Tag: Mysore

ದಸರಾ ವಸ್ತು ಪ್ರದರ್ಶನಕ್ಕೆ ತೆರೆ
ಮೈಸೂರು

ದಸರಾ ವಸ್ತು ಪ್ರದರ್ಶನಕ್ಕೆ ತೆರೆ

December 29, 2019

ಮೈಸೂರು,ಡಿ.28(ಎಸ್‍ಬಿಡಿ)- ದಸರಾ ವಸ್ತು ಪ್ರದರ್ಶನಕ್ಕೆ ಶುಕ್ರವಾರವೇ ತೆರೆಬಿದ್ದಿದೆ. ಕ್ರಿಸ್‍ಮಸ್ ಹಾಗೂ ಹೊಸ ವರ್ಷಾ ಚರಣೆ ಹಿನ್ನೆಲೆಯಲ್ಲಿ ಹೆಚ್ಚು ಜನ ಭೇಟಿ ನೀಡುವುದರಿಂದ 9 ದಿನಗಳ ಕಾಲ ದಸರಾ ವಸ್ತು ಪ್ರದರ್ಶನ ಮುಂದೂಡಲು ಅನುಮತಿ ಕೋರಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ, ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಆದರೆ ಸರ್ಕಾರದಿಂದ ಯಾವುದೇ ಮಾಹಿತಿ ಬಾರದ ಹಿನ್ನೆಲೆಯಲ್ಲಿ ಪೂರ್ವ ನಿಗದಿತ ಅಧಿಕೃತ ದಿನ(ಡಿ.27)ದಂದೇ ವಸ್ತು ಪ್ರದರ್ಶನವನ್ನು ಮುಕ್ತಾಯಗೊಳಿಸಲಾಯಿತು ಎಂದು ಪ್ರಾಧಿ ಕಾರದ ಸಿಇಓ ಗಿರೀಶ್ ಸ್ಪಷ್ಟಪಡಿಸಿದ್ದಾರೆ. ಪ್ರವಾಸಿಗರಿಗೆ ನಿರಾಶೆ: ದಸರಾ ವಸ್ತುಪ್ರದ…

ಎರಡು ದಿನಗಳ ಪಕ್ಷಿ ಉತ್ಸವಕ್ಕೆ ಚಾಲನೆ
ಮೈಸೂರು

ಎರಡು ದಿನಗಳ ಪಕ್ಷಿ ಉತ್ಸವಕ್ಕೆ ಚಾಲನೆ

December 29, 2019

ಮೈಸೂರು,ಡಿ.28(ಎಂಟಿವೈ)-ಪಕ್ಷಿ ವೀಕ್ಷಣೆ ಹವ್ಯಾಸ ಬೆಳೆಸಿಕೊಂಡು, ಅಳಿವಿ ನಂಚಿನಲ್ಲಿರುವ ಪಕ್ಷಿ ಸಂಕುಲ ಸಂರಕ್ಷಣೆಗೆ ಕೈಜೋಡಿಸಬೇಕೆಂದು ಜಿಲ್ಲಾಧಿಕಾರಿ ಅಭಿ ರಾಮ್ ಜಿ.ಶಂಕರ್ ಮನವಿ ಮಾಡಿದ್ದಾರೆ. ಮಾಗಿ ಉತ್ಸವದ ಹಿನ್ನೆಲೆಯಲ್ಲಿ ಜಿಲ್ಲಾ ಡಳಿತ, ಅರಣ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಮೃಗಾಲಯದ ಸಂಯು ಕ್ತಾಶ್ರಯದಲ್ಲಿ ಮೃಗಾಲಯದ ಸಭಾಂಗಣ ದಲ್ಲಿ ಆಯೋಜಿಸಿದ್ದ ಎರಡು ದಿನಗಳ `ಪಕ್ಷಿ ಉತ್ಸವ’ ಕಾರ್ಯಕ್ರಮವನ್ನು ಶನಿವಾರ ಬೆಳಿಗ್ಗೆ ಉದ್ಘಾಟಿಸಿ ಮಾತನಾಡಿದ ಅವರು, ಮಾಗಿ ಉತ್ಸವದ ಹಿನ್ನೆಲೆಯಲ್ಲಿ ಎರಡನೇ ವರ್ಷದ ಪಕ್ಷಿಗಳ ಹಬ್ಬ ಆಯೋಜಿಸಿರುವುದು ಶ್ಲಾಘನೀಯ. ಎರಡು ದಿನಗಳ ಕಾಲ…

ಕಪಾಲಿ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಿಸಿದರೆ ತಪ್ಪೇನು?
ಮೈಸೂರು

ಕಪಾಲಿ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಿಸಿದರೆ ತಪ್ಪೇನು?

