Tag: Mysuru

ಸಂದೇಶ ಸಾರಿದ ಸೈಕ್ಲೊಥಾನ್ ರ್ಯಾಲಿ
ಮೈಸೂರು

ಸಂದೇಶ ಸಾರಿದ ಸೈಕ್ಲೊಥಾನ್ ರ್ಯಾಲಿ

January 28, 2019

ಮೈಸೂರು: ಪ್ರತಿ ನಿತ್ಯ ಸೈಕಲ್ ಬಳಸಿ, ಹೃದಯದ ಆರೋಗ್ಯ ಕಾಪಾಡಿಕೊಂಡರೆ ದೈಹಿಕ ಸದೃಢತೆ, ಹಾಗೂ ಮಾನಸಿಕ ಆರೋಗ್ಯವನ್ನು ಉತ್ತಮ ವಾಗಿ ಇಟ್ಟುಕೊಳ್ಳಬಹುದು ಎಂಬ ಸಂದೇಶ ಸಾರುವ ಎಲಿಗ್ಸೈರ್ ಸೈಕ್ಲೊಥಾನ್ (ಸೈಕಲ್ ರ್ಯಾಲಿ) ಇಂದಿಲ್ಲಿ ನಡೆಯಿತು. ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಉನ್ನತ ಶಿಕ್ಷಣ ಸಚಿವರೂ ಆದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸೈಕಲ್ ರ್ಯಾಲಿಗೆ ಹಸಿರು ನಿಶಾನೆ ತೋರಿ ಸುವ ಮೂಲಕ ಚಾಲನೆ ನೀಡಿದರು. 7ರಿಂದ 60 ವರ್ಷ ವಯೋಮಾನದ ಸುಮಾರು 600ಕ್ಕೂ ಹೆಚ್ಚು…

ರೈಲ್ವೇ ಕ್ವಾರ್ಟರ್ಸ್‍ನಲ್ಲಿ 3 ಮಕ್ಕಳನ್ನು  ಮಲಗಿಸಿ ನಾಪತ್ತೆಯಾದ ಮಹಿಳೆ!
ಮೈಸೂರು

ರೈಲ್ವೇ ಕ್ವಾರ್ಟರ್ಸ್‍ನಲ್ಲಿ 3 ಮಕ್ಕಳನ್ನು ಮಲಗಿಸಿ ನಾಪತ್ತೆಯಾದ ಮಹಿಳೆ!

January 28, 2019

ಮೈಸೂರು: ಮಹಾರಾಷ್ಟ್ರದ ವಳೆನ್ನಲಾದ ಮಹಿಳೆಯೋರ್ವಳು ತನ್ನ ಮಕ್ಕಳನ್ನು ರೈಲ್ವೇ ಕ್ವಾರ್ಟರ್ಸ್‍ನ ಮನೆಯೊಂದರ ಮುಂದೆ ಮಲಗಿಸಿ ನಾಪತ್ತೆಯಾದ ಬಗ್ಗೆ ವರದಿಯಾಗಿದೆ. ಯಾದವಗಿರಿಯಲ್ಲಿರುವ ಲೋಕೋ ಕಾಲೋನಿ ರೈಲ್ವೇ ಕ್ವಾರ್ಟರ್ಸ್‍ಗೆ ಮೂವರು ಗಂಡು ಮಕ್ಕಳೊಂದಿಗೆ ಜನವರಿ 16ರಂದು ರಾತ್ರಿ 9 ಗಂಟೆ ಸುಮಾರಿನಲ್ಲಿ ಬಂದ ಅಪರಿಚಿತ ಮಹಿಳೆ ತನ್ನನ್ನು ಮಹಾ ರಾಷ್ಟ್ರದ ಪುಣೆ ನಿವಾಸಿ ಎಂದು ಪರಿಚಯಿಸಿ ಕೊಂಡು ತಾನು ಜೈಪುರ ರೈಲಿನಲ್ಲಿ ಮೈಸೂರಿಗೆ ಬಂದಿರುವುದಾಗಿಯೂ ಹೇಳಿಕೊಂಡು ರಾತ್ರಿ ಮನೆಯ ಮುಂದೆ ಮಲಗಿ, ಬೆಳಿಗ್ಗೆ ಹೋಗುವುದಾಗಿ ತಿಳಿಸಿ, ಮನೆಯೊಂದರ ವರಾಂಡದಲ್ಲಿ ಮಲಗಿದ್ದಾಳೆ….

