ಹೆಚ್.ಡಿ.ಕೋಟೆ: ಸಾಕು ಆನೆಗಳೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ನಡೆಸುತ್ತಿ ರುವ ಕಾರ್ಯಾಚರಣೆ ನಡುವೆಯೇ ತಾಲೂಕಿನ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹುಲಿಯ ಅಟ್ಟಹಾಸ ಮುಂದುವರೆದಿದ್ದು, ಕಾಡಂಚಿನ ಗ್ರಾಮಸ್ಥರು ಮತ್ತಷ್ಟು ಭಯಭೀತರಾಗಿದ್ದಾರೆ. ಸೋಮವಾರದಂದು ಹುಲ್ಮಟ್ಲು ಗ್ರಾಮದ ಚಿನ್ನಪ್ಪನನ್ನು ಕೊಂದು ಹಾಕಿದ್ದ ಹುಲಿ, ಇಂದು ಬೆಳಿಗ್ಗೆ ತಿಮ್ಮನ ಹೊಸಳ್ಳಿ ಗ್ರಾಮದ ಕೆಂಚ(55) ಎಂಬಾತನನ್ನು ಬಲಿ ಪಡೆಯುವ ಮೂಲಕ ತನ್ನ ಅಟ್ಟಹಾಸವನ್ನು ಮುಂದು ವರೆಸಿದೆ. ಕಾಡಂಚಿನ ಸೇಬನಕೊಲ್ಲಿ ಎಂಬಲ್ಲಿ ಕೆಂಚ ಮತ್ತು 12 ವರ್ಷದ ಬಳ್ಳ ಎಂಬ ಬಾಲಕ ಇಂದು ಸಂಜೆ…
ರಾಹುಲ್‍ಗಾಂಧಿ ಕಿವಿಮಾತು: ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಮುಸುಕಿನ ಗುದ್ದಾಟಕ್ಕೆ ತಾತ್ಕಾಲಿಕ ತೆರೆ
February 1, 2019ಬೆಂಗಳೂರು,: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಡುವಿನ ಮುಸುಕಿನ ಗುದ್ದಾಟಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಾತ್ಕಾಲಿಕ ತಡೆ ಹಾಕಿದ್ದಾರೆ. ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರಥಮ ಬಾರಿಗೆ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು, ಸಾರ್ವಜನಿಕವಾಗಿ ಸಿದ್ದ ರಾಮಯ್ಯ ವಿರುದ್ಧ ಹರಿಹಾಯ್ದು, ದೋಸ್ತಿ ಪಕ್ಷಕ್ಕೆ ಎಚ್ಚರಿಕೆ ನೀಡುತ್ತಿದ್ದಂತೆ, ಎಚ್ಚೆತ್ತ ಕಾಂಗ್ರೆಸ್ ವರಿಷ್ಠರು ಮಧ್ಯ ಪ್ರವೇಶಿಸಿ ಮುಸುಕಿನ ಗುದ್ದಾಟಕ್ಕೆ ತೆರೆ ಎಳೆದಂತಿದೆ. ಕೆಪಿಸಿಸಿ…
ಹುಣಸೂರು ನಗರಸಭೆ ಪೌರಾಯುಕ್ತ ಶಿವಪ್ಪ ನಾಯಕ ಅಮಾನತು
February 1, 2019ಹುಣಸೂರು: ಅಕ್ರಮ ಖಾತೆ, ನಿಯಮ ಉಲ್ಲಂಘನೆ ಹಾಗೂ ಅವ್ಯವಹಾರದ ಆರೋಪದಡಿ ಹುಣಸೂರು ನಗರಸಭೆ ಪೌರಾಯುಕ್ತ ಶಿವಪ್ಪ ನಾಯಕ ಅವರನ್ನು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಶೇಖರಪ್ಪ ಅಮಾನತುಗೊಳಿಸಿ, ಆದೇಶ ನೀಡಿದ್ದಾರೆ. ಮೂಲತಃ ಸಮುದಾಯ ಸಂಘಟನಾ ಧಿಕಾರಿಯಾದ ಶಿವಪ್ಪ ನಾಯಕ, ಹುಣ ಸೂರು ನಗರ ಸಭೆಯಲ್ಲಿ ಕಳೆದ ಎರಡು ವರ್ಷಗಳಿಂದ ಪೌರಾಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಸ್ಥಳೀಯ ರಾಗಿದ್ದು, ಹಲವಾರು ಭ್ರಷ್ಟಾಚಾರಗಳಲ್ಲಿ ತೊಡಗಿದ್ದಾರೆ. ಅವ್ಯವಹಾರ ನಡೆಸುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಭಾರೀ ನಷ್ಟ ಉಂಟು ಮಾಡಿದ್ದಾರೆ ಎಂದು ರಾಮೇಗೌಡ ಎಂಬುವರು…
ಇಂದಿನಿಂದ ಸುತ್ತೂರು ಜಾತ್ರೆ ಆರಂಭ
February 1, 2019ನಂಜನಗೂಡು: ಕಪಿಲಾ ನದಿ ತೀರದಲ್ಲಿರುವ ಸುತ್ತೂರು ಶ್ರೀ ಕ್ಷೇತ್ರದಲ್ಲಿ ನಾಡಿನ ಪರಂಪರೆ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ಹಾಗೂ ಕೃಷಿಗೆ ಪೂರಕವಾಗಿ ರೈತರಿಗೆ ಉಪಯುಕ್ತ ಮಾಹಿತಿ ನೀಡುವ ಜನ ಸಾಮಾನ್ಯರ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿರುವ ಸುತ್ತೂರು ಜಾತ್ರಾ ಮಹೋತ್ಸವದ ಆರು ದಿನಗಳ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಜಾತ್ರೆಯ ಪ್ರಮುಖ ಆರ್ಕಷಣೆಯಾಗಿರುವ ವಸ್ತು ಪ್ರದರ್ಶನ, ಕೃಷಿ ಮೇಳಕ್ಕೆ ಅಂತಿಮ ಸ್ಪರ್ಶ ನೀಡಲಾ ಗಿದೆ. ಮಹಾ ದಾಸೋಹಕ್ಕಾಗಿ ಸಿದ್ಧತಾ ಕಾರ್ಯ ಪೂರ್ಣಗೊಂಡಿದೆ. ಜಾತ್ರೆಯನ್ನು ವೀಕ್ಷಿಸಲು ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ…
ಜಿ.ಡಿ.ಹರೀಶ್‍ಗೌಡರಿಂದ ಬಡ್ಡಿರಹಿತ ಸಾಲ ವಿತರಣೆ
February 1, 2019ಮೈಸೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ `ಬಡವರ ಬಂಧು’ ಯೋಜನೆಯಡಿ 112 ಮಂದಿ ಫಲಾನುಭವಿಗಳಿಗೆ 4.02 ಲಕ್ಷ ರೂ. ಸಾಲ ಮಂಜೂರಾತಿ ಪತ್ರವನ್ನು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಎಂಸಿಡಿಸಿಸಿ) ಅಧ್ಯಕ್ಷ ಜಿ.ಡಿ. ಹರೀಶ್‍ಗೌಡ ಇಂದಿಲ್ಲಿ ವಿತರಿಸಿದರು. ಮೈಸೂರಿನ ನೆಹರು ವೃತ್ತದಲ್ಲಿರುವ ಎಂಸಿ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಡ್ಡಿರಹಿತ ಸಾಲ ವಿತರಿ ಸುವ ಮೂಲಕ ಮೈಸೂರು ಜಿಲ್ಲೆಯಲ್ಲಿ `ಬಡವರ ಬಂಧು’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಯೋಜನೆಯಡಿ ನಗರ, ಪಟ್ಟಣ ಪ್ರದೇಶಗಳ…
