ಮೈಸೂರು: ಮಹಿಳೆಯೇ ಮಹಿಳೆಯನ್ನು ವಿರೋಧಿಸುವ ಧೋರಣೆ ಬದಲಾಗಬೇಕು ಎಂದು ಚಿತ್ರನಟಿ, ಮಾಜಿ ಸಚಿವೆ ಉಮಾಶ್ರೀ ಇಂದಿಲ್ಲಿ ಅಭಿಪ್ರಾಯಪಟ್ಟರು.
ಮೈಸೂರಿನ ರಂಗಾಯಣ ಬಹುರೂಪಿ ನಾಟಕೋತ್ಸವದ ಲಿಂಗ ಸಮಾನತೆ’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಶುಕ್ರವಾರ 2ನೇ ಗೋಷ್ಠಿಯಲ್ಲಿರಾಜಕಾರಣ ಮತ್ತು ಲಿಂಗ ಸಮಾನತೆ’ ಕುರಿತು ವಿಷಯ ಮಂಡಿಸಿ ಮಾತನಾಡಿದರು.
ಮಹಿಳೆಯನ್ನು ರಾಜಕೀಯದಲ್ಲಿ ಒಪ್ಪಿ ಕೊಳ್ಳುವಂತಹ ಮನೋಭಾವ ಬರಬೇಕು. ಭಾಗವಹಿಸುವಿಕೆಗೆ ನಮಗೂ ಅವಕಾಶ ವಿದೆ. ಮಹಿಳೆ ರಾಜಕೀಯ ಭಾಗವಹಿಸುವಿಕೆ ಜೊತೆಗೆ ನಾಯಕತ್ವ ಗುಣ ಬೆಳೆಸಿ ಕೊಳ್ಳಬೇಕು. ಮಹಿಳಾ ನಾಯಕರು ಬೆಳೆಯಬೇಕು. ಆದರೆ ಅವಳ ಮೇಲಿನ ದಬ್ಬಾ ಳಿಕೆ, ದೌರ್ಜನ್ಯ, ಇಷ್ಟ ಕಷ್ಟಗಳ ವಿರುದ್ಧದ ನಡವಳಿಕೆಗಳು ಮಹಿಳೆಯರ ರಾಜಕೀಯ ಪಾಲ್ಗೊಳ್ಳುವಿಕೆಯಿಂದ ವಂಚಿತರಾಗುವಂತೆ ಮಾಡಿದೆ ಎಂದರು.
ರಾಜಕೀಯವಾಗಿ ನಮಗೆ ಶೇ.33ರಷ್ಟು ಸ್ಥಾನಮಾನ ನೀಡಿಲ್ಲ ಎಂದು ಆರೋಪಿ ಸುವ ಬದಲು ಪುರುಷರಿಗೆ ಸರಿ ಸಮಾನ ವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬರಬೇಕಿದೆ. ಇದು ಎಷ್ಟು ಜನರಿಗೆ ಸಾಧ್ಯ ಎಂದು ಪ್ರಶ್ನಿಸಿದರು.
ಮಹಿಳೆಯರನ್ನು ಹೇಗೆಲ್ಲಾ ತಡೆಯಲು ಸಾಧ್ಯವೋ ಹಾಗೆಲ್ಲಾ ಮಾಡಿಕೊಂಡು ಬರಲಾಗಿತ್ತು. ಹೋರಾಟಗಳಿಲ್ಲದಿದ್ದರೆ ಇವೆಲ್ಲ ಸಾಧ್ಯವೇ ಆಗುತ್ತಿರಲಿಲ್ಲ. ಹಾಗಾಗಿ ನಮಗಾಗಿ ಹೋರಾಡಿದ ತಾಯಂದಿರಿಗೆ ನಾವು ಕೃತಜ್ಞತೆ ಅರ್ಪಿಸಲೇಬೇಕು ಎಂದರು.
ನಮ್ಮ ತಳಪಾಯವನ್ನು ಸರಿಯಾಗಿ ಕಟ್ಟಿಕೊಳ್ಳದ ಮಹಿಳೆ ಮುಂದಿನ ಭವಿಷ್ಯ ವನ್ನು ಹೇಗೆ ತಾನೇ ರೂಪಿಸಿಕೊಳ್ಳಬಲ್ಲಳು ಎಂದು ಪ್ರಶ್ನಿಸಿದರು. ಶಿಕ್ಷಣ ಇದ್ದ ಕಡೆ ಜಾಗೃತ ಮನೋಭಾವ ಇರುತ್ತದೆ. ನಮ್ಮ ಕುಟುಂಬ, ನಮ್ಮ ದೇಶದ ಒಳಿತಿಗಾಗಿ ನಾವು ಮಹಿಳೆಯರು ಜಾಗೃತರಾಗಲೇ ಬೇಕು. ಮಹಿಳೆ ತನ್ನ ತೀರ್ಮಾನ ತಾನೇ ಮಾಡುವಷ್ಟು ಸಶಕ್ತಳಾಗಬೇಕು. ಇದ ಕ್ಕಾಗಿ ರಾಜಕೀಯ ಪಕ್ಷದೊಳಗಿನ ಚಟು ವಟಿಕೆಗಳಲ್ಲಿ ಭಾಗವಹಿಸುವಿಕೆ ಮುಖ್ಯ ಎಂದು ಅಭಿಪ್ರಾಯಪಟ್ಟರು.