ಮೈಸೂರಲ್ಲಿ ಸಿವಿಲ್ ಪೊಲೀಸ್  ಕಾನ್‍ಸ್ಟೇಬಲ್‍ಗಳ ಹುದ್ದೆಗೆ ಲಿಖಿತ ಪರೀಕ್ಷೆ
ಮೈಸೂರು

ಮೈಸೂರಲ್ಲಿ ಸಿವಿಲ್ ಪೊಲೀಸ್ ಕಾನ್‍ಸ್ಟೇಬಲ್‍ಗಳ ಹುದ್ದೆಗೆ ಲಿಖಿತ ಪರೀಕ್ಷೆ

January 28, 2019

ಮೈಸೂರು: ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಿವಿಲ್ ಪೊಲೀಸ್ ಕಾನ್‍ಸ್ಟೇಬಲ್ ಮತ್ತು ಮಹಿಳಾ ಪೊಲೀಸ್ ಕಾನ್‍ಸ್ಟೇಬಲ್ ಹುದ್ದೆಗಳಿಗಾಗಿ ಇಂದು ಮೈಸೂರಲ್ಲಿ ಅಭ್ಯರ್ಥಿಗಳ ಲಿಖಿತ ಪರೀಕ್ಷೆ ನಡೆಯಿತು. ಮೈಸೂರಿನ ಮಹಾರಾಜ, ಮಹಾಜನ, ವಿದ್ಯಾವರ್ಧಕ, ಮಹಾರಾಣಿ ಸೇರಿದಂತೆ ಒಟ್ಟು 20 ಕೇಂದ್ರಗಳಲ್ಲಿ ಕೊಠಡಿಗೆ 20 ಮಂದಿಯಂತೆ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿತ್ತು. ಮೈಸೂರಲ್ಲಿ 58 ಕಾನ್‍ಸ್ಟೇಬಲ್ ಮತ್ತು 14 ಮಹಿಳಾ ಕಾನ್‍ಸ್ಟೇಬಲ್‍ಗಳ ಹುದ್ದೆ ಗಾಗಿ ಒಟ್ಟು 9998 ಮಂದಿಗೆ ಪ್ರವೇಶ ಪತ್ರ ನೀಡಲಾಗಿತ್ತು. ಪ್ರತೀ ಪರೀಕ್ಷಾ ಕೊಠಡಿ ಯಲ್ಲಿ…

ಕರ್ನಾಟಕ ವಲಯ ಮಟ್ಟದಲ್ಲಿ ನೇಮಕಾತಿಗೆ ಅಂಚೆ ನೌಕರರ ಆಗ್ರಹ
ಮೈಸೂರು

ಕರ್ನಾಟಕ ವಲಯ ಮಟ್ಟದಲ್ಲಿ ನೇಮಕಾತಿಗೆ ಅಂಚೆ ನೌಕರರ ಆಗ್ರಹ

January 28, 2019

ಮೈಸೂರಲ್ಲಿ ವಿಭಾಗೀಯ ಮಟ್ಟದ ಆರ್‍ಎಂಎಸ್, ಎಸ್ಸಿ, ಎಸ್ಟಿ ನೌಕರರ ಸಮ್ಮೇಳನದಲ್ಲಿ ನಿರ್ಣಯ ಮೈಸೂರು: ಮೊದಲಿದ್ದಂತೆ ಅಂಚೆ ಇಲಾಖೆಗೆ ಕರ್ನಾಟಕ ವಲಯ ಮಟ್ಟದಲ್ಲೇ ಸ್ಥಳೀಯ ನಿರುದ್ಯೋಗಿ ಯುವಕರನ್ನು ನೇಮಕ ಮಾಡಬೇಕೆಂದು ಅಖಿಲ ಭಾರತ ಅಂಚೆ ಇಲಾಖೆ ನೌಕರರ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಂಘ ಆಗ್ರಹಿಸಿದೆ. ಮೈಸೂರಿನ ಜೆ.ಕೆ.ಗ್ರೌಂಡ್‍ನಲ್ಲಿರುವ ಮೈಸೂರು ಮೆಡಿಕಲ್ ಕಾಲೇಜಿನ ಪ್ಲಾಟಿನಂ ಜುಬಿಲಿ ಮಿನಿ ಸಭಾಂಗಣದಲ್ಲಿ ಏರ್ಪಡಿಸಿದ್ದ 2ನೇ ವಿಭಾಗೀಯ ಮಟ್ಟದ ಆರ್‍ಎಂಎಸ್, ಎಸ್ಸಿ, ಎಸ್ಟಿ ನೌಕರರ ಸಮ್ಮೇಳನ ಹಾಗೂ ವಲಯ ಕಾರ್ಯಕಾರಿಣಿ ಸಭೆಯಲ್ಲಿ…

