ಮಂಡ್ಯದಲ್ಲಿ ಪೆಟ್ರೋಲ್ ಮಾರಾಟ ನಿರ್ಬಂಧ
ಮಂಡ್ಯ

ಮಂಡ್ಯದಲ್ಲಿ ಪೆಟ್ರೋಲ್ ಮಾರಾಟ ನಿರ್ಬಂಧ

March 30, 2020

ಮಂಡ್ಯ,ಮಾ,30(ನಾಗಯ್ಯ);ಕೊರೊನಾ ವೈರಸ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರು ರಸ್ತೆಗಿಳಿಯುವುದನ್ನು ತಡೆಯುವ ಉದ್ದೇಶದಿಂದ ಎಲ್ಲಾ ಖಾಸಗಿ ವಾಹನಗಳಿಗೆ ಪೆಟ್ರೋಲ್ ಹಾಗೂ ಡೀಸೆಲ್ ಮಾರಾಟವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಆದೇಶ ಹೊರಡಿಸಿದ್ದಾರೆ.

ಕೊರೊನಾ ತಡೆಗಾಗಿ ಏಪ್ರಿಲ್ 14 ರವರೆಗೂ ಲಾಕ್ ಡೌನ್ ಆದೇಶ ಮಾಡಿದ್ದರೂ ಸಹ ಕೆಲವು ಯುವಕರು ಹಾಗೂ ಸಾರ್ವಜನಿಕರು ವಿನಾಕಾರಣ ಅಗತ್ಯವಸ್ತುಗಳ ಖರೀದಿ, ಸಂಬಂಧಿಕರ ಮನೆಗಳು,ಸಾವು,ತಿಥಿ ಕಾರ್ಯ,ಆಸ್ಪತ್ರೆ ಇತ್ಯಾದಿ ನೆಪ ಹೇಳಿ ದ್ವಿಚಕ್ರವಾಹನದಲ್ಲಿ ರಸ್ತೆಗಿಳಿದು ಲಾಕ್ ಡೌನ್ ಆದೇಶವನ್ನು ಉಲ್ಲಂಘಿ ಸುತ್ತಿದ್ದುದರಿಂದ ಈ ಆದೇಶ ಮಾಡಲಾಗಿದೆ.
ತುರ್ತು ಸೇವೆ ಕರ್ತವ್ಯನಿರತ ಸರ್ಕಾರಿ ನೌಕರರು,ಎನ್ ಜಿಓ,ಅಗತ್ಯ ಸೇವೆ ವಾಹನಗಳು,ಮತ್ತು ಪತ್ರಕರ್ತರ ವಾಹನಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಾಹನಗಳಿಗೆ ಪೆಟ್ರೋಲ್ ಹಾಗೂ ಡೀಸೆಲ್ ನ್ನು ನಿರ್ಬಂಧಿಸಲಾಗಿದೆ .
ಅಧಿಕೃತ ಗುರ್ತಿನ ಚೀಟಿ ಮತ್ತು ನಿಯೋಜನೆಯ ಆದೇಶ ಪತ್ರವನ್ನು ಪರಿಶೀಲಿಸಿದ ನಂತರ ಇಂಧನ ಪೂರೈಸುವಂತೆಯೂ ಪೆಟ್ರೋಲ್ ಬಂಕ್ ಗಳಿಗೆ ಸೂಚಿಸಲಾಗಿದೆ. ಈ ಆದೇಶ ಮಾ.30 ರಿಂದ ಏಪ್ರಿಲ್ 14 ರ ವರೆಗೂ ಜಾರಿಯಲ್ಲಿರುತ್ತದೆ.

Translate »