈಸೂರಿನ ಲಲಿತಾದ್ರಿಪುರದಲ್ಲಿರುವ ಕಾಲೇಜು ಆವ ರಣದಲ್ಲಿ ಗುರುವಾರ ಆಯೋಜಿಸಿದ್ದ ಪದವೀಧರರ ದಿನಾಚರಣೆಯಲ್ಲಿ 80 ಪದವಿ ಹಾಗೂ 22 ಸ್ನಾತ ಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಪದವಿಯ 9 ಹಾಗೂ ಸ್ನಾತಕೋತ್ತರ ಪದವಿಯ 14 ವಿದ್ಯಾರ್ಥಿಗಳು ರ್ಯಾಂಕ್‍ನೊಂದಿಗೆ ದತ್ತಿ ಬಹುಮಾನಗಳನ್ನು ಪಡೆದುಕೊಂಡರು. ಈ ವೇಳೆ ಕಾರ್ಯಕ್ರಮವನ್ನು ಉದ್ಘಾಟಿಸಿದ…

45 ಲಕ್ಷ ರೂ. ಕಾಮಗಾರಿಗೆ ಶಾಸಕ ನಾಗೇಂದ್ರ ಗುದ್ದಲಿ ಪೂಜೆ
ಮೈಸೂರು

45 ಲಕ್ಷ ರೂ. ಕಾಮಗಾರಿಗೆ ಶಾಸಕ ನಾಗೇಂದ್ರ ಗುದ್ದಲಿ ಪೂಜೆ

February 7, 2020

ಮೈಸೂರು,ಫೆ.6(ಪಿಎಂ)- ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಲಿಕೆ ವಾರ್ಡ್ 21ರಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಗುರುವಾರ ಗುದ್ದಲಿ ಪೂಜೆ ನೆರವೇರಿಸಿದರು. ವಾರ್ಡ್ ನಂ.21ರ ಗಂಗೋತ್ರಿ ಬಡಾವಣೆಯ ಅಡ್ಡ ರಸ್ತೆಗಳ ಮರುಡಾಂಬರೀಕರಣ, ಚರಂಡಿ ದುರಸ್ತಿ ಹಾಗೂ ಸರಸ್ವತಿ ಪುರಂನ ಈಜುಕೊಳ ರಸ್ತೆಯ ಚರಂಡಿ ದುರಸ್ತಿಗೆ ಶಾಸಕರು ಗಂಗೋತ್ರಿ ಬಡಾವಣೆಯಲ್ಲಿ ಗುದ್ದಲಿ ಪೂಜೆ ನೆರವೇರಿಸಿದರು. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದ 45 ಲಕ್ಷ ರೂ. ವೆಚ್ಚದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ವಾರ್ಡಿನ ಪಾಲಿಕೆ ಸದಸ್ಯೆ ವೇದಾವತಿ…

1 46 47 48 49 50 330
Translate »