Tag: Mysuru City Police

ಇಬ್ಬರು ಖತರ್ನಾಕ್ ಕಳ್ಳರಿಂದ 50ಕ್ಕೂ ಹೆಚ್ಚು ಬೈಕ್ ವಶ: ನಕಲಿ ಕೀ ಬಳಸಿ ಪಾರ್ಕಿಂಗ್ ಲಾಟ್‍ನಿಂದ ವಾಹನ ಎಗರಿಸುತ್ತಿದ್ದರು
ಮೈಸೂರು

ಇಬ್ಬರು ಖತರ್ನಾಕ್ ಕಳ್ಳರಿಂದ 50ಕ್ಕೂ ಹೆಚ್ಚು ಬೈಕ್ ವಶ: ನಕಲಿ ಕೀ ಬಳಸಿ ಪಾರ್ಕಿಂಗ್ ಲಾಟ್‍ನಿಂದ ವಾಹನ ಎಗರಿಸುತ್ತಿದ್ದರು

August 9, 2018

ಮೈಸೂರು: ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಖತರ್ನಾಕ್ ಖದೀಮರನ್ನು ಮೈಸೂರಿನ ವಿಜಯನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರಿಂದ 50ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಿಚಾರಣೆ ಮುಂದುವರೆಸಿರುವ ಪೊಲೀಸರಿಗೆ ಬೇರೆ ಬೇರೆ ಕಡೆಯಲ್ಲಿ ಕಳವಾಗಿದ್ದ ಇನ್ನೂ ಹಲವು ಬೈಕುಗಳು ಪತ್ತೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕುಗಳನ್ನು ನಕಲಿ ಕೀ ಬಳಸಿ ಎಗರಿಸುವ ಚಾಲಾಕಿ ಖದೀಮರು ಗ್ರಾಮಾಂತರ ಪ್ರದೇಶಗಳಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿಯ ಆಧಾರದಲ್ಲಿ ಪೊಲೀಸರು…

ಇಬ್ಬರು ಖದೀಮರ ಬಂಧನ: ಮೂರು ದ್ವಿಚಕ್ರ ವಾಹನ ವಶ
ಮೈಸೂರು

ಇಬ್ಬರು ಖದೀಮರ ಬಂಧನ: ಮೂರು ದ್ವಿಚಕ್ರ ವಾಹನ ವಶ

August 2, 2018

ಮೈಸೂರು: ಇಬ್ಬರು ಖದೀಮರನ್ನು ಬಂಧಿಸಿರುವ ಮೈಸೂರಿನ ಮೇಟಗಳ್ಳಿ ಪೊಲೀಸರು 3 ಲಕ್ಷ ರೂ. ಮೌಲ್ಯದ 3 ದ್ವಿಚಕ್ರ ವಾಹನಗಳನ್ನು ವಶಪಡಿಸಿ ಕೊಂಡಿ ದ್ದಾರೆ. ಮೈಸೂರು ತಾಲೂಕು ಶ್ಯಾದನಹಳ್ಳಿ ಗ್ರಾಮದವನಾಗಿದ್ದು, ಹಾಲಿ ಬೆಂಗಳೂರಿನ ಚಿಕ್ಕಗೊಲ್ಲರಹಟ್ಟಿಯಲ್ಲಿ ವಾಸವಿದ್ದ ಎಂ.ಗಿರೀಶ್ ಅಲಿಯಾಸ್ ಪುಟ್ಟ (22) ಮತ್ತು ಬೆಂಗಳೂರಿನ ದೊಡ್ಡಗೊಲ್ಲರಹಟ್ಟಿಯ ಮುನೇಶ್ವರ ಬಡಾವಣೆ ನಿವಾಸಿ ಜಿ.ಗಿರೀಶ್ (19) ಬಂಧಿತ ಖದೀಮರಾಗಿದ್ದು, ರಿಂಗ್ ರಸ್ತೆಯ ಅಕ್ಷಯ ಪ್ಯಾಲೆಸ್ ಹೋಟೆಲ್ ಬಳಿ 2 ದ್ವಿಚಕ್ರ ವಾಹನಗಳೊಂದಿಗೆ ಅನುಮಾನಾಸ್ಪದವಾಗಿ ನಿಂತಿದ್ದ ಇವರನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ ಇವರು ಮೈಸೂರಿನ…

