Tag: Mysore

ಲಾಕ್‍ಡೌನ್: ಮೈಸೂರಲ್ಲಿ ಮನೆ ಬಾಗಿಲಿಗೇ ಹಣ್ಣು-ತರಕಾರಿ
ಮೈಸೂರು

ಲಾಕ್‍ಡೌನ್: ಮೈಸೂರಲ್ಲಿ ಮನೆ ಬಾಗಿಲಿಗೇ ಹಣ್ಣು-ತರಕಾರಿ

April 1, 2020

ಮೈಸೂರು, ಮಾ.31(ಪಿಎಂ)- ಕೊರೊನಾ ತಡೆಯಲು ಲಾಕ್‍ಡೌನ್ ಜಾರಿಯಲ್ಲಿರು ವುದರಿಂದ ಮೈಸೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಾಗರಿಕರ ಮನೆ ಬಾಗಿಲಿಗೆ ಹಣ್ಣು ಹಾಗೂ ತರಕಾರಿ ಪೂರೈಸುವ ಕಾರ್ಯ ಮಂಗಳವಾರ ಚಾಲನೆ ಪಡೆಯಿತು. ಮೈಸೂರು ಮಹಾನಗರ ಪಾಲಿಕೆ, ತೋಟಗಾರಿಕೆ ಇಲಾಖೆ ಹಾಗೂ ಹಾಪ್‍ಕಾಮ್ಸ್ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ರೂಪಿಸಲಾಗಿದ್ದು, 5 (ಹಾಪ್‍ಕಾಮ್ಸ್‍ನ 1, ಪಾಲಿಕೆಯ 4) ವಾಹನಗಳು ಜನರ ಮನೆ ಬಾಗಿಲಿಗೇ ಹಣ್ಣು-ತರಕಾರಿ ಪೂರೈಸಲಿವೆ. ಪ್ರತಿ ವಾಹನದಲ್ಲಿ 1.5 ಟನ್ ಹಣ್ಣು-ತರಕಾರಿ ಮಾರಾಟ ಮಾಡಲು ಉದ್ದೇಶಿಸಲಾಗಿದೆ. ಮಾರುಕಟ್ಟೆಯಲ್ಲಿ ಜನದಟ್ಟಣೆ ಕಡಿಮೆಗೊಳಿಸುವಲ್ಲಿಯೂ…

ನಿರ್ಗತಿಕರಿಗೆ ಮತ್ತಷ್ಟು ಸಾಂತ್ವನ ಕೇಂದ್ರ ತೆರೆಯಿರಿ ಪಾಲಿಕೆ ಅಧಿಕಾರಿಗಳಿಗೆ ಶಾಸಕ ನಾಗೇಂದ್ರ ಸೂಚನೆ
ಮೈಸೂರು

ನಿರ್ಗತಿಕರಿಗೆ ಮತ್ತಷ್ಟು ಸಾಂತ್ವನ ಕೇಂದ್ರ ತೆರೆಯಿರಿ ಪಾಲಿಕೆ ಅಧಿಕಾರಿಗಳಿಗೆ ಶಾಸಕ ನಾಗೇಂದ್ರ ಸೂಚನೆ

April 1, 2020

ಮೈಸೂರು, ಮಾ. 31(ಆರ್‍ಕೆ)- ಮೈಸೂರು ನಗರದಲ್ಲಿ ನಿರ್ಗತಿಕರಿರುವೆಡೆ ಮತ್ತಷ್ಟು ಸಾಂತ್ವನ ಕೇಂದ್ರಗಳನ್ನು ತೆರೆದು ಊಟ-ವಸತಿ ಸೌಲಭ್ಯ ಒದಗಿಸಿ ಎಂದು ಚಾಮ ರಾಜ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ ಅವರು ಪಾಲಿಕೆ ಅಧಿಕಾರಿಗಳಿಗೆ ಇಂದು ಸೂಚನೆ ನೀಡಿದರು. ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಯಲ್ಲಿ ತಲೆದೋರಿರುವ ಕಷ್ಟ ಪರಿಸ್ಥಿತಿ ನಿಭಾಯಿಸುವ ಸಂಬಂಧ ಮೈಸೂರು ಮಹಾ ನಗರಪಾಲಿಕೆ ಕಚೇರಿ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಇಂದು ಅಧಿಕಾರಿಗಳೊಂ ದಿಗೆ ತುರ್ತು ಸಭೆ ನಡೆಸಿದ ಶಾಸಕರು, ಬಿಗಡಾಯಿಸುತ್ತಿರುವ…

