Tag: Mysuru City Police

ಮೈಸೂರು ನೂತನ ಪೊಲೀಸ್ ಆಯುಕ್ತರಾಗಿ ಕೆ.ಟಿ.ಬಾಲಕೃಷ್ಣ ಅಧಿಕಾರ ಸ್ವೀಕಾರ
ಮೈಸೂರು

ಮೈಸೂರು ನೂತನ ಪೊಲೀಸ್ ಆಯುಕ್ತರಾಗಿ ಕೆ.ಟಿ.ಬಾಲಕೃಷ್ಣ ಅಧಿಕಾರ ಸ್ವೀಕಾರ

January 26, 2019

ಮೈಸೂರು: ನಗರದ ನೂತನ ಪೊಲೀಸ್ ಆಯಕ್ತರಾಗಿ ಕೆ.ಟಿ. ಬಾಲಕೃಷ್ಣ ಶುಕ್ರವಾರ ಸಂಜೆ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಆಯುಕ್ತ ಡಾ. ಸುಬ್ರಹ್ಮಣೇ ಶ್ವರರಾವ್ ಅವರು ಕೆ.ಟಿ.ಬಾಲ ಕೃಷ್ಣ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಬೆಂಗಳೂರು ಗುಪ್ತಚರ(ಆಡಳಿತ) ವಿಭಾ ಗದ ಎಸ್ಪಿ ಆಗಿದ್ದ ಕೆ.ಟಿ.ಬಾಲಕೃಷ್ಣ ಅವರಿಗೆ ಡಿಐಜಿಪಿ ದರ್ಜೆಗೆ ಬಡ್ತಿ ನೀಡಿ ವರ್ಗಾವಣೆ ಮಾಡಲಾಗಿತ್ತು. ಕೆ.ಟಿ.ಬಾಲಕೃಷ್ಣ ಅವರು ಈ ಹಿಂದೆ ಮೈಸೂರು ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿ ಕಾರ್ಯ ನಿರ್ವಹಿಸಿದ್ದರು. ಇವರು ಮೂಲತಃ ಮೈಸೂರಿನವರೇ ಆಗಿದ್ದು, ಕಾರವಾರ, ಉಡುಪಿ, ಗದಗ…

ಅವಾಚ್ಯ ಶಬ್ಧಗಳಿಂದ ನಿಂದಿಸಿ, ಅವಮಾನ
ಮೈಸೂರು

ಅವಾಚ್ಯ ಶಬ್ಧಗಳಿಂದ ನಿಂದಿಸಿ, ಅವಮಾನ

January 26, 2019

ಮೈಸೂರು: ವರ್ಗಾವಣೆಗೊಂಡ ತಾವು ಕರ್ತವ್ಯಕ್ಕೆ ವರದಿ ಮಾಡಿ ಕೊಳ್ಳುವ ಸಂಬಂಧ ದೂರವಾಣಿ ಮೂಲಕ ಸಂಪರ್ಕಿಸಿದಾಗ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್, ತಮಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಅವಮಾನಿಸಿದ್ದಾರೆ ಎಂದು ಪೊಲೀಸ್ ಇನ್ಸ್‍ಪೆಕ್ಟರ್ ಸಿ.ವಿ.ರವಿ ಅವರು ಗುರುವಾರ ದಕ್ಷಿಣ ವಲಯ ಐಜಿಪಿ ಕೆ.ವಿ. ಶರತ್‍ಚಂದ್ರ ಅವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೂ ದೂರಿನ ಪ್ರತಿ ರವಾನಿ ಸಿರುವ ರವಿ ಅವರು, ಜನವರಿ 14ರಂದು ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದು,…

