ಮೈಸೂರು: ತ್ರಿವಿಧ ದಾಸೋಹಿ, ಕರ್ನಾಟಕ ರತ್ನ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯವರ ಪ್ರೇರಣೆಯಿಂದ ಸ್ವಾತಂತ್ರ್ಯ ಪೂರ್ವದಲ್ಲಿಯೇ ಮೈಸೂರು ಭಾಗದಲ್ಲಿ ತಗಡೂರು ಸುಬ್ಬಣ್ಣ ಉಚಿತ ಪ್ರಸಾದ ನಿಲಯ ಹಾಗೂ ಸುತ್ತೂರು ಶ್ರೀ ಉಚಿತ ಪ್ರಸಾದ ನಿಲಯಗಳು ಸ್ಥಾಪನೆಯಾದವು. 70ರ ದಶಕದಲ್ಲಿ ತಾತಯ್ಯ ಅನಾಥಾ ಲಯದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಶ್ರೀಗಳು ಸಿದ್ಧಗಂಗಾ ಮಠದಲ್ಲಿ 10ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮೈಸೂರಿನ ಉಚಿತ ಅನಾಥಾಲಯಗಳಿಗೆ ಕಳುಹಿಸು ತ್ತಿದ್ದರು. ಪ್ರತಿವರ್ಷ 2 ರಿಂದ 3 ಮೂರು ವಿದ್ಯಾರ್ಥಿಗಳು…
ನಿವೇಶನಕ್ಕೆ ಅತಿಕ್ರಮ ಪ್ರವೇಶ: ಪ್ರಶ್ನಿಸಿದ ಮಾಲೀಕರಿಗೆ ಕೊಲೆ ಬೆದರಿಕೆ
January 23, 2019ಮೈಸೂರು: ಮೈಸೂರಲ್ಲಿ ಯಾರದೋ ನಿವೇಶನವನ್ನು ತಮ್ಮದೆಂದು ಹೇಳಿಕೊಂಡು ಅತಿಕ್ರಮಿಸಿಕೊಳ್ಳುವ ಭೂಗಳ್ಳರ ಹಾವಳಿ ನಡುವೆ ಈಗ ಆಸ್ತಿ ಮಾಲೀಕರಿಗೆ ಮತ್ತೊಂದು ಆತಂಕ ಎದುರಾಗಿದೆ. ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದವರನ್ನು ಪ್ರಶ್ನಿಸಿದ ನಿವೇಶನ ಮಾಲೀಕರಿಗೆ ತಳ್ಳಾಡಿ ಕೊಲೆ ಬೆದರಿಕೆ ಹಾಕಿದ್ದಲ್ಲದೆ, ಸ್ಥಳಕ್ಕೆ ಬಂದ ಪೊಲೀಸ ರೊಂದಿಗೂ ಅನುಚಿತವಾಗಿ ವರ್ತಿಸಿರುವ ಘಟನೆ ಮಂಗಳವಾರ ನಡೆದಿದೆ. ಈ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿ, ಜಾಮೀ ನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಮೈಸೂರಿನ ವಿಜಯನಗರ 2ನೇ ಹಂತದ ಮಹದೇಶ್ವರ ಬಡಾವಣೆಯಲ್ಲಿರುವ ದಯಾನಂದ್ ಎಂಬುವರಿಗೆ ಸೇರಿದ…
ಪ್ರಯಾಣಿಕರ ಆಟೋಗಳ ಮೇಲೆ ಪೊಲೀಸರ ಕಾರ್ಯಾಚರಣೆ
January 23, 2019ಮೈಸೂರು: ಸಂಚಾರ ನಿಯಮ ಉಲ್ಲಂಘಿಸುವ ಜೊತೆಗೆ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸುವ ಆಟೋ ಚಾಲಕರ ವಿರುದ್ಧ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಲಿದ್ದಾರೆ. ಪ್ರವಾಸಿ ತಾಣವಾಗಿರುವ ಮೈಸೂರಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಿದ್ದು, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಆಟೋಗಳನ್ನು ಅವಲಂಬಿಸುತ್ತಾರೆ. ಆ ವೇಳೆ ಕೆಲ ಆಟೋ ಚಾಲಕರು ಪ್ರವಾಸಿಗರೊಂದಿಗೆ ಅನುಚಿತವಾಗಿ ವರ್ತಿಸಿ ತೊಂದರೆ ಕೊಡುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಪೊಲೀಸರಿಗೆ ಬಂದಿವೆ. ಅಂತಹ ವರ್ತನೆಗಳಿಗೆ ಬ್ರೇಕ್ ಹಾಕಲು ಮೈಸೂರು ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ. ಸಂಚಾರ ನಿಯಮ…