ಲಾಕ್ ಡೌನ್ ನಡುವೆಯೂ ಪ್ರಾಣಿಗಳ ಹಿತಕಾಯುತ್ತಿರುವ ಮೃಗಾಲಯದ ಸಿಬ್ಬಂದಿ
ಮೈಸೂರು

ಲಾಕ್ ಡೌನ್ ನಡುವೆಯೂ ಪ್ರಾಣಿಗಳ ಹಿತಕಾಯುತ್ತಿರುವ ಮೃಗಾಲಯದ ಸಿಬ್ಬಂದಿ

March 30, 2020

*ಮಾಸ್ಕ್ ಧರಿಸಿ, ಸ್ಯಾನಿಟೈಸರ್ ನಿಂದ ಕೈ ತೊಳೆದರೆ ಮಾತ್ರ ಪ್ರವೇಶ * ಪ್ರತಿದಿನ 200ಕ್ಕೂ ಹೆಚ್ಚು ಸಿಬ್ಬಂದಿಯಿಂದ ಪ್ರಾಣಿ-ಪಕ್ಷಿಗಳ ಪಾಲನೆ ಮೈಸೂರು,ಮಾ.30( MTY) – ನೊವೆಲ್ ಕೊರೊನಾ ಸೋಂಕು ಹರಡುವಿಕೆ ತಡೆಯಲು ಏ.14ರವರೆಗೂ ಇಡೀ ದೇಶವೇ ಲಾಕ್ ಡೌನ್ ಆಗಿ ಸ್ತಬ್ದವಾಗಿದ್ದರೂ, ಮೈಸೂರು ಮೃಗಾಲಯದಲ್ಲಿ ಅಗತ್ಯ ಮುನ್ನಚ್ಚರಿಕೆಯೊಂದಿಗೆ ಪ್ರಾಣಿ-ಪಕ್ಷಿಗಳ ಹಿತಕಾಯುವ ಸೇವೆಯನ್ನು 200ಕ್ಕೂ ಹೆಚ್ಚು ಸಿಬ್ಬಂದಿ ಮಾಡುತ್ತಿದ್ದಾರೆ. ಕೊರೊನಾ ವೈರಸ್ ವ್ಯಾಪಿಸಿದ ಪರಿಣಾಮ ಮೊದಲ ಹಂತದಲ್ಲಿ ಮಾ.15ರಿಂದ 23ರವರೆಗೆ ಮೈಸೂರು ಮೃಗಾಲಯವನ್ನು ಬಂದ್ ಮಾಡಲಾಗಿತ್ತು. ಅದರೂ ಎಲ್ಲೆಡೆ…

ಜನತಾನಗರದಲ್ಲಿ ತರಕಾರಿ ವಿತರಿಸಿದ ಎಪಿಎಂಸಿ ದಲ್ಲಾಳಿ ಸಂಘ
ಮೈಸೂರು

ಜನತಾನಗರದಲ್ಲಿ ತರಕಾರಿ ವಿತರಿಸಿದ ಎಪಿಎಂಸಿ ದಲ್ಲಾಳಿ ಸಂಘ

March 30, 2020

* ಮೂರು ಗೂಡ್ಸ್ ಆಟೋ ರಿಕ್ಷಾಗಳಲ್ಲಿ ತರಕಾರಿ ತಂದು ಹಂಚಿದರು ಮೈಸೂರು,ಮಾ.30( MTY ) – ಲಾಕ್ ಡೌನ್ ನಿಂದಾಗಿ ತತ್ತರಿಸಿದ್ದ ಮೈಸೂರಿನ ಜನತಾನಗರದ ಕೆಲ ರಸ್ತೆಗಳಲ್ಲಿ ಸೋಮವಾರ ಎಪಿಎಂಸಿ ದಲ್ಲಾಳಿ ಸಂಘದ ವತಿಯಿಂದ ಉಚಿತವಾಗಿ ನಾಲ್ಕು ಬಗೆಯ ತರಕಾರಿಯನ್ನು ವಿತರಿಸಲಾಯಿತು. ಇಂದು ಮಧ್ಯಾಹ್ನ 2ರಿಂದ 3 ವರೆಗೆ ಜನತಾನಗರದ ಕೆಲವು ರಸ್ತೆಗಳಲ್ಲಿ ತರಕಾರಿ ವಿತರಿಸಲು ಮೂರು ಆಟೋಗಳಲ್ಲಿ ಸಿಹಿಗುಂಬಳ, ಹಲಸಂದೆ, ಟೊಮೆಟೊ, ಕ್ಯಾಬೇಜ್ ಹಾಗೂ ಇನ್ನಿತರ ತರಕಾರಿ ತಂದ ಎಪಿಎಂಸಿ ಮಾರುಕಟ್ಟೆಯ ದಲ್ಲಾಳಿಗಳು ಮನೆ ಮನೆಗೂ…

