ನಿರ್ದಿಷ್ಟ ಗುರಿಯೊಂದಿಗೆ ಮತ ಹಕ್ಕು ಚಲಾಯಿಸೋಣ
ಮೈಸೂರು

ನಿರ್ದಿಷ್ಟ ಗುರಿಯೊಂದಿಗೆ ಮತ ಹಕ್ಕು ಚಲಾಯಿಸೋಣ

January 26, 2019

ನವದೆಹಲಿ: ಹದಿನೇಳನೇ ಲೋಕಸಭೆಗೆ ಚುನಾವಣೆ ಸಮೀಪಿಸುತ್ತಿದೆ. ಎಲ್ಲರೂ ನಿರ್ದಿಷ್ಟ ಗುರಿಯೊಂದಿಗೆ ಮತದಾನದ ಹಕ್ಕು ಚಲಾಯಿಸೋಣ. ನಮ್ಮ ಸರಿಯಾದ ನಿರ್ಧಾರ ದೇಶದ ದಿಕ್ಕನ್ನೇ ಬದ ಲಾಯಿಸುತ್ತದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ದೇಶದ ಜನತೆಗೆ ಕರೆ ನೀಡಿದ್ದಾರೆ.

70ನೇ ಗಣರಾಜ್ಯೋತ್ಸವದ ಮುನ್ನಾ ದಿನವಾದ ಶುಕ್ರವಾರ ಸಂಜೆ ಮಾಡಿದ ದೂರ ದರ್ಶನ ಭಾಷಣದಲ್ಲಿ ಅವರು, ದೇಶದ ಜನತೆಗೆ 70ನೇ ಗಣರಾಜ್ಯೋತ್ಸವದ ಶುಭಾಶಯಗಳು. ಈ ಬಾರಿಯ ಗಣರಾಜ್ಯೋತ್ಸವ ಬಹಳ ವಿಶೇಷವಾಗಿದೆ. ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನದ ನಂತರ ಈ ಗಣತಂತ್ರ ದಿನ ಬಂದಿದೆ. ಗಾಂಧಿಜೀಯವರ ಸಿದ್ಧಾಂತವನ್ನು ಇಡೀ ವಿಶ್ವವೇ ಸ್ಮರಿಸು ತ್ತಿದೆ ಎಂದರು. ಬಡತನ ನಿರ್ಮೂಲನೆಯತ್ತ ಭಾರತ ದಿಟ್ಟ ಹೆಜ್ಜೆ ಇಡುತ್ತಿದೆ. ಆದರೂ ನಾವಿನ್ನೂ ಸಾಗಬೇಕಾದ ಹಾದಿ ಬಹಳಷ್ಟಿದೆ. ನಮ್ಮಲ್ಲಿ ಹೊಸ ಮಾನದಂಡಗಳನ್ನು ರೂಪಿಸಿಕೊಳ್ಳಬೇಕಿದೆ. ಸಮಾಜದ ಎಲ್ಲಾ ಜನರೂ ಕೈಜೋಡಿಸಿ ಭಾರತವನ್ನು ಪ್ರಗತಿ ಹೊಂದಿದ ರಾಷ್ಟ್ರವ ನ್ನಾಗಿ ಮಾಡಬೇಕಿದೆ ಎಂದು ಕರೆ ನೀಡಿದ್ದಾರೆ.

ಬಹು ಸಂಸ್ಕೃತಿ ಭಾರತದ ಶಕ್ತಿಯಾಗಿದೆ. ಕಲ್ಯಾಣ ಎನ್ನುವುದು ನಮ್ಮ ದೇಶದ ಸಂಸ್ಕೃತಿ ಮತ್ತು ಸಂಪ್ರ ದಾಯದ ಕಂಬವಾಗಿದೆ. ಧರ್ಮ, ಜಾತಿ ಮತ್ತು ಲಿಂಗ ಭೇದವಿಲ್ಲದೆ ದೇಶದ ಸಂಪನ್ಮೂಲಗಳ ಮೇಲೆ ಎಲ್ಲರಿಗೂ ಸಮಾನ ಹಕ್ಕುಗಳಿವೆ. ಮಹಿಳಾ ಸಬಲೀಕರಣದಿಂದ ಸಮಾಜ ಬದಲಾವಣೆ ಕಾಣುತ್ತಿದೆ. ಕ್ರೀಡೆ ಮತ್ತಿತರ ಕ್ಷೇತ್ರ ಹೊರತು ಪಡಿಸಿ ಸೇನಾ ವಲಯದಲ್ಲೂ ಹೊಸ ಎತ್ತರಕ್ಕೆ ನಮ್ಮ ಹೆಣ್ಣು ಮಕ್ಕಳು ಏರಿದ್ದಾರೆ ಎಂದು ಶ್ಲಾಘಿಸಿದರು.

Translate »