Tag: Mysore

ಕೂಲಿ ಮಾಡುವ ಬಡ ಕುಟುಂಬಗಳಿಗೆ ಆಹಾರ ಧಾನ್ಯ ವಿತರಣೆ
ಮೈಸೂರು

ಕೂಲಿ ಮಾಡುವ ಬಡ ಕುಟುಂಬಗಳಿಗೆ ಆಹಾರ ಧಾನ್ಯ ವಿತರಣೆ

March 29, 2020

ಮೈಸೂರು, ಮಾ.೨೯(ಪಿಎಂ)_ ಮೈಸೂರಿನ ಹೆಬ್ಬಾಳ ಕಾಲೋನಿಯ ಬಡ ಕುಟುಂಬಗಳಿಗೆ ಶನಿವಾರ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ವತಿಯಿಂದ ಆಹಾರ ಧಾನ್ಯದ ಪೊಟ್ಟಣ ಗಳನ್ನು ವಿತರಣೆ ಮಾಡಲಾಯಿತು. ಕೊರೊನಾ ವೈರಸ್ ಆತಂಕದಲ್ಲಿ ಇಡೀ ದೇಶವೇ ಸ್ತಬ್ಧವಾಗಿರುವ ಹಿನ್ನೆಲೆಯಲ್ಲಿ ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿದ್ದ ಕುಟುಂಬಗಳು ನಿತ್ಯದ ಬದುಕಿಗೆ ಹೆಣಾಗಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಬಡ ಕುಟುಂಬಗಳಿಗೆ ನೆರವಾಲು ಸ್ವಯಂ ಸೇವಾ ಸಂಸ್ಥೆಗಳು ಮುಂದಾಗಿದೆ. ಅಂತೆಯೇ ಹೆಬ್ಬಾಳ ಕಾಲೋನಿಯ ಬಡ ಕುಟುಂಬಗಳಿಗೆ ಉಚಿತವಾಗಿ ಆಹಾರ ಧಾನ್ಯ ದ ಪೊಟ್ಟಣ ಗಳನ್ನು ಶನಿವಾರ…

ಸೋಂಕಿತನ ಟ್ರಾವೆಲ್ ಇಸ್ಟರಿ ಅಸ್ಪಷ್ಟ
ಮೈಸೂರು

ಸೋಂಕಿತನ ಟ್ರಾವೆಲ್ ಇಸ್ಟರಿ ಅಸ್ಪಷ್ಟ

March 29, 2020

ಮೈಸೂರು,ಮಾ.೨೯(ಪಿಎಂ)_ ಜಿಲ್ಲೆಯಲ್ಲಿ ಪತ್ತೆಯಾದ ಮೂರನೇ ಕೊರೊನಾ ಪಾಸಿಟಿವ್ ವ್ಯಕ್ತಿ (ಪಿ_೫೨) ತನ್ನ ಟ್ರಾವೆಲ್ ಇಸ್ಟರಿ ಕುರಿತು ಸ್ಪಷ್ಟವಾದ ಮಾಹಿತಿ ನೀಡುತ್ತಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ. ಹೀಗಾಗಿ ಸದರಿ ರೋಗಿ ಮಾಹಿತಿ ಆಧರಿಸಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಕಷ್ಟಸಾಧ್ಯ ಎನ್ನುವಂತಾಗಿದೆ. ಈ ನಡುವೆ ಸದರಿ ವ್ಯಕ್ತಿ ಕೆಲಸ ಮಾಡುತ್ತಿದ್ದ ನಂಜನಗೂಡಿನ ಜುಬಿಲಿಯಂಟ್ ಕಾರ್ಖಾನೆ ಯ ಐವರಲ್ಲಿ ಶನಿವಾರ ಒಂದೇ ದಿನ ಕೊರೊನಾ ಪಾಸಿಟಿವ್ ಆಗಿರುವುದು ಸೋಂಕು ಸಮುದಾಯವಾಗಿ ಹರಡುವ ಭೀತಿ ಉಂಟು ಮಾಡಿದೆ. ಸಾವಿರಕ್ಕೂ ಹೆಚ್ಚಿನ…

