Tag: Mysuru City Corporation

ಏ.1ರಿಂದ ಜು. 17ರವರೆಗೆ ಒಟ್ಟು 8.76 ಕೋಟಿ ರೂ. ತೆರಿಗೆ ಸಂಗ್ರಹ
ಮೈಸೂರು

ಏ.1ರಿಂದ ಜು. 17ರವರೆಗೆ ಒಟ್ಟು 8.76 ಕೋಟಿ ರೂ. ತೆರಿಗೆ ಸಂಗ್ರಹ

July 19, 2018

ಮೈಸೂರು: ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆ ವಸೂಲಾತಿಯನ್ನು ಮೈಸೂರು ಮಹಾನಗರಪಾಲಿಕೆ ಅಧಿಕಾರಿಗಳು ತೀವ್ರಗೊಳಿಸಿದ್ದಾರೆ. ಕುಡಿಯುವ ನೀರು, ಒಳಚರಂಡಿ, ಸ್ವಚ್ಛತೆ, ರಸ್ತೆ, ವಿದ್ಯುತ್ ಸಂಪರ್ಕ ಸೇರಿದಂತೆ ವಸತಿ ಬಡಾವಣೆಗಳಿಗೆ ಮೂಲಸೌಲಭ್ಯ ಒದಗಿಸುವುದರ ಜತೆಗೆ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಪಾಲಿಕೆಯು, ಅದಕ್ಕೆ ತಗಲುವ ವೆಚ್ಚ ಭರಿಸಲು ನಾಗರಿಕರಿಂದ ವಿವಿಧ ರೂಪದ ತೆರಿಗೆ ವಸೂಲಿ ಮಾಡದೇ ಅನ್ಯ ಮಾರ್ಗವಿಲ್ಲ. ಮೈಸೂರು ನಗರದಾದ್ಯಂತ ಆಸ್ತಿ ತೆರಿಗೆ ಪಾವತಿಸುವಂತೆ ಮಾಧ್ಯಮಗಳಲ್ಲಿ ಜಾಹೀರಾತು ಮೂಲಕ ನಗರಪಾಲಿಕೆಯು ಸೂಚನೆ ನೀಡಿದರೂ, ನಿರೀಕ್ಷಿತ ಮಟ್ಟದಲ್ಲಿ ಮಾಲೀಕರು ಸ್ಪಂದಿಸದ ಕಾರಣ…

ಕಂದಾಯ ರಶೀದಿ ಕಡ್ಡಾಯ ಮಾಡದೇ ಸಣ್ಣ, ಮಧ್ಯಮ ವರ್ಗದ ರಹದಾರಿ ಕಲ್ಪಿಸಲು ಸಂದೇಶ್ ಸ್ವಾಮಿ ಆಗ್ರಹ
ಮೈಸೂರು

ಕಂದಾಯ ರಶೀದಿ ಕಡ್ಡಾಯ ಮಾಡದೇ ಸಣ್ಣ, ಮಧ್ಯಮ ವರ್ಗದ ರಹದಾರಿ ಕಲ್ಪಿಸಲು ಸಂದೇಶ್ ಸ್ವಾಮಿ ಆಗ್ರಹ

July 19, 2018

ಮೈಸೂರು: ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಸಣ್ಣ ಹಾಗೂ ಮಧ್ಯಮ ವರ್ಗದ ಉದ್ದಿಮೆದಾರರಿಗೆ ಕಂದಾಯ ರಶೀದಿ ಕಡ್ಡಾಯ ಮಾಡದೇ ರಹದಾರಿ ಅಥವಾ ತಾತ್ಕಾಲಿಕ ರಹದಾರಿ ನೀಡಬೇಕೆಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ಆಗ್ರಹಿಸಿದ್ದಾರೆ. ಈ ಸಂಬಂಧ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿರುವ ಅವರು, ಉದ್ದಿಮೆ ರಹದಾರಿ ನೀಡುವಾಗ ಅಥವಾ ನವೀಕರಿಸುವಾಗ ಕಂದಾಯ ಪಾವತಿಯ ರಶೀದಿ ಅವಶ್ಯಕವೆಂದು ತಿಳಿಸಿ ಉದ್ದಿಮೆ ನವೀಕರಿಸಲು ಅಧಿಕಾರಿಗಳು ನಿರಾಕರಿಸುತ್ತಿ ರುವುದು ಕಂಡು ಬಂದಿದೆ ಎಂದಿದ್ದಾರೆ. ಮೈಸೂರು ನಗರದಲ್ಲಿ ಸುಮಾರು 2 ಲಕ್ಷದಷ್ಟು ಸಣ್ಣ, ಮಧ್ಯಮ…

