ಮೈಸೂರು: ಮರು ಮೌಲ್ಯಮಾಪನದ ಮೂಲಕ ಟಿಪ್ಪು ಸುಲ್ತಾನ್ ಇತಿಹಾಸದಲ್ಲಿ ನುಸುಳಿರುವ ಅಪಪ್ರಚಾರ ತೊಡೆದು ಹಾಕಲು ಇದು ಸಕಾಲ ಎಂದು ಕೇರಳದ ಕ್ಯಾಲಿಕಟ್ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಕೆ.ಕೆ.ಎನ್.ಕುರುಪ್ ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯದ ಇತಿ ಹಾಸ ವಿಭಾಗ ಹಾಗೂ ಟಿಪ್ಪು ಅಧ್ಯಯನ ಪೀಠದ ಜಂಟಿ ಆಶ್ರಯದಲ್ಲಿ ಮೈಸೂರು ವಿವಿಯ ರಾಣಿ ಬಹದ್ದೂರ್ ಸಭಾಂಗಣ ದಲ್ಲಿ `ಟಿಪ್ಪು ಆಡಳಿತಾವಧಿಯಲ್ಲಿ ಮೈಸೂರು ಹಾಗೂ ಹೈದಾರಾಬಾದ್ ಕರ್ನಾಟಕ ದಲ್ಲಿ ರೈತರು ಹಾಗೂ ಗ್ರಾಮೀಣ ಪ್ರದೇ ಶದ ಆರ್ಥಿಕ ಸ್ಥಿತಿಗತಿ’ ಕುರಿತಂತೆ ಹಮ್ಮಿ ಕೊಂಡಿರುವ ಎರಡು ದಿನಗಳ ವಿಚಾರ ಸಂಕಿರಣವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಟಿಪ್ಪು ತಂದೆ ಹೈದರಾಲಿ ಜಾತ್ಯಾತೀತ ನೆಲೆಗಟ್ಟಿನಲ್ಲಿ ರಾಜ್ಯ ಕಟ್ಟಿ ಬೆಳೆಸಿದ್ದರು. ಟಿಪ್ಪು ಕೂಡ ಅದೇ ಮಾರ್ಗದಲ್ಲಿ ಸಾಗಿದ್ದು, ಉನ್ನತ ಸಂಸ್ಕೃತಿಯ ವ್ಯಕ್ತಿತ್ವ ಹೊಂದಿದ್ದರು. ಟಿಪ್ಪು ಬಗ್ಗೆ ಅಂದು ಬ್ರಿಟಿಷರು ಅಪಪ್ರಚಾರ ನಡೆಸಿದರು. ಪ್ರಸ್ತುತದಲ್ಲೂ ಅದೇ ಅಪಪ್ರಚಾರ ನಡೆಯುತ್ತಿದ್ದು, ಈ ಎರಡೂ ಕಾಲಘಟ್ಟದಲ್ಲೂ ರಾಜಕೀಯ ದುರುದ್ದೇಶದಿಂದ ಟಿಪ್ಪು ಇತಿಹಾಸ ತಿರುಚುವ ಪ್ರಯತ್ನ ನಡೆದಿದೆ. ಇದೀಗ ನೈಜ ಸಂಗತಿ ಮೇಲೆ ಬೆಳಕು ಚೆಲ್ಲಲು ಕಾಲ ಪಕ್ವವಾಗಿದೆ ಎಂದು ಹೇಳಿದರು.
ಟಿಪ್ಪು ಸುಲ್ತಾನ್ ಉತ್ತಮ ಆಡಳಿತ ಗಾರನಾಗಿ ಜನ ಮನ್ನಣೆ ಗಳಿಸಿದ್ದ. ಆತನ ಮಿಲಿಟರಿ ವ್ಯವಸ್ಥೆಯ ತಂತ್ರಗಾರಿಕೆ ಬ್ರಿಟಿಷರನ್ನು ಬೆಚ್ಚಿ ಬೀಳಿಸಿತ್ತು. ಇಂತಹ ಚಾಣಾಕ್ಷನಾಗಿದ್ದ ಟಿಪ್ಪುವನ್ನು ಎದು ರಿಸಲಾಗದೇ ಬ್ರಿಟಿಷರಿಂದ ಇಲ್ಲಸಲ್ಲದ ಅಪಪ್ರಚಾರಗಳನ್ನು ನಡೆಸಲಾಯಿತು. ಇದು ಈಗಲೂ ರಾಜಕೀಯ ದಳಕ್ಕಾಗಿ ಬಳಕೆಯಾಗುತ್ತಿದೆ ಎಂದರು.