ಮಧ್ಯಪ್ರದೇಶದ ಐವರು ಕುಖ್ಯಾತ ಅಂತಾರಾಜ್ಯ ಖದೀಮರ ಬಂಧನ
ಮೈಸೂರು

ಮಧ್ಯಪ್ರದೇಶದ ಐವರು ಕುಖ್ಯಾತ ಅಂತಾರಾಜ್ಯ ಖದೀಮರ ಬಂಧನ

January 21, 2019

ಮೈಸೂರು: ಮೈಸೂರಿನ ಸಿಸಿಬಿ ಪೊಲೀಸರು ಐವರು ಕುಖ್ಯಾತ ಅಂತಾ ರಾಜ್ಯ ಮನೆಗಳ್ಳರನ್ನು ಬಂಧಿಸಿ, 28 ಮನೆ ಕಳ್ಳತನ ಪ್ರಕರಣ ಪತ್ತೆ ಹಚ್ಚಿರುವುದಲ್ಲದೇ, 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರೆಲ್ಲರೂ ಮಧ್ಯಪ್ರದೇಶದ ಕುಖ್ಯಾತ ಮನೆಗಳ್ಳರಾಗಿದ್ದು, ಮಧ್ಯಪ್ರದೇಶ ಗುಡ್ಡಗಾಡು ಪ್ರದೇಶದಲ್ಲಿರುವ ಒಂದು ಊರಿನ ಬಹುತೇಕ ಜನರು ಅಪರಾಧ ಹಿನ್ನೆಲೆ ಯವರೇ ಆಗಿದ್ದಾರೆ. ಇವರನ್ನು ಹಿಡಿ ಯಲು ಹೋದ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ತಪ್ಪಿಸಿಕೊಳ್ಳುವ ಪ್ರವೃತ್ತಿ ಯವರೂ ಆಗಿದ್ದು, ಈ ಖದೀಮರನ್ನು ಬಂಧಿಸಿದ…

ಪೊಲೀಸರೇ ನಿಯಮ ಉಲ್ಲಂಘಿಸಿದಾಗ…! ಸಾಮಾಜಿಕ ಜಾಲತಾಣದಲ್ಲಿ ಯುವಕ ತರಾಟೆ
ಮೈಸೂರು

ಪೊಲೀಸರೇ ನಿಯಮ ಉಲ್ಲಂಘಿಸಿದಾಗ…! ಸಾಮಾಜಿಕ ಜಾಲತಾಣದಲ್ಲಿ ಯುವಕ ತರಾಟೆ

December 10, 2018

ಮೈಸೂರು: ಸಂಚಾರ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುವ ಪೊಲೀಸರೇ ಸಂಚಾರ ನಿಯಮ ಉಲ್ಲಂಘಿಸಿರುವ ಬಗ್ಗೆ ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ತರಾಟೆ ತೆಗೆದುಕೊಂಡಿದ್ದಾನೆ. ಮೈಸೂರಿನ ದೇವರಾಜ ಸಂಚಾರ ಠಾಣೆಯ ಮುಂಭಾಗ ನೋ ಪಾರ್ಕಿಂಗ್ ಫಲಕ ಅಳವಡಿಸಿರುವ ಸ್ಥಳದಲ್ಲೇ ಟೋಯಿಂಗ್ ವಾಹನ(ಟೈಗರ್)ವನ್ನು ಪಾರ್ಕಿಂಗ್ ಮಾಡಿರುವುದನ್ನು ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿ ರುವ ಯುವಕ, `ಸಾರ್ವಜನಿಕರಿಗೊಂದು ನ್ಯಾಯ, ಪೊಲೀಸ ರಿಗೆ ಮತ್ತೊಂದು ನ್ಯಾಯವೇ?’ ಎಂದು ಪ್ರಶ್ನಿಸಿದ್ದಾನೆ. ಸ್ನೇಹಿತನೊಂದಿಗೆ ಡಿ.8ರ ಸಂಜೆ 4.15ರ ವೇಳೆಯಲ್ಲಿ ದೇವರಾಜ ಸಂಚಾರ ಪೊಲೀಸ್ ಠಾಣೆ ಬಳಿ…