ಮೈಸೂರು ನಗರದಲ್ಲಿ ಶನಿವಾರದಿಂದ ಮತ್ತೊಂದು ನಿರಾಶ್ರಿತರ ನೆರವು ಕೇಂದ್ರ
ಮೈಸೂರು

ಮೈಸೂರು ನಗರದಲ್ಲಿ ಶನಿವಾರದಿಂದ ಮತ್ತೊಂದು ನಿರಾಶ್ರಿತರ ನೆರವು ಕೇಂದ್ರ

March 28, 2020

ಮೈಸೂರು, ಮಾ.28(ಎಸ್ ಬಿಡಿ)-  ಮೈಸೂರು ನಗರದಲ್ಲಿ ಶನಿವಾರದಿಂದ ಮತ್ತೊಂದು ನಿರಾಶ್ರಿತರ ನೆರವು ಕೇಂದ್ರ ಆರಂಭವಾಗಿದೆ. ನಗರದ ಮೆಟ್ರೋಪೋಲ್ ವೃತ್ತದ ಬಳಿ, ವಿನೋಬಾ ರಸ್ತೆಯಲ್ಲಿರುವ ನಂಜರಾಜ ಬಹದ್ದೂರ್ ಛತ್ರದಲ್ಲಿ 2ನೇ ನೆರವು ಕೇಂದ್ರ ಆರಂಭಿಸಲಾಗಿದೆ. ಈಗಾಗಲೇ ಗಂಗೋತ್ರಿ ಬಡಾವಣೆ ಯೂತ್ ಹಾಸ್ಟೆಲ್ ನೆರವು ಕೇಂದ್ರದಲ್ಲಿ 70ಕ್ಕೂ ಹೆಚ್ಚು ನಿರಾಶ್ರಿತರು ಆಶ್ರಯ ಪಡೆದಿದ್ದಾರೆ. ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಲಾಗಿರುವ ಹಿನ್ನೆಲೆಯಲ್ಲಿ ನಿರಾಶ್ರಿತರು ತೀವ್ರ ಸಂಕಷ್ಟಕ್ಕೆ ಸಿಲುಕಿ ನರಳುತ್ತಿದ್ದಾರೆ. ಮೈಸೂರು ನಗರದಲ್ಲಿ ನೂರಾರು ಮಂದಿ ಊಟ, ವಸತಿ…

ಕೊರೊನಾ ಭೀತಿ; ಪೌರಕಾರ್ಮಿಕರ ಕೆಲಸದ ಅವಧಿ ಕಡಿತ ಪೌರಕಾರ್ಮಿಕರ ಬಗ್ಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಮೈಸೂರು ಪಾಲಿಕೆ ಆಯುಕ್ತರ ಆದೇಶ
ಮೈಸೂರು

ಕೊರೊನಾ ಭೀತಿ; ಪೌರಕಾರ್ಮಿಕರ ಕೆಲಸದ ಅವಧಿ ಕಡಿತ ಪೌರಕಾರ್ಮಿಕರ ಬಗ್ಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಮೈಸೂರು ಪಾಲಿಕೆ ಆಯುಕ್ತರ ಆದೇಶ

March 25, 2020

ಮೈಸೂರು, ಮಾ.24(ಪಿಎಂ)- ಕೊರೊನಾ ಭೀತಿ ಹಿನ್ನೆಲೆಯಲ್ಲಿ ಪೌರಕಾರ್ಮಿಕರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಅವರ ಕೆಲಸದ ಸಮಯವನ್ನು ಮೈಸೂರು ಮಹಾನಗರ ಪಾಲಿಕೆ ಕಡಿತಗೊಳಿಸಿದೆ. ಬೆಳಿಗ್ಗೆ 6.30ರಿಂದ ಮಧ್ಯಾಹ್ನ 2ರವರೆಗೆ ಇದ್ದ ಪೌರ ಕಾರ್ಮಿಕರ ಕೆಲಸದ ಅವಧಿಯನ್ನು ಪ್ರತಿದಿನ ಬೆಳಿಗ್ಗೆ 6ರಿಂದ ಬೆಳಿಗ್ಗೆ 10.30ರವರೆಗೆ ಹಾಗೂ ಒಳಚರಂಡಿ ಪೌರಕಾರ್ಮಿಕರ ಕೆಲಸದ ವೇಳೆಯನ್ನು ಬೆಳಿಗ್ಗೆ 8ರಿಂದ ಸಂಜೆ 4ರ ಬದಲಿಗೆ ಪ್ರತಿದಿನ ಬೆಳಿಗ್ಗೆ 8ರಿಂದ ಮಧ್ಯಾಹ್ನ 1ರವರೆಗೆ ನಿಗದಿಪಡಿಸಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಆದೇಶ ಹೊರಡಿಸಿದ್ದಾರೆ. ಅಲ್ಲದೇ,…