ಮೈಸೂರಿನ ವಿವಿಧೆಡೆ ಸಿದ್ಧಗಂಗಾ ಶ್ರೀಗಳ ಪುಣ್ಯ ಸ್ಮರಣೆ
February 1, 2019ಮೈಸೂರು: ತ್ರಿವಿಧ ದಾಸೋಹಿ, ನಡೆದಾಡುವ ದೇವರು ಲಿಂಗೈಕ್ಯ ಸಿದ್ಧಗಂಗಾ ಮಠದ ಡಾ. ಶ್ರೀ ಶಿವ ಕುಮಾರ ಸ್ವಾಮಿಗಳ ಪುಣ್ಯಸ್ಮರಣೆ ಕಾರ್ಯ ಕ್ರಮವನ್ನು ಗುರುವಾರ ಮೈಸೂರಿನಲ್ಲಿ ವಿವಿಧ ಸಂಘ-ಸಂಸ್ಥೆಗಳು ನಡೆಸಿದವು. ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಪ್ರಸಾದ ವಿತರಿಸುವ ಮೂಲಕ ಶ್ರೀಗಳಿಗೆ ಗೌರವ ನಮನ ಸಲ್ಲಿಸಿದವು. ಬಂಡೀಪಾಳ್ಯದಲ್ಲಿ: ಬಂಡೀಪಾಳ್ಯ ಎಪಿ ಎಂಸಿ ಯಾರ್ಡ್‍ನಲ್ಲಿರುವ ತರಕಾರಿ ಮಾರು ಕಟ್ಟೆ ಆವರಣದಲ್ಲಿ ಶ್ರೀಗಳ ಭಾವಚಿತ್ರವನ್ನು ಪೂಜಿಸಿದ ತರಕಾರಿ ವ್ಯಾಪಾರಿಗಳು ಪುಷ್ಪ ನಮನ ಸಲ್ಲಿಸಿದರು. ಬಳಿಕ ಅನ್ನ ಸಂತ ರ್ಪಣೆ ನಡೆಸಲಾಯಿತು. ವರ್ತಕರು,…
ಪ್ರಾಮಾಣಿಕ ಸೇವೆ ಸಲ್ಲಿಸಿದರೆ ಸವಿತಾ ಸಮಾಜದ ಉದ್ಧಾರ ಸಾಧ್ಯ
February 1, 2019ಮೈಸೂರು: ಪ್ರತಿ ಯೊಬ್ಬರೂ ಪ್ರಾಮಾಣಿಕ ಸಮಾಜ ಸೇವಕರಾಗಿ ಸಮಾಜದ ಏಳಿಗೆಗೆ ನಿರಂತರವಾಗಿ ದುಡಿದರೆ ಸಮಾಜದ ಉದ್ಧಾರ ಸಾಧ್ಯವಾಗಲಿದೆ ಎಂದು ಶಾಸಕ ತನ್ವೀರ್‍ಸೇಠ್ ಅಭಿಪ್ರಾಯಪಟ್ಟರು. ಮೈಸೂರಿನ ಖಾಸಗಿ ಹೋಟೆಲ್ ಸಭಾಂ ಗಣದಲ್ಲಿ ಕರ್ನಾಟಕ ರಾಜ್ಯ ಸವಿತಾ ಸಮಾ ಜದ ವತಿಯಿಂದ ನಡೆದ ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಜಯಂತ್ಯೋತ್ಸವ ಮತ್ತು ಸಮಾಜದ ಮೈಸೂರು ಜಿಲ್ಲಾ ಕಾರ್ಯಕಾರಿ ಸಮಿ ತಿಯ ಪದಗ್ರಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸೇವೆ ಎಂಬುದು ಒಂದು ಜನಾಂಗಕ್ಕೆ ಮಾತ್ರ ಸೀಮಿತವಲ್ಲ. ಎಲ್ಲಾ ವರ್ಗದವರೂ…
ಸಿದ್ದರಾಮಯ್ಯ ಆಡಳಿತದಿಂದಾಗಿ `ಸಾಲದ ಶೂಲ’ದಲ್ಲಿ ರಾಜ್ಯದ ಜನ
February 1, 2019ಮೈಸೂರು: ರಾಜ್ಯ ಸರ್ಕಾರದ ಸಾಲದ ಮೊತ್ತ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಇದ್ದು, ಪ್ರತಿಯೊಬ್ಬ ಪ್ರಜೆಯ ತಲೆಯ ಮೇಲೆ ಸರಾಸರಿ ಅರ್ಧ ಲಕ್ಷದಷ್ಟು ಸಾಲದ ಹೊರೆ ಎಂಬುದಾಗಿ ಅಂಕಿ ಅಂಶಗಳು ಬಹಿರಂಗಪಡಿಸಿ ರುವುದನ್ನು ನೋಡಿದರೆ, ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಸಾಲದ ಮೊತ್ತದಲ್ಲಿ ಏರಿಕೆ ಕಂಡು ಬಂದಿದ್ದು, ಬರೀ ಸಾಲ ಮಾಡಿದ್ದೇ ಅವರ ಸಾಧನೆಯಾಗಿದೆ ಎಂದು ರಾಜ್ಯ ಬಿಜೆಪಿ ಸಹ ವಕ್ತಾರ ಆರ್.ರಘು ಕೌಟಿಲ್ಯ ಇಂದಿಲ್ಲಿ ಆರೋಪಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ…