ಹತ್ತೂವರೆ ತಿಂಗಳಲ್ಲಿ 3.31 ಕೋಟಿ ದಂಡ ವಸೂಲಿ
ಮೈಸೂರು

ಹತ್ತೂವರೆ ತಿಂಗಳಲ್ಲಿ 3.31 ಕೋಟಿ ದಂಡ ವಸೂಲಿ

November 22, 2018

ಮೈಸೂರು: ಮೈಸೂರಲ್ಲಿ ಸಂಚಾರ ಪೊಲೀಸರು, ಸಂಚಾರ ನಿಯಮ ಉಲ್ಲಂಘನೆ ಸಂಬಂಧ ತಪಾಸಣೆ ತೀವ್ರಗೊಳಿಸಿದ್ದಾರೆ. ಎಫ್‍ಟಿವಿಆರ್ (ಫೀಲ್ಡ್ ಟ್ರಾಫಿಕ್ ವಯಾಲೇಷನ್ ರಿಪೋರ್ಟ್)ನಡಿ 2018ರ ಜನವರಿ 1ರಿಂದ ನವೆಂಬರ್ 16ರವರೆಗೆ ಸಂಚಾರ ಪೊಲೀಸರ ತಪಾಸಣೆಯಿಂದ ಒಟ್ಟು 3,31,27, 200 ರೂ.ಗಳ ದಂಡ ಸಂಗ್ರಹಿಸಲಾಗಿದೆ. ಸರ್ಕಲ್‍ಗಳು, ಜಂಕ್ಷನ್‍ಗಳು ಹಾಗೂ ಮುಖ್ಯರಸ್ತೆಗಳಲ್ಲಿ ನಿಂತು ಕಾರ್ಯಾ ಚರಣೆ ಮಾಡುವುದನ್ನು ತೀವ್ರಗೊಳಿಸಲಾ ಗಿದ್ದು, ಅದರ ಜೊತೆಗೆ ಮೈಸೂರು ನಗರದಲ್ಲಿ ಅಳವಡಿಸಿರುವ 59 ಸಿಸಿ ಕ್ಯಾಮರಾ ಗಳ ಫುಟೇಜಸ್ ಮೂಲಕವೂ ನಗರ ಪೊಲೀಸ್ ಕಮೀಷ್ನರ್ ಕಚೇರಿ ಆವರಣದಲ್ಲಿರುವ…

ಮೈಸೂರು ದಸರೆಗೆ ಹೈಟೆಕ್ ಮೊಬೈಲ್ ಕಮಾಂಡ್ ಭದ್ರತೆ
ಮೈಸೂರು, ಮೈಸೂರು ದಸರಾ

ಮೈಸೂರು ದಸರೆಗೆ ಹೈಟೆಕ್ ಮೊಬೈಲ್ ಕಮಾಂಡ್ ಭದ್ರತೆ

October 13, 2018

ಮೈಸೂರು: ಈ ಬಾರಿ ದಸರೆಗೆ ಭಾರೀ ಬಿಗಿ ಭದ್ರತೆ ಮಾಡಿರುವ ಪೊಲೀಸರು, ಮೊದಲ ಬಾರಿಗೆ ಹೈಟೆಕ್ ಮೊಬೈಲ್ ಕಮಾಂಡ್ ಕಣ್ಗಾವಲು ವ್ಯವಸ್ಥೆಯೊಂದಿಗೆ ಕಟ್ಟೆಚ್ಚರ ವಹಿಸಿದ್ದಾರೆ. ಲಕ್ಷಾಂತರ ಮಂದಿ ಒಂದೆಡೆ ಸೇರುವ ಸ್ಥಳದಲ್ಲಿ ಉಂಟಾಗುವ ಅಹಿತಕರ ಘಟನೆಗಳ ನಿಯಂತ್ರಿಸಿ, ನಿರ್ವಹಣೆ ಮಾಡುವ ಸಲುವಾಗಿ ಕಳೆದ 5 ತಿಂಗಳ ಹಿಂದೆ ಸರ್ಕಾರ ಮೈಸೂರು ನಗರಕ್ಕೆ ಮೊಬೈಲ್ ಕಮಾಂಡ್ ಸೆಂಟರ್ ಹೈಟೆಕ್ ಸಾಧನಗಳನ್ನು ಹೊಂದಿರುವ ವಾಹನವನ್ನು ನೀಡಿದೆ. ಈ ವಾಹನವು ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸಿಎಆರ್ ಮೈದಾನದಲ್ಲಿರುತ್ತದೆ. ಗಣ್ಯರ ಸಮಾವೇಶಗಳು, ರಾಜಕೀಯ…

