ಮೈಸೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ಸಾವಿತ್ರಿಬಾಯಿ ಫುಲೆ ಅವರ ಜಯಂತಿ ಅಂಗವಾಗಿ ಶಿಕ್ಷಣ ವಂಚಿತ ಬಡ ಕುಟುಂಬಗಳಿಗೆ ಶುಕ್ರವಾರ ಹಮ್ಮಿ ಕೊಂಡಿದ್ದ ಜಾಗೃತಿ ಸಮಾವೇಶದಲ್ಲಿ ಶಿಕ್ಷಣದ ಮಹತ್ವ ಸಾರಲಾಯಿತು.
ಮೈಸೂರಿನ ಜೆಎಲ್‍ಬಿ ರಸ್ತೆಯ ಎಂಜಿ ನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ನಡೆದ ಜಾಗೃತಿ ಸಮಾವೇಶದಲ್ಲಿ ಮೈಸೂರಿನ ಏಕಲವ್ಯನಗರ ಸೇರಿದಂತೆ ವಿವಿಧ ಭಾಗಗಳ ಬಡ ಕುಟುಂಬಗಳ ಸದಸ್ಯರು ಪಾಲ್ಗೊಂಡು ಶಿಕ್ಷಣದ ಅಗತ್ಯತೆ ಬಗ್ಗೆ ಅರಿತುಕೊಂಡರು.
ಈ ವೇಳೆ ಮಾತನಾಡಿದ ಜಿಪಂ ಸದಸ್ಯ ದಿನೇಶ್ ನಾಗನಹಳ್ಳಿ, ಶೋಷಿ ತರು, ಹಿಂದುಳಿದವರು ಹಾಗೂ ಕೂಲಿ ಕಾರ್ಮಿಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿ ಸಲು ಮುಂದಾಗಬೇಕು. ವಿದ್ಯಾಭ್ಯಾಸ ಕೊಡಿಸಿ ಬುದ್ಧಿವಂತರನ್ನಾಗಿಸಿದರೆ, ತಮ್ಮ ಭವಿಷ್ಯ ರೂಪಿಸಿಕೊಂಡು ಸಮಾಜದ ನಾಲ್ಕಾರು ಜನಕ್ಕೆ ಸಹಾಯ ಮಾಡಬಲ್ಲರು ಎಂದರು. ದಲಿತ ಸಂಘರ್ಷ ಸಮಿತಿ (ದಸಂಸ) ಜಿಲ್ಲಾ ಪ್ರಧಾನ ಸಂಚಾಲಕ ನಿಂಗ ರಾಜ್ ಮಲ್ಲಾಡಿ ಮಾತನಾಡಿ, ಸರ್ಕಾರ ದಿಂದ ದೊರೆಯುವ ಸೌಲಭ್ಯಗಳು ಉಳ್ಳ ವರ ಪಾಲಾಗುತ್ತಿದ್ದು, ಅರ್ಹರು ವಂಚಿತ ರಾಗುತ್ತಿದ್ದಾರೆ. ಎಲ್ಲಾ ವರ್ಗಗಳ ಬಡ ಕುಟುಂಬಗಳು ಸರ್ಕಾರಿ ಸೌಲಭ್ಯಗಳಿ ಲ್ಲದೇ ಜೀವನ ನಡೆಸುವುದೇ ದುಸ್ತರ ಎನ್ನುವಂತಾಗಿದೆ. ಇವರಿಗೆ ಸ್ವಂತ ಸೂರು, ಉದ್ಯೋಗ ಹಾಗೂ ಮಕ್ಕಳಿಗೆ ಶಿಕ್ಷಣ ಮರೀ ಚಿಕೆಯಾಗಿದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲು ಇಂತಹ ಕಾರ್ಯಕ್ರಮಗಳು ಅಗತ್ಯ. ಆ ಮೂಲಕ ಅವಕಾಶ ವಂಚಿತ ರನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡ ಲಾಗುತ್ತಿದೆ ಎಂದು ಎಂದು ತಿಳಿಸಿದರು.
ದಲಿತ ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕಿ ಪುಟ್ಟಲಕ್ಷ್ಮಮ್ಮ, ಜಿಲ್ಲಾ ಸಂಘ ಟನಾ ಸಂಚಾಲಕ ಕಾರ್ಯ ಬಸವಣ್ಣ, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಬನ್ನಹಳ್ಳಿ ಸೋಮಣ್ಣ, ನಗರ ಸಂಚಾಲಕ ಕೆ.ನಂಜಪ್ಪ ಬಸವನಗುಡಿ, ಏಕಲವ್ಯನಗರ ಜಿಲ್ಲಾ ಸಂಘಟನಾ ಸಂಚಾಲಕ ವೆಂಕ ಟೇಶ, ಹುಣಸೂರು ತಾಲೂಕು ಸಂಚಾ ಲಕ ದೇವೇಂದ್ರ, ಹೆಚ್.ಡಿ.ಕೋಟೆ ತಾಲೂಕು ಸಂಚಾಲಕ ಚ.ಶಿವಕುಮಾರ, ತಿ.ನರಸೀಪುರ ತಾಲೂಕು ಸಂಚಾಲಕ ಬಸವರಾಜು ಮತ್ತಿತರರು ಹಾಜರಿದ್ದರು.