December 29, 2019

ಮೈಸೂರು, ಡಿ.28(ಎಂಟಿವೈ)- ಬಿಜೆಪಿ ನಾಯಕರು ವಿಷಮಯ ಮನಸ್ಥಿತಿಯಿಂದ ಹೊರಬಂದು ಹೃದಯ ವೈಶಾಲ್ಯತೆಯಿಂದ ಸರ್ವಧರ್ಮಗಳನ್ನು ಕಾಣುವುದರೊಂದಿಗೆ ಕೋಮುಸೌಹಾರ್ದ ನೆಲೆಸಲು ಸಹಕರಿಸಬೇಕು ಎಂದು ಮಾಜಿ ಸಂಸದ ಆರ್.ಧ್ರ್ರುವನಾರಾಯಣ್ ಸಲಹೆ ನೀಡಿದ್ದಾರೆ. ಮೈಸೂರು ಜಲದರ್ಶಿನಿ ಅತಿಥಿಗೃಹದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಸಮಾಜದಲ್ಲಿ ಅಶಾಂತ ವಾತಾವರಣ ಸೃಷ್ಟಿಸಿ, ರಾಜಕೀಯ ಲಾಭ ಮಾಡಿಕೊಳ್ಳುವ ಸಂಚು ನಡೆಸು ತ್ತಿದ್ದಾರೆ. ಸರ್ವಧರ್ಮಗಳ ನೆಲೆಬೀಡಾದ ಭಾರತದಲ್ಲಿ ಜನ ಸೌಹಾರ್ದತೆಯಿಂದ ಸಹಬಾಳ್ವೆ ನಡೆಸುತ್ತಿದ್ದಾರೆ. ಧರ್ಮಗಳ ನಡುವೆ ಕಂದಕ ನಿರ್ಮಾಣ ಮಾಡುವ ಬದಲು ಹಿಂದೂ ಸಮಾಜದ ಬಿರುಕುಗಳನ್ನು…

ಪತ್ರಕರ್ತರಿಗೆ ಆರೋಗ್ಯ ತಪಾಸಣಾ ಶಿಬಿರ
ಮೈಸೂರು

ಪತ್ರಕರ್ತರಿಗೆ ಆರೋಗ್ಯ ತಪಾಸಣಾ ಶಿಬಿರ

December 29, 2019

ಮೈಸೂರು,ಡಿ.28(ಪಿಎಂ)- ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಕರ್ತರು ಹಾಗೂ ಅವರ ಕುಟುಂಬ ದವರಿಗೆ ಹಮ್ಮಿಕೊಂಡಿದ್ದ ಉಚಿತ ಆಯು ರ್ವೇದ ಆರೋಗ್ಯ ತಪಾಸಣಾ ಶಿಬಿರವನ್ನು ಶಾಸಕ ಎಲ್.ನಾಗೇಂದ್ರ ಉದ್ಘಾಟಿಸಿದರು. ಆಯುರ್ವೇದ ಸಂಶೋಧನಾ ಕೇಂದ್ರ, ಜಿಲ್ಲಾ ಪತ್ರಕರ್ತರ ಸಂಘದ ಜಂಟಿ ಆಶ್ರಯ ದಲ್ಲಿ ರಾಷ್ಟ್ರೀಯ ಆಯುಷ್ ಅಭಿಯಾನ ಹಾಗೂ ರಾಷ್ಟ್ರೀಯ ಆಯುರ್ವೇದ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಆರೋಗ್ಯ ತಪಾ ಸಣಾ ಶಿಬಿರಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಎಲ್.ನಾಗೇಂದ್ರ, ಪತ್ರಕರ್ತರು ಒತ್ತಡದಲ್ಲಿ ಕಾರ್ಯನಿರ್ವಹಿಸುವುದು ಅನಿವಾರ್ಯ. ಹೀಗಾಗಿ ಅನೇಕ ಆರೋಗ್ಯ…

