ನಾವೀಗ `ಅರ್ಹರು’ ಎಂಬುದನ್ನು ಅರ್ಥ ಮಾಡಿಕೊಳ್ಳದ ಸಿದ್ದರಾಮಯ್ಯ
ಮೈಸೂರು

ನಾವೀಗ `ಅರ್ಹರು’ ಎಂಬುದನ್ನು ಅರ್ಥ ಮಾಡಿಕೊಳ್ಳದ ಸಿದ್ದರಾಮಯ್ಯ

February 7, 2020

ಮೈಸೂರು, ಫೆ.6(ಎಸ್‍ಬಿಡಿ)- ಚುನಾ ವಣೆಯಲ್ಲಿ ಜನ ಆಯ್ಕೆ ಮಾಡಿರುವವ ರನ್ನು ಅನರ್ಹರು ಎನ್ನುವುದು ತಪ್ಪೆಂದು ಸಿದ್ದರಾಮಯ್ಯ ಅವರಿಗೆ ಏಕೆ ಅರ್ಥ ವಾಗುತ್ತಿಲ್ಲ ಎಂದು ನೂತನ ಸಚಿವ ಎಸ್.ಟಿ. ಸೋಮಶೇಖರ್ ತಿರುಗೇಟು ನೀಡಿದ್ದಾರೆ.

ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆ ಗುರುವಾರ ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿ ಸಿದ ಅವರು, ಅನರ್ಹರು ಎಂಬ ಸ್ಪೀಕರ್ ತೀರ್ಮಾನವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯಿತಾದರೂ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡಿತು. ಅದರಂತೆ ನಾವು ಜನತಾ ನ್ಯಾಯಾಲಯದ ಮುಂದೆ ಹೋಗಿದ್ದೆವು. ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸಿದ್ದಾರೆ. ಹೀಗಿರುವಾಗ ಅನರ್ಹರು ಎಂಬ ಪ್ರಶ್ನೆಯೇ ಬರುವುದಿಲ್ಲ. ಇದು 40 ವರ್ಷಗಳ ರಾಜಕೀಯ ಅನುಭವಿ ಯಾದ ಸಿದ್ದರಾಮಯ್ಯ ಅವರಿಗೆ ಏಕೆ ಅರ್ಥವಾಗುತ್ತಿಲ್ಲ? ಎಂದು ಪ್ರಶ್ನಿಸಿದರು.

ಬಿಜೆಪಿಯಲ್ಲಿ ಯಾರಿಗಾದರೂ ಅಸಮಾ ಧಾನ ಇದ್ದರೆ ಅದನ್ನು ಹೈಕಮಾಂಡ್ ಸರಿಪಡಿಸುತ್ತದೆ. ಯಡಿಯೂರಪ್ಪ ಸ್ಟ್ರಾಂಗ್ ಇದ್ದಾರೆ. ಕೇಂದ್ರದಲ್ಲೂ ನಮ್ಮ ಸರ್ಕಾರ ಇದೆ. ಅಸಮಾಧಾನ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಇತ್ತು. ಕುಮಾರ ಸ್ವಾಮಿ ಸಿಎಂ ಆಗಿದ್ದಾಗಲೂ ಇತ್ತು. ನಾವು ಪ್ರಮಾಣ ವಚನ ಸ್ವೀಕರಿಸಿರುವುದು ನಮಗೆ ಖುಷಿ ತಂದಿಲ್ಲ ಎಂದಿದ್ದಾರೆ. ನಾವೇನು ಅವರ ಪಕ್ಷದಲ್ಲಿ ಗೆದ್ದು ಸಚಿವರಾಗಿಲ್ಲ. ಖುಷಿ ಪಡುವ ಅವಶ್ಯತೆಯೂ ಅವರಿಗಿಲ್ಲ. ಸಚಿವ ರಾಗಿದ್ದು ನಮಗೆ ಖುಷಿ ತಂದಿದೆ. ಮಂತ್ರಿ ಯಾಗುವ ಮೂಲಕ ದೊಡ್ಡ ಕನಸು ಈಡೇರಿದಂತಾಗಿದೆ. ಇದು ದೈವಬಲ. ಆದರೆ, ರಾಜೀನಾಮೆ ಸಲ್ಲಿಸಿ ಮತ್ತೆ ಶಾಸಕ ರಾಗಿ ಸಚಿವರಾಗುವುದು ದೊಡ್ಡ ಹೋರಾ ಟದ ಹಾದಿ. ಆರು ತಿಂಗಳಲ್ಲಿ ಎಲ್ಲಾ ರೀತಿಯ ಪಾಠ ಕಲಿತಿದ್ದೇವೆ. ನೋವು, ಟೀಕೆ, ವಿರೋಧ, ಆರೋಪ ಎಲ್ಲವನ್ನೂ ಸಹಿಸಿದ್ದೇವೆ ಎಂದು ಹೇಳಿದರು.

