ಜೆಎಸ್‍ಎಸ್ ವಿಜ್ಞಾನ, ತಂತ್ರಜ್ಞಾನ ವಿವಿಯಲ್ಲಿ 415 ಮಂದಿಗೆ ನಾನಾ ಪದವಿ ಪ್ರದಾನ
ಮೈಸೂರು

ಜೆಎಸ್‍ಎಸ್ ವಿಜ್ಞಾನ, ತಂತ್ರಜ್ಞಾನ ವಿವಿಯಲ್ಲಿ 415 ಮಂದಿಗೆ ನಾನಾ ಪದವಿ ಪ್ರದಾನ

December 29, 2019

ಮೈಸೂರು,ಡಿ.28(ಎಂಕೆ)- ಜೆಎಸ್‍ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾ ನಿಲಯದ ದ್ವಿತೀಯ ಘಟಿಕೋತ್ಸವದಲ್ಲಿ 2018-19ನೇ ಸಾಲಿನ 415 ವಿದ್ಯಾರ್ಥಿಗಳಿಗೆ ನಾನಾ ಪದವಿ ಪ್ರದಾನ ಮಾಡಲಾಯಿತು.

ಮೈಸೂರಿನ ಮಾನಸಗಂಗೋತ್ರಿಯ ಲ್ಲಿರುವ ಎಸ್‍ಜೆಸಿಇ ಆವರಣದಲ್ಲಿ ಆಯೋ ಜಿಸಲಾಗಿದ್ದ ದ್ವಿತೀಯ ಘಟಿಕೋತ್ಸವ ಸಮಾರಂಭದಲ್ಲಿ ಎಂ.ಟೆಕ್‍ನಲ್ಲಿ 167, ಎಂಎಸ್‍ಸಿ(ಕೆಮಿಸ್ಟ್ರಿ)ಯಲ್ಲಿ 15, ಎಂಸಿಎ ನಲ್ಲಿ 68, ಎಂಬಿಎನಲ್ಲಿ 107, ಎಂಬಿಎ (ಕಾರ್ಪೋರೇಟ್ ಫೈನಾನ್ಸ್)ನಲ್ಲಿ 37, ಎಂಬಿಎ(ರೀಟೇಲ್ ಮ್ಯಾನೇಜ್‍ಮೆಂಟ್) ನಲ್ಲಿ 21 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ವಿವಿಧ ವಿಭಾಗದ 17 ಮಂದಿ ವಿದ್ಯಾರ್ಥಿಗಳು ಪ್ರಥಮ ರ್ಯಾಂಕ್ ಪಡೆದರು, 5 ಮಂದಿ ವಿದ್ಯಾರ್ಥಿಗಳು ದತ್ತಿ ಬಹುಮಾನಗಳನ್ನು ಪಡೆದುಕೊಂಡರು.

ಎಂ.ಟೆಕ್‍ನ ಅಟೋಮೊಟಿವ್ ಎಲೆ ಕ್ಟ್ರಾನಿಕ್ಸ್ ವಿಷಯದಲ್ಲಿ ಟಿ.ಎಲ್.ಪೂಜಾ, ಬಯೋ-ಮೆಡಿಕಲ್ ಸಿಂಗಲ್ ಪ್ರೋಸೆಸ್ ಅಂಡ್ ಇನ್ಸ್‍ಟ್ರುಮೆಂಟೇಷನ್‍ನಲ್ಲಿ ಬಿ.ರಮ್ಯ, ಕಂಪ್ಯೂಟರ್ ಇಂಜಿನಿಯರಿಂಗ್‍ನಲ್ಲಿ ಕೆ.ಎನ್. ನಮ್ರತ, ಡೇಟಾ ಸೈನ್ಸ್‍ನಲ್ಲಿ ವಿ.ಪ್ರಜ್ವಲ್, ಎನರ್ಜಿ ಸಿಸ್ಟಂ ಅಂಡ್ ಮ್ಯಾನೇಜ್ ಮೆಂಟ್‍ನಲ್ಲಿ ಎಂ.ಎಸ್.ಅನಂತಕೃಷ್ಣ, ಎನ್ವಿರಾನ್ಮೆಂಟಲ್ ಇಂಜನಿಯರಿಂಗ್‍ನಲ್ಲಿ ಪಿ.ಮಲ್ಲಿಕಾರ್ಜುನ್, ಇಂಡಸ್ಟ್ರೀಸ್ ಎಲೆಕ್ಟ್ರಾನಿ ಕ್ಸ್‍ನಲ್ಲಿ ಕೆ.ಪಿ.ತೇಜಸ್ವಿನಿ, ಇಂಡಸ್ಟ್ರಿಸ್ ಸ್ಟ್ರೆಟ್ರ್ಸ್‍ನಲ್ಲಿ ಆರ್.ಗಣೇಶ್ ನಾಯಕ್, ಇನ್ಫ್ರಾಸ್ಟ್ರಕ್ಚರ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್‍ಮೆಂಟ್‍ನಲ್ಲಿ ಕೆ.ದಿನೇಶ್, ಮೆಟೀರಿಯಲ್ ಸೈನ್ಸ್ ಅಂಡ್ ಇಂಜಿನಿ ಯರಿಂಗ್‍ನಲ್ಲಿ ಎಸ್.ಚೇತನ್‍ಕುಮಾರ್, ನೆಟ್‍ವರ್ಕಿಂಗ್ ಅಂಡ್ ಇಂಟರ್‍ನೆಟ್ ಇಂಜಿನಿಯರಿಂಗ್‍ನಲ್ಲಿ ಎಸ್.ಅಕ್ಷತಾ, ಸಾಫ್ಟ್‍ವೇರ್ ಇಂಜಿನಿಯರಿಂಗ್‍ನಲ್ಲಿ ಆರ್.ರಮ್ಯಶ್ರೀ, ಎಂಎಸ್‍ಸಿ ರಾಸಾಯನ ಶಾಸ್ತ್ರ ವಿಷಯದಲ್ಲಿ ಎಂ.ಹೇಮಾವತಿ, ಎಂಸಿಎ ವಿಭಾಗದಲ್ಲಿ ಎಂಅರುಣ್, ಎಂಬಿಎ ನಲ್ಲಿ ಪ್ರತೀಕಾ ಶೆಟ್ಟಿ, ಎಂಬಿಎ (ಕಾರ್ಪೋರೇಟ್ ಫೈನಾನ್ಸ್)ನಲ್ಲಿ ಎನ್.ಜೆ.ಅದ್ರೀಜಾ, ಎಂಬಿಎ (ರೀಟೇಲ್ ಮ್ಯಾನೇಜ್‍ಮೆಂಟ್)ನಲ್ಲಿ ಎಲ್.ಹರ್ಷಿತಾ ಪ್ರಥಮ ರ್ಯಾಂಕ್ ಪಡೆದರು.