ಕೆ.ಆರ್.ಸಂಚಾರ ಠಾಣೆಯಲ್ಲಿ ಅರಿವು ಕೇಂದ್ರ, ಸಿಬ್ಬಂದಿ ವಿಶ್ರಾಂತಿ ಕೊಠಡಿ ಉದ್ಘಾಟನೆ
ಮೈಸೂರು

ಕೆ.ಆರ್.ಸಂಚಾರ ಠಾಣೆಯಲ್ಲಿ ಅರಿವು ಕೇಂದ್ರ, ಸಿಬ್ಬಂದಿ ವಿಶ್ರಾಂತಿ ಕೊಠಡಿ ಉದ್ಘಾಟನೆ

December 29, 2019

ಮೈಸೂರು,ಡಿ.28(ಆರ್‍ಕೆ)-ಮೈಸೂರು ಕೆ.ಆರ್. ಸಂಚಾರ ಠಾಣೆಯಲ್ಲಿ ಸಂಚಾರ ನಿಯಮಗಳ ಅರಿವು ಕೇಂದ್ರ ಹಾಗೂ ಸಿಬ್ಬಂದಿ ವಿಶ್ರಾಂತಿ ಕೊಠಡಿಯನ್ನು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಶನಿವಾರ ಉದ್ಘಾಟಿಸಿದರು. ಸಂಚಾರ ನಿಯಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಜೆಎಲ್‍ಬಿ ರಸ್ತೆಯ ಕೆ.ಆರ್. ಸಂಚಾರ ಠಾಣೆ ಆವರಣದಲ್ಲಿ ಅರಿವು ಕೇಂದ್ರವನ್ನು ಆರಂಭಿಸಲಾಗಿದೆ. ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವ ಬದಲು ಸಂಚಾರ ಪೊಲೀಸರು ಗುಲಾಬಿ ಹೂ ನೀಡಿ ನಿಯಮ ಪಾಲಿಸುವಂತೆ ಅರಿವು ಮೂಡಿಸುವುದು, ಇತರರ ಪ್ರಾಣ ಉಳಿಸುವ ಸಂಬಂಧವೂ ಜಾಗೃತಿ ಮೂಡಿಸುವ ದೃಶ್ಯಾ ವಳಿಯ…

ಕ್ರೀಡಾ ಸ್ಫೂರ್ತಿ ಮೆರೆದ ಜಿಪಂ ಸದಸ್ಯರು, ಸಿಬ್ಬಂದಿ ವರ್ಗ
ಮೈಸೂರು

ಕ್ರೀಡಾ ಸ್ಫೂರ್ತಿ ಮೆರೆದ ಜಿಪಂ ಸದಸ್ಯರು, ಸಿಬ್ಬಂದಿ ವರ್ಗ

December 29, 2019

ಮೈಸೂರು, ಡಿ.28(ಪಿಎಂ)- ಮೈಸೂರು ಜಿಲ್ಲಾ ಪಂಚಾಯಿತಿ ಸದಸ್ಯರು, ಸಿಬ್ಬಂದಿ ಗ್ರಾಮೀಣ ಕ್ರೀಡೆ ಗಳು ಸೇರಿದಂತೆ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ಕ್ರೀಡಾ ಸ್ಫೂರ್ತಿ ಮೆರೆದರು. ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣ ದಲ್ಲಿ ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಂಟಿ ಆಶ್ರಯದಲ್ಲಿ ಶನಿವಾರ ಹಮ್ಮಿ ಕೊಂಡಿದ್ದ ಕ್ರೀಡಾಕೂಟದಲ್ಲಿ ಸದಸ್ಯರು ಹಾಗೂ ಸಿಬ್ಬಂದಿ ಸೇರಿದಂತೆ 200ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಪುರುಷರಿಗೆ ಕ್ರಿಕೆಟ್, ವಾಲಿಬಾಲ್, 100 ಮೀ. ಓಟ, ಶಾಟ್‍ಫುಟ್, ಹಗ್ಗಿ-ಜಗ್ಗಾಟ, ಸ್ಲೋ ಸೈಕಲ್ ರೇಸ್,…