ಸಾರ್ವಜನಿಕ ಸೇವಾ ರಸ್ತೆಯಲ್ಲಿ ತಲೆ ಎತ್ತಿವೆ `ನಿಗೂಢ’ ಮಳಿಗೆಗಳು!
ಮೈಸೂರು

ಸಾರ್ವಜನಿಕ ಸೇವಾ ರಸ್ತೆಯಲ್ಲಿ ತಲೆ ಎತ್ತಿವೆ `ನಿಗೂಢ’ ಮಳಿಗೆಗಳು!

July 17, 2018

ಮೈಸೂರು ಪಾಲಿಕೆ ಅಧಿಕಾರ ವರ್ಗಕ್ಕೆ ಇದರ ಬಗ್ಗೆ ಅರಿವಿಲ್ಲವಂತೆ! ಮೈಸೂರು: ಅತ್ತೆ ಕೊಟ್ಟ ಬಂಗಾರದ ಉಡುಗೊರೆಯನ್ನು ಅಳಿಯ ಬೇರೊಬ್ಬರಿಗೆ ದಾನ ಮಾಡಿದ ಎಂಬ ನಾಣ್ಣುಡಿಯಂತೆ, ಪರಿಸರವಾದಿಗಳು, ಸಾಮಾಜಿಕ ಕಾರ್ಯಕರ್ತರ ಹೋರಾಟದ ಫಲವಾಗಿ ಉಳಿದಿರುವ ಸಾರ್ವಜನಿಕ ಸೇವಾ ರಸ್ತೆಯಲ್ಲಿ, ಅನಧಿಕೃತ ಮಳಿಗೆಗಳ ನಿರ್ಮಾಣವಾಗುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹೌದು.. ಮೈಸೂರಿನ ಸಾಹುಕಾರ್ ಚನ್ನಯ್ಯ ರಸ್ತೆ, ಸರಸ್ವತಿಪುರಂ ಕೃಷ್ಣಧಾಮ ಮಂದಿರದ ಎದುರಿನ ಎಸ್‍ಬಿಐ ಪ್ರಾದೇಶಿಕ ಕಚೇರಿ ಪಕ್ಕದಲ್ಲಿನ ಸರ್ವೀಸ್ ರಸ್ತೆ ಮತ್ತೆ ಸಾರ್ವಜನಿಕರ ಕೈತಪ್ಪುವಂತಿದೆ. ರಾಜಕಾಲುವೆ ಪಕ್ಕದ ಈ ಸರ್ವಿಸ್…

ಮೈಸೂರು ಮೃಗಾಲಯದ ವಶಕ್ಕೆ ನೆನೆಗುದಿಗೆ ಬಿದ್ದಿದ್ದ ಅಕ್ವೇರಿಯಂ ಕಟ್ಟಡ
ಮೈಸೂರು

ಮೈಸೂರು ಮೃಗಾಲಯದ ವಶಕ್ಕೆ ನೆನೆಗುದಿಗೆ ಬಿದ್ದಿದ್ದ ಅಕ್ವೇರಿಯಂ ಕಟ್ಟಡ

July 15, 2018

ಮೈಸೂರು: ಮೈಸೂರಿನ ಕಾರಂಜಿಕೆರೆ ಬಳಿ ಕಳೆದ ಕೆಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬೃಹತ್ ಅಕ್ವೇರಿಯಂ ಕಟ್ಟಡವನ್ನು ಮೈಸೂರು ನಗರ ಪಾಲಿಕೆ, ಮೃಗಾಲಯದ ವಶಕ್ಕೆ ಒಪ್ಪಿಸಿದ್ದು, ಕಾಮಗಾರಿ ಮುಂದುವರೆಸಲು ಮೃಗಾಲಯದ ಆಡಳಿತ ಮಂಡಳಿ ಸಿದ್ಧತೆ ನಡೆಸಿದೆ. ಸಾಂಸ್ಕೃತಿಕ ನಗರಿ ಮೈಸೂರಿಗೆ ಬರುವ ಪ್ರವಾಸಿಗರ ಆಕರ್ಷಿಸುವ ನಿಟ್ಟಿನಲ್ಲಿ ಮೈಸೂರು ನಗರ ಪಾಲಿಕೆ, ಮೃಗಾಲಯ ಹಾಗೂ ಕಾರಂಜಿಕೆರೆ ನಡುವೆ ಬೃಹತ್ ಮತ್ಸ್ಯಾಗಾರ(ಅಕ್ವೇರಿಯಂ) ನಿರ್ಮಾಣಕ್ಕೆ ಉದ್ದೇಶಿಸಿತ್ತು. ಕಾಮಗಾರಿ ಆರಂಭವಾ ದರೂ ಅನುದಾನದ ಕೊರತೆ ಹಾಗೂ ಗುತ್ತಿಗೆದಾರರ ವಿಳಂಬ ಧೋರಣೆಯಿಂದ ಅರ್ಧಕ್ಕೆ ನಿಂತಿತ್ತು. ಸುಮಾರು…