ಪ್ರೊ ಕಬಡ್ಡಿ ಗೆದ್ದ ಚಾಮುಂಡೇಶ್ವರಿ ಬುಲ್ಸ್
ಮೈಸೂರು

ಪ್ರೊ ಕಬಡ್ಡಿ ಗೆದ್ದ ಚಾಮುಂಡೇಶ್ವರಿ ಬುಲ್ಸ್

January 28, 2019

ಮೈಸೂರು: ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿರುವ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಪ್ರೊ ಕಬಡ್ಡಿ ಪಂದ್ಯಾವಳಿ ಯಲ್ಲಿ `ಚಾಮುಂಡೇಶ್ವರಿ ಬುಲ್ಸ್’ ಗೆಲುವು ಸಾಧಿಸಿದೆ. ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ 40ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಆಯೋಜಿಸಿದ್ದ ಮೈಸೂರು ನಗರ ಮಟ್ಟದ ಪುರುಷರ ಪ್ರೊ ಕಬಡ್ಡಿ ಪಂದ್ಯಾವಳಿಯಲ್ಲಿ ಚಾಮುಂಡೇಶ್ವರಿ ಬುಲ್ಸ್ ತಂಡವು ಅಂಜನಿ ಪ್ಯಾಂಥರ್ಸ್ ವಿರುದ್ಧ ಗೆಲುವು ಸಾಧಿಸಿ ಪ್ರಥಮ ಸ್ಥಾನ ಪಡೆದರೆ, ಅಂಜನಿ ಪ್ಯಾಂಥರ್ಸ್ ತಂಡ ದ್ವಿತೀಯ ಬಹುಮಾನಕ್ಕೆ ತೃಪ್ತಿಪಡಬೇಕಾಯಿತು. ಎಸ್‍ಎಲ್‍ಡಿ ಬುಲ್ಸ್ ತೃತೀಯ ಮತ್ತು…

ಕಾರ್ಮಿಕರ ಭದ್ರತೆಗೆ ಉದ್ಯೋಗ ಖಾತರಿ ಯೋಜನೆ  ಹೆಚ್.ಡಿ.ಕೋಟೆಯಲ್ಲಿ ಸ್ಮಾಟ್ ಕಾರ್ಡ್ ವಿತರಿಸಿದ ಸಂಸದ ಧ್ರುವನಾರಾಯಣ್
ಮೈಸೂರು

ಕಾರ್ಮಿಕರ ಭದ್ರತೆಗೆ ಉದ್ಯೋಗ ಖಾತರಿ ಯೋಜನೆ ಹೆಚ್.ಡಿ.ಕೋಟೆಯಲ್ಲಿ ಸ್ಮಾಟ್ ಕಾರ್ಡ್ ವಿತರಿಸಿದ ಸಂಸದ ಧ್ರುವನಾರಾಯಣ್

January 28, 2019

ಹೆಚ್.ಡಿ.ಕೋಟೆ: ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರಿಗೆ ಭದ್ರತೆ ಒದಗಿಸುವ ಉದ್ದೇಶದಿಂದ, ಹಿಂದಿನ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ಉದ್ಯೋಗ ಖಾತರಿ ಯೋಜನೆ ಜಾರಿಗೆ ತಂದಿದ್ದರು ಎಂದು ಸಂಸದ ಆರ್.ಧ್ರುವನಾರಾಯಣ್ ತಿಳಿಸಿದರು. ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ, ಕಾರ್ಮಿಕ ವಿಭಾಗ, ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಸ್ಮಾರ್ಟ್ ಕಾರ್ಡ್ ವಿತರಣೆ ಮತ್ತು ಸರ್ಕಾರಿ ಸವಲತ್ತುಗಳ ಬಗ್ಗೆ ಕಾರ್ಯಾಗಾರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಹಿಂದಿನಿಂದಲೂ ಎಂದಿಗೂ ಕಾಂಗ್ರೆಸ್ ಪಕ್ಷ ಕಾರ್ಮಿಕರ ಪರವಾಗಿಯೇ ಇದೆ….

