45 ಲಕ್ಷ ರೂ. ಕಾಮಗಾರಿಗೆ ಶಾಸಕ ನಾಗೇಂದ್ರ ಗುದ್ದಲಿ ಪೂಜೆ
ಮೈಸೂರು

45 ಲಕ್ಷ ರೂ. ಕಾಮಗಾರಿಗೆ ಶಾಸಕ ನಾಗೇಂದ್ರ ಗುದ್ದಲಿ ಪೂಜೆ

February 7, 2020

ಮೈಸೂರು,ಫೆ.6(ಪಿಎಂ)- ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಲಿಕೆ ವಾರ್ಡ್ 21ರಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಗುರುವಾರ ಗುದ್ದಲಿ ಪೂಜೆ ನೆರವೇರಿಸಿದರು.

ವಾರ್ಡ್ ನಂ.21ರ ಗಂಗೋತ್ರಿ ಬಡಾವಣೆಯ ಅಡ್ಡ ರಸ್ತೆಗಳ ಮರುಡಾಂಬರೀಕರಣ, ಚರಂಡಿ ದುರಸ್ತಿ ಹಾಗೂ ಸರಸ್ವತಿ ಪುರಂನ ಈಜುಕೊಳ ರಸ್ತೆಯ ಚರಂಡಿ ದುರಸ್ತಿಗೆ ಶಾಸಕರು ಗಂಗೋತ್ರಿ ಬಡಾವಣೆಯಲ್ಲಿ ಗುದ್ದಲಿ ಪೂಜೆ ನೆರವೇರಿಸಿದರು.
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದ 45 ಲಕ್ಷ ರೂ. ವೆಚ್ಚದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ವಾರ್ಡಿನ ಪಾಲಿಕೆ ಸದಸ್ಯೆ ವೇದಾವತಿ ಶಿವಶಂಕರ್, ಪಾಲಿಕೆ ಸಹಾಯಕ ಅಭಿಯಂತರರಾದ ಕೆ.ಆರ್.ಚಂದ್ರಶೇಖರ್, ಆರ್.ಗುರುಸಿದ್ದಯ್ಯ, ವಾರ್ಡ್‍ನ ಬಿಜೆಪಿ ಅಧ್ಯಕ್ಷ ರಮೇಶ್, ಮುಖಂಡರಾದ ಶಿವಶಂಕರ್, ಸೋಮಶೇಖರ ರಾಜೇ ಅರಸ್, ಶಿವಲಿಂಗೇಗೌಡ, ಪ್ರಜ್ವಲ್ ಮತ್ತಿತರರಿದ್ದರು.

Translate »