Tag: Mysore

ಮೈಸೂರು ಭಾಗದಲ್ಲಿ ಬಿಜೆಪಿ ಭದ್ರಪಡಿಸಲು ಯಡಿಯೂರಪ್ಪ ಪ್ಲಾನ್
ಮೈಸೂರು

ಮೈಸೂರು ಭಾಗದಲ್ಲಿ ಬಿಜೆಪಿ ಭದ್ರಪಡಿಸಲು ಯಡಿಯೂರಪ್ಪ ಪ್ಲಾನ್

December 31, 2019

ಬೆಂಗಳೂರು,ಡಿ.30- ಮಂಡ್ಯದಲ್ಲಿ ಬಿಜೆಪಿ ಖಾತೆ ತೆರೆದಿರುವ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ, ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಭದ್ರಗೊಳಿಸಲು ಮುಂದಾಗಿದ್ದಾರೆ. ಕೆ.ಆರ್ ಪೇಟೆ ಉಪ ಚುನಾವಣೆಯಲ್ಲಿ ಕೆ.ಸಿ.ನಾರಾಯಣಗೌಡರ ಗೆಲುವಿನೊಂಗೆ ಜೆಡಿಎಸ್ ಭದ್ರಕೋಟೆಯಾಗಿದ್ದ ಮಂಡ್ಯದಲ್ಲಿ ಬಿಜೆಪಿ ಖಾತೆ ತೆರೆದಿದೆ. ಇದರೊಂದಿಗೆ ಪಕ್ಷದ ಕಾರ್ಯಕರ್ತರಿಗೆ ಹೊಸ ಚೈತನ್ಯ ಬಂದಂತಾಗಿದೆ. ಈ ಹಿನ್ನೆಲೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಪಕ್ಷವನ್ನು ಪ್ರವರ್ಧಮಾನಕ್ಕೆ ತರಲು ಯೋಜನೆ ಮಾಡಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಹಾಸನ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ ಶಾಸಕರನ್ನು ಸಂಪುಟಕ್ಕೆ ಸೇರಿಸಿ ಕೊಳ್ಳುವ ಮೂಲಕ ಈ…

ಜ.3ರ ಸಾವಿತ್ರಿಬಾಯಿ ಫುಲೆ ಜನ್ಮದಿನವನ್ನು `ಶಿಕ್ಷಕಿಯರ ದಿನಾಚರಣೆ’ ಆಚರಿಸಿ: ಸಚಿವ ಸುರೇಶ್‍ಕುಮಾರ್ ಸೂಚನೆ
ಮೈಸೂರು

ಜ.3ರ ಸಾವಿತ್ರಿಬಾಯಿ ಫುಲೆ ಜನ್ಮದಿನವನ್ನು `ಶಿಕ್ಷಕಿಯರ ದಿನಾಚರಣೆ’ ಆಚರಿಸಿ: ಸಚಿವ ಸುರೇಶ್‍ಕುಮಾರ್ ಸೂಚನೆ

December 31, 2019

ಬೆಂಗಳೂರು: ಹೊಸ ವರ್ಷದ ಮೂರನೇ ದಿನವೇ ಸಾವಿತ್ರಿಬಾಯಿ ಪುಲೆಯವರ ಜನ್ಮ ದಿನಾಚರಣೆ. ಇಂತಹ ದಿನವನ್ನು ಶಿಕ್ಷಕಿಯರ ದಿನಾಚರಣೆಯಾಗಿ ಆಚರಿಸುವಂತೆ ಸುತ್ತೋಲೆ ಮೂಲಕ ಎಲ್ಲಾ ಶಾಲೆಗಳಿಗೂ ಸೂಚಿಸುವಂತೆ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದಾರೆ. 1831 ಜನವರಿ 3ರಂದು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕುಗ್ರಾಮ ದಲ್ಲಿ ಜನಿಸಿದ ಸಾವಿತ್ರಿ ಬಾಯಿ ಫುಲೆ ಮಹಿಳಾ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟವರು. ಮನೆಯಲ್ಲೇ ಶಾಲೆ ತೆರೆದು ಅಕ್ಷರ ಕ್ರಾಂತಿ ಕಹಳೆ ಊದಿದರು. ಬ್ರಿಟಿಷರಿಂ ದಲೇ ಅತ್ಯುತ್ತಮ ಶಿಕ್ಷಕಿ…