ಬುಲೆಟ್‍ಗೆ ಕಾರು ಡಿಕ್ಕಿ: ಸವಾರ ಸಾವು
ಮೈಸೂರು

ಬುಲೆಟ್‍ಗೆ ಕಾರು ಡಿಕ್ಕಿ: ಸವಾರ ಸಾವು

January 28, 2019

ಭೇರ್ಯ: ಬುಲೆಟ್ ಬೈಕ್‍ಗೆ ಸ್ವಿಪ್ಟ್ ಕಾರು ಡಿಕ್ಕಿ ಹೊಡೆದ ಪರಿಣಾಮ ಇಂಜನಿಯರ್ ಓರ್ವ ಮೃತಪಟ್ಟಿರುವ ಘಟನೆ ಸಮೀಪದ ಬೊಮ್ಮೆನಹಳ್ಳಿ -ಚಿಕ್ಕವಡ್ಡರಗುಡಿ ಗ್ರಾಮಗಳ ಬಳಿಯ ಹಾಸನ-ಮೈಸೂರು ಹೆದ್ದಾರಿಯಲ್ಲಿ ನಡೆದಿದೆ. ಕೆ.ಆರ್.ನಗರ ತಾಲೂಕಿನ ಬಟಿಗನಹಳ್ಳಿ ಗ್ರಾಮದ ಬಿ.ವಿ.ಶ್ರೀಧರ್ ಮೃತರು, ಇವರಿಗೆ ಪತ್ನಿ, ಇಬ್ಬರು ಪುತ್ರರಿದ್ದಾರೆ. ಕೆ.ಆರ್.ನಗರದ ಖಾಸಗಿ ಸಂಸ್ಥೆಯಲ್ಲಿ ಇಂಜಿನಿಯರ್ ಆಗಿದ್ದು, ಎಂದಿನಂತೆ ತನ್ನ ಕೆಲಸ ಮುಗಿಸಿಕೊಂಡು ಊರಿಗೆ ಬುಲೆಟ್‍ನಲ್ಲಿ ವಾಪಸ್ಸಾಗುತ್ತಿದ್ದಾಗ ಎದುರಿನಿಂದ ಬಂದ ಸ್ವಿಪ್ಟ್ ಕಾರ್ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬುಲೇಟ್ ಸ್ವಲ್ಪ ದೂರದಲ್ಲಿ ಬಿದ್ದಿದ್ದು, ಬಿ.ವಿ.ಶ್ರೀಧರ್…

ಮೈಸೂರಿನ ಅಪೊಲೋ ಆಸ್ಪತ್ರೆಯಲ್ಲಿ ಗಾಯಾಳು ಮಗುವಿಗೆ ಶಸ್ತ್ರ ಚಿಕಿತ್ಸೆ
ಮೈಸೂರು

ಮೈಸೂರಿನ ಅಪೊಲೋ ಆಸ್ಪತ್ರೆಯಲ್ಲಿ ಗಾಯಾಳು ಮಗುವಿಗೆ ಶಸ್ತ್ರ ಚಿಕಿತ್ಸೆ

January 26, 2019

ಮೈಸೂರು: ಗುರುವಾರ ಮುಂಜಾನೆ ಕೊಪ್ಪ ಸಮೀಪ ಕಾರು ಕಂದಕಕ್ಕೆ ಉರುಳಿದ್ದ ದುರಂತದಲ್ಲಿ ಸಾವನ್ನಪ್ಪಿದ ಮೈಸೂರಿನ ಲೀಲಾವತಿ ಅವರ ಅಂತ್ಯಕ್ರಿಯೆ ಇಂದು ಚಾಮುಂಡಿಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ನೆರವೇರಿತು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರ ಮೊಮ್ಮಗ ಹರ್ಷಿತನನ್ನು ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಯಲ್ಲಿ ಇಂದು ಶಸ್ತ್ರ ಚಿಕಿತ್ಸೆಗೊಳ ಪಡಿಸ ಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಉಳಿದಂತೆ ತೀವ್ರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿರುವ ಸೌಮ್ಯ(30) ಮತ್ತು ಪದ್ಮಾ(30) ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ಲೀಲಾವತಿ ಅವರ ಮಗ…

ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸಂಪೂರ್ಣ  ವಿಫಲ; ಕೊಚ್ಚಿ ಹೋಗಿರುವ ಮೋದಿ ಅಲೆ
ಮೈಸೂರು

ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸಂಪೂರ್ಣ ವಿಫಲ; ಕೊಚ್ಚಿ ಹೋಗಿರುವ ಮೋದಿ ಅಲೆ

January 26, 2019

ಮೈಸೂರು:  ಅಲ್ಲಿ ನರೇಂದ್ರ ಮೋದಿ ನಾಯಕತ್ವದ ಕೇಂದ್ರ ಸರ್ಕಾರ, ಇಲ್ಲಿ ವಿರೋಧ ಪಕ್ಷವಾಗಿ ಕೆಲಸ ಮಾಡುವಲ್ಲಿ ಬಿಜೆಪಿ ಪೂರ್ಣ ವಿಫಲವಾಗಿವೆ ಎಂದು ಜೆಡಿಎಸ್ ರಾಜ್ಯಾ ಧ್ಯಕ್ಷ ಅಡಗೂರು ಹೆಚ್.ವಿಶ್ವನಾಥ್  ಟೀಕಿಸಿದರು. ಮೈಸೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಸರ್ಕಾರದ ಬಗ್ಗೆ ಜನರಿಗೆ ಭ್ರಮನಿರಸನವಾಗಿದೆ. ಮೋದಿ ನೀಡಿದ್ದ ಭರವಸೆಗಳೆಲ್ಲಾ ಹುಸಿಯಾಗಿದ್ದು, ನರೇಂದ್ರ ಮೋದಿ ಸುಳ್ಳುಗಾರ ಎಂಬುದು ಅರಿವಾಗಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯದು ಅತಂತ್ರ ಸ್ಥಿತಿ ಎಂದು ಸಮೀಕ್ಷೆಗಳು ಹೇಳಿವೆ ಎಂದರು. ನೋಟು ಅಮಾನ್ಯೀಕರಣ ಮತ್ತು ಜಿಎಸ್‍ಟಿ ಜೊತೆಗೇ…

ತಿಲಕ್‍ನಗರದಲ್ಲಿ ರಸ್ತೆ ಡಾಂಬರೀಕರಣಕ್ಕೆ ಗುದ್ದಲಿ ಪೂಜೆ
ಮೈಸೂರು

ತಿಲಕ್‍ನಗರದಲ್ಲಿ ರಸ್ತೆ ಡಾಂಬರೀಕರಣಕ್ಕೆ ಗುದ್ದಲಿ ಪೂಜೆ

January 26, 2019

ಮೈಸೂರು: ಮೈಸೂರಿನ ತಿಲಕ್ ನಗರದ ಆರ್‍ಎಂಸಿ ಸರ್ಕಲ್‍ನಿಂದ ಉಮರ್ ಖಯಾಂ ರಸ್ತೆವರೆಗೆ ಡಾಂಬರೀಕರಣ ಹಾಗೂ ಚರಂಡಿ ಕಾಮಗಾರಿಗೆ ಶಾಸಕ ಎಲ್.ನಾಗೇಂದ್ರ ಗುದ್ದಲಿ ಪೂಜೆ ನೆರವೇರಿಸಿದರು. 80 ಲಕ್ಷ ರೂ. ವೆಚ್ಚದಲ್ಲಿ ತಿಲಕ್‍ನಗರ 2ನೇ ಮುಖ್ಯ ರಸ್ತೆಯ ಡಾಂಬರೀಕರಣ 20 ಲಕ್ಷ ರೂ. ವೆಚ್ಚದಲ್ಲಿ ಒಳಚರಂಡಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಗುಣಮಟ್ಟ ಕಾಪಾಡಿಕೊಂಡು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕೆಂದು ಶಾಸಕರು ತಿಳಿಸಿದ್ದಾರೆ. ಬಿಎಂಶ್ರೀ ನಗರದಲ್ಲಿ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಅಂಬೇಡ್ಕರ್ ಸಮುದಾಯ ಭವನದ ಕಟ್ಟಡ ವನ್ನು…

1 112 113 114 115 116 194
Translate »