ಮೈಸೂರಿನ ಅಪೊಲೋ ಆಸ್ಪತ್ರೆಯಲ್ಲಿ ಗಾಯಾಳು ಮಗುವಿಗೆ ಶಸ್ತ್ರ ಚಿಕಿತ್ಸೆ
ಮೈಸೂರು

ಮೈಸೂರಿನ ಅಪೊಲೋ ಆಸ್ಪತ್ರೆಯಲ್ಲಿ ಗಾಯಾಳು ಮಗುವಿಗೆ ಶಸ್ತ್ರ ಚಿಕಿತ್ಸೆ

January 26, 2019

ಮೈಸೂರು: ಗುರುವಾರ ಮುಂಜಾನೆ ಕೊಪ್ಪ ಸಮೀಪ ಕಾರು ಕಂದಕಕ್ಕೆ ಉರುಳಿದ್ದ ದುರಂತದಲ್ಲಿ ಸಾವನ್ನಪ್ಪಿದ ಮೈಸೂರಿನ ಲೀಲಾವತಿ ಅವರ ಅಂತ್ಯಕ್ರಿಯೆ ಇಂದು ಚಾಮುಂಡಿಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ನೆರವೇರಿತು.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರ ಮೊಮ್ಮಗ ಹರ್ಷಿತನನ್ನು ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಯಲ್ಲಿ ಇಂದು ಶಸ್ತ್ರ ಚಿಕಿತ್ಸೆಗೊಳ ಪಡಿಸ ಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಉಳಿದಂತೆ ತೀವ್ರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿರುವ ಸೌಮ್ಯ(30) ಮತ್ತು ಪದ್ಮಾ(30) ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.

ಲೀಲಾವತಿ ಅವರ ಮಗ ರವಿಕುಮಾರ್, ಅಳಿಯ ಉಮಾ ಶಂಕರ್, ಮೊಮ್ಮಕ್ಕಳಾದ ಸಿಂಚನ, ತನುಷ ಹಾಗೂ ಸೊಸೆ ಮಮತಾ ಅವರಿಗೂ ಅಪಘಾತದಲ್ಲಿ ಗಾಯ ಗಳಾಗಿದ್ದು, ಅವರು ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ ಎಂದು ಹೇಳಲಾಗಿದೆ.

ಮಕ್ಕಳಿಗೆ ಅಕ್ಷರಾಭ್ಯಾಸ ಹಾಗೂ ತಮ್ಮ ನಿವೇಶನದಲ್ಲಿ ಮನೆ ನಿರ್ಮಿಸಲು ದೇವರ ಬಳಿ ಸಂಕಲ್ಪ ಮಾಡಿಕೊಳ್ಳಲು ಲೀಲಾವತಿ ಕುಟುಂಬದ ಸದಸ್ಯರು ಶೃಂಗೇರಿಗೆ ಹೊರಟಿ ದ್ದರು. ಗುರುವಾರ ಬೆಳಿಗ್ಗೆ 8.30ರೊಳಗೆ ಅಕ್ಷರಾಭ್ಯಾಸ ಮಾಡಿಸ ಬೇಕೆಂಬ ಉದ್ದೇಶದಿಂದ ಬುಧವಾರ ರಾತ್ರಿ 10 ಗಂಟೆಗೆ ಮೈಸೂರಿನಿಂದ ಮಾರುತಿ ಈಕೋ(ಕೆಎ 42, ಎಂ 9202) ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಕೊಪ್ಪದಲ್ಲಿ ಗುರುವಾರ ಮುಂಜಾನೆ 3.30 ಗಂಟೆ ವೇಳೆಗೆ ಮಾರ್ಗ ಮಧ್ಯೆ ಕಾಫಿ ಕುಡಿದು ಪ್ರಯಾಣ ಮುಂದುವರಿ ಸಿದ ಕೇವಲ 30 ನಿಮಿಷದಲ್ಲೇ ಮಳಿಗೆ ಗ್ರಾಮದ ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಕಾರು ತಿರುವೊಂದರಲ್ಲಿ ಕಂದಕಕ್ಕೆ ಉರುಳಿ ಬಿದ್ದಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Translate »