ನೋಟಿಸ್‍ಗೂ ಜಗ್ಗದ ವಾಹನ ಸವಾರರಿಂದ 1.73 ಲಕ್ಷ ರೂ. ದಂಡ ವಸೂಲಿ
ಮೈಸೂರು

ನೋಟಿಸ್‍ಗೂ ಜಗ್ಗದ ವಾಹನ ಸವಾರರಿಂದ 1.73 ಲಕ್ಷ ರೂ. ದಂಡ ವಸೂಲಿ

December 31, 2019

ಮೈಸೂರು,ಡಿ.30(ಎಸ್‍ಪಿಎನ್)-ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಅಂಚೆ ಮೂಲಕ ನೋಟಿಸ್ ನೀಡಿದ್ದರೂ ದಂಡ ಪಾವತಿಸದೇ ಇದ್ದ 1,109 ವಾಹನ ಸವಾರರ ವಿರುದ್ಧ ವಿಶೇಷ ತಪಾಸಣೆ ನಡೆಸಿರುವ ಸಂಚಾರ ಪೊಲೀಸರು 1.73 ಲಕ್ಷ ರೂ. ದಂಡ ಸಂಗ್ರಹಿಸಿದ್ದಾರೆ. ಡಿ.30ರಂದು ಬೆಳಿಗ್ಗೆಯಿಂದ ಸಂಜೆಯ ವರೆಗೆ ವಿವಿ ಪುರಂ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂ ಘಿಸಿದ ವಾಹನ ಸವಾರರಿಗೆ ಅಂಚೆ ಮೂಲಕ ನೋಟಿಸ್ ನೀಡಿದ್ದರೂ ದಂಡ ಪಾವತಿ ಮಾಡಿರದವರ ಬಗ್ಗೆ ವಿಶೇಷ ತಪಾಸಣೆಯಡಿ ಮನೆಗೆ ಭೇಟಿ ನೀಡಿರುವ ಸಂಚಾರ ಪೊಲೀಸರು, ದಂಡ…

ಪಾಂಡವಪುರ ಟಿಎಪಿಸಿಎಂಎಸ್‍ಗೆ ದೇವೇಗೌಡ ಅಧ್ಯಕ್ಷ
ಮೈಸೂರು

ಪಾಂಡವಪುರ ಟಿಎಪಿಸಿಎಂಎಸ್‍ಗೆ ದೇವೇಗೌಡ ಅಧ್ಯಕ್ಷ

December 31, 2019

ಪಾಂಡವಪುರ, ಡಿ.30- ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ(ಟಿಎಪಿಸಿಎಂಎಸ್)ದ ನೂತನ ಅಧ್ಯಕ್ಷರಾಗಿ ಎನ್.ಡಿ.ದೇವೇಗೌಡ (ಸುಂದ್ರಣ್ಣ) ಸೋಮವಾರ ಅವಿರೋಧ ವಾಗಿ ಆಯ್ಕೆಯಾದರು. ಒಟ್ಟು 10 ಮಂದಿ ನಿರ್ದೇಶಕರ ಬಲದ ಟಿಎಪಿಸಿಎಂಎಸ್‍ನ ಹಿಂದಿನ ಅಧ್ಯಕ್ಷ ಪ್ರಕಾಶ್  ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಎನ್.ಡಿ. ದೇವೇಗೌಡ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸಿದ ಕಾರಣ ಚುನಾ ವಣಾಧಿಕಾರಿಯೂ ಆದ ತಹಶೀಲ್ದಾರ್ ಪ್ರಮೋದ್ ಎಲ್.ಪಾಟೀಲ್ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಟಿಎಪಿಸಿಎಂಎಸ್ ನೂತನ ಅಧ್ಯಕ್ಷರಾಗಿ ಎನ್.ಡಿ.ದೇವೇಗೌಡ ಆಯ್ಕೆಯಾಗುತ್ತಿದ್ದಂ ತೆಯೇ…

ಸಂತ ಶ್ರೇಷ್ಠ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಕೃಷ್ಣನಲ್ಲಿ ಲೀನ
ಮೈಸೂರು

