Tag: Mysuru City Police

ಕುಸಿದ ಮ್ಯಾನ್‍ಹೋಲ್‍ಗೆ ಪೊಲೀಸ್ ಬ್ಯಾರಿಕೇಡ್ ರಕ್ಷಣೆ
ಮೈಸೂರು

ಕುಸಿದ ಮ್ಯಾನ್‍ಹೋಲ್‍ಗೆ ಪೊಲೀಸ್ ಬ್ಯಾರಿಕೇಡ್ ರಕ್ಷಣೆ

July 10, 2018

ಮೈಸೂರು: ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಚಿದಂಬರೇಶ್ವರ ದೇವಾಲಯದ ಸಮೀಪ ಮ್ಯಾನ್‍ಹೋಲ್ ಕುಸಿದಿದ್ದು, ಜೀವಬಲಿಗೆ ಕಾದಿರುವಂತಿದೆ. ಈ ರಸ್ತೆಯಲ್ಲಿ ಸದಾವಾಹನ ದಟ್ಟಣೆ ಇರುತ್ತದೆ. ಅಲ್ಲದೆ ವಾಹನಗಳನ್ನು ರಸ್ತೆ ಬದಿಯಲ್ಲಿ ಪಾರ್ಕ್ ಮಾಡುತ್ತಾರೆ. ಈ ಸಂದರ್ಭದಲ್ಲಿ ವಾಹನಗಳ ಚಕ್ರ ಮ್ಯಾನ್‍ಹೋಲ್‍ಗಿಳಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಕೆ.ಆರ್.ಆಸ್ಪತ್ರೆ ಹಾಗೂ ಚೆಲುವಾಂಬ ಆಸ್ಪತ್ರೆಗೆ ಹೋಗುವವರೂ ಈ ಮಾರ್ಗವಾಗಿಯೇ ಸಾಗುತ್ತಾರೆ. ಕತ್ತಲಲ್ಲಿ ಪಾದಚಾರಿಗಳು ಮ್ಯಾನ್‍ಹೋಲ್‍ಗೆ ಕಾಲಿಟ್ಟರೆ ಜೀವಾಪಾಯವೂ ಉಂಟಾಗಬಹುದು. ಮ್ಯಾನ್‍ಹೋಲ್ ಕುಸಿದು ಹಲವು ದಿನಗಳೇ ಕಳೆದಿದೆ. ಮ್ಯಾನ್‍ಹೋಲ್ಗೆ ಕಸವನ್ನು ತುಂಬಲಾಗಿದ್ದು, ಪರಿಣಾಮ ಒಳಚರಂಡಿ ನೀರು…

ನಾಲ್ವರಿಗೆ ‘ನಮನ’ ಜೀವದಾನ
ಮೈಸೂರು

ನಾಲ್ವರಿಗೆ ‘ನಮನ’ ಜೀವದಾನ

July 8, 2018

ಗ್ರೀನ್ ಕಾರಿಡಾರ್ ನಲ್ಲಿ ಮೈಸೂರಿಂದ ಬೆಂಗಳೂರಿಗೆ ಬಹು ಅಂಗಾಂಗ ಹೊತ್ತು ಶರವೇಗದಲ್ಲಿ ಸಾಗಿದ ಆಂಬುಲೆನ್ಸ್ ಮೈಸೂರು: ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಯುವತಿಯ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಆಕೆಯ ಕುಟುಂಬದವರು ನೋವಿನಲ್ಲೂ ತ್ಯಾಗ ಮೆರೆದಿದ್ದಾರೆ. ಇದರೊಂದಿಗೆ ಆಕೆಯ ಸಾವಿಗೂ ಸಾರ್ಥಕತೆ ದಕ್ಕಿದಂತಾಗಿದೆ. ಎರಡು ದಿನಗಳ ಹಿಂದಷ್ಟೇ ಚಾಮುಂಡಿಬೆಟ್ಟದ ಮೇಲೆ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟ ಬಿಬಿಎಂ ವಿದ್ಯಾರ್ಥಿನಿ ಎಂ.ಸಿ.ನಮನ ಅವರ ಹೃದಯ ಕವಾಟ, ಕಿಡ್ನಿ ಹಾಗೂ ಶ್ವಾಸ ಕೋಶವನ್ನು,…

