ತುಮಕೂರು: ಸಿದ್ದಗಂಗಾ ಮಠಾಧೀಶ ಡಾ. ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡುಬಂದಿದೆ. ಬೆಳಿಗ್ಗೆ 5 ಗಂಟೆ ಸಮಯದಲ್ಲಿ ಸ್ವಾಮೀಜಿಗಳ ರಕ್ತದೊತ್ತಡ ಮತ್ತಿತರ ಪರೀಕ್ಷೆ ನಡೆಸಲಾಗಿದ್ದು, ವೆಂಟಿಲೇಷನ್ ಮೂಲಕ ಶ್ರೀಗಳಿಗೆ ಉಸಿರಾಟ ವ್ಯವಸ್ಥೆ ಮಾಡಲಾಗಿದೆ. ನಮ್ಮ ಊಹೆಗೂ ನಿಲುಕದ ರೀತಿಯಲ್ಲಿ ಶ್ರೀಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಬಿಜಿಎಸ್ ಹಾಗೂ ಸಿದ್ದಗಂಗಾ ಮಠದ ಆಸ್ಪತ್ರೆಯಲ್ಲಿನ ವೈದ್ಯರ ತಂಡ ವರದಿಯಲ್ಲಿ ತಿಳಿಸಿದೆ. ಈ ಮಧ್ಯೆ ಸ್ವಾಮೀಜಿಗಳು ಬೇಗ ಚೇತರಿಸಿಕೊಳ್ಳಲಿ ಎಂದು ಕೋರಿ ವಿವಿಧೆಡೆ ವಿಶೇಷ ಪ್ರಾರ್ಥನೆಗಳು ನಡೆಯುತ್ತಿವೆ. ಪ್ರಧಾನಿ ನರೇಂದ್ರ…
ಅಯೋಧ್ಯೆಯಲ್ಲಿ ರಾಮಮಂದಿರ 2025ಕ್ಕೆ ನಿರ್ಮಾಣವಾಗಬಹುದು: ಆರ್‍ಎಸ್‍ಎಸ್
January 19, 2019ಪ್ರಯಾಗ್ ರಾಜ್ (ಉತ್ತರ ಪ್ರದೇಶ): ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ ಎಸ್‍ಎಸ್), ರಾಮಮಂದಿರವನ್ನು 2025ಕ್ಕೆ ನಿರ್ಮಿಸಲಾಗುವುದು ಎಂದು ವ್ಯಂಗ್ಯವಾಗಿ ಹೇಳಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ರಾಜಕೀಯ ವಿವಾದಗಳು ನಡೆಯುತ್ತಿರುವಾಗಲೇ ಈ ಹೇಳಿಕೆ ನೀಡಿರುವ ಆರ್‍ಎಸ್‍ಎಸ್ ಪ್ರಧಾನ ಕಾರ್ಯದರ್ಶಿ ಬೈಯಾಜಿ ಜೋಷಿ, 2025ರಲ್ಲಿ ರಾಮ ಮಂದಿರ ನಿರ್ಮಾಣ ಆರಂಭ ವಾದಾಗ ದೇಶ ಕೂಡ ವೇಗವಾಗಿ ಅಭಿವೃದ್ಧಿ ಹೊಂದುತ್ತದೆ. 1952ರಲ್ಲಿ…
ಮಹಿಳೆಯೇ ಮಹಿಳೆಯನ್ನು ವಿರೋಧಿಸುವ ಧೋರಣೆ ಬದಲಾಗಬೇಕು
January 19, 2019ಮೈಸೂರು: ಮಹಿಳೆಯೇ ಮಹಿಳೆಯನ್ನು ವಿರೋಧಿಸುವ ಧೋರಣೆ ಬದಲಾಗಬೇಕು ಎಂದು ಚಿತ್ರನಟಿ, ಮಾಜಿ ಸಚಿವೆ ಉಮಾಶ್ರೀ ಇಂದಿಲ್ಲಿ ಅಭಿಪ್ರಾಯಪಟ್ಟರು. ಮೈಸೂರಿನ ರಂಗಾಯಣ ಬಹುರೂಪಿ ನಾಟಕೋತ್ಸವದ ಲಿಂಗ ಸಮಾನತೆ’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಶುಕ್ರವಾರ 2ನೇ ಗೋಷ್ಠಿಯಲ್ಲಿರಾಜಕಾರಣ ಮತ್ತು ಲಿಂಗ ಸಮಾನತೆ’ ಕುರಿತು ವಿಷಯ ಮಂಡಿಸಿ ಮಾತನಾಡಿದರು. ಮಹಿಳೆಯನ್ನು ರಾಜಕೀಯದಲ್ಲಿ ಒಪ್ಪಿ ಕೊಳ್ಳುವಂತಹ ಮನೋಭಾವ ಬರಬೇಕು. ಭಾಗವಹಿಸುವಿಕೆಗೆ ನಮಗೂ ಅವಕಾಶ ವಿದೆ. ಮಹಿಳೆ ರಾಜಕೀಯ ಭಾಗವಹಿಸುವಿಕೆ ಜೊತೆಗೆ ನಾಯಕತ್ವ ಗುಣ ಬೆಳೆಸಿ ಕೊಳ್ಳಬೇಕು. ಮಹಿಳಾ ನಾಯಕರು ಬೆಳೆಯಬೇಕು. ಆದರೆ ಅವಳ…
ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲ ಕೇಳಿದ ಪ್ರಕಾಶ್ ರೈ
January 19, 2019ಬೆಂಗಳೂರು: 2019ರ ಲೋಕಸಭಾ ಚುನಾಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿ ರುವ ಬಹುಭಾಷಾ ನಟ ಪ್ರಕಾಶ್‍ರೈ, ಬೆಂಗ ಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ತಮ್ಮನ್ನು ಕಾಂಗ್ರೆಸ್ ಬೆಂಬಲಿಸಬಹುದು ಎಂದು ಹೇಳಿದ್ದಾರೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ತಾವು ಸ್ಪರ್ಧಿಸಿದರೆ ಕಾಂಗ್ರೆಸ್‍ಗೆ ಬರುವ ಅಲ್ಪಸಂಖ್ಯಾತರ ಮತಗಳು ವಿಭಜನೆ ಯಾಗುವುದಿಲ್ಲವೇ? ಎಂದು ಪತ್ರಕರ್ತರು ಪ್ರಶ್ನಿಸಿದ್ದದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಕಾಶ್ ರೈ, ಅಲ್ಪಸಂಖ್ಯಾತರ ಮತಗಳು ವಿಭಜನೆಯಾಗುವುದಾದರೆ ಕಾಂಗ್ರೆಸ್ ನನ್ನನ್ನು ಬೆಂಬಲಿಸಲಿ, ಕಾಂಗ್ರೆಸ್‍ನ ಹೋರಾಟ ಕೋಮುವಾದಿ ಶಕ್ತಿಗಳ ವಿರುದ್ಧವಿದೆ ಎಂದಾದರೆ ನಾನು ಅವರ ಮಹಾಘಟಬಂಧನವನ್ನೂ ಬೆಂಬಲಿಸುತ್ತೇನೆ…
ಬಡ ಕುಟುಂಬಗಳಿಗೆ ಶಿಕ್ಷಣದ ಮಹತ್ವ ಮನವರಿಕೆ
January 19, 2019ಮೈಸೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ಸಾವಿತ್ರಿಬಾಯಿ ಫುಲೆ ಅವರ ಜಯಂತಿ ಅಂಗವಾಗಿ ಶಿಕ್ಷಣ ವಂಚಿತ ಬಡ ಕುಟುಂಬಗಳಿಗೆ ಶುಕ್ರವಾರ ಹಮ್ಮಿ ಕೊಂಡಿದ್ದ ಜಾಗೃತಿ ಸಮಾವೇಶದಲ್ಲಿ ಶಿಕ್ಷಣದ ಮಹತ್ವ ಸಾರಲಾಯಿತು. ಮೈಸೂರಿನ ಜೆಎಲ್‍ಬಿ ರಸ್ತೆಯ ಎಂಜಿ ನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ನಡೆದ ಜಾಗೃತಿ ಸಮಾವೇಶದಲ್ಲಿ ಮೈಸೂರಿನ ಏಕಲವ್ಯನಗರ ಸೇರಿದಂತೆ ವಿವಿಧ ಭಾಗಗಳ ಬಡ ಕುಟುಂಬಗಳ ಸದಸ್ಯರು ಪಾಲ್ಗೊಂಡು ಶಿಕ್ಷಣದ ಅಗತ್ಯತೆ ಬಗ್ಗೆ ಅರಿತುಕೊಂಡರು. ಈ ವೇಳೆ ಮಾತನಾಡಿದ ಜಿಪಂ ಸದಸ್ಯ ದಿನೇಶ್ ನಾಗನಹಳ್ಳಿ,…