ಸಂತ ಶ್ರೇಷ್ಠ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಕೃಷ್ಣನಲ್ಲಿ ಲೀನ

December 30, 2019

ಬೆಂಗಳೂರು, ಡಿ.29-ತೀವ್ರ ಉಸಿರಾಟದ ಸಮಸ್ಯೆ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದ ಪೇಜಾವರ ಮಠದ ಹಿರಿಯ ಯತಿ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ (88) ಭಾನುವಾರ ಮುಂಜಾನೆ ಕೃಷ್ಣೈಕ್ಯರಾಗಿದ್ದು, ಇಂದು ರಾತ್ರಿ ಬೆಂಗಳೂರು ವಿದ್ಯಾಪೀಠದ ಆವರಣದ ಬೃಂದಾ ವನದಲ್ಲಿ ಹರಿಯ ದಿವ್ಯಚರಣ ಸೇರಿದರು. ಬೆಂಗಳೂರಿನ ವಿದ್ಯಾಪೀಠದಲ್ಲಿ ಮಾಧ್ವ ಸಂಪ್ರದಾಯ ದಂತೆ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಲಾ ಯಿತು. ಪಾರ್ಥಿವ ಶರೀರಕ್ಕೆ ಸ್ನಾನ ಮಾಡಿಸಿ ಮುದ್ರಾಧಾರಣೆ, ಗೋಪಿಚಂದನ ಲೇಪಿಸಲಾಯಿತು. ನಂತರ ಶ್ರೀಗಳಿಗೆ ಹೊಸಬಟ್ಟೆ ತೊಡಿಸಿ, ತುಳಸಿ ಮಾಲೆ ಹಾಕಿ ಅಲಂಕಾರ ಗೊಳಿಸಲಾಯಿತು. ನಂತರ…

ವರ್ಷಾರಂಭದಲ್ಲಿ ಸಿದ್ದಗಂಗಾ ಶ್ರೀ, ವರ್ಷಾಂತ್ಯದಲ್ಲಿ ಪೇಜಾವರ ಶ್ರೀ
ಮೈಸೂರು

ವರ್ಷಾರಂಭದಲ್ಲಿ ಸಿದ್ದಗಂಗಾ ಶ್ರೀ, ವರ್ಷಾಂತ್ಯದಲ್ಲಿ ಪೇಜಾವರ ಶ್ರೀ

December 30, 2019

ಮೈಸೂರು,ಡಿ.29- ಇನ್ನೆರಡು ದಿನ ಕಳೆದರೆ ಹೊಸ ವರ್ಷ ಆರಂಭಗೊಳ್ಳುತ್ತದೆ. ಅಲ್ಲಿಗೆ 2019 ಇನ್ನೇನು ಕೊನೆಗೊಳ್ಳಲಿದೆ ಎನ್ನುವಾಗಲೇ ಇಬ್ಬರು ಸಂತ ಶ್ರೇಷ್ಠರ ನಿರ್ಗಮನವಾಗಿದೆ. ಈ ವರ್ಷದ ಆರಂಭದಲ್ಲಿ (ಜನವರಿ 21) ನಡೆದಾಡುವ ದೇವರೆಂದೇ ಪರಿಗಣಿತರಾಗಿದ್ದ ಸಿದ್ದಗಂಗಾ ಶ್ರೀಗಳು ಶಿವೈಕ್ಯರಾಗಿದ್ದರು. ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ವರ್ಷಾಂತ್ಯದಲ್ಲಿ ಹರಿ ಪಾದ ಸೇರಿದ್ದಾರೆ. 2019ನೇ ವರ್ಷ ಧಾರ್ಮಿಕ ಕ್ಷೇತ್ರದ ಅಪ್ರತಿಮರನ್ನಷ್ಟೇ ಅಲ್ಲ, ರಾಷ್ಟ್ರ ರಾಜಕಾರಣದ ಮೇರು ವ್ಯಕ್ತಿತ್ವಗಳು, ಉತ್ತಮ ಅಧಿಕಾರಿ ಗಳೆನಿಸಿಕೊಂಡಿದ್ದವರು, ಹೆಸರಾಂತ ಉದ್ಯಮಿಗಳಿಗೂ ಸಾವನ್ನು ತೋರಿದ ವರ್ಷ. ಧಾರ್ಮಿಕ:…

ಮೈಸೂರಲ್ಲಿ ಪೇಜಾವರ ಶ್ರೀಗಳ ಕೊನೇ ಚಾತುರ್ಮಾಸ್ಯ ನೆನಪು
ಮೈಸೂರು

ಮೈಸೂರಲ್ಲಿ ಪೇಜಾವರ ಶ್ರೀಗಳ ಕೊನೇ ಚಾತುರ್ಮಾಸ್ಯ ನೆನಪು

December 30, 2019

ಮೈಸೂರು,ಡಿ.29- ಪೇಜಾವರ ಮಠದ ವಿಶ್ವೇಶತೀರ್ಥ ಪಾದಂಗಳ ಶ್ರೀಗಳು ತಮ್ಮ ಕಡೆಯ ಚಾತುರ್ಮಾಸ್ಯದ ವ್ರತವನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಸಿದ್ದು ಇನ್ನು ನೆನಪು ಮಾತ್ರ. ಅವರೇ ಅಧ್ಯಕ್ಷರಾಗಿದ್ದ ಮೈಸೂರಿನ ಸರಸ್ವತಿಪುರಂನಲ್ಲಿ ರುವ ಕೃಷ್ಣಧಾಮದಲ್ಲಿ ಇಂದು ನೀರವ ಮೌನ ಆವರಿಸಿದೆ. ಇದೇ ಸ್ಥಳದಲ್ಲಿ ಅವರು ಮೂರು ಬಾರಿ ಚಾತುರ್ಮಾಸ್ಯ ವ್ರತ ಆಚರಿಸಿದ್ದರು. ಆ ಮೂರು ಬಾರಿಯೂ ನಾಲ್ಕು ತಿಂಗಳ ಕಾಲ ಮೈಸೂರಿನಲ್ಲಿದ್ದುಕೊಂಡೇ ವ್ರತದ ಜೊತೆ ಕೃಷ್ಣನ ಆರಾಧನೆ ಮಾಡುತ್ತಾ ಜನರಿಗೆ ಉಪನ್ಯಾಸಗಳನ್ನು ನೀಡಿದ್ದರು. ಅವರ ನೆಚ್ಚಿನ ತಾಣಗಳಲ್ಲಿ ಮೈಸೂರು ಒಂದಾಗಿದೆ….

ಕುವೆಂಪುಗೆ ನೊಬೆಲ್ ಪ್ರಶಸ್ತಿ ಸಿಗಬೇಕಿತ್ತು
ಮೈಸೂರು

ಕುವೆಂಪುಗೆ ನೊಬೆಲ್ ಪ್ರಶಸ್ತಿ ಸಿಗಬೇಕಿತ್ತು

December 30, 2019

ಮೈಸೂರು,ಡಿ.29(ಆರ್‍ಕೆಬಿ)- ಕುವೆಂಪು ಅವರಿಗೆ ಅಂದೇ ನೊಬೆಲ್ ಪುರಸ್ಕಾರ ಸಿಗಬೇಕಿತ್ತು. ಆದರೆ ಅವರ ಕಾವ್ಯ, ಬರಹ ಗಳು ಇಂಗ್ಲಿಷ್ ಭಾಷೆಗೆ ಭಾಷಾಂತರ ಗೊಳ್ಳದಿರುವುದು ಅವರಿಗೆ ನೊಬೆಲ್ ಸಿಗದಿ ರಲು ಕಾರಣವಾಯಿತು. ಅಂದೇ ಅವರ ಕಾವ್ಯ, ಬರಹಗಳು ಭಾಷಾಂತರಗೊಂಡಿ ದ್ದರೆ, ರವೀಂದ್ರನಾಥ್ ಠಾಗೂರ್ ಅವರಿಗಿಂತ ಮೊದಲೇ ಕುವೆಂಪು ಅವರಿಗೆ ನೊಬೆಲ್ ಪ್ರಶಸ್ತಿ ದೊರೆಯತ್ತಿತ್ತು ಎಂದು ಬೆಂಗಳೂ ರಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ. ಬಸವರಾಜ ಕಲ್ಗುಡಿ ಅಭಿಪ್ರಾಯಪಟ್ಟರು. ಕುವೆಂಪು ಅವರ116ನೇ ಜನ್ಮ ದಿನಾ ಚರಣೆ ಅಂಗವಾಗಿ ಮೈಸೂರು ವಿಶ್ವವಿದ್ಯಾ ನಿಲಯದ…