ಪಾಲಿಕೆ ಅಭಯ ತಂಡದಿಂದ ರಾಸಾಯನಿಕ ಸಿಂಪಡಣೆ
ಮೈಸೂರು

ಪಾಲಿಕೆ ಅಭಯ ತಂಡದಿಂದ ರಾಸಾಯನಿಕ ಸಿಂಪಡಣೆ

March 25, 2020

ಮೈಸೂರು, ಮಾ. 24(ಆರ್‍ಕೆ)- ಕೋವಿಡ್-19 (ಕೊರೊನಾ ವೈರಸ್ ಡಿಸೀಸ್) ಮಾರಣಾಂತಿಕ ವೈರಾಣು ಹರಡುವ ಭೀತಿ ಉಂಟಾಗಿರುವ ಕಾರಣ, ಮೈಸೂರು ಮಹಾನಗರ ಪಾಲಿಕೆಯ ಅಭಯ ತಂಡವು ನಗರದಾದ್ಯಂತ ಎಲ್ಲಾ ವಾರ್ಡುಗಳಲ್ಲಿ ರಾಸಾಯನಿಕ ಸಿಂಪಡಿಸಿತು. ಪಾಲಿಕೆ ಆರೋಗ್ಯಾಧಿಕಾರಿಗಳಾದ ಡಾ.ಜಯಂತ್, ಡಾ.ನಾಗರಾಜ್, ಅಭಿವೃದ್ಧಿ ಅಧಿಕಾರಿಗಳಾದ ಸತ್ಯಮೂರ್ತಿ, ಸುನಿಲ್, ನಾಗರಾಜು ಹಾಗೂ ಇಂದು ಬೆಳಿಗ್ಗೆ ಮೈಸೂರು ನಗರದ ಎಲ್ಲಾ 65 ವಾರ್ಡ್‍ಗಳಲ್ಲೂ ಉಪಕರಣ ಬಳಸಿ ಸಾಂಕ್ರಾಮಿಕ ರೋಗ ನಿಯಂತ್ರಿಸಲು ರಾಸಾಯನಿಕವನ್ನು ಅಭಯ ತಂಡದ ಸಿಬ್ಬಂದಿ ಸಿಂಪಡಿಸಿದರು. ಅಭಿವೃದ್ಧಿ ಅಧಿಕಾರಿ ಸತ್ಯಮೂರ್ತಿ ಅವರು ಕುವೆಂಪುನಗರದ…

ದೇಶದಲ್ಲಿ ಐದು ಲಕ್ಷ, ರಾಜ್ಯದಲ್ಲಿ ಲಕ್ಷ ಮಂದಿಗೆ ಕೊರೊನಾ ಸೋಂಕು ಹರಡುವ ಸಾಧ್ಯತೆ
ಮೈಸೂರು

ದೇಶದಲ್ಲಿ ಐದು ಲಕ್ಷ, ರಾಜ್ಯದಲ್ಲಿ ಲಕ್ಷ ಮಂದಿಗೆ ಕೊರೊನಾ ಸೋಂಕು ಹರಡುವ ಸಾಧ್ಯತೆ

March 25, 2020

ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಪರಿಷತ್‍ನಲ್ಲಿ ವಿವರಣೆ ಸೋಂಕು ಹರಡುವುದನ್ನು ತಡೆಯಲು ಎಲ್ಲಾ ಎಚ್ಚರಿಕಾ ಕ್ರಮ 20 ಸಾವಿರ ಹೋಟೆಲ್ ಕೊಠಡಿ ಪಡೆಯಲು ನಿರ್ಧಾರ; ಸಾವಿರ ವೆಂಟಿಲೇಟರ್, 15 ಲಕ್ಷ ಎನ್-95 ಮಾಸ್ಕ್ ಖರೀದಿ ಬೆಂಗಳೂರು, ಮಾ.24- ದೇಶಾದ್ಯಂತ ಸುಮಾರು 5 ಲಕ್ಷ ಹಾಗೂ ಕರ್ನಾಟಕದಲ್ಲಿ 1 ಲಕ್ಷ ಮಂದಿಗೆ ಕೊರೊನಾ ಸೋಂಕು ತಗಲುವ ಸಾಧ್ಯತೆಯಿದ್ದು, ರಾಜ್ಯದಲ್ಲಿ ಪರಿಸ್ಥಿತಿ ನಿಭಾಯಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ವಿಧಾನ ಪರಿಷತ್ತಿಗೆ ತಿಳಿಸಿದ್ದಾರೆ. ಕೊರೊನಾ…