21ದಿನಗಳ ಹೆಲ್ತ್ ಕರ್ಪೂನಿಂದಾಗಿ ರಾಜ್ಯಾದ್ಯಂತ ರೈತರಿಗೆ ಹಲವು ಸಮಸ್ಯೆ
ಮೈಸೂರು

21ದಿನಗಳ ಹೆಲ್ತ್ ಕರ್ಪೂನಿಂದಾಗಿ ರಾಜ್ಯಾದ್ಯಂತ ರೈತರಿಗೆ ಹಲವು ಸಮಸ್ಯೆ

March 30, 2020

ಮೈಸೂರು, ಮಾ.30-(SPN)-21ದಿನಗಳ ಹೆಲ್ತ್ ಕರ್ಪೂನಿಂದಾಗಿ ರಾಜ್ಯಾದ್ಯಂತ ರೈತರಿಗೆ ಹಲವು ಸಮಸ್ಯೆಗಳು ಸೃಷ್ಟಿಯಾಗಿವೆ ಎಂದು‌ ರಾಜ್ಯ ಕಬ್ಬು ಬೆಳೆಗಾರರ ಸಂಘದ‌ ಅಧ್ಯಕ್ಚ ಕುರುಬೂರು ಶಾಂತಕುಮಾರ್ ತಿಳಿದ್ದಾರೆ. ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಖರೀದಿದಾರರು ಇಲ್ಲದೆ ಉತ್ಪನ್ನಗಳನ್ನು ಬೀದಿ ಬದಿಗಳಲ್ಲಿ ದಾಸ್ತಾನು ಮಾಡಿರುವುದು, ಮೆಕ್ಕೆಜೋಳ ಭತ್ತ , ಬಿಳಿಜೋಳ ಕಡಲೆ, ಕಬ್ಬು, ಈರುಳ್ಳಿ ಗಳಲ್ಲದೆ ಟೊಮೊಟೊ ಕಲ್ಲಂಗಡಿ ಹಣ್ಣು, ಕಾಯಿಪಲ್ಯಗಳನ್ನು ರಸ್ತೆಗೆ ಸುರಿಯುತ್ತಿದ್ದಾರೆ. ಅಲ್ಲದೆ ರೇಷ್ಮೆ ಬೆಲೆ ಕುಸಿತವಾಗಿ ಕಂಗಲಾ ಗಿರುವುದು ಕೈಗನ್ನಡಿಯಾಗಿದೆ, ಬೆಂಗಳೂರು ನಗರದಿಂದ ಹಳ್ಳಿಗಳಿಗೆ 10ಲಕ್ಷ ಜನರು…

ಮೈಸೂರು ಪಾಲಿಕೆ ವ್ಯಾಪ್ತಿಯಲ್ಲಿ ಬಡ ಕುಟುಂಬಗಳಿಗೆ ಪಡಿತರ ಪೊಟ್ಟಣ ವಿತರಣೆ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ
ಮೈಸೂರು

ಮೈಸೂರು ಪಾಲಿಕೆ ವ್ಯಾಪ್ತಿಯಲ್ಲಿ ಬಡ ಕುಟುಂಬಗಳಿಗೆ ಪಡಿತರ ಪೊಟ್ಟಣ ವಿತರಣೆ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ

March 30, 2020

ಮೈಸೂರು, ಮಾ.೩೦(ಪಿಎಂ)_ ಆರ್ಥಿಕವಾಗಿ ಹಿಂದುಳಿದ ಹಾಗೂ ಬಡ ಕಾರ್ಮಿಕ ಕುಟುಂಬಗಳಿಗೆ ವಾರಕ್ಕೆ ಆಗುವಷ್ಟು ಪಡಿತರ ಪೊಟ್ಟಣ ವಿತರಣೆಗೆ ಶೀಘ್ರ ಕ್ರಮ ವಹಿಸುವುದಾಗಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ತಿಳಿಸಿದರು. ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಪಾಲಿಕೆ ನಡೆಸುತ್ತಿರುವ ಕಾರ್ಯ ಚಟುವಟಿಕೆ ಕುರಿತು ಭಾನುವಾರ ವಾರ್ತಾ ಇಲಾಖೆ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ ಅವರು, ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ ಪಡಿತರ ಪದಾರ್ಥಗಳ ಪೊಟ್ಟಣ ಹಂಚಲು ಪಾಲಿಕೆ ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಈ ಕಾರ್ಯಕ್ರಮಕ್ಕೆ…