ಪ್ರಮಾಣ ವಚನ ಸ್ವೀಕಾರ ಕಾರ್ಯ ಕ್ರಮಕ್ಕೆ ವಿಶ್ವನಾಥ್ ಅವರನ್ನು ಆಹ್ವಾನಿ ಸಿದ್ದೆ. ಅವರು ಬಂದಿದ್ದರು. ಎಂಟಿಬಿ ನಾಗ ರಾಜು ಸಂಪರ್ಕಕ್ಕೆ ಸಿಗಲಿಲ್ಲ. ಚುನಾವಣೆ ಸಂದರ್ಭದಲ್ಲಿ ಎಲ್ಲರಿಗೂ ಸಚಿವ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿ ಯಡಿ ಯೂರಪ್ಪನವರು ಭರವಸೆ ನೀಡಿದ್ದರು. ಅದ ರಂತೆ ಮೊದಲ ಹಂತದಲ್ಲಿ 10 ಮಂದಿ ಯನ್ನು ಮಂತ್ರಿ ಮಾಡಿದ್ದಾರೆ. ಹೆಚ್. ವಿಶ್ವನಾಥ್, ಎಂ.ಟಿ.ನಾಗರಾಜ್ ಅವರಿಗೆ ಮುಂದಿನ ದಿನಗಳಲ್ಲಿ ಅವಕಾಶ ನೀಡುವ ಆಶ್ವಾಸನೆ ನೀಡಿದ್ದಾರೆ. ಆರ್.ಶಂಕರ್ ಅವ ರನ್ನು ಮೇ ತಿಂಗಳಲ್ಲಿ ಎಂಎಲ್‍ಸಿ ಮಾಡಿ, ಮಂತ್ರಿ ಮಾಡುವುದಾಗಿ ತಿಳಿಸಿದ್ದಾರೆ. ಮಹೇಶ್ ಕಮಟಳ್ಳಿ ಅವರನ್ನು ನಿಗಮ ಮಂಡಳಿ ಛೇರ್ಮನ್ ಮಾಡುವುದಾಗಿ ಒಪ್ಪಿಸಿದ್ದಾರೆ. ಇನ್ನು ನ್ಯಾಯಾಲಯದಲ್ಲಿ ಮುನಿರತ್ನ ಹಾಗೂ ಪ್ರತಾಪ್‍ಗೌಡ ಪಾಟೀಲ್ ಅವರ ಪ್ರಕರಣ ಮುಗಿದ ಬಳಿಕ ಅವಕಾಶ ನೀಡುತ್ತಾರೆ. ಸಿಎಂ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ ಎಂದರು.

ಮುಖ್ಯಮಂತ್ರಿಗಳ ಬಳಿ ಇರುವ ಬೆಂಗ ಳೂರು ನಗರಾಭಿವೃದ್ಧಿ ಖಾತೆಯನ್ನು ಕೇಳಲು ಯೋಚಿಸಿರುವೆ. ಆದರೆ ಅದಕ್ಕಾಗಿ ಯಾವುದೇ ಒತ್ತಡ, ಷರತ್ತು ಹಾಕುವುದಿಲ್ಲ. ಬೆಂಗಳೂರಿನಲ್ಲಿ ನನಗಿಂತಲೂ ಪವರ್ ಫುಲ್ ಆಗಿರುವವರಿದ್ದಾರೆ. ಹಾಗಾಗಿ ಇದೇ ಖಾತೆ ಕೊಡಿ ಎಂದು ಒತ್ತಡ ಹಾಕುವು ದಿಲ್ಲ. ಯಾವುದೇ ಖಾತೆ ಕೊಟ್ಟರೂ ನಿಭಾಯಿಸುವ ಸಾಮಥ್ರ್ಯ ಇದೆ ಎಂದು ಎಸ್.ಟಿ.ಸೋಮಶೇಖರ್ ತಿಳಿಸಿದರು.

Translate »