ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆಗೆ `ನಟರಾಜ’ದಲ್ಲಿ ಕಾರ್ಯಾಗಾರ
ಮೈಸೂರು

ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆಗೆ `ನಟರಾಜ’ದಲ್ಲಿ ಕಾರ್ಯಾಗಾರ

February 7, 2020

ಮೈಸೂರು,ಫೆ.6- ಮೈಸೂರಿನ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಉದ್ಯೋಗ ಮಾಹಿತಿ-ಮಾರ್ಗ ದರ್ಶನ ಸಮಿತಿಯಿಂದ ಅಂತಿಮ ಬಿ.ಕಾಂ, ಮತ್ತು ಬಿ.ಎ ವಿದ್ಯಾರ್ಥಿನಿಯರಿಗೆ ಸ್ಪರ್ಧಾ ತ್ಮಕ ಪರೀಕ್ಷೆಗಳ ಕುರಿತು ಗುರುವಾರ ಕಾರ್ಯಾಗಾರ ಆಯೋಜಿಸಲಾಗಿತ್ತು.

ಸಂಪನ್ಮೂಲ ವ್ಯಕಿಗಳಾಗಿದ್ದ ಮೈಸೂರು ವಿವಿ ಉದ್ಯೊಗ ಮಾಹಿತಿ-ಮಾರ್ಗ ದರ್ಶನ ಕೇಂದ್ರದ ಉಪ ಮುಖ್ಯಸ್ಥ ಎಸ್.ಜೆ. ಹೇಮಚಂದ್ರ ಮಾತನಾಡಿ, ಇದು ಸ್ಪರ್ಧಾ ತ್ಮಕ ಯುಗ. ಶಿಕ್ಷಣ, ಉದ್ಯೋಗ ಕ್ಷೇತ್ರದ ಸ್ಪರ್ಧೆ ಎದುರಿಸಬೇಕಾದರೆ ವಿದ್ಯಾರ್ಥಿಯು ಆರಂಭದಿಂದಲೇ ಕ್ರಮಬದ್ಧವಾಗಿ ಸಿದ್ಧತೆ ಮಾಡಿಕೊಳ್ಳಬೇಕು, ಆದರೆ, ಪ್ರಸ್ತುತ ಸರಿ ಯಾದ ತಯಾರಿಯೇ ಇಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಹಾಕುವವರ ಸಂಖ್ಯೆ ಶೇ.95ರಷ್ಟಿದೆ. ಪರೀಕ್ಷೆಗೆ ಶ್ರದ್ಧೆಯಿಂದ ತಯಾರಿ ನಡೆಸುವವರ ಸಂಖ್ಯೆ ಕೇವಲ ಶೇ.5ರಷ್ಟಿರು ತ್ತದೆ. ಆದ್ದರಿಂದ ಅರ್ಜಿ ಸಂಖ್ಯೆ ನೋಡಿ ಹೆದರದೆ ಆತ್ಮವಿಶ್ವಾಸದಿಂದ ಪಠ್ಯಕ್ರಮ ಅನು ಸಾರವಾಗಿ ಸಿದ್ಧತೆ ನಡೆಸಿದರೆ ಯಶಸ್ಸು ಸಾಧಿಸಬಹುದು ಎಂದು ಉತ್ತೇಜನದ ಮಾತನಾಡಿದರು. ಐಎಎಸ್, ಕೆಎಎಸ್ ಮತ್ತಿ ತರ ಹುದ್ದೆಗಳಿಗೆ ಹೇಗೆ ತಯಾರಿ ನಡೆಸ ಬೇಕೆಂಬುದನ್ನು ಮನದಟ್ಟು ಮಾಡಿಕೊಟ್ಟರು.

ಎಸ್‍ಎಸ್‍ಎಲ್‍ಸಿ, ಪಿಯು, ಪದವಿ, ಸ್ನಾತ ಕೋತ್ತರ ಪದವಿ ಪಡೆದವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಲವು ವಿಭಾಗದಲ್ಲಿ ನೌಕರಿ ದೊರೆಯುತ್ತವೆ. ಈ ಕೆಲಸಗಳನ್ನು ಪಡೆಯಲು ಸೂಕ್ತವಾದ ಪಠ್ಯಕ್ರಮ ಅಭ್ಯಾಸ ಮಾಡಬೇಕು. ಸತತ ಪ್ರಯತ್ನವೇ ಯಶಸ್ಸಿನ ಕೀಲಿ ಕೈ ಆಗಿದೆ ಎಂದರು.

ಮತ್ತೊಬ್ಬ ಸಂಪನ್ಮೂಲ ವ್ಯಕ್ತಿ ಪೊಲೀಸ್ ಇಲಾಖೆಯ ವಿ.ಎಲ್.ನಾಗರಾಜು ಮಾತ ನಾಡಿ, ದೊಡ್ಡ ದೊಡ್ಡ ಕನಸುಗಳನ್ನು ಕಂಡು ಸರಿಯಾಗಿ ಶ್ರಮಿಸಿದರೆ ಚಿಕ್ಕ ನೌಕರಿ ಯನ್ನಾದರೂ ಪಡೆಯಬಹುದು. ಶ್ರದ್ಧೆ ಯಿಂದ ದಿನಕ್ಕೆ ಐದಾರು ಗಂಟೆ ಅಭ್ಯಾಸ ಮಾಡಿದರೆ ನಾಗರೀಕ ಸೇವಾ ಸ್ಪರ್ಧಾತ್ಮಕ ಪರೀಕ್ಷೆ ಸುಲಭವಾಗಿ ಎದುರಿಸಬಹುದು ಎಂದರು. ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಸಮಿತಿ ಸಂಚಾಲಕ ಎನ್.ಜಿ.ಲೋಕೇಶ್ ಪ್ರಾಸ್ತಾವಿಕ ನುಡಿಗಳ ನ್ನಾಡಿದರು. ಪ್ರಾಂಶುಪಾಲರಾದ ಎಂ.ಶಾರದ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶು ಪಾಲರಾದ ಜಿ.ಪ್ರಸಾದಮೂರ್ತಿ, ಅಧ್ಯಾಪ ಕರು, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Translate »