ಎಂ.ಆರ್.ರವಿಕುಮಾರ್ ಮೈಸೂರು ನಗರ ಪಾಲಿಕೆ ನೂತನ ಕಮೀಷ್ನರ್
ಮೈಸೂರು

ಎಂ.ಆರ್.ರವಿಕುಮಾರ್ ಮೈಸೂರು ನಗರ ಪಾಲಿಕೆ ನೂತನ ಕಮೀಷ್ನರ್

July 14, 2018

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಕಮೀಷ್ನರ್ ಆಗಿ ಐಎಎಸ್ ಅಧಿಕಾರಿ ಎಂ.ಆರ್.ರವಿಕುಮಾರ್ ಅವರನ್ನು ವರ್ಗಾಯಿಸಿ ಸರ್ಕಾರ ಆದೇಶಿಸಿದೆ. ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಬೆಂಗಳೂರಿನ ವೃತ್ತಿ ಮತ್ತು ತರಬೇತಿ ವಿಭಾಗದ ಆಯುಕ್ತರನ್ನಾಗಿ ವರ್ಗಾಹಿಸಲಾಗಿದೆ. ರಾಜ್ಯ ಸರ್ಕಾರ ಇಂದು ಒಟ್ಟು 20 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ರವಿಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿತ್ತಾದರೂ, ಸ್ಥಳ ನಿಯೋಜಿಸದ ಕಾರಣ ಡಿಪಿಆರ್…

ಕೆಸರು ಗದ್ದೆಯಂತಿರುವ ನಾರಾಯಣಶಾಸ್ತ್ರಿ ರಸ್ತೆ
ಮೈಸೂರು

ಕೆಸರು ಗದ್ದೆಯಂತಿರುವ ನಾರಾಯಣಶಾಸ್ತ್ರಿ ರಸ್ತೆ

July 13, 2018

ಮೈಸೂರು: ಮೈಸೂರು ನಗರ ಪಾಲಿಕೆಯ ನಿರ್ಲಕ್ಷ್ಯದಿಂದಾಗಿ ನಾರಾಯಣಶಾಸ್ತ್ರಿ ರಸ್ತೆಯಲ್ಲಿ ವಾಹನ ಸವಾರರು ಕೆಸರಿನಲ್ಲಿ ಜಾರಿ ಬೀಳುವಂತಾಗಿದ್ದು, ರಸ್ತೆ ಮಧ್ಯೆ ನಡೆಸುತ್ತಿರುವ ಒಳ ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಮೈಸೂರಿನ ವಿನೋಬಾ ರಸ್ತೆಯಿಂದ ದೇವರಾಜ ಅರಸು ಜಂಕ್ಷನ್‍ವರೆಗೆ ನಾರಾಯಣಶಾಸ್ತ್ರಿ ರಸ್ತೆಯಲ್ಲಿ ನಗರ ಪಾಲಿಕೆ ಒಂದು ತಿಂಗಳ ಹಿಂದೆಯೇ ಒಳ ಚರಂಡಿ ಕಾಮಗಾರಿ ಆರಂಭಿಸಿತ್ತು. ಜೆಸಿಬಿಯಲ್ಲಿ ರಸ್ತೆ ಮಧ್ಯೆದಲ್ಲಿಯೇ ಒಳ ಚರಂಡಿ ಮಾರ್ಗಕ್ಕೆ ಪೈಪ್ ಲೈನ್ ಅಳವಡಿಸಲು ರಸ್ತೆಯುದ್ದಕ್ಕೂ ಗುಂಡಿ ತೋಡಲಾಗಿತ್ತು. ಆದರೆ ಕಾರಣಾಂತರಗಳಿಂದ ಕಾಮಗಾರಿ ಪೂರ್ಣಗೊಳಿಸದೇ ಅರ್ಧಕ್ಕೆ…