ಬ್ಯಾಂಕ್‍ಗಳಲ್ಲಿ ಕನಿಷ್ಠ ಅಗತ್ಯ ಸೇವೆ ಮಾತ್ರ ಲಭ್ಯ
ಮೈಸೂರು

ಬ್ಯಾಂಕ್‍ಗಳಲ್ಲಿ ಕನಿಷ್ಠ ಅಗತ್ಯ ಸೇವೆ ಮಾತ್ರ ಲಭ್ಯ

March 24, 2020

ಎಟಿಎಂ ಸೇವೆ ಎಂದಿನಂತೆ ಲಭ್ಯ ಬ್ಯಾಂಕ್ ಶಾಖೆಗಳಲ್ಲಿ ಸಾಮಾಜಿಕ ಅಂತರಕ್ಕೆ ಆದ್ಯತೆ ಸಣ್ಣಪುಟ್ಟ ಕೆಲಸಕ್ಕೆ ಬ್ಯಾಂಕಿಗೆ ಹೋಗದಂತೆ ಮನವಿ ಡಿಜಿಟಲ್ ಬ್ಯಾಂಕಿಂಗ್ ಸೇವೆಯನ್ನು ಪರ್ಯಾಯವಾಗಿ ಬಳಸಲು ಸಲಹೆ ಮೈಸೂರು, ಮಾ.23(ಪಿಎಂ)- ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಸರ್ಕಾರದ ಆದೇಶದಂತೆ ಮೈಸೂರು ಜಿಲ್ಲೆ ಲಾಕ್ ಡೌನ್ ನಿರ್ಬಂಧಕ್ಕೆ ಒಳಗಾಗಿದೆ. ಇಲ್ಲಿನ ಬ್ಯಾಂಕಿಂಗ್ ಸೇವೆ ಲಾಕ್‍ಡೌನ್ ನಿರ್ಬಂಧ ದಿಂದ ಹೊರತಾಗಿದ್ದರೂ ಕನಿಷ್ಠ ಅಗತ್ಯ ಸೇವೆಗೆ ಸೀಮಿತಗೊಳಿಸಲಾಗಿದೆ. ಲಾಕ್‍ಡೌನ್ ನಿರ್ಬಂಧವಿರುವ ಜಿಲ್ಲೆ ಗಳು ಮಾತ್ರವಲ್ಲದೆ, ಕೊರೊನಾ ಹಿನ್ನೆಲೆ ಯಲ್ಲಿ ಇಡೀ ರಾಜ್ಯದಲ್ಲಿ…

ವಾಣಿಜ್ಯ ಉದ್ದೇಶಕ್ಕೆ ಪಡೆದಿರುವ ಸಾಲದ ಕಂತು ಪಾವತಿಗೆ 6 ತಿಂಗಳ ವಿನಾಯಿತಿಗೆ ಆಗ್ರಹ
ಮೈಸೂರು

ವಾಣಿಜ್ಯ ಉದ್ದೇಶಕ್ಕೆ ಪಡೆದಿರುವ ಸಾಲದ ಕಂತು ಪಾವತಿಗೆ 6 ತಿಂಗಳ ವಿನಾಯಿತಿಗೆ ಆಗ್ರಹ

March 24, 2020

ಮೈಸೂರು, ಮಾ.23(ಎಂಟಿವೈ)- ನೊವೆಲ್ ಕೊರೊನಾ ಹಿನ್ನೆಲೆಯಲ್ಲಿ ವಾಣಿಜ್ಯ ವಹಿವಾಟು ಸ್ಥಗಿತಗೊಂಡಿರುವ ಟ್ಯಾಕ್ಸಿ ಮಾಲೀಕರು ಸೇರಿದಂತೆ ಶ್ರಮಿಕ ವರ್ಗ ಬ್ಯಾಂಕ್ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಮಾಡಿರುವ ಸಾಲದ ಕಂತು ಪಾವತಿಸಲು ಆರು ತಿಂಗಳು ವಿನಾಯಿತಿ ನೀಡುವಂತೆ ಒತ್ತಾಯಿಸಿ ಮೈಸೂರು ರಕ್ಷಣಾ ವೇದಿಕೆ ಯುವ ಘಟಕದ ಕಾರ್ಯಕರ್ತರು ದೇವರಾಜ ಅರಸ್ ರಸ್ತೆಯಲ್ಲಿ ಭಿತ್ತಿಫಲಕ ಪ್ರದರ್ಶಿಸಿ ಗಮನ ಸೆಳೆದರು. ಇದೇ ಸಂದರ್ಭದಲ್ಲಿ ಮೈಸೂರು ರಕ್ಷಣಾ ವೇದಿಕೆಯ ಯುವ ಘಟಕದ ಅಧ್ಯಕ್ಷ ಗುರುರಾಜ್ ಶೆಟ್ಟಿ ಮಾತನಾಡಿ, ಕೊರೊನಾ ವೈರಾಣು ಜನರನ್ನು ಭಯಭೀತ ಗೊಳಿಸಿದ್ದು,…

