21ದಿನಗಳ ಹೆಲ್ತ್ ಕರ್ಪೂನಿಂದಾಗಿ ರಾಜ್ಯಾದ್ಯಂತ ರೈತರಿಗೆ ಹಲವು ಸಮಸ್ಯೆ
ಮೈಸೂರು

21ದಿನಗಳ ಹೆಲ್ತ್ ಕರ್ಪೂನಿಂದಾಗಿ ರಾಜ್ಯಾದ್ಯಂತ ರೈತರಿಗೆ ಹಲವು ಸಮಸ್ಯೆ

March 30, 2020

ಮೈಸೂರು, ಮಾ.30-(SPN)-21ದಿನಗಳ ಹೆಲ್ತ್ ಕರ್ಪೂನಿಂದಾಗಿ ರಾಜ್ಯಾದ್ಯಂತ ರೈತರಿಗೆ ಹಲವು ಸಮಸ್ಯೆಗಳು ಸೃಷ್ಟಿಯಾಗಿವೆ ಎಂದು‌ ರಾಜ್ಯ ಕಬ್ಬು ಬೆಳೆಗಾರರ ಸಂಘದ‌ ಅಧ್ಯಕ್ಚ ಕುರುಬೂರು ಶಾಂತಕುಮಾರ್ ತಿಳಿದ್ದಾರೆ.

ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಖರೀದಿದಾರರು ಇಲ್ಲದೆ ಉತ್ಪನ್ನಗಳನ್ನು ಬೀದಿ ಬದಿಗಳಲ್ಲಿ ದಾಸ್ತಾನು ಮಾಡಿರುವುದು, ಮೆಕ್ಕೆಜೋಳ ಭತ್ತ , ಬಿಳಿಜೋಳ ಕಡಲೆ, ಕಬ್ಬು, ಈರುಳ್ಳಿ ಗಳಲ್ಲದೆ ಟೊಮೊಟೊ ಕಲ್ಲಂಗಡಿ ಹಣ್ಣು, ಕಾಯಿಪಲ್ಯಗಳನ್ನು ರಸ್ತೆಗೆ ಸುರಿಯುತ್ತಿದ್ದಾರೆ. ಅಲ್ಲದೆ ರೇಷ್ಮೆ ಬೆಲೆ ಕುಸಿತವಾಗಿ ಕಂಗಲಾ ಗಿರುವುದು ಕೈಗನ್ನಡಿಯಾಗಿದೆ, ಬೆಂಗಳೂರು ನಗರದಿಂದ ಹಳ್ಳಿಗಳಿಗೆ 10ಲಕ್ಷ ಜನರು ವಾಪಸ್ ಹಳ್ಳಿಗಳಿಗೆ ಬಂದಿರುವುದು ಜನರಲ್ಲಿ ಕೋರೋನ ಭಯದ ಭೀತಿ ಆವರಿಸಿದೆ, ಕಳೆದ ಒಂದು ವಾರದ ಹಿಂದೆ ಕೃಷಿ ಉತ್ಪನ್ನಗಳನ್ನು ಸರ್ಕಾರವೇ ಖರಿದಿಸಿ, ಹಾಪ್ ಕಾಂಪ್ಸ ಗಳು ಹಾಗೂ ನ್ಯಾಯಬೆಲೆ ಅಂಗಡಿ ಮೂಲಕ ಗ್ರಾಹಕರಿಗೆ ಮಾರಾಟ ಮಾಡಿಸಲು ಕ್ರಮ ಕೈಗೊಳ್ಳಬೇಕೆಂದು ಪತ್ರ ಬರೆಯ ಲಾಗಿತ್ತು ಈ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡಿದ ಕಾರಣ ರೈತರು 50 ಸಾವಿರ ಕೋಟಿಗೂ ಹೆಚ್ಚು ನಷ್ಟ ಅನುಭವಿಸಿ ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ, ಲಾಕ್ಡೌನ ಮುಗಿದ ನಂತರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ರೈತರನ್ನು ಉಳಿಸಲು ವಿಶೇಷ ಪ್ಯಾಕೇಜ್ ನೀಡಬೇಕೆಂದು ಒತ್ತಾಯಿಸಲಾಗುವುದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ

Translate »