ವೇಶ್ಯಾವಾಟಿಕೆ ವಿರುದ್ಧ ಮೈಸೂರಲ್ಲಿ ಮುಂದುವರೆದ ಪೊಲೀಸರ ಕಾರ್ಯಾಚರಣೆ
ಮೈಸೂರು

ವೇಶ್ಯಾವಾಟಿಕೆ ವಿರುದ್ಧ ಮೈಸೂರಲ್ಲಿ ಮುಂದುವರೆದ ಪೊಲೀಸರ ಕಾರ್ಯಾಚರಣೆ

August 1, 2018

ಸಿಸಿಬಿ ಪೊಲೀಸರಿಂದ ಹೆಬ್ಬಾಳ್‍ನಲ್ಲಿ ದಾಳಿ: ಯುವತಿ ರಕ್ಷಣೆ, ಓರ್ವ ಪಿಂಪ್ ಸೆರೆ, ಪರಾರಿಯಾಗಿರುವ ಸಹಚರನಿಗೆ ಶೋಧ ಮೈಸೂರು: ವೇಶ್ಯಾವಾಟಿಕೆ ದಂಧೆ ವಿರುದ್ಧ ಎಡಮುರಿ ಕಟ್ಟಿರುವ ಪೊಲೀಸರು, ಕಾರ್ಯಾಚರಣೆ ಮುಂದುವರಿಸಿದ್ದು, ಮೈಸೂರಿನ ಹೆಬ್ಬಾಳಿನಲ್ಲಿ ಮನೆಯೊಂದರಲ್ಲಿ ಯುವತಿ ರಕ್ಷಿಸಿ, ಪಿಂಪ್ ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಸಿಬಿ ಎಸಿಪಿ ಬಿ.ಆರ್.ಲಿಂಗಪ್ಪ ನೇತೃತ್ವದಲ್ಲಿ ಇಂದು ಮಧ್ಯಾಹ್ನ ದಾಳಿ ನಡೆಸಿದ ಇನ್ಸ್‍ಪೆಕ್ಟರ್ ರಾಜಶೇಖರ್ ಹಾಗೂ ಸಿಬ್ಬಂದಿ, ಹೆಬ್ಬಾಳು ಮುಖ್ಯರಸ್ತೆಯ ಮನೆಯೊಂದನ್ನು ಬಾಡಿಗೆಗೆ ಪಡೆದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದುದ್ದನ್ನು ಭೇದಿಸಿದ್ದಾರೆ. ವೇಶ್ಯಾವಾಟಿಕೆ ನಡೆಸುತ್ತಿದ್ದ ವ್ಯಕ್ತಿ ತಲೆಮರೆಸಿಕೊಂಡಿದ್ದು,…

ಬ್ಯೂಟಿ ಪಾರ್ಲರ್ ಹೆಸರಲ್ಲಿ ವೇಶ್ಯಾವಾಟಿಕೆ: ಆರೋಪಿ ಹೇಮಾವತಿ ವಿಚಾರಣೆ
ಮೈಸೂರು

ಬ್ಯೂಟಿ ಪಾರ್ಲರ್ ಹೆಸರಲ್ಲಿ ವೇಶ್ಯಾವಾಟಿಕೆ: ಆರೋಪಿ ಹೇಮಾವತಿ ವಿಚಾರಣೆ

August 1, 2018

ಮೈಸೂರು:  ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ವೇಶ್ಯಾ ವಾಟಿಕೆ ನಡೆಸಿ, ಸಿಕ್ಕಿಬಿದ್ದಿರುವ ಆರೋಪಿ ಹೇಮಾವತಿ ಅಲಿಯಾಸ್ ಸಂಜನಾಳ ವಿಚಾರಣೆ ಮುಂದುವರಿದಿದೆ. ಮೈಸೂರಿನ ವಿಜಯನಗರ ಹಾಗೂ ಹೂಟಗಳ್ಳಿಯಲ್ಲಿ ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆ ಯಲ್ಲಿ ಒಡನಾಡಿ ಸೇವಾ ಸಂಸ್ಥೆ ಸಹ ಯೋಗದಲ್ಲಿ ಪೊಲೀಸರು 2 ತಂಡ ಗಳಲ್ಲಿ ಏಕ ಕಾಲದಲ್ಲಿ ಜು.28ರಂದು ದಾಳಿ ನಡೆಸಿದ್ದರು. ಕಾರ್ಯಾಚರಣೆಯಲ್ಲಿ ಪಾರ್ಲರ್‍ಗಳ ಒಡತಿ ಹೇಮಾವತಿ ಸೇರಿದಂತೆ ಮೂವರನ್ನು ಬಂಧಿಸಿ, 6 ಮಹಿಳೆಯರನ್ನು ರಕ್ಷಿಸಲಾಗಿತ್ತು. ಸ್ವೈಪಿಂಗ್ ಮಿಷನ್,…