ಈ ವೇಳೆ ಕಾರ್ಯಕ್ರಮವನ್ನು ಉದ್ಘಾ ಟಿಸಿದ ಕರ್ನಾಟಕ ಸರ್ಕಾರ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ರಾಜಕುಮಾರ್ ಖತ್ರಿ ಮಾತನಾಡಿ, ಶಿಕ್ಷಣವು ಜೀವನಕ್ಕೆ ತಯಾರಿ ಅಲ್ಲ. ಶಿಕ್ಷಣವೇ ಜೀವನವಾಗಿರಬೇಕು. ನಿರಂತರ ಕಲಿಕೆಯಲ್ಲಿ ತೊಡಗಿಕೊಳ್ಳಬೇಕು ಎಂದರು.

ಇಂಜಿನಿಯರಿಂಗ್ ಪದವೀಧರರಿಗೆ ಸಮಾಜದಲ್ಲಿ ಸಾಕಷ್ಟು ಅವಕಾಶಗಳಿವೆ. ಜೊತೆಗೆ ಸಾಮಾಜಿಕ ಜವಾಬ್ದಾರಿಗಳೂ ಇವೆ. ನೀವು ಕಂಡುಹಿಡಿಯುವ ತಂತ್ರ ಜ್ಞಾನದಿಂದ ಸಮಾಜಕ್ಕೆ ಉಪಯೋಗ ವಾಗಬೇಕು. ನೀವು ಪಡೆದಿರುವ ಪದವಿ ನಿಮ್ಮ ಮೇಲಿನ ಜವಾಬ್ದಾರಿಗಳ ಆರಂಭ ವಷ್ಟೆ. ಪದವಿ ಪಡೆದ ಮೇಲೆ ಏನು ಮಾಡು ತ್ತೀರ ಎಂಬುದು ನಿಮ್ಮ ಯಶಸ್ಸನ್ನು ನಿರ್ಧ ರಿಸುತ್ತದೆ ಎಂದು ತಿಳಿಸಿದರು. ಇಂದು ಕಾಲೇಜಿ ನಿಂದ ವಿದ್ಯಾರ್ಥಿಯಾಗಿ ಮಾತ್ರ ನಿರ್ಗಮಿ ಸುತ್ತಿದ್ದೀರಾ ಅಷ್ಟೆ. ಮುಂದೆಯೂ ಇಲ್ಲಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಕಾಲೇಜಿನೊಂದಿಗಿನ ಸಂಬಂಧವನ್ನು ಬಿಡದೆ ಮುಂದುವರೆಸಿಕೊಂಡು ಹೋಗಬೇಕು. ನಿಮ್ಮ ಕೆಲಸವನ್ನು ನೀವು ಮಾಡಬೇಕೇ ಹೊರತು ಫಲಿತಾಂಶದ ಬಗ್ಗೆ ಚಿಂತಿಸುತ್ತಾ ಕೂರಬಾರದು ಸಲಹೆ ನೀಡಿದರು.

ವೇದಿಕೆಯಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ಕುಲಪತಿ ಪೆÇ್ರ.ಎಲ್.ಜವಹರ್ ನೇಸನ್, ಕುಲಸಚಿವ ಪೆÇ್ರ.ಕೆ.ಎಸ್.ಲೋಕೇಶ್, ಪರೀಕ್ಷಾ ನಿಯಂತ್ರಣಾಧಿಕಾರಿ ಪೆÇ್ರ.ಕೆ.ಎನ್. ಉದಯಕುಮಾರ್, ತಾಂತ್ರಿಕ ಶಿಕ್ಷಣ ವಿಭಾಗದ ಸಲಹೆಗಾರ ಪೆÇ್ರ.ಎಂ.ಹೆಚ್.ಧನಂ ಜಯ ಮತ್ತಿತರರು ಉಪಸ್ಥಿತರಿದ್ದರು.

Translate »