‘ಜೀವನ ಕೌಶಲ್ಯಗಳು’ ಕಾರ್ಯಾಗಾರಕ್ಕೆ ಚಾಲನೆ
ಮೈಸೂರು

‘ಜೀವನ ಕೌಶಲ್ಯಗಳು’ ಕಾರ್ಯಾಗಾರಕ್ಕೆ ಚಾಲನೆ

December 29, 2019

ಮೈಸೂರು,ಡಿ.28-ನಗರದ ಗೌರಿಶಂಕರ ಬಡಾವಣೆಯ ವಿಶ್ವಾಸ ಹಾಗೂ ಬೆಂಗಳೂ ರಿನ ನಿಮ್ಹಾನ್ಸ್ ಆಸ್ಪತ್ರೆ ಹಾಗೂ ಯುವ ಸ್ಪಂದನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಜೀವನ ಕೌಶಲ್ಯಗಳು ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ಜೀವನ ಕೌಶಲ್ಯಗಳು ವಿಭಾಗದ ಸಂಯೋಜಕಿ ಸ್ವಾತಿ ಶಹಾಣಿ ಸಸಿಗೆ ನೀರೆರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಇಂದು ಯುವಜನರು ಮಾನಸಿಕ ಒತ್ತಡಗಳಿಗೆ ಸಿಲುಕಿ, ದುಶ್ಚಟಗಳಿಗೆ ಬಲಿಯಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿರುವುದು ದುರಂತದÀ ಸಂಗತಿ ಎಂದರು.

ಕನಕಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಮಂಜುಳಾ ದೇವಿಯವರು ಮಾತನಾಡಿ, ಪ್ರಸ್ತುತ ಶಿಕ್ಷಣದ ವ್ಯವಸ್ಥೆ ಪಠ್ಯ ಕೇಂದ್ರಕ್ಕೆ ಹೆಚ್ಚು ಮೀಸಲಾಗಿದ್ದು, ಇದರ ಜೊತೆಗೆ ಸಹ ಪಠ್ಯಗಳಲ್ಲೂ ಕೂಡ ಸಕ್ರಿಯವಾಗಿ ಭಾಗವಹಿಸುವ ಅವಕಾಶವನ್ನು ಹೊಂದಬೇಕು ಎಂದರು. ಕೊಡಗು ಜಿಲ್ಲಾ ಯುವ ಸ್ಪಂದನ ಕೇಂದ್ರದ ಜೀವನ ಕೌಶಲ್ಯಗಳು ತರಬೇತಿದಾರ ಪುಟ್ಟರಾಜು ಮಾತನಾಡಿದರು. ಸಾವಯವ ಕೃಷಿಕ ಆಲೂರು ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಶಾರದಾ ವಿಲಾಸ ಕಾಲೇಜಿನ ಕನ್ನಡ ಉಪನ್ಯಾಸಕ ರಾಜೇಂದ್ರಪ್ರಸಾದ್ ಹೊನ್ನಲಗೆರೆ, ಯುವ ಸ್ಪಂದನ ಕ್ಷೇತ್ರದ ಸಂಪರ್ಕಾಧಿಕಾರಿ ಬಾಲಪ್ಪ, ಶಾಂತಿಪ್ರಸಾದ್ ಜೈನ್ ಇತರÀರಿದ್ದು, ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.

Translate »