ಸಾಹಸಿ ಬೈಕ್ ಸವಾರನ ದುರಂತ ಸಾವು
January 23, 2019ಮೈಸೂರು: ಆಯ ತಪ್ಪಿ ಬಿದ್ದು ಸಾಹಸಿ ಬೈಕ್ ಸವಾರ ರೊಬ್ಬರು ದುರಂತ ಸಾವಿಗೀಡಾಗಿದ್ದಾರೆ. ಮೈಸೂರಿನ ಹೆಬ್ಬಾಳು ಬಡಾವಣೆಯ ಅಭಿಷೇಕ್ ಸರ್ಕಲ್ ಬಳಿಯ ನಿವಾಸಿ ದೊರೈ ಜೋಸೆಫ್ ಸುನಂದರಾಜ್(65) ಸಾವನ್ನಪ್ಪಿದವರು. ಮೈಸೂರಿನ ಸದರನ್ ಸ್ಟಾರ್ ಹೋಟೆಲಿನ ಎಫ್ ಅಂಡ್ ಬಿ ಎಕ್ಸಿಕ್ಯೂಟಿವ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಅವರು ಬೈಕ್ ಯಾತ್ರೆ ಹವ್ಯಾಸ ಹೊಂದಿದ್ದರು. ಪತ್ನಿಯನ್ನು ಮನೆಗೆ ಡ್ರಾಪ್ ಮಾಡಿ ತಮ್ಮ ರಾಯಲ್ ಎನ್‍ಫೀಲ್ಡ್ (ಕೆಎ-51,ಎಕ್ಸ್-49) ಬೈಕಿನಲ್ಲಿ ಜಯಲಕ್ಷ್ಮೀ ಪುರಂ ಕಡೆಯಿಂದ ಸದರನ್‍ಸ್ಟಾರ್‍ಗೆ ಬರುತ್ತಿದ್ದಾಗ ವಾಲ್ಮೀಕಿ ರಸ್ತೆ ಜಂಕ್ಷನ್…
ಟ್ರಾಯ್ ನೀತಿ ಜಾರಿಯಾದಲ್ಲಿ ಕೇಬಲ್ ಮಾಸಿಕ ಶುಲ್ಕ ದುಬಾರಿ ಕೇಬಲ್ ಆಪರೇಟರ್‍ಗಳ ಸಂಘದ ಅಧ್ಯಕ್ಷ ಪ್ಯಾಟ್ರಿಕ್ ರಾಜು ಆತಂಕ
January 23, 2019ಮೈಸೂರು: ಕೇಂದ್ರ ಸರ್ಕಾರದ ಟ್ರಾಯ್ ನೀತಿ ಜಾರಿಯಾದಲ್ಲಿ ಗ್ರಾಹಕರಿಗೆ ಪ್ರಸ್ತುತ ಲಭ್ಯವಿರುವ ಚಾನಲ್‍ಗಳಿಗೆ ಒಂದೂವರೆ ಸಾವಿರ ರೂ.ಗೂ ಅಧಿಕ ಮಾಸಿಕ ಶುಲ್ಕ ಪಾವತಿಸಬೇಕಾಗುತ್ತದೆ. ಜೊತೆಗೆ ಕೇಬಲ್ ಟಿವಿ ಉದ್ಯಮಕ್ಕೂ ಮಾರಕವಾಗಲಿದೆ ಎಂದು ಕರ್ನಾಟಕ ರಾಜ್ಯ ಕೇಬಲ್ ಟಿವಿ ಆಪರೇಟರ್‍ಗಳ ಸಂಘದ ಅಧ್ಯಕ್ಷ ಪ್ಯಾಟ್ರಿಕ್ ರಾಜು ಆತಂಕ ವ್ಯಕ್ತಪಡಿಸಿದ್ದಾರೆ. ಮೂರು ದಶಕಗಳ ಹಿಂದೆ ಅಸ್ತಿತ್ವಕ್ಕೆ ಬಂದ ಕೇಬಲ್ ಟಿವಿ ಉದ್ಯಮ ದೇಶದಾದ್ಯಂತ ಉದ್ಯೋಗ ಸೃಷ್ಟಿಸಿತು. 2013ರಲ್ಲಿ ಕೇಂದ್ರ ಸರ್ಕಾರದ ಆದೇಶದ ಪ್ರಕಾರ ದೇಶದಾದ್ಯಂತ ಹಂತ ಹಂತವಾಗಿ ಕೇಬಲ್ ಟಿವಿ…
‘ಹಿರಿಯರ ಹಾಗೂ ಗುರು ಪರಂಪರೆಯ ಆದರ್ಶಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಿ’