ಮೈಸೂರಲ್ಲಿ ದ್ವಿಚಕ್ರ ವಾಹನ ಕಳ್ಳತನ ಪ್ರಕರಣದಲ್ಲಿ ಕಡಿತ
ಮೈಸೂರು

ಮೈಸೂರಲ್ಲಿ ದ್ವಿಚಕ್ರ ವಾಹನ ಕಳ್ಳತನ ಪ್ರಕರಣದಲ್ಲಿ ಕಡಿತ

June 27, 2018

ಮೈಸೂರು: ಮೈಸೂರಿನಲ್ಲಿ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿವೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ತಿಳಿಸಿದ್ದಾರೆ. ದ್ವಿಚಕ್ರ ವಾಹನಗಳ ಕಳ್ಳತನ ಹೆಚ್ಚಾಗಿದ್ದು, ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆಂದು ಕೆಲ ಮಾಧ್ಯಮಗಳಲ್ಲಿ ವರದಿಯಾದ ಹಿನ್ನೆಲೆಯಲ್ಲಿ ಸ್ಪಷ್ಟೀಕರಣ ನೀಡಿರುವ ಇವರು, ಹಿಂದಿನ ವರ್ಷಗಳಿಗೆ ಹೋಲಿಸಿದರೆ 2017-18ನೇ ದ್ವಿಚಕ್ರ ವಾಹನಗಳ ಕಳ್ಳತನ ಕಡಿಮೆಯಾಗಿದೆ. 2013ರಲ್ಲಿ 378, 2014ರಲ್ಲಿ 334, 2015ರಲ್ಲಿ 340, 2016ರಲ್ಲಿ 414, 2017ರಲ್ಲಿ 305 ಪ್ರಕರಣಗಳು ದಾಖಲಾಗಿದ್ದರೆ, ಪ್ರಸಕ್ತ ವರ್ಷದ ಜನವರಿಯಲ್ಲಿ 17, ಫೆಬ್ರವರಿಯಲ್ಲಿ 14, ಮಾರ್ಚ್‍ನಲ್ಲಿ 17,…

ಮಾದಕ ವಸ್ತುಗಳ ಸೇವನೆ ಪರಿಣಾಮದ ಬಗ್ಗೆ ಜಾಗೃತಿ
ಮೈಸೂರು

ಮಾದಕ ವಸ್ತುಗಳ ಸೇವನೆ ಪರಿಣಾಮದ ಬಗ್ಗೆ ಜಾಗೃತಿ

June 27, 2018

ಮೈಸೂರು:  ಮಾದಕ ವಸ್ತುಗಳ ಸೇವನೆಯಿಂದ ದೂರವಿರಿ… ಆರೋಗ್ಯ ಕಾಪಾಡಿಕೊಳ್ಳಿ… ಎಂಬುದು ಸೇರಿದಂತೆ ಮಾದಕ ವಸ್ತುಗಳ ಮುಕ್ತ ಸಮಾಜಕ್ಕೆ ಅಗತ್ಯವಾದ ಹತ್ತು ಹಲವು ಘೋಷ ವಾಕ್ಯಗಳನ್ನು ಒಳಗೊಂಡ ಫಲಕಗಳು ವ್ಯಸನ ಮುಕ್ತರಾಗಿ ಎಂಬ ಸಂದೇಶ ರವಾನಿಸಿದವು. ದೇವರಾಜ ಪೊಲೀಸ್ ಠಾಣೆ ವತಿಯಿಂದ ಅಂತಾರಾಷ್ಟ್ರೀಯ ಮಾದಕ ಪದಾರ್ಥ ಸೇವನೆ ಮತ್ತು ಅಕ್ರಮ ಸಾಗಾಣೆ ವಿರೋಧಿ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಥಾ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡು ಈ ರೀತಿಯ ಸಂದೇಶಗಳ ಫಲಕಗಳನ್ನಿಡಿದು ಜಾಗೃತಿ ಮೂಡಿಸಿದರು. ಅವಿಲಾ ಕಾನ್ವೆಂಟ್ ಶಾಲಾ ಆವರಣದಿಂದ…