ಜೆಎಸ್‍ಎಸ್ ವಿಜ್ಞಾನ, ತಂತ್ರಜ್ಞಾನ ವಿವಿಯಲ್ಲಿ 415 ಮಂದಿಗೆ ನಾನಾ ಪದವಿ ಪ್ರದಾನ
ಮೈಸೂರು

ಜೆಎಸ್‍ಎಸ್ ವಿಜ್ಞಾನ, ತಂತ್ರಜ್ಞಾನ ವಿವಿಯಲ್ಲಿ 415 ಮಂದಿಗೆ ನಾನಾ ಪದವಿ ಪ್ರದಾನ

December 29, 2019

ಮೈಸೂರು,ಡಿ.28(ಎಂಕೆ)- ಜೆಎಸ್‍ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾ ನಿಲಯದ ದ್ವಿತೀಯ ಘಟಿಕೋತ್ಸವದಲ್ಲಿ 2018-19ನೇ ಸಾಲಿನ 415 ವಿದ್ಯಾರ್ಥಿಗಳಿಗೆ ನಾನಾ ಪದವಿ ಪ್ರದಾನ ಮಾಡಲಾಯಿತು. ಮೈಸೂರಿನ ಮಾನಸಗಂಗೋತ್ರಿಯ ಲ್ಲಿರುವ ಎಸ್‍ಜೆಸಿಇ ಆವರಣದಲ್ಲಿ ಆಯೋ ಜಿಸಲಾಗಿದ್ದ ದ್ವಿತೀಯ ಘಟಿಕೋತ್ಸವ ಸಮಾರಂಭದಲ್ಲಿ ಎಂ.ಟೆಕ್‍ನಲ್ಲಿ 167, ಎಂಎಸ್‍ಸಿ(ಕೆಮಿಸ್ಟ್ರಿ)ಯಲ್ಲಿ 15, ಎಂಸಿಎ ನಲ್ಲಿ 68, ಎಂಬಿಎನಲ್ಲಿ 107, ಎಂಬಿಎ (ಕಾರ್ಪೋರೇಟ್ ಫೈನಾನ್ಸ್)ನಲ್ಲಿ 37, ಎಂಬಿಎ(ರೀಟೇಲ್ ಮ್ಯಾನೇಜ್‍ಮೆಂಟ್) ನಲ್ಲಿ 21 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ವಿವಿಧ ವಿಭಾಗದ 17 ಮಂದಿ ವಿದ್ಯಾರ್ಥಿಗಳು ಪ್ರಥಮ ರ್ಯಾಂಕ್…

ಗ್ರಾಮೀಣ ಪ್ರದೇಶದಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆಯ ಅರಿವೇ ಇಲ್ಲ
ಮೈಸೂರು

ಗ್ರಾಮೀಣ ಪ್ರದೇಶದಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆಯ ಅರಿವೇ ಇಲ್ಲ

December 29, 2019

ಮೈಸೂರು,ಡಿ.28(ಎಸ್‍ಪಿಎನ್)-ಗ್ರಾಹಕ ಸಂರಕ್ಷಣಾ ಕಾಯ್ದೆ ನಗರ ಪ್ರದೇಶ ದಲ್ಲಿ ವ್ಯಾಪಕ ಬಳಕೆಯಾಗುತ್ತಿದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಇದರ ಜಾಗೃತಿ ಇಲ್ಲದಂತಾಗಿ, ಬಳಕೆದಾರರೇ ಇಲ್ಲದಂತಾ ಗಿದೆ ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯ ಸದಸ್ಯ ಎಂ.ಸಿ. ದೇವಕುಮಾರ್ ಬೇಸರ ವ್ಯಕ್ತಪಡಿಸಿದರು. ಮೈಸೂರು ವಿನೋಬಾ ರಸ್ತೆಯ ನಂಜ ರಾಜ ಬಹದ್ದೂರ್ ಛತ್ರದ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಸಂಯು ಕ್ತಾಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ-2019ರ ಕಾರ್ಯ ಕ್ರಮದಲ್ಲಿ…