ಕುಸಿದ ಮ್ಯಾನ್‍ಹೋಲ್‍ಗೆ ಪೊಲೀಸ್ ಬ್ಯಾರಿಕೇಡ್ ರಕ್ಷಣೆ
ಮೈಸೂರು

ಕುಸಿದ ಮ್ಯಾನ್‍ಹೋಲ್‍ಗೆ ಪೊಲೀಸ್ ಬ್ಯಾರಿಕೇಡ್ ರಕ್ಷಣೆ

July 10, 2018

ಮೈಸೂರು: ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಚಿದಂಬರೇಶ್ವರ ದೇವಾಲಯದ ಸಮೀಪ ಮ್ಯಾನ್‍ಹೋಲ್ ಕುಸಿದಿದ್ದು, ಜೀವಬಲಿಗೆ ಕಾದಿರುವಂತಿದೆ. ಈ ರಸ್ತೆಯಲ್ಲಿ ಸದಾವಾಹನ ದಟ್ಟಣೆ ಇರುತ್ತದೆ. ಅಲ್ಲದೆ ವಾಹನಗಳನ್ನು ರಸ್ತೆ ಬದಿಯಲ್ಲಿ ಪಾರ್ಕ್ ಮಾಡುತ್ತಾರೆ. ಈ ಸಂದರ್ಭದಲ್ಲಿ ವಾಹನಗಳ ಚಕ್ರ ಮ್ಯಾನ್‍ಹೋಲ್‍ಗಿಳಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಕೆ.ಆರ್.ಆಸ್ಪತ್ರೆ ಹಾಗೂ ಚೆಲುವಾಂಬ ಆಸ್ಪತ್ರೆಗೆ ಹೋಗುವವರೂ ಈ ಮಾರ್ಗವಾಗಿಯೇ ಸಾಗುತ್ತಾರೆ. ಕತ್ತಲಲ್ಲಿ ಪಾದಚಾರಿಗಳು ಮ್ಯಾನ್‍ಹೋಲ್‍ಗೆ ಕಾಲಿಟ್ಟರೆ ಜೀವಾಪಾಯವೂ ಉಂಟಾಗಬಹುದು. ಮ್ಯಾನ್‍ಹೋಲ್ ಕುಸಿದು ಹಲವು ದಿನಗಳೇ ಕಳೆದಿದೆ. ಮ್ಯಾನ್‍ಹೋಲ್ಗೆ ಕಸವನ್ನು ತುಂಬಲಾಗಿದ್ದು, ಪರಿಣಾಮ ಒಳಚರಂಡಿ ನೀರು…

‘ಲ್ಯಾನ್ಸ್ ಡೌನ್’ ಕಟ್ಟಡವೀಗ ಮೂತ್ರ ವಿಸರ್ಜನಾ ವಲಯ!
ಮೈಸೂರು

‘ಲ್ಯಾನ್ಸ್ ಡೌನ್’ ಕಟ್ಟಡವೀಗ ಮೂತ್ರ ವಿಸರ್ಜನಾ ವಲಯ!

July 8, 2018

ಮೈಸೂರು: `ಲ್ಯಾನ್ಸ್ ಡೌನ್’ ಕಟ್ಟಡ ಹಿಂಭಾಗದ ಗಲ್ಲಿಯಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವುದನ್ನು ತಡೆಗಟ್ಟುವಂತೆ ಇಲ್ಲಿನ ವ್ಯಾಪಾರಿಗಳು ಮೈಸೂರು ನಗರ ಪಾಲಿಕೆ ಸಿಬ್ಬಂದಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ. ಈ ಗಲ್ಲಿಯಲ್ಲಿ ಸಿಟಿ ಬಸ್‍ಸ್ಟಾಂಡ್‍ಗೆ ಬರುವ ಪ್ರಯಾಣಿಕರು, ಸಂತಪೇಟೆಗೆ ಬರುವ ಗ್ರಾಹಕರು ಸೇರಿದಂತೆ ಸಾರ್ವಜನಿಕರು ಈ ಸ್ಥಳದಲ್ಲಿ ಶೌಚಾಲಯವಿದ್ದರೂ ದಿನನಿತ್ಯ ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದ ಈ ಗಲ್ಲಿಯಲ್ಲಿ ಓಡಾಡುವುದೇ ಕಷ್ಟಕರವಾಗಿದ್ದು, ದುರ್ವಾಸನೆಯಿಂದ ಇಲ್ಲಿನ ಅಂಗಡಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸಾಂಕ್ರಮಿಕ…