ಬಾರ್, ವೈನ್‍ಸ್ಟೋರ್‍ಗಳಿಗೆ ಬೀಗಮುದ್ರೆ ಹಾಕಿದ ಅಬಕಾರಿ ಸಿಬ್ಬಂದಿ
ಮೈಸೂರು

ಬಾರ್, ವೈನ್‍ಸ್ಟೋರ್‍ಗಳಿಗೆ ಬೀಗಮುದ್ರೆ ಹಾಕಿದ ಅಬಕಾರಿ ಸಿಬ್ಬಂದಿ

March 24, 2020

ಮೈಸೂರು ನಗರದಲ್ಲಿ 280, ಜಿಲ್ಲೆಯ ತಾಲೂಕುಗಳಲ್ಲಿ 200 ಬಾರ್‍ಗಳಿಗೆ ಬೀಗ ದಿನಕ್ಕೆ 2.5 ಕೋಟಿ ವಹಿವಾಟು ಖೋತಾ ಮೈಸೂರು,ಮಾ.23(ಎಂಟಿವೈ)- ನೊವೆಲ್ ಕೊರೊನಾ ವೈರಸ್ ವ್ಯಾಪಕ ವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಸೇರಿದಂತೆ ರಾಜ್ಯದ 9 ಜಿಲ್ಲೆಗಳಲ್ಲಿ ಲಾಕ್‍ಡೌನ್ ಮಾಡಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಮೈಸೂರಿ ನಲ್ಲಿ ಸೋಮವಾರ ಅಬಕಾರಿ ಇಲಾಖೆ ಸಿಬ್ಬಂದಿ ಎಲ್ಲಾ ಬಾರ್ ಹಾಗೂ ವೈನ್ ಸ್ಟೋರ್‍ಗಳಿಗೆ ಬೀಗ ಮುದ್ರೆ ಜಡಿದರು. ನಿಯಮ ಉಲ್ಲಂಘಿಸಿ, ಕದ್ದುಮುಚ್ಚಿ ವ್ಯಾಪಾರ ಮಾಡಬಹುದೆಂಬ ಅನು ಮಾನದಿಂದ ಸೋಮವಾರ ಬೆಳಿಗ್ಗೆಯೇ ಹಲವು ತಂಡಗಳಲ್ಲಿ…

ಹೋಟೆಲ್ ಉದ್ಯಮ ಪೂರ್ಣ ಬಂದ್‍ಗೆ ನಿರ್ಧಾರ
ಮೈಸೂರು

ಹೋಟೆಲ್ ಉದ್ಯಮ ಪೂರ್ಣ ಬಂದ್‍ಗೆ ನಿರ್ಧಾರ

March 24, 2020

ಮೈಸೂರು,ಮಾ.23(ಎಸ್‍ಪಿಎನ್)-ಮೈಸೂರಿನ ಹೋಟೆಲ್ ಮಾಲೀಕರು `ರಾಜ್ಯ ಮತ್ತು ಕೇಂದ್ರ’ ಸರ್ಕಾರದ ಮಾರ್ಗಸೂಚಿ ಗಳನ್ನು ಚಾಚು ತಪ್ಪದೇ ಪಾಲಿಸುವ ಮೂಲಕ ಮಾರಕ ವೈರಸ್ `ಕೊರೊನಾ’ ತಡೆಗೆ ಸಹಕರಿಸುತ್ತೇವೆ ಎಂದು ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ತಿಳಿಸಿದರು. ಮೈಸೂರು ಕೃಷ್ಣಮೂರ್ತಿಪುರಂನಲ್ಲಿರುವ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಆವರಣದಲ್ಲಿ ನಡೆದ ತುರ್ತುಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ ಕೆಲವು ಷರತ್ತಿನೊಂದಿಗೆ ಹೋಟೆಲ್‍ನಲ್ಲಿ ತಿಂಡಿ-ತಿನಿಸುಗಳ ಪಾರ್ಸಲ್ ಹಾಗೂ ಬೇಕರಿ ವಹಿವಾಟು(ಸೋಮವಾರಕ್ಕೆ) ನಡೆಸಲು ಮಾತ್ರ ಅನುಮತಿ ನೀಡಿತ್ತು. ಆದರೆ, ಪೊಲೀಸರು ನಿರಾಕರಿಸಿ ಬಂದ್ ಮಾಡುವಂತೆ ಸೂಚಿಸಿದ್ದಾರೆ. ಮಾಲೀಕರು ಯಾವುದೇ…

1 4 5 6 7 8 330
Translate »