ಮೈಸೂರಿನಿಂದ ಬೆಂಗಳೂರಿಗೆ ಹಾರಿತು `ಜೀವಂತ’ ಹೃದಯ
ಮೈಸೂರು

ಮೈಸೂರಿನಿಂದ ಬೆಂಗಳೂರಿಗೆ ಹಾರಿತು `ಜೀವಂತ’ ಹೃದಯ

July 30, 2018

ಗ್ರೀನ್ ಕಾರಿಡಾರ್ ಮೂಲಕ ಅಂಗಾಂಗ ರವಾನೆ ಕಟ್ಟಡದ ಮೇಲಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯಿಂದ 6 ಜನರಿಗೆ ಜೀವದಾನ ಗಂಟೆಗೆ 127 ಕಿ.ಮೀ. ವೇಗದಲ್ಲಿ ಆಂಬುಲೆನ್ಸ್‍ನಲ್ಲಿ ಬೆಂಗಳೂರು ತಲುಪಿದ ಅಂಗಾಂಗ ಮೈಸೂರು: ಕಟ್ಟಡವೊಂದರಲ್ಲಿ ಕೆಲಸ ಮಾಡುವ ವೇಳೆ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರ ಅಂಗಾಂಗ ದಾನ ಮಾಡುವ ಮೂಲಕ ಅವರ ಪೋಷಕರು ಮಾನವೀಯತೆ ಮೆರೆದರೆ, ವೈದ್ಯರು ಮತ್ತು ಪೊಲೀಸರು ಕ್ಷಿಪ್ರ ಗತಿಯಲ್ಲಿ ಕಾರ್ಯಾಚರಣೆ ಮಾಡಿ ಬೇರ್ಪಡಿಸಿದ ಅಂಗಾಂಗಗಳನ್ನು ಗ್ರೀನ್ ಕಾರಿಡಾರ್ ಮೂಲಕ ಬೆಂಗಳೂರಿಗೆ ನಿಗದಿತ ಸಮಯಕ್ಕೂ ಮುನ್ನ…

ಬ್ಲಾಕ್‍ಮೇಲ್ ಆರ್‍ಟಿಐ ಕಾರ್ಯಕರ್ತರ ಮೇಲೆ ಪೊಲೀಸರ ಹದ್ದಿನ ಕಣ್ಣು ನೈಜ ಕಾರ್ಯಕರ್ತರಿಗಿಲ್ಲ ಸಮಸ್ಯೆ
ಮೈಸೂರು

ಬ್ಲಾಕ್‍ಮೇಲ್ ಆರ್‍ಟಿಐ ಕಾರ್ಯಕರ್ತರ ಮೇಲೆ ಪೊಲೀಸರ ಹದ್ದಿನ ಕಣ್ಣು ನೈಜ ಕಾರ್ಯಕರ್ತರಿಗಿಲ್ಲ ಸಮಸ್ಯೆ

July 23, 2018

ಮೈಸೂರು: ಆರ್‍ಟಿಐ ಮೂಲಕ ಬೇರೊಬ್ಬರ ಅಥವಾ ಅಧಿಕಾರಿಗಳ ದಾಖಲಾತಿಗಳನ್ನು ಪಡೆದು ಬ್ಲಾಕ್ ಮೇಲ್ ಮಾಡುತ್ತಿದ್ದವರ ಮೇಲೆ ಇದೀಗ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ ಎನ್ನಲಾಗಿದೆ. ಹೌದು. ಕಳೆದ ನಾಲ್ಕೈದು ತಿಂಗಳಿಂದ ಈಚೇಗೆ ರಾಜ್ಯಾದ್ಯಂತ ಆರ್‍ಟಿಐ ಮೂರ್ನಾಲ್ಕು ಕಾರ್ಯಕರ್ತರ ಬರ್ಬರ ಹತ್ಯೆಯಾದ ಹಿನ್ನೆಲೆಯಲ್ಲಿ ಎಸಿಬಿ, ಸಿಸಿಬಿ ಪೊಲೀಸರು, ಗೌಪ್ಯವಾಗಿ ಬ್ಲಾಕ್‍ಮೇಲ್ ಮಾಡುತ್ತಿದ್ದ ಕೆಲ ಆರ್‍ಟಿಐ ಕಾರ್ಯಕರ್ತರ ಮೇಲೆ ಕಾನೂನು ಕ್ರಮ ಜರುಗಿಸಿದ ಹಿನ್ನೆಲೆಯಲ್ಲಿ ಇದೀಗ ಜಿಲ್ಲಾಧಿಕಾರಿಗಳ ಕಚೇರಿ, ಮುಡಾ, ಮಹಾನಗರ ಪಾಲಿಕೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸೇರಿದಂತೆ ಇತರೆ…