ರೈತಾಪಿ ವರ್ಗದ ಅಭಿವೃದ್ಧಿಗೆ ತನ್ನದೆ ಆದ ಕೊಡುಗೆ ನೀಡಿದ್ದ ಟಿಪ್ಪು, ತನ್ನ ಸಂಸ್ಥಾನದ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಿ ದ್ದಾನೆ. 17 ವರ್ಷ ಆಡಳಿತ ನಡೆಸಿದ ಟಿಪ್ಪು ರೈತರು ಮತ್ತು ಬಡವರ ಜೀವನ ಮಟ್ಟ ಸುಧಾರಿಸಲು ಕ್ರಮ ವಹಿಸಿದ್ದ. ಮಲಬಾರ್ ಪ್ರದೇಶ ಮತ್ತು ಮೈಸೂರು ಭಾಗದ ರೈತರ ಅಗತ್ಯತೆಗಳನ್ನು ಪೂರೈಸಿ ರೈತಾಪಿ ವರ್ಗದ ಮೆಚ್ಚುಗೆಗೆ ಪಾತ್ರ ನಾಗಿದ್ದ. ಅಂದು ದೇಶದ ಯಾವುದೇ ಸಂಸ್ಥಾನಗಳು ಟಿಪ್ಪುವಿನಷ್ಟು ರೈತಪರ ಕಾಳಜಿ ಹೊಂದಿರಲಿಲ್ಲ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತಮಾಡಿದ ಮಂಗ ಳೂರು ಮತ್ತು ಗೋವಾ ವಿಶ್ವವಿದ್ಯಾನಿಲಯ ಗಳ ವಿಶ್ರಾಂತ ಕುಲಪತಿ ಪ್ರೊ.ಬಿ.ಷೇಕ್ ಅಲಿ, ಮಾನವ ಕುಲದ ಅನುಭವಗಳ ಮೇಲೆ ಬೆಳಕು ಚೆಲ್ಲುವ `ಇತಿಹಾಸ’ ಒಂದು ಶ್ರೇಷ್ಠ ವಿಷಯ. ಪ್ರಸ್ತುತ ಟಿಪ್ಪುವನ್ನು ವಿವಾದಾತ್ಮಕವಾಗಿ ಚಿತ್ರಿಸಲಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಟಿಪ್ಪು ಕೊಡುಗೆ ಕುರಿತು ವಿಚಾರ ಸಂಕಿರಣ ಹಮ್ಮಿಕೊಂಡಿ ರುವುದು ಸ್ವಾಗತಾರ್ಹ ಎಂದು ನುಡಿದರು.
ಕೃಷಿ ಮತ್ತು ಕೈಗಾರಿಕೆಗೆ ಟಿಪ್ಪು ಹೆಚ್ಚಿನ ಪ್ರೋತ್ಸಾಹ ನೀಡಿದ್ದ. ಅದರಲ್ಲೂ ರೈತಾಪಿ ವರ್ಗದ ಜೀವನ ಮಟ್ಟ ಸುಧಾರಣೆಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದ. ರೇಷ್ಮೆ, ಸ್ಟೀಲ್ ಹಾಗೂ ಇನ್ನಿತರ ಕೈಗಾ ರಿಕೆಗಳನ್ನು ಸ್ಥಾಪಿಸಿದ. ಮೊದಲ ಬಾರಿಗೆ ರಾಕೆಟ್ ತಂತ್ರಜ್ಞಾನ ಹಾಗೂ ನೌಕಾ ದಳ ಬಳಕೆ ಮಾಡುವ ಮೂಲಕ ತನ್ನ ಸೇನೆ ಯನ್ನು ಬಲಿಷ್ಠಗೊಳಿಸಿದ್ದ ಎಂದು ತಿಳಿಸಿದರು.
ಮೈಸೂರು, ಮಂಗಳೂರು, ಹಾಸನ, ಮಂಡ್ಯ ಸೇರಿದಂತೆ ವಿವಿಧ ಭಾಗಗಳಿಂದ ಸಂಶೋಧಕರು, ಉಪನ್ಯಾಸಕರು ಹಾಗೂ ಪ್ರಾಧ್ಯಾಪಕರು ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಮಂದಿ ವಿಚಾರ ಸಂಕಿರಣ ದಲ್ಲಿ ಪಾಲ್ಗೊಂಡಿದ್ದಾರೆ. ಸಂಶೋಧಕರಿಗೆ 100 ರೂ. ಹಾಗೂ ಪ್ರಾಧ್ಯಾಪಕರಿಗೆ 200 ನೋಂದಣಿ ಶುಲ್ಕ ನಿಗದಿ ಮಾಡಲಾಗಿದೆ. ಮೈಸೂರು ವಿವಿ ಆಡಳಿತಾಂಗ ಕುಲ ಸಚಿವ ಪ್ರೊ.ಆರ್.ರಾಜಣ್ಣ, ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ವೈ.ಹೆಚ್.ನಾಯಕ್ವಾಡಿ ಮತ್ತಿತರರು ಹಾಜರಿದ್ದರು.