ಮೈಸೂರಲ್ಲಿ ಹೆಚ್ಚಿದ ಬುಲೆಟ್ ಬೈಕ್‍ಗಳ ಕಳವು
ಮೈಸೂರು

ಮೈಸೂರಲ್ಲಿ ಹೆಚ್ಚಿದ ಬುಲೆಟ್ ಬೈಕ್‍ಗಳ ಕಳವು

June 25, 2018

ಮೈಸೂರು: ಮೈಸೂರು ನಗರದಲ್ಲಿ ಬುಲೆಟ್ ಬೈಕುಗಳ ಕಳವು ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಬುಲೆಟ್ ಬೈಕುಗಳ ಕಳವು ಸಂಬಂಧ ಇತ್ತೀಚೆಗಷ್ಟೇ ನಗರ ಪೊಲೀಸ್ ಕಮೀಷ್ನರ್ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ನಡೆಸಿದ ಕ್ರೈಂ ರಿವ್ಯೂ ಸಭೆಯಲ್ಲಿ ದ್ವಿಚಕ್ರ ವಾಹನಗಳು ಅದರಲ್ಲೂ ಬುಲೆಟ್ ಬೈಕುಗಳ ಕಳ್ಳತನ ನಿಯಂತ್ರಿಸುವಂತೆ ಎಲ್ಲಾ ಠಾಣೆಗಳ ಇನ್ಸ್‍ಪೆಕ್ಟರ್ ಹಾಗೂ ಕ್ರೈಂ ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದಾರೆ. 2018ರ ಜನವರಿಯಿಂದ ಜೂನ್ ತಿಂಗಳವರೆಗೆ ಒಟ್ಟು 123 ದ್ವಿಚಕ್ರ ವಾಹನಗಳು ಕಳ್ಳತನವಾಗಿದ್ದು, 37 ಪತ್ತೆಯಾಗಿವೆ….

ಇಬ್ಬರು ಖದೀಮರ ಸೆರೆ: 12.80 ಲಕ್ಷ ಮೌಲ್ಯದ ಚಿನ್ನಾಭರಣ ವಶ
ಮೈಸೂರು

ಇಬ್ಬರು ಖದೀಮರ ಸೆರೆ: 12.80 ಲಕ್ಷ ಮೌಲ್ಯದ ಚಿನ್ನಾಭರಣ ವಶ

June 17, 2018

ಮೈಸೂರು: ಮೈಸೂರು ನಗರದಲ್ಲಿ ನಡೆದಿದ್ದ 9 ಮನೆ ಕಳ್ಳತನ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 12,80,000 ರೂ. ಮೌಲ್ಯದ 427 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮಂಡ್ಯ ಜಿಲ್ಲೆ, ಚಿಕ್ಕೇಗೌಡನದೊಡ್ಡಿ ಗ್ರಾಮದ ಸೈಯ್ಯದ್ ಅಹಮದ್ ಮಗ ಸೈಯ್ಯದ್ ಇಮ್ರಾನ್(24) ಹಾಗೂ ರಾಮನಗರ ಜಿಲ್ಲೆ, ಚನ್ನಪಟ್ಟಣದ ನವಾಜ್ ಮಗ ಸೈಯ್ಯದ್ ಖಾಲೀದ್(30) ಬಂಧಿತ ಆರೋಪಿಗಳು. ಜೂನ್ 14 ರಂದು ಮೈಸೂರಿನ ಅಶೋಕ ರಸ್ತೆಯ ಆಭರಣ ಅಂಗಡಿಗಳಲ್ಲಿ ಕಳವು ಮಾಲನ್ನು ಮಾರಾಟ ಮಾಡಲು ಹೊಂಚು…

ಸೇವಾ ಸಾಧನೆ ಮೆರೆದ 8 ಪೊಲೀಸರಿಗೆ `ನೈಟ್ಸ್ ಇನ್ ಖಾಕಿ’ ಪಾರಿತೋಷಕ ಪ್ರಧಾನ
ಮೈಸೂರು

ಸೇವಾ ಸಾಧನೆ ಮೆರೆದ 8 ಪೊಲೀಸರಿಗೆ `ನೈಟ್ಸ್ ಇನ್ ಖಾಕಿ’ ಪಾರಿತೋಷಕ ಪ್ರಧಾನ

June 15, 2018

ಮೈಸೂರು:  ಕೊಲೆ, ಸುಲಿಗೆ, ಕಳ್ಳತನ, ದೌರ್ಜನ್ಯ, ಗಲಾಟೆ, ಗದ್ದಲ ಹೀಗೆ ಸಮಾಜದಲ್ಲಿ ಯಾವುದೇ ಅಹಿತಕರ ಘಟನೆ ನಡೆದರು ಮೊದಲು ದೂಷಣೆಗೆ ಗುರಿಯಾಗುವುದು ಪೊಲೀಸರು. ತಮ್ಮದಲ್ಲದ ತಪ್ಪಿಗೂ ಆರೋಪ ಹೊರಬೇಕಾದ ಪರಿಧಿಯಲ್ಲಿ ಪೊಲೀಸರಿದ್ದಾರೆ. ಇಂತಹ ಸ್ಥಿತಿಯಲ್ಲೂ ನಿಷ್ಠೆ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿರುವ ಪೊಲೀಸರನ್ನು ಅಭಿನಂದಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ರವಾನಿಸಲಾಯಿತು. ಮೈಸೂರು ರೌಂಡ್ ಟೇಬಲ್-21 (ಒಖಖಿ-21) ಮತ್ತು ಮೈಸೂರು ಲೇಡೀಸ್ ಸರ್ಕಲ್-9 (ಒಐಅ-9) ಸಹಯೋಗದಲ್ಲಿ ಚಾಮುಂಡಿಬೆಟ್ಟ ತಪ್ಪಲಿನ ಆಲೀವ್ ಗಾರ್ಡ್‍ನ್‍ನ ಸಮಾವೇಶ ಸಭಾಂಗಣದಲ್ಲಿ ಇಂದು ಸಂಜೆ ನಡೆದ…