ಡೀನ್ ನೇಮಕ, ಸಮರ್ಪಕ ಮೂಲ ಸೌಕರ್ಯಕ್ಕೆ ಒತ್ತಾಯಿಸಿ ಕಾವಾ ವಿದ್ಯಾರ್ಥಿಗಳ ಪ್ರತಿಭಟನೆ
ಮೈಸೂರು

ಡೀನ್ ನೇಮಕ, ಸಮರ್ಪಕ ಮೂಲ ಸೌಕರ್ಯಕ್ಕೆ ಒತ್ತಾಯಿಸಿ ಕಾವಾ ವಿದ್ಯಾರ್ಥಿಗಳ ಪ್ರತಿಭಟನೆ

December 29, 2019

ಮೈಸೂರು,ಡಿ.28(ಪಿಎಂ)-ಖಾಯಂ ಡೀನ್ ನೇಮಕ ಮಾಡಬೇಕು ಹಾಗೂ ಸಮರ್ಪಕ ಮೂಲ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜು (ಕಾವಾ) ವಿದ್ಯಾರ್ಥಿಗಳು ಶನಿವಾರ ದಿಢೀರ್ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಿಗ್ಗೆ ಕಾಲೇಜು ಆರಂಭವಾಗುವ ವೇಳೆಗೆ ಪ್ರತಿಭಟ ನೆಗೆ ಇಳಿದ ವಿದ್ಯಾರ್ಥಿಗಳು, ಕಾಲೇಜಿನ ಎಲ್ಲಾ ತರಗತಿಗಳ ಬೀಗದ ಕೈಗಳನ್ನು ಇಟ್ಟಿರುವ ಕಚೇರಿ ಕೊಠಡಿಯ ಒಳ ಹೋಗ ದಂತೆ ಬಾಗಿಲಿಗೆ ಹಳೇ ಕುರ್ಚಿಗಳು, ಏಣಿ ಹಾಗೂ ಇಟ್ಟಿಗೆ ಸೇರಿದಂತೆ ವಸ್ತುಗಳನ್ನು ಹಾಕಿ, ದಿಗ್ಬಂಧನ ವಿಧಿಸಿದರು. ಕನ್ನಡ ಮತ್ತು…

‘ಜೀವನ ಕೌಶಲ್ಯಗಳು’ ಕಾರ್ಯಾಗಾರಕ್ಕೆ ಚಾಲನೆ
ಮೈಸೂರು

‘ಜೀವನ ಕೌಶಲ್ಯಗಳು’ ಕಾರ್ಯಾಗಾರಕ್ಕೆ ಚಾಲನೆ

December 29, 2019

ಮೈಸೂರು,ಡಿ.28-ನಗರದ ಗೌರಿಶಂಕರ ಬಡಾವಣೆಯ ವಿಶ್ವಾಸ ಹಾಗೂ ಬೆಂಗಳೂ ರಿನ ನಿಮ್ಹಾನ್ಸ್ ಆಸ್ಪತ್ರೆ ಹಾಗೂ ಯುವ ಸ್ಪಂದನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಜೀವನ ಕೌಶಲ್ಯಗಳು ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ಜೀವನ ಕೌಶಲ್ಯಗಳು ವಿಭಾಗದ ಸಂಯೋಜಕಿ ಸ್ವಾತಿ ಶಹಾಣಿ ಸಸಿಗೆ ನೀರೆರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಇಂದು ಯುವಜನರು ಮಾನಸಿಕ ಒತ್ತಡಗಳಿಗೆ ಸಿಲುಕಿ, ದುಶ್ಚಟಗಳಿಗೆ ಬಲಿಯಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿರುವುದು ದುರಂತದÀ ಸಂಗತಿ ಎಂದರು. ಕನಕಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ…

1 91 92 93 94 95 330
Translate »