ಟಿಪ್ಪು ಇತಿಹಾಸದಲ್ಲಿ ನುಸುಳಿರುವ ಅಪಪ್ರಚಾರ ತೊಡೆಯಲು ಇದು ಸಕಾಲ
January 19, 2019ಮೈಸೂರು: ಮರು ಮೌಲ್ಯಮಾಪನದ ಮೂಲಕ ಟಿಪ್ಪು ಸುಲ್ತಾನ್ ಇತಿಹಾಸದಲ್ಲಿ ನುಸುಳಿರುವ ಅಪಪ್ರಚಾರ ತೊಡೆದು ಹಾಕಲು ಇದು ಸಕಾಲ ಎಂದು ಕೇರಳದ ಕ್ಯಾಲಿಕಟ್ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಕೆ.ಕೆ.ಎನ್.ಕುರುಪ್ ತಿಳಿಸಿದರು. ಮೈಸೂರು ವಿಶ್ವವಿದ್ಯಾಲಯದ ಇತಿ ಹಾಸ ವಿಭಾಗ ಹಾಗೂ ಟಿಪ್ಪು ಅಧ್ಯಯನ ಪೀಠದ ಜಂಟಿ ಆಶ್ರಯದಲ್ಲಿ ಮೈಸೂರು ವಿವಿಯ ರಾಣಿ ಬಹದ್ದೂರ್ ಸಭಾಂಗಣ ದಲ್ಲಿ `ಟಿಪ್ಪು ಆಡಳಿತಾವಧಿಯಲ್ಲಿ ಮೈಸೂರು ಹಾಗೂ ಹೈದಾರಾಬಾದ್ ಕರ್ನಾಟಕ ದಲ್ಲಿ ರೈತರು ಹಾಗೂ ಗ್ರಾಮೀಣ ಪ್ರದೇ ಶದ ಆರ್ಥಿಕ ಸ್ಥಿತಿಗತಿ’ ಕುರಿತಂತೆ ಹಮ್ಮಿ…
ಇಂದು ಜಯಚಾಮರಾಜೇಂದ್ರ ಒಡೆಯರ್ ಜನ್ಮಶತಮಾನೋತ್ಸವ
January 19, 2019ಮೈಸೂರು: ಮೈಸೂರಿನ ಪುರಭವನದಲ್ಲಿ ಜ.19ರಂದು ಬೆಳಿಗ್ಗೆ 11.30ಕ್ಕೆ ಜಯಚಾಮರಾಜೇಂದ್ರ ಒಡೆಯರ್ ಜನ್ಮಶತಮಾನೋತ್ಸವ ಮತ್ತು ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಸಂಸ್ಮರಣೆ ಹಾಗೂ ಸಂಕ್ರಾಂತಿ ಕವಿಗೋಷ್ಠಿ ಏರ್ಪಡಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ಅಧ್ಯಕ್ಷೆ ಹೆಚ್.ಎಲ್.ಯಮುನಾ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11.30ಕ್ಕೆ ಜಿಲ್ಲಾ ಪಂಚಾಯಿತಿ ಹಂಗಾಮಿ ಅಧ್ಯಕ್ಷ ಸಾ.ರಾ.ನಂದೀಶ್ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಹೆಚ್.ಕೆ. ರಾಮು, ಸುಯೋಗ ಆಸ್ಪತ್ರೆ…
ಯಕ್ಷಗಾನ ತರಬೇತಿ: ಅರ್ಜಿ ಆಹ್ವಾನ
January 19, 2019ಮೈಸೂರು: ಕರ್ನಾಟಕ ಯಕ್ಷಗಾನ ಅಕಾಡೆಮಿಯು ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ವರ್ಗದ ಪ್ರತಿಭಾವಂತ ಯುವಕ-ಯುವತಿಯರಿಗೆ ಹಾಗೂ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಪಂಗಡದ ಪ್ರತಿಭಾವಂತ ಯುವಕ-ಯುವತಿ ಯರಿಗೆ 2018-19ನೇ ಸಾಲಿನ 5 ತಿಂಗಳ ಯಕ್ಷಗಾನ ತರಬೇತಿಯನ್ನು ನಡೆಸಲು ಹಾಗೂ ಪರಿಕರಗಳೊಂದಿಗೆ ಪ್ರದರ್ಶನ ನೀಡಲು ಉದ್ದೇಶಿಸಿದೆ. ಯಕ್ಷಗಾನ ಪ್ರಕಾರಗಳಲ್ಲಿ ತೆಂಕುತಿಟ್ಟು ಯಕ್ಷಗಾನ, ಬಡಾಬಡಗುತಿಟ್ಟು, ಮೂಡಲಪಾಯ, ಕೇಳಿಕೆ, ಘಟ್ಟದಕೋರೆ, ಗೊಂಬೆಯಾಟ, ತಾಳಮದ್ದಲೆ ತರಬೇತಿ ನೀಡುವವರಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ನಮೂನೆ ಪ್ರತಿಯನ್ನು ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ…
ಚುಂಚನಕಟ್ಟೆಯಲ್ಲಿ ಇಬ್ಬರು ಬಾಲಕರು ನೀರುಪಾಲು
January 19, 2019ಚುಂಚನಕಟ್ಟೆ: ತಾಲೂಕಿನ ಚುಂಚನಕಟ್ಟೆಯ ಬಳಿ ಹರಿಯುವ ಕಾವೇರಿ ನದಿಯಲ್ಲಿ ಬಾಲಕರಿಬ್ಬರು ನೀರು ಪಾಲಾಗಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಕೆ.ಆರ್.ನಗರ ತಾಲೂಕಿನ ಮನುಗನಹಳ್ಳಿ ಗ್ರಾಮದ ಮಂಜ ಶೆಟ್ಟಿ ಅವರ ಮಗ ಲೋಕೇಶ್ ಶಟ್ಟಿ(16), ಮತ್ತು ಹೊಳೆನರಸೀ ಪುರ ತಾಲೂಕು ಆನೆಕನ್ನಂಬಾಡಿ ಗ್ರಾಮದ ಮಹದೇವ ಎಂಬು ವವರ ಮಗ ಹರ್ಷ(11) ಎಂಬುವವರೆ ನದಿಯಲ್ಲಿ ಮುಳುಗಿ ಮೃತಪಟ್ಟ ದುರ್ದೈವಿಗಳು. ಚುಂಚನಕಟ್ಟೆ ಜಾತ್ರೆಯಲ್ಲಿ ಸವಿತಾ ಸಮಾಜದವರು ಇಂದು ಪರ(ಹಬ್ಬ)ಮಾಡುತ್ತಿದ್ದರು. ಅವರ ಜೊತೆ ಬಂದಿದ್ದ ಈ ಇಬ್ಬರು ಬಾಲಕರು ತಮ್ಮ ಪೋಷಕರ ಕಣ್ತಪ್ಪಿಸಿ…
ಮದುವೆಗೆ ನಿರಾಕರಿಸಿದ ಪ್ರಿಯಕರ: ನರ್ಸ್ ಆತ್ಮಹತ್ಯೆ
January 19, 2019ನಂಜನಗೂಡು: ಕಳೆದ ಮೂರು ವರ್ಷಗಳಿಂದ ತನ್ನನ್ನು ಪ್ರೀತಿಸುತ್ತಿದ್ದ ಪ್ರಿಯಕರ ಮದುವೆಯಾಗಲು ನಿರಾಕರಿಸಿದ ಕಾರಣ ಮನನೊಂದು ನರ್ಸ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಂಜನಗೂಡು ತಾಲೂಕು ಲಕ್ಷ್ಮಣಾಪುರ- ಕೂಗಲೂರು ರಸ್ತೆಯಲ್ಲಿ ಗುರುವಾರ ನಡೆದಿದೆ. ಬೆಂಗಳೂರಿನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ನಂಜನಗೂಡು ತಾಲೂಕು ಕೂಗಲೂರು ಗ್ರಾಮದ ಸವಿತಾ ಆತ್ಮಹತ್ಯೆಗೆ ಶರಣಾದವರಾಗಿದ್ದು, ಈಕೆಯ ಪ್ರಿಯಕರ ಮದುವೆಯಾಗಲು ನಿರಾಕರಿಸಿದ್ದೇ ಈಕೆಯ ಆತ್ಮಹತ್ಯೆಗೆ ಕಾರಣ ಎಂದು ಸವಿತಾ ತಾಯಿ ನಾಗಮ್ಮ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ತನ್ನ ಪುತ್ರಿ ಸವಿತಾ ಸಿದ್ದಯ್ಯನಹುಂಡಿ…