ಜೆಎಸ್‍ಎಸ್ ಆಯುರ್ವೇದ ಕಾಲೇಜು; 102 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಮೈಸೂರು

ಜೆಎಸ್‍ಎಸ್ ಆಯುರ್ವೇದ ಕಾಲೇಜು; 102 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

February 7, 2020

ಮೈಸೂರು, ಫೆ.6(ಎಂಕೆ)- ಜೆಎಸ್‍ಎಸ್ ಆಯು ರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಡೆದ ಪದ ವೀಧರರ ದಿನಾಚರಣೆಯಲ್ಲಿ ಪದವಿ ಮತ್ತು ಸ್ನಾತಕೋ ತ್ತರ 102 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಮೈಸೂರಿನ ಲಲಿತಾದ್ರಿಪುರದಲ್ಲಿರುವ ಕಾಲೇಜು ಆವ ರಣದಲ್ಲಿ ಗುರುವಾರ ಆಯೋಜಿಸಿದ್ದ ಪದವೀಧರರ ದಿನಾಚರಣೆಯಲ್ಲಿ 80 ಪದವಿ ಹಾಗೂ 22 ಸ್ನಾತ ಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಪದವಿಯ 9 ಹಾಗೂ ಸ್ನಾತಕೋತ್ತರ ಪದವಿಯ 14 ವಿದ್ಯಾರ್ಥಿಗಳು ರ್ಯಾಂಕ್‍ನೊಂದಿಗೆ ದತ್ತಿ ಬಹುಮಾನಗಳನ್ನು ಪಡೆದುಕೊಂಡರು.

ಈ ವೇಳೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾ ಟಕ ಸರ್ಕಾರದ ಆಯುಷ್ ಇಲಾಖೆಯ ಆಯುಕ್ತೆ ಮೀನಾಕ್ಷಿ ನೇಗಿ ಮಾತನಾಡಿ, ಭಾರತದಲ್ಲಿ ಅತ್ಯುನ್ನತ ಗುಣಮಟ್ಟದ ಔಷಧೀಯ ಸಂಪನ್ಮೂಲ ಗಳಿದ್ದು, ಪ್ರತಿಭಾನ್ವಿತ ವೈದ್ಯರಿದ್ದಾರೆ. ಆಯುರ್ವೇದ ಕ್ಷೇತ್ರದಲ್ಲಿ ಹೆಚ್ಚೆಚ್ಚು ಸಂಶೋಧನೆಗಳು ನಡೆಯಬೇಕು. ನಮ್ಮ ದೇಶದ ಆಯುರ್ವೇದ ಪದ್ಧತಿ ಪ್ರಪಂಚದಾದ್ಯಂತ ಇನ್ನೂ ಹೆಚ್ಚು ಪ್ರಸಿದ್ಧಿಯಾಗಿ ಹೆಚ್ಚು ಜನರಿಗೆ ಸಹಾಯ ವಾಗಬೇಕು ಎಂದು ಹೇಳಿದರು.
ಭಾರತದಲ್ಲಿ ಉನ್ನತ ಮಟ್ಟದ ಎಷ್ಟೋ ಔಷಧಗಳನ್ನು ಸಂಶೋಧನೆ ಮಾಡಲಾಗಿದೆ. ಇಡೀ ಜಗತ್ತು ತಿರುಗಿ ನೋಡುವಂತಹ ಆಯುರ್ವೇದ ಪದ್ಧತಿಯನ್ನು ಕಂಡು ಹಿಡಿದಿರುವ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಇದಕ್ಕೆ ನಾವು ಹೆಮ್ಮೆ ಪಡಬೇಕು. ಈ ಕೀರ್ತಿಯನ್ನು ಹೇಗೆ ಮುಂದು ವರೆಸಿಕೊಂಡು ಹೋಗುತ್ತೇವೆ ಎಂಬುದು ಇಂದು ಪದವಿ ಪಡೆದಿರುವ ವೈದ್ಯರಿಗೆ ಬಿಟ್ಟಿದ್ದು ಎಂದು ಹೇಳಿದರು.

ಚೀನಾ ದೇಶ ತನ್ನ ಸಾಂಪ್ರದಾಯಕ ಔಷಧೀಯ ಪದ್ಧತಿ ಯನ್ನು ಬೆಳೆಸಿರುವ ರೀತಿ ಅನುಕರಣೀಯ. ಅವರನ್ನು ನೋಡಿ ನಾವು ಕಲಿಯಬೇಕಾದದ್ದು ಬಹಳಷ್ಟಿದೆ. ಅವರು ತಮ್ಮ ಔಷಧೀಯ ಪದ್ಧತಿಯನ್ನು ಇಡೀ ಜಗತ್ತಿಗೆ ಪರಿ ಚಯಿಸಿ ಅದರಲ್ಲೇ ಹೆಚ್ಚು ಸಂಶೋಧನೆಗಳನ್ನು ಮಾಡಿ ಅದನ್ನು ಬೆಳೆಸಿದ್ದಾರೆ. ಈ ಕಾರಣಕ್ಕಾಗಿ 2015ರಲ್ಲಿ ಚೀನಾ ಮಹಿಳೆಯೊಬ್ಬರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಬಂದಿದೆ ಎಂದರು. ಭಾರತ ಅದ್ಭುತ ದೇಶವಾಗಿದ್ದು, ಅಪಾರ ಸಂಪನ್ಮೂಲವಿದೆ. ತಂತ್ರಜ್ಞಾನವು ಬೆಳೆದಿದ್ದು, ಕಠಿಣ ಶ್ರಮದಿಂದ ಸಾಧಿಸಲೇಬೇಕು ಎಂಬ ನಿರ್ಣಯದೊಂ ದಿಗೆ ಮುಂದೆ ಸಾಗಬೇಕು. ಇಲ್ಲಿ ಜನಿಸಿದ್ದಕ್ಕೆ ದೇಶಕ್ಕೆ ಏನಾ ದರೂ ಕೊಡುಗೆ ನೀಡಿ ಎಂದು ಕಿವಿಮಾತು ಹೇಳಿದರು.

ಕೆಎಸ್‍ಒಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್, ಜೆಎಸ್‍ಎಸ್ ಮಹಾವಿದ್ಯಾಪೀಠದ ಮುಖ್ಯ ಕಾರ್ಯ ನಿರ್ವಾ ಹಕ ಕಾರ್ಯದರ್ಶಿ ಸಿ.ಜಿ.ಬೆಟಸೂರ್‍ಮಠ್, ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್.ಮಹೇಶ್, ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಚೆನ್ನಬಸಪ್ಪ, ಡಾ.ಕೆ.ಲಕ್ಷ್ಮೀಶ್, ಡಾ.ರಾಜೇಶ್, ಡಾ.ಸಿದ್ದಯ್ಯ ಮತ್ತಿತರರು ಕಾರ್ಯಕ್ರಮದಲ್ಲಿದ್ದರು.

Translate »