ಮೈಸೂರು ಪಾಲಿಕೆ ಚುನಾವಣೆಯಲ್ಲಿ ಕೆಪಿಜೆಪಿ ಸ್ಪರ್ಧೆ
ಮೈಸೂರು

ಮೈಸೂರು ಪಾಲಿಕೆ ಚುನಾವಣೆಯಲ್ಲಿ ಕೆಪಿಜೆಪಿ ಸ್ಪರ್ಧೆ

July 7, 2018

ಮೈಸೂರು: ಮೈಸೂರು ನಗರ ಪಾಲಿಕೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ಮಾಡಲು ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷಕ್ಕೆ ಹೊಸದಾಗಿ ಪದಾಧಿಕಾರಿಗಳ ನೇಮಕ ಮಾಡಿದ್ದು, ನಗರಾಧ್ಯಕ್ಷರಾಗಿ ಶ್ರೀನಿಧಿ ಹಾಗೂ ಕಾರ್ಯದರ್ಶಿಯಾಗಿ ಪ್ರಶಾಂತ ಗೌಡ ಅವರನ್ನು ನೇಮಕ ಮಾಡಲಾಗಿದೆ ಎಂದು ಕೆಪಿಜೆಪಿ ಸಂಸ್ಥಾಪಕ ಅಧ್ಯಕ್ಷ ಡಿ.ಮಹೇಶ್ ಗೌಡ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಯಾಸ್ಟ್ ಲೆಸ್ ಹಾಗೂ ಕ್ಯಾಶ್ ಲೆಸ್ ತತ್ವ ಸಿದ್ದಾಂತದ ಮೂಲಕ ಕೆಪಿಜೆಪಿ ಈಗಾಗಲೇ ರಾಜ್ಯದ ಮನೆ ಮಾತಾಗಿದೆ….

ಟ್ರೇಡ್ ಲೈಸನ್ಸ್ ಪಡೆಯದ ಮೈಸೂರು ನಗರ ಬಸ್ ನಿಲ್ದಾಣದ 22 ಅಂಗಡಿಗಳಿಗೆ ಬೀಗ
ಮೈಸೂರು

ಟ್ರೇಡ್ ಲೈಸನ್ಸ್ ಪಡೆಯದ ಮೈಸೂರು ನಗರ ಬಸ್ ನಿಲ್ದಾಣದ 22 ಅಂಗಡಿಗಳಿಗೆ ಬೀಗ

July 7, 2018

ಮೈಸೂರು: ಉದ್ದಿಮೆ ಪರವಾನಗಿ ಪಡೆಯದೆ ವ್ಯಾಪಾರ ಮಾಡುತ್ತಿದ್ದ ಮೈಸೂರು ನಗರ ಬಸ್ ನಿಲ್ದಾಣದ 22 ಅಂಗಡಿಗಳಿಗೆ ಮೈಸೂರು ಮಹಾನಗರ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳು ಇಂದು ಬೀಗ ಮುದ್ರೆ ಮಾಡಿದ್ದಾರೆ. ಸಮಿತಿ ಅಧ್ಯಕ್ಷ ಕೆ.ಟಿ.ಚೆಲುವೇಗೌಡ, ಸದಸ್ಯರುಗಳಾದ ಪುರುಷೋತ್ತಮ, ರಜನಿ ಅಣ್ಣಯ್ಯ, ಬಿ.ವಿ.ಮಂಜುನಾಥ, ಹಿರಿಯ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಅವರ ನೇತೃತ್ವದ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದಾಗ ಸಿಟಿ ಬಸ್ ಸ್ಟ್ಯಾಂಡಿನ 22 ಅಂಗಡಿ ಮಾಲೀಕರು ಪಾಲಿಕೆಯಿಂದ ಟ್ರೇಡ್ ಲೈಸೆನ್ಸ್ ಪಡೆಯದಿರುವುದು ಕಂಡುಬಂದಿತು. ಅಂತಹ ಅಂಗಡಿಗಳ…

1 3 4 5 6 7 8
Translate »