ಸಂಚಾರ ನಿಯಮ ಉಲ್ಲಂಘನೆ 14,456 ಪ್ರಕರಣಗಳಲ್ಲಿ 14,74,500 ದಂಡ ವಸೂಲಿ
ಮೈಸೂರು

ಸಂಚಾರ ನಿಯಮ ಉಲ್ಲಂಘನೆ 14,456 ಪ್ರಕರಣಗಳಲ್ಲಿ 14,74,500 ದಂಡ ವಸೂಲಿ

October 8, 2018

ಮೈಸೂರು: ಸಂಚಾರ ನಿಯಮ ಉಲ್ಲಂಘಿಸಿ ಎಫ್‍ಟಿವಿಆರ್ ನೋಟೀಸ್‍ಗಳಿಗೆ ದಂಡ ಪಾವತಿಸದೇ ಇರುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಒಟ್ಟು 14,456 ಪ್ರಕರಣಗಳಿಂದ ಒಟ್ಟು 14,74,500 ರೂ. ದಂಡ ಸಂಗ್ರಹ ವಾಗಿದೆ. ಮೈಸೂರು ನಗರ ಸಂಚಾರ ನಿಯಮಗಳ ಉಲ್ಲಂಘನೆ ಸಂಬಂಧ ಪೊಲೀಸ್ ಸಿಬ್ಬಂದಿಗಳು ಮತ್ತು ಸಿಸಿಟಿವಿಗಳಿಂದ ಫೋಟೋ ತೆಗೆದು ಸಂಬಂಧಪಟ್ಟ ವಾಹನ ಮಾಲೀಕರಿಗೆ ದಂಡ ಕಟ್ಟುವಂತೆ ಅಂಚೆ ಮೂಲಕ ನೋಟೀಸ್‍ಗಳನ್ನು ಕಳುಹಿಸಲಾಗಿತ್ತು. ಈ ನೋಟೀಸ್‍ಗಳಿಗೆ ದಂಡ ಕಟ್ಟದೇ ಬಾಕಿ ಉಳಿಸಿಕೊಂಡಿದ್ದವರ ವಿರುದ್ಧ ನಗರ ಸಂಚಾರ ಪೊಲೀಸರು ಕಳೆದೆರಡು ದಿನಗಳಿಂದ…

4500 ವಾಹನ ಮಾಲೀಕರಿಂದ 4,50,000 ರೂ. ದಂಡ ಸಂಗ್ರಹ
ಮೈಸೂರು

4500 ವಾಹನ ಮಾಲೀಕರಿಂದ 4,50,000 ರೂ. ದಂಡ ಸಂಗ್ರಹ

October 6, 2018

ಮೈಸೂರು: ಸಂಚಾರ ನಿಯಮ ಉಲ್ಲಂಘಿಸಿ ದಂಡ ಪಾವತಿಸದೇ ಬಾಕಿ ಉಳಿಸಿಕೊಂಡವರ ವಿರುದ್ಧ ಸಂಚಾರ ಪೊಲೀಸರು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಗುರುವಾರದಿಂದ ಮೈಸೂರು ನಗರದಾದ್ಯಂತ ಎಲ್ಲಾ 5 ಸಂಚಾರ ಠಾಣಾ ವ್ಯಾಪ್ತಿಗಳಲ್ಲಿ ಕಾರ್ಯಾಚರಣೆ ಆರಂಭಿಸಿರುವ ಪೊಲೀಸರು, ಪಾರ್ಕಿಂಗ್ ಸ್ಥಳಗಳಲ್ಲಿ ಉಪಕರಣದ ಮೂಲಕ ವಾಹನಗಳ ಬಾಕಿ ಉಳಿದಿರುವ ದಂಡ ತಿಳಿದುಕೊಂಡು ಮಾಲೀಕರಿಂದ ದಂಡ ವಸೂಲಿ ಮಾಡುತ್ತಿದ್ದಾರೆ. ಒಂದು ವೇಳೆ ಸ್ಥಳದಲ್ಲಿ ದಂಡ ಪಾವತಿಸದಿದ್ದಲ್ಲಿ ಅಥವಾ ಮಾಲೀಕರು ಬಾರದಿದ್ದಲ್ಲಿ ಅಂತಹ ವಾಹನಗಳನ್ನು ವಶಕ್ಕೆ ಪಡೆದು ಠಾಣೆಗಳಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಚಲಿಸುತ್ತಿರುವ ವಾಹನಗಳನ್ನು ತಡೆದು…

ಸಾರ್ವಜನಿಕರೊಂದಿಗೆ ಬಾಂಧವ್ಯ ಬೆಸೆಯಲು ಮೈಸೂರು ಸಂಚಾರ ಪೊಲೀಸರು `ನಮ್ಮ MYTRA’ `ಒಂದಾಗಿ ಎಲ್ಲರೂ ಕಟ್ಟೋಣ ನಮ್ಮೂರು, ಸುಭದ್ರ ಮೈಸೂರು’ ಸಂದೇಶದ ಲಾಂಛನ ಶೀಘ್ರ ಬಿಡುಗಡೆ
ಮೈಸೂರು

ಸಾರ್ವಜನಿಕರೊಂದಿಗೆ ಬಾಂಧವ್ಯ ಬೆಸೆಯಲು ಮೈಸೂರು ಸಂಚಾರ ಪೊಲೀಸರು `ನಮ್ಮ MYTRA’ `ಒಂದಾಗಿ ಎಲ್ಲರೂ ಕಟ್ಟೋಣ ನಮ್ಮೂರು, ಸುಭದ್ರ ಮೈಸೂರು’ ಸಂದೇಶದ ಲಾಂಛನ ಶೀಘ್ರ ಬಿಡುಗಡೆ