January 23, 2019ಮೈಸೂರು: ‘ಜೀವನದಲ್ಲಿ ಉತ್ಸಾಹವಿಲ್ಲದಿದ್ದರೆ ವ್ಯರ್ಥ, ಬದುಕಿನಲ್ಲಿ ಏನಾದರೊಂದು ಸಾಧಿಸಬೇಕಾದರೆ ಛಲ ಮತ್ತು ಗುರಿ ಇರಬೇಕು’ ಎಂದು ಬೀರಿ ಹುಂಡಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋ ಪಾಧ್ಯಾಯ ಎಸ್.ವಿ.ಎಸ್.ಗಿರಿರಾವ್ ಅಭಿಪ್ರಾಯಪಟ್ಟರು. ಗಂಗೋತ್ರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಬೀಳ್ಕೊ ಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಅವರು ಮಾತನಾಡಿದರು. ನಾನು ಕಳೆದ 30 ವರ್ಷದಿಂದ ಶಿಕ್ಷಕ ವೃತ್ತಿ ಯಲ್ಲಿ ಸೇವೆ ಸಲ್ಲಿಸಿದ್ದೇನೆ. ಗಣಿತ ಶಾಸ್ತ್ರ ನನ್ನ ಅಚ್ಚುಮೆಚ್ಚಿನ ವಿಷಯವಾಗಿದ್ದು, ಹಿರಿಯರ ಹಾಗೂ ಗುರು ಪರಂಪರೆಯ…
ಕುಂಭಮೇಳ ಹಿನ್ನೆಲೆ ತ್ರಿವೇಣಿ ಸಂಗಮ ಪರಿಶೀಲಿಸಿದ ಜಿಲ್ಲಾಧಿಕಾರಿ
January 23, 2019ಸಿಎಂ ಅನುಮೋದನೆ ಪಡೆದು ಪೂರ್ವ ಸಿದ್ಧತಾ ಕಾರ್ಯ ಆರಂಭ ತಿ.ನರಸೀಪುರ: ದಕ್ಷಿಣ ಪ್ರಯಾಗ ತಿರುಮಕೂಡಲು ನರಸೀಪುರ ತ್ರಿವೇಣಿ ಸಂಗಮದಲ್ಲಿ ಮುಂದಿನ ಫೆಬ್ರವರಿಯಲ್ಲಿ ಮೂರು ದಿನಗಳ ಕಾಲ ದಕ್ಷಿಣ ಭಾರತದ ಕುಂಭಮೇಳ ನಡೆಯುವುದರಿಂದ ಮುಖ್ಯಮಂತ್ರಿಗಳಿಂದ ಅನುಮೋದನೆ ಪಡೆದುಕೊಂಡು ನಂತರ ಪೂರ್ವ ಸಿದ್ಧತಾ ಕಾರ್ಯವನ್ನು ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು ಕುಂಭಮೇಳದ ಹಿನ್ನೆಲೆಯಲ್ಲಿ ಮಂಗಳವಾರ ತ್ರಿವೇಣಿ ಸಂಗಮಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕುಂಭಮೇಳ ಉತ್ಸವಕ್ಕೆ ಅಗತ್ಯವಿರುವ ಅಂತಿಮ…
ಹೆಚ್.ಡಿ.ಕೋಟೆಯಲ್ಲಿ ಸರ್ವ ಸಮುದಾಯದಿಂದ ಶ್ರದ್ಧಾಂಜಲಿ
January 23, 2019ಹೆಚ್.ಡಿ.ಕೋಟೆ: ಪಟ್ಟಣದ ಬಾಪೂಜಿ ವೃತ್ತದಲ್ಲಿ ಸರ್ವ ಸಮುದಾಯದಿಂದ ಸಿದ್ಧಗಂಗಾ ಶ್ರೀಗಳಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಭೆಯಲ್ಲಿ ಮಾತನಾಡಿದ ವಿರಕ್ತ ಮಠದ ಶ್ರೀ ಮಹದೇಶ್ವರ ಸ್ವಾಮೀಜಿ, ಸಾರ್ವಜನಿಕರ ಸೇವೆಗಾಗಿ ದುಡಿದವರಲ್ಲಿ ಸಿದ್ಧಗಂಗಾ ಶ್ರೀಗಳು ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅದರಲ್ಲೂ ಗ್ರಾಮೀಣಾ ಪ್ರದೇಶದ ಮಕ್ಕಳಿಗೆ ಶಿಕ್ಷಣ ಮತ್ತು ಏಳಿಗೆಗಾಗಿ ಅಪಾರವಾಗಿ ಶ್ರಮಿಸಿದರು. ದಾಸೋಹದ ನಿಟ್ಟಿನಲ್ಲಿ ಕ್ರಾಂತಿಯನ್ನೇ ಉಂಟು ಮಾಡಿದರು ಎಂದು ಸ್ಮರಿಸಿದರು. ಹಂಚೀಪುರ ಮಠದ ಚೆನ್ನಬಸವಸ್ವಾಮೀಜಿ ಮಾತನಾಡಿ, ಶ್ರೀಗಳು ನಡೆದ ದಾರಿಯಲ್ಲಿ ಪ್ರತಿಯೊಬ್ಬರೂ ಸಾಗಬೇಕು. ಹಾಗಾದಲ್ಲಿ ಸಮಾಜ ಬೆಳವಣಿಗೆ ಸಾಧ್ಯ ಎಂದರು….
ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವ ಸಹಸ್ತ್ರಾರು ಭಕ್ತರ ಸಮ್ಮುಖದಲ್ಲಿ ಬಂಡಿ ಉತ್ಸವ
January 23, 2019ಮೂಗೂರು: ತಿ.ನರಸೀಪುರ ತಾಲೂಕಿನ ಮೂಗೂರು ಗ್ರಾಮದ ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಬಂಡಿ ಉತ್ಸವ ಸಹಸ್ತ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಬಂಡಿ ಉತ್ಸವದ ಅಂಗವಾಗಿ ಸೋಮವಾರ ಬೆಳಿಗ್ಗೆಯಿಂದಲೇ ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯ ಆರಂಭವಾಯಿತು. ಬೆಳಿಗ್ಗೆ 10.35ರ ವೇಳೆಗೆ ಶ್ರೀ ತ್ರಿಪುರ ಸುಂದರಿ ಅಮ್ಮನವರ ಉತ್ಸವ ಮೂರ್ತಿಯನ್ನು ದೇವಾಲಯ ಸುತ್ತ ಪ್ರದಕ್ಷಿಣೆ ಹಾಕಿ ನಂತರ ರುದ್ರಾಕ್ಷಿ ಮಂಟಪದೊಂದಿಗೆ ಬಂಡಿ ಬೀದಿಗೆ ಮೆರವಣಿಗೆ ಮೂಲಕ ತರಲಾಯಿತು. ಈ…
ಜ.25 ರಂದು ಡಾಟಾ ಸೈನ್ಸ್ ಕುರಿತು ವಿಚಾರ ಸಂಕಿರಣ
January 23, 2019ಮೈಸೂರು: ಮೈಸೂರಿನ ಎಂಎಂಕೆ ಮತ್ತು ಎಸ್‍ಡಿಎಂ ಮಹಿಳಾ ಮಹಾ ವಿದ್ಯಾಲಯದ ಗಣಕ ಯಂತ್ರ ವಿಭಾಗವು ಜ.25 ರಂದು ಡಾಟಾ ಸೈನ್ಸ್ ಕುರಿತು ವಿಚಾರ ಸಂಕಿರಣವನ್ನು ಆಯೋಜಿಸಿದೆ. ವಿಚಾರ ಸಂಕಿರಣದಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಡಾಟಾ ಸೈನ್ಸ್ ವಿಷಯ ತಿಳಿಯುವ, ಸಂಶೋಧನೆಗಳನ್ನು ನಡೆಸುವ, ಉಪಯೋಗಗಳನ್ನು ತಿಳಿಯುವ ಉದ್ದೇಶವನ್ನಾಗಿಟ್ಟುಕೊಂಡು ಆಯೋಜಿಸಲಾಗಿದೆ. ಇಂಜಿನಿಯರ್ ಹರ್‍ಮನ್ ಇಂಟರ್‍ನ್ಯಾಷನಲ್‍ನ ಪ್ರಿನ್ಸಿಪಾಲರಾದ ಡಾ. ನವೀನ್ ಓಂಕಾರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಮಂಗಳೂರು ವಿಶ್ವವಿದ್ಯಾನಿಲಯ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ವೀರಭದ್ರಪ್ಪ ವಿಷಯ ಮಂಡನೆ ಮಾಡ ಲಿದ್ದಾರೆ….