ಜೆಕೆ ಟೈರ್ ಕಾರ್ಖಾನಿಯಿಂದ ದೇಣಿಗೆ
ಮೈಸೂರು

ಜೆಕೆ ಟೈರ್ ಕಾರ್ಖಾನಿಯಿಂದ ದೇಣಿಗೆ

March 30, 2020

ಕೋವಿಡ್ – 19 ಭೀತಿ ಹಿನ್ನೆಲೆಯಲ್ಲಿ ಲಾಕ್ ಡೌನ್ ಹಮ್ಮಿಕೊಂಡಿದ್ದು, ಇದರಿಂದ ಸಂಕಷ್ಟಕ್ಕೆ ಸಿಲುಕಿರುವ ಬಡಜನರ ನೆರವಿಗೆ ಜೆಕೆ ಟೈರ್ ಕಾರ್ಖಾನೆಯು ತನ್ನ ಉದ್ಯೋಗಿಗಳ ಒಂದು ತಿಂಗಳ ಸಂಬಳ ನೀಡಲು ನಿರ್ಧರಿಸಿದೆ. ಜೆಕೆ ಟೈರ್ ವ್ಯವಸ್ಥಾಪಕ ನಿರ್ದೇಶಕ ಡಾ. ರಘುಪತಿ ಸಿಂಘಾನಿಯಾ ಪತ್ರಿಕೆ ಹೇಳಿಕೆ ನೀಡಿದ್ದು, ನಾವು ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿದ್ದು, ನಮ್ಮ ಉತ್ಪನ್ನ ಮತ್ತು ರಫ್ತಿನ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗಿದೆ. ಆದರೂ ಈ ವಿಷಮ ಪರಿಸ್ಥಿತಿ ನಿಭಾಯಿಸಲು ನಮ್ಮ ಉದ್ಯೋಗಿಗಳ ಸಂಬಳ ಕಡಿತಗೊಳಿಸಿ ಆ…

ದಯಮಾಡಿ ಯಾರೂ ಮನೆಯಿಂದ ಹೊರಗೆ ಬರಬೇಡಿ
ಮೈಸೂರು

ದಯಮಾಡಿ ಯಾರೂ ಮನೆಯಿಂದ ಹೊರಗೆ ಬರಬೇಡಿ

March 29, 2020

ಮೈಸೂರು, ಮಾ.29(ಎಸ್ ಬಿಡಿ)-  ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ  ಹೆಚ್ಚುತ್ತಿದ್ದರೂ ಜನ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಅನಗತ್ಯವಾಗಿ ಓಡಾಡದಂತೆ ಜಿಲ್ಲಾಡಳಿತ ಹಾಗೂ ಪೊಲೀಸರು ಮನವಿ ಮಾಡಿಕೊಳ್ಳುತ್ತಿದ್ದರೂ ಗಂಭೀರವಾಗಿ ಪರಿಗಣಿಸದಿರುವುದು, ಆತಂಕ ಹೆಚ್ಚಿಸಿದೆ. ಮೈಸೂರಿನ ದೇವರಾಜ ಸಂಚಾರ ಠಾಣೆ ಪೊಲೀಸರು ಕೆ.ಆರ್.ವೃತ್ತದಲ್ಲಿ ದ್ವಿಚಕ್ರ ವಾಹನಗಳಲ್ಲಿ ಓಡಾಡುವವರ ತಡೆದು, ಅವರಿಗೆ ಕೈಮುಗಿದು ಮನವಿ ಮಾಡಿಕೊಳ್ಳುತ್ತಿದ್ದರು. ದಯಮಾಡಿ ಯಾರೂ ಮನೆಯಿಂದ ಹೊರಗೆ ಬರಬೇಡಿ ಎಂದು ತಿಳಿ ಹೇಳುತ್ತಿದ್ದರು. ಮತ್ತೊಂದೆಡೆ ಪೊಲೀಸ್ ಸಿಬ್ಬಂದಿಯೊಬ್ಬರು  ವಾಹನ ಸವಾರರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿರುವ ಪ್ರಸಂಗವೂ ನಡೆದಿದೆ. ಮಕ್ಕಳನ್ನು…

ಕೊರೊನಾ ಜಾಗೃತಿಗಾಗಿ ಬಂದ ‘ರಾಮಾಚಾರಿ’
ಮೈಸೂರು

ಕೊರೊನಾ ಜಾಗೃತಿಗಾಗಿ ಬಂದ ‘ರಾಮಾಚಾರಿ’