ನಾವು ಪುರುಷ ದ್ವೇಷಿಗಳಲ್ಲ. ಜನ್ಮ ಕೊಟ್ಟ ತಂದೆ, ನಮ್ಮ ಬೆನ್ನ ಹಿಂದೆ ಸಹೋ ದರರು ಇದ್ದಾರೆ. ಅವರನ್ನು ದ್ವೇಷಿಸುವು ದಕ್ಕಿಂತ ಅವರನ್ನು ಎದುರಿಸುವ ಶಕ್ತಿ ಬೆಳೆಸಿಕೊಳ್ಳಬೇಕು. ಬಡತನ, ಅನಕ್ಷರತೆ ಯಲ್ಲಿರುವ ಮಹಿಳೆಯರನ್ನು ಬಡಿದೆಬ್ಬಿಸ ಬೇಕಿದೆ. ಅನಕ್ಷರಸ್ಥ ಮಹಿಳೆಯರ ಜವಾ ಬ್ದಾರಿ ನಮ್ಮ ಮೇಲಿದೆ. ಶಿಕ್ಷಣ ಇಲ್ಲದಿ ದ್ದರೂ ಲೌಕಿಕ ತಿಳಿವಳಿಕೆ ಮಟ್ಟ ಹೆಚ್ಚಿಸ ಬೇಕು. ಆರ್ಥಿಕವಾಗಿ ಸಬಲೀಕರಣ ಮಾಡ ಬೇಕಿದೆ. ಅವರಲ್ಲಿ ಮಾನಸಿಕ ಧೈರ್ಯ ತುಂಬಬೇಕಿದೆ ಎಂದು ಹೇಳಿದರು.
ಮಹಿಳೆ ರಾಜಕೀಯದಲ್ಲಿ ಓಡಾಡಿದರೆ ರಾಜಕೀಯದಲ್ಲಿದ್ದಾಳಾ ಅವಳು…?! ಎಂಬ ಉದ್ಗಾರದಿಂದ ಹೀಗಳೆಯುತ್ತಿದ್ದರು. ಈ ಸಾಮಾಜಿಕ ಧೋರಣೆ ಮುಂದೆ ಹೋಗು ವವರನ್ನು ತಡೆದು ನಿಲ್ಲಿಸುತ್ತದೆ. ಅವೆಲ್ಲವೂ ಹೋಗಬೇಕಾದರೆ ಮಹಿಳೆಯರು ರಾಜ ಕೀಯದಲ್ಲಿ ಧೈರ್ಯದಿಂದ ಮುನ್ನಡೆ ಯುವಂತಾಗಬೇಕು ಎಂದರು.
ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ಚಿಂತಕಿ ಡಾ.ಸುಶಿ ಕಾಡನಕುಪ್ಪೆ, ರಂಗಾಯಣ ನಿರ್ದೇಶಕಿ ಭಾಗೀರಥಿಬಾಯಿ ಕದಂ ಉಪಸ್ಥಿತರಿದ್ದರು.
ನೀನಾಸಂ ಕಲಾವಿದೆಯಿಂದ ಕಥಾ ವಾಚನಾಭಿನಯ: ಇದಕ್ಕೂ ಮುನ್ನ ವೀಣಾ ಶಾಂತೇಶ್ವರ ಅವರ `ಅವಳ ಸ್ವಾತಂತ್ರ್ಯ’ ಕಥೆಯನ್ನು ಹೆಗ್ಗೋಡು ನೀನಾಸಂ ಕಲಾ ವಿದೆ ಮತ್ತು ನಿರ್ದೇಶಕಿ ವಿದ್ಯಾ ಹೆಗಡೆ ಅವರು ಕಥಾ ವಾಚನಾಭಿನಯ ಮಾಡಿ ದರು. 1972ರಲ್ಲಿ ವೀಣಾ ಶಾಂತೇಶ್ವರ ರಚಿಸಿದ ಕಥೆ ಪ್ರಸ್ತುತ ಸಂದರ್ಭಕ್ಕೂ ಭಿನ್ನ ವೇನೂ ಇಲ್ಲ. ಅಂದಿನ ಸ್ಥಿತಿಯೇ ಇಂದು ಮುಂದುವರಿದಿರುವ ಬಗ್ಗೆ ವಿದ್ಯಾ ಹೆಗಡೆ ನೋವಿನಿಂದ ತಿಳಿಸಿದರು.
ಮಹಿಳೆಯರ ಬಗೆಗಿನ ಪುರುಷರ ಮನಸ್ಥಿತಿ ಬದಲಾಗ ಬೇಕು. ಆಗ ಮಾತ್ರ ಮಹಿಳೆಯರಿಗೆ ಸ್ವಾತಂತ್ರ್ಯ, ಗೌರವ ದೊರೆಯಲು ಸಾಧ್ಯ ಎಂದರು.