August 18, 2018

ಮೈಸೂರು: ಕರ್ನಾಟಕ ಪೊಲೀಸರು ಜನ ಸ್ನೇಹಿಗಳಾಗುತ್ತಿದ್ದಾರೆ. ಧರಿಸುವ ಸಮವಸ್ತ್ರ, ಭಾರವಾದ ಶೂಗಳು, ಟೋಪಿ, ಹಿಡಿಯುವ ಲಾಠಿ, ಬಳಸುವ ರೈಫಲ್, ಪಿಸ್ತೂಲ್‍ಗಳಲ್ಲಿ ಬಲಾವಣೆಯಾಗದಿದ್ದರೂ, ವರುಷಗಳುರುಳಿದಂತೆ ನಡೆ, ನುಡಿ, ಭಾವನೆ, ಕಲ್ಪನೆಗಳಲ್ಲಿ ಒಂದಷ್ಟು ಪರಿವರ್ತನೆಯನ್ನು ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳಲ್ಲಿ ಕಾಣಬಹುದಾಗಿದೆ. ಪದವಿ, ಸ್ನಾತಕೋತ್ತರ ಪದವಿಯಂತಹ ಉನ್ನತ ಶಿಕ್ಷಣ ಪಡೆದವರೂ ಪೊಲೀಸ್ ಇಲಾಖೆಗೆ ಸೇರುತ್ತಿರುವುದು ಈ ಬಗೆಯ ಪರಿವರ್ತನೆಗೆ ಕಾರಣವಿರಬಹುದು. ಪೊಲೀಸರೆಂದರೆ ಬೆಚ್ಚಿ ಬೀಳುವ ಕಾಲವೊಂದಿತ್ತು. ಆದರೀಗ ಅವರೂ ಮನುಷ್ಯರೇ, ನಮ್ಮವರೇ ಪೊಲೀಸರು, ಅವರಿಗೂ ಹೃದಯವಿದೆ, ಭಾವನೆಗಳಿವೆ ಎಂಬುದು ಈಗ…

ಪೊಲೀಸರ ಸೋಗಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಅಪಹರಿಸಿ ಹಣ ವಸೂಲಿ
ಮೈಸೂರು

ಪೊಲೀಸರ ಸೋಗಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಅಪಹರಿಸಿ ಹಣ ವಸೂಲಿ

August 14, 2018

ಮೈಸೂರು:  ರಿಯಲ್ ಎಸ್ಟೇಟ್ ಉದ್ಯಮಿಯನ್ನು ಅಪಹರಿಸಿದ್ದ ಗುಂಪೊಂದು, ಪೊಲೀಸರು ಬೆನ್ನತ್ತಿರುವುದನ್ನು ಅರಿತು, ಮೇಲುಕೋಟೆ ಬಳಿ ಬಿಟ್ಟು ಹೋಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೆಚ್.ಡಿ.ಕೋಟೆ ತಾಲೂಕು, ಹೊಮ್ಮರಗಳ್ಳಿ ವಾಸವಿರುವ ರಿಯಲ್ ಎಸ್ಟೇಟ್ ಉದ್ಯಮಿ ಲೋಕೇಶ್ ಅಲಿಯಾಸ್ ಲೋಕಿ (42) ಅಪಹರಣಕ್ಕೊಳಗಾಗಿ, ಸದ್ಯ ದುಷ್ಕರ್ಮಿಗಳಿಂದ ಪಾರಾಗಿ ಬಂದಿದ್ದಾರೆ. ಅಪಹರಣಕಾರರು ಥಳಿಸಿದ್ದ ರಿಂದ ನಿತ್ರಾಣರಾಗಿರುವ ಲೋಕೇಶ್ ಅವರನ್ನು ಪೊಲೀಸರು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಹರಿಸಿದ್ದು ಹೀಗಂತೆ: ಹೊಮ್ಮರ ಗಳ್ಳಿಯಿಂದ ಆ.11ರಂದು ಅಪಹರಿಸಿದ್ದ ಲೋಕೇಶ್ ಅವರನ್ನು ಭಾನುವಾರ ರಾತ್ರಿ ಮಂಡ್ಯ ಜಿಲ್ಲೆ,…

1 2 3 4
Translate »