ಮೈಸೂರಲ್ಲಿ ನಾಳೆ ಪೊಲೀಸ್ ಪಾರಿತೋಷಕ ಪ್ರದಾನ ಸಮಾರಂಭ
ಮೈಸೂರು

ಮೈಸೂರಲ್ಲಿ ನಾಳೆ ಪೊಲೀಸ್ ಪಾರಿತೋಷಕ ಪ್ರದಾನ ಸಮಾರಂಭ

June 13, 2018

ಸಂಸದ ಪ್ರತಾಪ್ ಸಿಂಹ, ನಗರ ಪೊಲೀಸ್ ಕಮೀಷ್ನರ್ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್, ಎಸ್ಪಿ ಅಮಿತ್ ಸಿಂಗ್ ಉಪಸ್ಥಿತಿ ಮೈಸೂರು:  ಮೈಸೂರಿನ ಚಾಮುಂಡಿಬೆಟ್ಟ ತಪ್ಪಲಿನ ಆಲೀವ್ ಗಾರ್ಡನ್‍ನ ಸಮಾವೇಶ ಸಭಾಂಗಣದಲ್ಲಿ ಜೂನ್ 14ರಂದು ಸಂಜೆ 4.30 ಗಂಟೆಗೆ 45ನೇ ವಾರ್ಷಿಕ ‘ನೈಟ್ಸ್ ಇನ್ ಖಾಕಿ’ ಪೊಲೀಸ್ ಪಾರಿತೋಷಕ ಪ್ರಧಾನ-2018 ಕಾರ್ಯಕ್ರಮ ನಡೆಯಲಿದೆ. ಮೈಸೂರು ರೌಂಡ್ ಟೇಬಲ್-21 (ಒಖಖಿ-21) ಮತ್ತು ಮೈಸೂರು ಲೇಡೀಸ್ ಸರ್ಕಲ್-9 (ಒಐಅ-9) ಸಂಯುಕ್ತಾಶ್ರಯ ದಲ್ಲಿ ಏರ್ಪಡಿಸಿರುವ ಸಮಾರಂಭದಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳು…

ಮೈಸೂರಲ್ಲಿ ಪೊಲೀಸರ ರೂಟ್ ಮಾರ್ಚ್, ಫುಟ್ ಪೆಟ್ರೋಲಿಂಗ್
ಮೈಸೂರು

ಮೈಸೂರಲ್ಲಿ ಪೊಲೀಸರ ರೂಟ್ ಮಾರ್ಚ್, ಫುಟ್ ಪೆಟ್ರೋಲಿಂಗ್

April 28, 2018

ಮೈಸೂರು: ನಿಮ್ಮೊಂದಿಗೆ ನಾವಿ ದ್ದೇವೆ. ನಿರ್ಭೀತಿಯಿಂದ ಮತ ಚಲಾಯಿಸಿ ಎಂಬ ಅಭಯ ಸೂಚಕವಾಗಿ ಪೊಲೀಸರು ಮೈಸೂರಲ್ಲಿ ರೂಟ್ ಮಾರ್ಚ್ ಮತ್ತು ಪೆಟ್ರೋಲಿಂಗ್ ನಡೆಸುತ್ತಿದ್ದಾರೆ. ಏ.12ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮತದಾರರಿಗೆ ಮುಕ್ತ ಹಾಗೂ ನಿರ್ಭೀತಿಯಿಂದ ಮತದಾನ ಮಾಡಲು ಅಭಯ ನೀಡುವ ಸಲುವಾಗಿ ಹಾಗೂ ಸಮಾಜ ಘಾತುಕ ಶಕ್ತಿಗಳಿಗೆ ಎಚ್ಚರಿಕೆ ನೀಡಲು ಕೇಂದ್ರ ಅರೆ ಮೀಸಲು ಪಡೆ ಸಿಬ್ಬಂದಿ ಗುರುವಾರದಿಂದ ಮೈಸೂರಿನ ವಿವಿಧ ಬಡಾವಣೆ ಗಳಲ್ಲಿ ರೂಟ್ ಮಾರ್ಚ್ ನಡೆಸುತ್ತಿದೆ. ಗಡಿ ಭದ್ರತಾ ಪಡೆ (BSF)…

1 2 3 4
Translate »