ಸ್ವಚ್ಛ ದಂತ ಅಭಿಯಾನದಡಿ ನೂರಾರು ವಿದ್ಯಾರ್ಥಿಗಳಿಗೆ ಉಚಿತ ದಂತ ಚಿಕಿತ್ಸೆ
February 1, 2019ಮೈಸೂರು: ಸ್ವಚ್ಛ ದಂತ ಅಭಿಯಾನದಡಿ ಗುರುವಾರ ಮೈಸೂ ರಿನ ಮಂಚೇಗೌಡನಕೊಪ್ಪಲಿನ ವಿದ್ಯಾ ವಾಹಿನಿ ಶಾಲೆಯ ನೂರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ದಂತ ತಪಾಸಣೆ ನಡೆಸಿ, ಚಿಕಿತ್ಸೆ ನೀಡಲಾಯಿತು. ಮೈಸೂರಿನ ಅನಿ ಫೌಂಡೇಷನ್, ಮೈಸೂರು ಜಿಲ್ಲೆಯ ಸರ್ಕಾರಿ ಹಾಗೂ ಅನು ದಾನಿತ ಶಾಲೆಗಳ ವಿದ್ಯಾರ್ಥಿಗಳ ದಂತ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸ್ವಚ್ಛ ದಂತ ಅಭಿಯಾನ ಹಮ್ಮಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ವಿದ್ಯಾವಾಹಿನಿ ಶಾಲೆಯ ನೂರಾರು ವಿದ್ಯಾರ್ಥಿಗಳ ದಂತ ತಪಾಸಣೆ ನಡೆಸಲಾಯಿತು. ಅನಿ ಫೌಂಡೇಷನ್ ಮುಖ್ಯಸ್ಥೆ ದಂತ ಶಸ್ತ್ರ ಚಿಕಿತ್ಸಾ ತಜ್ಞೆ ಡಾ.ಎನ್.ಅನುಶ್ರೀ,…
ಮೈಸೂರಲ್ಲಿ ನಾಳೆಯಿಂದ `ಹೆಜ್ಜೆ ಗೆಜ್ಜೆ’ ನೃತ್ಯ ಸಂಭ್ರಮೋತ್ಸವ
February 1, 2019ಮೈಸೂರು: ಮೈಸೂರಿನ ನಿಮಿಷಾಂಬ ಡ್ಯಾನ್ಸ್ ಪ್ರಮೋಟರ್ಸ್‍ನ 23ನೇ ವರ್ಷದ ಗೆಜ್ಜೆ ಹೆಜ್ಜೆ ಸಂಭ್ರಮೋತ್ಸವ ಅಂಗವಾಗಿ ಫೆ.2 ಮತ್ತು 3ರಂದು ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ಮತ್ತು ಡಾ.ವಿಷ್ಣು ವರ್ಧನ್ ಕುಟುಂಬಕ್ಕೆ ಕರ್ನಾಟಕ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಿರುವುದಾಗಿ ಪ್ರಮೋಟರ್ಸ್ ಸಂಸ್ಥಾಪಕ ಶ್ರೀಧರ್ ಜೈನ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರು ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.2ರಂದು ಬೆಳಿಗ್ಗೆ 9ರಿಂದ ಹೆಜ್ಜೆ ಗೆಜ್ಜೆ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ನಡೆಯ ಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರಖ್ಯಾತ…