ಇಂದಿನ ಸಾಮಾಜಿಕ ತಲ್ಲಣಗಳ ಬಗ್ಗೆ   ಅಂದೇ ತಮ್ಮ ಕಾವ್ಯಗಳಲ್ಲಿ ತಿಳಿಸಿದ್ದ ಕುವೆಂಪು
ಮೈಸೂರು

ಇಂದಿನ ಸಾಮಾಜಿಕ ತಲ್ಲಣಗಳ ಬಗ್ಗೆ  ಅಂದೇ ತಮ್ಮ ಕಾವ್ಯಗಳಲ್ಲಿ ತಿಳಿಸಿದ್ದ ಕುವೆಂಪು

December 30, 2019

ಮೈಸೂರು,ಡಿ.29(ಆರ್‍ಕೆಬಿ)-ಇತ್ತೀಚಿನ ಸಾಮಾಜಿಕ ವೈಪರೀತ್ಯಗಳಿಗೆ ಕುವೆಂಪು ಸಾಹಿತ್ಯ ಪರಿಹಾರವಾಗಿದೆ. ಪ್ರಸ್ತುತ ಸಾಮಾ ಜಿಕ ಸಮಸ್ಯೆಗಳ ಬಗ್ಗೆ ಕುವೆಂಪು ತಮ್ಮ ಕಾವ್ಯ, ಬರಹಗಳ ಮೂಲಕ ಅಂದೇ ಹೊರ ಹಾಕಿ ದ್ದರು ಎಂದು ಮಹಾರಾಜ ಕಾಲೇಜು ಪ್ರಾಧ್ಯಾ ಪಕ ಟಿ.ಕೆ.ಕೆಂಪೇಗೌಡ ಅಭಿಪ್ರಾಯಪಟ್ಟರು. ಮೈಸೂರಿನ ಗನ್‍ಹೌಸ್ ಬಳಿಯ ವಿಶ್ವ ಮಾನವ ಉದ್ಯಾನವನದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆ ಅಂಗವಾಗಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿ ಷತ್ತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಬಳಿಕ ಅವರು ಮಾತನಾಡಿದರು. ಪ್ರಸ್ತುತ ಸಂದರ್ಭದಲ್ಲಿ ನಡೆಯುತ್ತಿರುವ…

ಎರಡು ದಿನಗಳ ಪಕ್ಷಿ ಉತ್ಸವಕ್ಕೆ ತೆರೆ
ಮೈಸೂರು

ಎರಡು ದಿನಗಳ ಪಕ್ಷಿ ಉತ್ಸವಕ್ಕೆ ತೆರೆ

December 30, 2019

ಮೈಸೂರು,ಡಿ.29(ಎಂಟಿವೈ)- ಮಾಗಿ ಉತ್ಸವದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಎರಡು ದಿನಗಳ ಪಕ್ಷಿ ಉತ್ಸವದಲ್ಲಿ ಪಾಲ್ಗೊಂ ಡಿದ್ದ ಪಕ್ಷಿ ಪ್ರಿಯರು ನಾನಾ ಬಗೆಯ ಪಕ್ಷಿಗಳ ವೀಕ್ಷಿಸಿ, ಅವುಗಳ ಜೀವನ ಕ್ರಮದ ಬಗ್ಗೆ ಮಾಹಿತಿ ಪಡೆದರು. ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ ಹಾಗೂ ಮೃಗಾಲಯದ ಸಂಯುಕ್ತಾಶ್ರಯದಲ್ಲಿ ನಡೆಸಿದ `ಪಕ್ಷಿ ಉತ್ಸವ’ದಲ್ಲಿ ಬೆಂಗಳೂರು, ಕೊಡಗು, ಚಾಮ ರಾಜನಗರ, ಮಂಡ್ಯ ಸೇರಿದಂತೆ ವಿವಿಧೆಡೆ ಯಿಂದ ನೂರಾರು ಮಂದಿ ಪಾಲ್ಗೊಂಡಿ ದ್ದರು. ಉತ್ಸವದ ಮೊದಲ ದಿನವಾದ ಶನಿ ವಾರ ಪಕ್ಷಿಗಳ ಸಂರಕ್ಷಣೆಯ ಬಗ್ಗೆ ತಜ್ಞ…

1 89 90 91 92 93 330
Translate »