March 29, 2020

* ಬೈಕ್ ನಲ್ಲಿ ಮೈಕ್ ಕಟ್ಟಿಕೊಂಡು ಜನರಲ್ಲಿ ಅರಿವು * ಸ್ವಯಂ ಪ್ರೇರಣೆಯಿಂದ ಸುತ್ತುತ್ತಿರುವ ತಿ.ನರಸೀಪುರದ ವ್ಯಕ್ತಿ ಮೈಸೂರು,ಮಾ.29(ಎಂಟಿವೈ)- ಮಾರಕ ಕೊರೊನಾ ವೈರಸ್ ಮೈಸೂರಿನಲ್ಲಿ ಮೂರನೆ ಹಂತಕ್ಕೆ ಕಾಲಿಟ್ಟಿದ್ದು ರೆಡ್ ಅಲರ್ಟ್ ಘೋಷಿಸುವ ಸಂದರ್ಭ ಒದಗಿ ಬರುತ್ತಿದ್ದರೂ ಜನರು ಮಾತ್ರ ಬುದ್ದಿ ಕಲಿಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ತಿ.ನರಸೀಪುರ ತಾಲೂಕಿನ ವ್ಯಕ್ತಿಯೊಬ್ಬರು ಕೊರೊನಾ ವೈರಸ್ ಬಗ್ಗೆ ಬೈಕ್ ನಲ್ಲಿ ಮೈಕ್ ಕಟ್ಟಿಕೊಂಡು ಜಾಗೃತಿ ಮೂಡಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಕಗ್ಗಲೀಪುರದ ನಿವಾಸಿ ಮಲ್ಲಿಕಾರ್ಜುನ…

ಬಹಳ ತಡವಾಗಿ ಆದರೂ ಸಿಎಂ ಯಡಿಯೂರಪ್ಪನವರು ಸರ್ವಪಕ್ಷ ಸಭೆ ಕರೆದಿರುವುದು ಅಭಿನಂದನಾರ್ಹ: ಡಿ.ಕೆ. ಶಿವಕುಮಾರ್
ಮೈಸೂರು

ಬಹಳ ತಡವಾಗಿ ಆದರೂ ಸಿಎಂ ಯಡಿಯೂರಪ್ಪನವರು ಸರ್ವಪಕ್ಷ ಸಭೆ ಕರೆದಿರುವುದು ಅಭಿನಂದನಾರ್ಹ: ಡಿ.ಕೆ. ಶಿವಕುಮಾರ್

March 29, 2020

ಸರ್ವಪಕ್ಷ ನಾಯಕರ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತು… ಕೊರೋನಾ ವಿಚಾರದಲ್ಲಿ ನಾವು ರಾಜಕೀಯ ಮಾಡಲು ಹೋಗುವುದಿಲ್ಲ. ರಾಜಕೀಯ ಬೇರೆ. ಈ ನಾಡಿನ ಸಮಸ್ಯೆಯೇ ಬೇರೆ. ಒಂದಕ್ಕೊಂದು ಬೆರೆಸಲು ಹೋಗುವುದಿಲ್ಲ. ಕೊರೋನಾ ಪರಿಸ್ಥಿತಿ ನಿಯಂತ್ರಣ, ನಿರ್ವಹಣೆಗೆ ಸರಕಾರ ಕೈಗೊಳ್ಳುವ ಎಲ್ಲ ಸಕಾರಾತ್ಮಕ ಕ್ರಮಗಳಿಗೆ ನಮ್ಮ ಪಕ್ಷದ, ವೈಯಕ್ತಿಕವಾಗಿ ನನ್ನ ಬೆಂಬಲವಿದೆ. ಕೊರೋನಾ ನಿಯಂತ್ರಣ, ಪರಿಸ್ಥಿತಿ ನಿರ್ವಹಣೆಗೆ ಸರಕಾರದ ಕ್ರಮಗಳು ವಿಶ್ವ ಆರೋಗ್ಯ ಸಂಸ್ಥೆಯ (WHO) ನಿಯಮಗಳಿಗೆ, ಮಾರ್ಗಸೂಚಿಗಳಿಗೆ ಅನುಗುಣವಾಗಿ ಇರಬೇಕೇ ಹೊರತು ಸರಕಾರದ ಪ್ರತಿನಿಧಿಗಳ, ಯಾವುದೋ…

1 3 4 5 6 7 330
Translate »