ವಿಜಯನಗರ ಶೂಟೌಟ್ ಪ್ರಕರಣದ ಹಿನ್ನೆಲೆ: ರೌಡಿಶೀಟರ್ ಬಳಿ ಇತ್ತು ಪರವಾನಗಿ ಪಡೆದ ಗನ್
ಮೈಸೂರು

ವಿಜಯನಗರ ಶೂಟೌಟ್ ಪ್ರಕರಣದ ಹಿನ್ನೆಲೆ: ರೌಡಿಶೀಟರ್ ಬಳಿ ಇತ್ತು ಪರವಾನಗಿ ಪಡೆದ ಗನ್

July 18, 2018

ಮೈಸೂರು: ಮೈಸೂರಿನ ಪೊಲೀಸ್ ಠಾಣೆಯೊಂದರಲ್ಲಿ ರೌಡಿಶೀಟ್ ತೆರೆದಿರುವ ವ್ಯಕ್ತಿ, ಮತ್ತೊಂದು ಠಾಣೆಯಿಂದ ಎನ್‍ಓಸಿ ಪಡೆದು, ಗನ್ ಲೈಸೆನ್ಸ್ ಪಡೆದಿದ್ದ ವಿಷಯ ಇದೀಗ ಬೆಳಕಿಗೆ ಬಂದಿದೆ. ಇತ್ತೀಚೆಗೆ ವಿಜಯನಗರ 4ನೇ ಹಂತದಲ್ಲಿ ಗುಂಡು ಹಾರಿಸಿ, ಟ್ಯಾಕ್ಸಿ ಚಾಲಕನಿಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಬಂಧಿತನಾಗಿರುವ ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಸತೀಶ್ ಗೌಡ ಕೆಆರ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದರೂ ಅದನ್ನು ಮರೆಮಾಚಿ ಕುವೆಂಪುನಗರ ಠಾಣೆಯಿಂದ ಎನ್‍ಓಸಿ ಪಡೆದು ನಗರ ಪೊಲೀಸ್ ಕಮೀಷ್ನರ್ ಕಚೇರಿಯಲ್ಲಿ ಗನ್ ಲೈಸೆನ್ಸ್ ಗಿಟ್ಟಿಸಿದ್ದಾರೆ ಎಂಬುದು…

ಇಬ್ಬರು ಸರಗಳ್ಳರ ಸೆರೆ, ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ
ಮೈಸೂರು

ಇಬ್ಬರು ಸರಗಳ್ಳರ ಸೆರೆ, ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

July 16, 2018

ಮೈಸೂರು: ಇಬ್ಬರು ಸರಗಳ್ಳರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಬಂಧಿತರಿಂದ ಲಕ್ಷ ರೂ. ಮೌಲ್ಯದ 37 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಂಡಿದ್ದಾರೆ. ಮೈಸೂರಿನ ಅಜೀಜ್‍ಸೇಠ್‍ನಗರದ ಅಫ್ಜಲ್‍ಪಾಷ ಹಾಗೂ ಮಹಮ್ಮದ್ ಅಖಲ್ ಷಾಹೀದ್ ಎಂಬ ಯುವಕರೇ ಬಂಧಿತರು. ಶುಕ್ರವಾರ ಮೈಸೂರಿನ ಲಷ್ಕರ್‍ಮೊಹಲ್ಲಾದ ಅಶೋಕ ರಸ್ತೆಯಲ್ಲಿ ಕಳವು ಮಾಲನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ಇವರು ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಮಂಡಿ ಠಾಣಾ ವ್ಯಾಪ್ತಿಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದರ ಬಗ್ಗೆ…

ವಿದ್ಯಾರ್ಥಿಗಳಿಬ್ಬರ ಬಲಿ ಪಡೆದ ಹುಂಡೈ ಕ್ರೆಟಾ ಕಾರಿಗಾಗಿ ತೀವ್ರ ಶೋಧ
ಮೈಸೂರು

ವಿದ್ಯಾರ್ಥಿಗಳಿಬ್ಬರ ಬಲಿ ಪಡೆದ ಹುಂಡೈ ಕ್ರೆಟಾ ಕಾರಿಗಾಗಿ ತೀವ್ರ ಶೋಧ

July 11, 2018

 ಘಟನೆಯ ಮರುದಿನ ಬೆಂಗಳೂರಿನತ್ತ ತೆರಳಿದ ಮಾಹಿತಿ ಲಭ್ಯ ಸಿಸಿ ಕ್ಯಾಮರಾ ಫುಟೇಜ್ ಸಂಗ್ರಹಕ್ಕೆ ಮುಂದಾದ ಪೊಲೀಸರು ಮೈಸೂರು: ಚಾಮುಂಡಿಬೆಟ್ಟದ ಐ-ವಾಚ್ ಟವರ್ ಬಳಿ ಬುಲೆಟ್‍ಗೆ ಡಿಕ್ಕಿ ಹೊಡೆದು, ಇಬ್ಬರು ವಿದ್ಯಾರ್ಥಿಗಳ ಬಲಿ ಪಡೆದ ಕ್ರೆಟಾ ಕಾರು ಪತ್ತೆಗೆ ಸಿದ್ದಾರ್ಥನಗರ ಸಂಚಾರ ಠಾಣೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಈ ನಡುವೆ ಸಾರ್ವಜನಿಕರೊಬ್ಬರು ನೀಡಿದ ಸುಳಿವಿನ ಮೇರೆಗೆ ಮೈಸೂರು-ಬೆಂಗಳೂರು ರಸ್ತೆಯ ಪೊಲೀಸ್ ಚೆಕ್‍ಪೋಸ್ಟ್ ಸೇರಿ ದಂತೆ ವಿವಿಧೆಡೆ ಇರುವ ಸಿಸಿ ಕ್ಯಾಮರಾ ಗಳ ಫುಟೇಜ್ ಸಂಗ್ರಹಕ್ಕೆ ಮುಂದಾಗಿದ್ದಾರೆ. ಗುರುವಾರ…

ಹಿಟ್ ಅಂಡ್ ರನ್ ಪ್ರಕರಣ: ಚಾಮುಂಡಿಬೆಟ್ಟದಲ್ಲಿ ಸಂಜೆ ವೇಳೆ ಜಾಲಿ ರೈಡ್‍ಗೆ ಕಡಿವಾಣ
ಮೈಸೂರು

ಹಿಟ್ ಅಂಡ್ ರನ್ ಪ್ರಕರಣ: ಚಾಮುಂಡಿಬೆಟ್ಟದಲ್ಲಿ ಸಂಜೆ ವೇಳೆ ಜಾಲಿ ರೈಡ್‍ಗೆ ಕಡಿವಾಣ

July 11, 2018

 ಪೆಟ್ರೋಲ್ ಉಳಿಸಲು ಇಂಜಿನ್ ಆಫ್ ಮಾಡಿಕೊಂಡು ಬರುವ ಬೈಕ್ ಸವಾರರಿಗೆ ಶಾಸ್ತಿ ಪ್ರತಿದಿನ ಸಂಜೆ ತಪಾಸಣೆ ನಡೆಸಲು ನಿರ್ಧಾರ ದೇವಾಲಯಕ್ಕೆ ಹೋಗುವ ಭಕ್ತರು, ಪ್ರವಾಸಿಗರಿಗೆ ಮಾತ್ರ ಇನ್ನು ಮುಂದೆ ಸಂಜೆ ಪ್ರವೇಶ ಅವಕಾಶ ಮೈಸೂರು:  ಹಿಟ್ ಅಂಡ್ ರನ್ ಪ್ರಕರಣದಲ್ಲಿ ಇಬ್ಬರು ವಿದ್ಯಾರ್ಥಿ ಗಳು ಬಲಿಯಾದ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟಕ್ಕೆ ಸಂಜೆ ವೇಳೆ ಜಾಲಿ ರೈಡ್‍ಗೆ ಹೋಗುವುದನ್ನು ನಿರ್ಬಂಧಿಸಲು ಪೊಲೀಸರು ಮುಂದಾಗಿದ್ದು, ಪ್ರತಿದಿನ ತಾವರೆಕಟ್ಟೆ ಬಳಿ ವಾಹನ ತಪಾಸಣೆ ನಡೆಸಿ, ಭಕ್ತರು ಹಾಗೂ ಪ್ರವಾಸಿಗರಿಗೆ ಮಾತ್ರ ಈ ವೇಳೆ…

1 2 3 4
Translate »